5 ಮರ್ಸಿಡಿಸ್, ₹100 ಕೋಟಿಯ ವಿಮಾನ ಖರೀದಿಸಿದ 18 ವರ್ಷದ ಹುಡುಗಿ: ಈಕೆಗೆ ಹೊಡೆದ ಜಾಕ್‌ಪಾಟ್ ಬೆಲೆ ಎಷ್ಟು ಗೊತ್ತೇ?
18 ವರ್ಷದ ಹುಡುಗಿಯೊಬ್ಬಳಿಗೆ ಜಾಕ್‌ಪಾಟ್ ಹೊಡೆದಿದೆ. ಅದರಲ್ಲಿ ಆಕೆ 5 ಮರ್ಸಿಡಿಸ್, ₹100 ಕೋಟಿಯ ವಿಮಾನ ಖರೀದಿಸಿದ್ದಾಳೆ. ಆಕೆ ಹೊಡೆದ ಜಾಕ್‌ಪಾಟ್‌ನ ಮೌಲ್ಯವಾದರೂ ಎಷ್ಟು? ಆಕೆ ಅದರಿಂದ ಏನು ಮಾಡುತ್ತಾಳೆ? ಆಕೆಯ ಬಯಕೆ ಏನು? ಇದನ್ನು ಓದಿ
ಒಟ್ಟಾವಾ, ಫೆಬ್ರವರಿ 07: ಒಂದು ದಿನ ದಿಡೀರನೇ ಶ್ರೀಮಂತನಾಗಿ ಬದಲಾಗುವುದು ಒಬ್ಬ ವ್ಯಕ್ತಿಯ ಜೀವನದಲ್ಲಿ ನಡೆಯುವ ಅತ್ಯಂತ ಅಪರೂಪದ ಗಳಿಗೆ ಎಂದೇ ಕರೆಯಬಹುದು. ಹಣವು ಎಲ್ಲವನ್ನೂ ಒದಗಿಸಲು ಸಾಧ್ಯವಾಗದಿದ್ದರೂ, ಖಂಡಿತವಾಗಿಯೂ, ನಮಗೆ ಬೇಕಾದ ವಸ್ತುಗಳನ್ನು ಅದರಿಂದ ಖರೀದಿಸಬಹುದು. ಕೆನಡಾದ ಜೂಲಿಯೆಟ್ ಲಾಮರ್ ಎಂಬ ಹದಿಹರೆಯದ ಯುವತಿಯೊಬ್ಬರು ಲಾಟರಿ ಗೆದ್ದ ನಂತರ ತಮ್ಮ ಜೀವನದಲ್ಲಿ ಅಭೂತಪೂರ್ವ ಬದಲಾವಣೆಗಳನ್ನು ಕಂಡುಕೊಂಡಿದ್ದಾಳೆ. ಆಕೆಯ ಲಾಟರಿ ಗೆಲುವಿಗೆ ಕಾರಣವಾದ ಘಟನೆಗಳು ಆಕೆಯ 18 ನೇ ಹುಟ್ಟುಹಬ್ಬವನ್ನು ಆಚರಿಸಿದ ನಂತರ ನಡೆದಿವೆ.

