ಲಿವ್-ಇನ್-ರಿಲೇಶನ್‌ಶಿಪ್; ಅವಿವಾಹಿತ ಯುವತಿ ಗರ್ಭಪಾತ ಮಾಡಿಸಬಹುದೇ? ಸುಪ್ರೀಂ ತೀರ್ಪಿನಲ್ಲಿ ಹೇಳಿದ್ದೇನು?
ನವದೆಹಲಿ, ಜುಲೈ 21: ಇಂದಿನ ಯುವ ಜನಾಂಗವು ಮದುವೆಯಾಗಲು ಮುಂದೆ ಬರುತ್ತಿಲ್ಲವೆಂದರೆ ಅದಕ್ಕೆ ಮತ್ತೊಂದು ಕಾರಣ ಲಿವ್-ಇನ್-ರಿಲೇಶನ್‌ಶಿಪ್‌ನ ಸಂಬಂಧಗಳು ಎಂದರೂ ತಪ್ಪಾಗದು. ಆದರೆ, ಲಿವ್-ಇನ್-ರಿಲೇಶನ್‌ಶಿಪ್‌ನಲ್ಲಿ ವಾಸಿಸುವ ಅವಿವಾಹಿತ ಮಹಿಳೆಯು 24 ವಾರಗಳನ್ನು ಪೂರೈಸಿದ ನಂತರ ಗರ್ಭಪಾತ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಈ ವಿಶೇಷ ಪ್ರಕರಣ ಕುರಿತು ನ್ಯಾಯಾಲಯವು ಮಧ್ಯಂತರ ಆದೇಶ ನೀಡಿದೆ. ದೆಹಲಿಯ ಏಮ್ಸ್‌ನಿಂದ ರಚಿಸಲ್ಪಟ್ಟ ವೈದ್ಯಕೀಯ ಮಂಡಳಿಯು ಸಲ್ಲಿಸಿದ ವರದಿಗಳು ಮತ್ತು ಸಂಗತಿಗಳ ಆಧಾರದ ಮೇಲೆ ನ್ಯಾಯಾಲಯವು ಈ ನಿರ್ಧಾರವನ್ನು ನೀಡಿದೆ. ಮಹಿಳೆಯ ಜೀವಕ್ಕೆ ಅಪಾಯವಾಗದಂತೆ ಗರ್ಭಪಾತ ಮಾಡಬಹುದು ಎಂದು ಮಂಡಳಿ ಹೇಳಿದೆ.
ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ನಡೆಸಿತು. ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ದೆಹಲಿ ಹೈಕೋರ್ಟ್ ಈ ಆದೇಶವನ್ನು ನೀಡಿದೆ, ಆದರೆ ಮಧ್ಯಂತರ ಪರಿಹಾರವನ್ನು ನೀಡಬಹುದಿತ್ತು ಎಂದು ವಿಚಾರಣೆಯ ಸಂದರ್ಭದಲ್ಲಿ ಪೀಠವು ಗಮನಿಸಿತು.

ಪತಿ, ಪದದ ಬದಲು ಪಾಲುದಾರ ಎಂಬ ಪದ ಬಳಕೆ
12 ಅಕ್ಟೋಬರ್ 2021ರಂದು ಕೇಂದ್