ಹುಟ್ಟುಹಬ್ಬಕ್ಕೆ ವಿಶೇಷ ಖರೀದಿ
ಒಂಟಾರಿಯೊ ನಿವಾಸಿಯಾಗಿರುವ ಹುಡುಗಿ ತನ್ನ ಹುಟ್ಟುಹಬ್ಬದಂದು ತನಗಾಗಿ ವಿಶೇಷವಾದದ್ದನ್ನು ಖರೀದಿಸಲು ಅಂಗಡಿಗೆ ಹೋಗಿದ್ದಳು. ಆ ಸಂದರ್ಭದಲ್ಲಿ, ಆಕೆ ಗೊಂದಲಕ್ಕೊಳಗಾಗಿದ್ದಳು. ಆಕೆಯ ತಾತ ಲಾಟರಿ ಟಿಕೆಟ್ ಖರೀದಿಸಲು ಸೂಚಿಸಿದರು. ಇದು ಅವಳ ಜೀವನವನ್ನು ಶಾಶ್ವತವಾಗಿ ಬದಲಾಯಿಸುತ್ತದೆ ಎಂದು ಅವಳು ತಿಳಿದಿರಲಿಲ್ಲ. ಲಾಟರಿ ಟಿಕೆಟ್ ಪಡೆಯುವುದು ಹೇಗೆ ಎಂದು ಹುಡುಗಿಗೆ ತಿಳಿದಿಲ್ಲದ ಕಾರಣ, ಆಕೆಯ ತಾತ ಅವಳಿಗೆ ಸಹಾಯ ಮಾಡಿದರು. ಒಂಟಾರಿಯೊ ಲಾಟರಿ ಮತ್ತು ಗೇಮಿಂಗ್ ಕಾರ್ಪೊರೇಷನ್‌ನಿಂದ ಲೊಟ್ಟೊ 6-49 ಲಾಟರಿಯನ್ನು ಖರೀದಿಸಿದ ನಂತರ, ಹುಡುಗಿ ಮನೆಗೆ ಮರಳಿದಳು.ಲಾಮೋರ್ ಲಾಟರಿಯನ್ನು ಸಂಪೂರ್ಣವಾಗಿ ಮರೆತಿದ್ದಳು. ಆದರೆ ಒಂದು ದಿನ (ಜನವರಿ 7 ರಂದು) ಲಾಟರಿಯಲ್ಲಿ ತನ್ನ ನೆರೆಹೊರೆಯವರ ಬಹುಮಾನವನ್ನು ಕೇಳಿದಾಗ, ಅವಳು ಟಿಕೆಟ್ ತೆಗೆದುಕೊಂಡಿದ್ದನ್ನು ನೆನಪಿಸಿಕೊಂಡಳು. ಆದ್ದರಿಂದ ಹುಡುಗಿ ಆ್ಯಪ್‌ಗೆ ಹೋಗಿ ಅವಳು ಯಾವುದೇ ಬಹುಮಾನಗಳನ್ನು ಗೆದ್ದಿದ್ದಾಳೆಯೇ ಎಂದು ಪರಿಶೀಲಿಸಿದಳು. ಆಕೆಗೆ ಅಚ್ಚರಿ ಎಂಬಂತೆ 290 ಕೋಟಿ ರೂ. ಬಂದಿತ್ತು. ಆಕೆಗೆ ಈ ಸುದ್ದಿಯಿಂದ ಆಘಾತವಾಯಿತು.

ಐದು ಮರ್ಸಿಡಿಸ್ ಕಾರುಗಳ ಖರೀದಿ
ತನ್ನ ಕುಟುಂಬಕ್ಕೆ ಸಂತೋಷದ ಸುದ್ದಿಯನ್ನು ತಿಳಿಸಿದ ನಂತರ, ಹುಡುಗಿಯು ತನ್ನ ಕುಟುಂಬಕ್ಕೆ ತಲಾ 2 ಕೋಟಿ ರೂಪಾಯಿ ಮೌಲ್ಯದ ಐದು ಮರ್ಸಿಡಿಸ್ ಕಾರುಗಳನ್ನು ಖರೀದಿಸಲು ಹೋದಳು. ಅವರು 100 ಕೋಟಿ ರೂಪಾಯಿ ಮೌಲ್ಯದ ಚಾರ್ಟರ್ ವಿಮಾನವನ್ನು ಮತ್ತು ಲಂಡನ್‌ನಲ್ಲಿ 40 ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನೂ ಖರೀದಿಸಿದ್ದಾಳೆ. ಈ ಹುಡುಗಿ ತನ್ನ ಭವಿಷ್ಯಕ್ಕಾಗಿ ಸುಮಾರು 150 ಕೋಟಿ ರೂ.ಗಳನ್ನು ಉಳಿಸಿಕೊಂಡಿದ್ದಾಳೆ. ವೈದ್ಯೆಯಾಗುವ ನಿರೀಕ್ಷೆಯಲ್ಲಿರುವ ಲಾಮೋರ್, ತನ್ನ ತಂದೆಯ ಸಹಾಯದಿಂದ ಹಣವನ್ನು ಹೂಡಿಕೆ ಮಾಡುವುದಾಗಿ ಹೇಳಿದ್ದಾಳೆ.

LOTTO 6-49 ಕ್ವಿಕ್ ಪಿಕ್
'ನಾನು ಈಗಷ್ಟೇ 18 ವರ್ಷಕ್ಕೆ ಕಾಲಿಟ್ಟಿದ್ದೇನೆ ಮತ್ತು ನನ್ನ ಅಜ್ಜ ಮೋಜಿಗಾಗಿ ಲಾಟರಿ ಟಿಕೆಟ್ ಖರೀದಿಸಲು ಸಲಹೆ ನೀಡಿದ್ದರು' ಎಂದು ಅವರು ಗ್ಲೋಬಲ್ ನ್ಯೂಸ್‌ಗೆ ತಿಳಿಸಿದರು. 'ನಾನು ಈ ಮೊದಲು ಟಿಕೆಟ್ ಖರೀದಿಸದ ಕಾರಣ, ಅಂಗಡಿಗೆ ಹೋದಾಗ ಏನು ಕೇಳಬೇಕೆಂದು ನನಗೆ ಗೊತ್ತಾಗಲಿಲ್ಲ. ಹಾಗಾಗಿ ನಾನು ನನ್ನ ತಾತನಿಗೆ ಕರೆ ಮಾಡಿದೆ ಅವರು LOTTO 6-49 ಕ್ವಿಕ್ ಪಿಕ್ ಅನ್ನು ಖರೀದಿಸಲು ಹೇಳಿದರು' ಎಂದು ಹುಡುಗಿ ಹೇಳಿದ್ದಾಳೆ. 'ನನ್ನ ಮೊದಲ ಲಾಟರಿ ಟಿಕೆಟ್‌ನಲ್ಲಿ ನಾನು ಗೋಲ್ಡ್ ಬಾಲ್ ಜಾಕ್‌ಪಾಟ್ ಅನ್ನು ಹೊಡೆದಿದ್ದೇನೆ ಎಂದು ನನಗೆ ಇನ್ನೂ ನಂಬಲಾಗುತ್ತಿಲ್ಲ' ಎಂದೂ ಹುಡುಗಿ ತಿಳಿಸಿದ್ದಾಳೆ.

ವೈದ್ಯೆಯಾಗಲು ಬಯಸಿದ ಹುಡುಗಿ
ಬಿಬಿಸಿ ಪ್ರಕಾರ, 18 ವರ್ಷದ ಯುವತಿ ಈಗ ತನ್ನ ಅಧ್ಯಯನವನ್ನು ಮುಗಿಸಿ ವೈದ್ಯೆಯಾಗಲು ಬಯಸಿದ್ದಾಳೆ. ಆರ್ಥಿಕ ಸಲಹೆಗಾರರಾಗಿರುವ ತನ್ನ ತಂದೆಯ ಸಹಾಯದಿಂದ ಜಾಕ್‌ಪಾಟ್‌ನ ಬಹುಪಾಲು ಹಣವನ್ನು "ಎಚ್ಚರಿಕೆಯಿಂದ" ಹೂಡಿಕೆ ಮಾಡುವುದಾಗಿ ಅವರು ಹೇಳಿದ್ದಾಳೆ. Ms Lamour ಉತ್ತರ ಒಂಟಾರಿಯೊಗೆ ವೈದ್ಯಕೀಯ ಅಭ್ಯಾಸ ಮಾಡಲು ಮತ್ತು ಅವರ ಸಮುದಾಯಕ್ಕಾಗಿ ಸೇವೆ ಸಲ್ಲಿಸಲು ಬಯಸಿದ್ದಾರೆ ಎಂದು ಹೇಳಿದ್ದಾಳೆ.

ಖಂಡಗಳನ್ನು ಅನ್ವೇಷಿಸುವ ಯೋಜನೆ
ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯು ಜಾಕ್‌ಪಾಟ್ ಗೆಲುವುಗಳೊಂದಿಗೆ ಸ್ವಲ್ಪ ಮೋಜು ಮಾಡಲು ಯೋಜಿಸಿದ್ದಾಳೆ. 'ಶಾಲೆ ಮುಗಿದ ನಂತರ, ನನ್ನ ಕುಟುಂಬ ಮತ್ತು ನಾನು ಒಂದು ಖಂಡವನ್ನು ಆರಿಸಿಕೊಳ್ಳುತ್ತೇವೆ ಮತ್ತು ಅನ್ವೇಷಿಸಲು ಪ್ರಾರಂಭಿಸುತ್ತೇವೆ' ಎಂದು ಆಕೆ ಹೇಳಿದ್ದಾಳೆ. 'ನಾನು ವಿವಿಧ ದೇಶಗಳನ್ನು ಅನುಭವಿಸಲು ಬಯಸುತ್ತೇನೆ, ಅವರ ಇತಿಹಾಸ ಮತ್ತು ಸಂಸ್ಕೃತಿಯನ್ನು ಅಧ್ಯಯನ ಮಾಡಲು, ಅವರ ಆಹಾರವನ್ನು ಪ್ರಯತ್ನಿಸಲು ಮತ್ತು ಅವರ ಭಾಷೆಯನ್ನು ಕೇಳಲು ಬಯಸುತ್ತೇನೆ' ಎಂದು ಆಕೆ ತಿಳಿಸಿದ್ದಾಳೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications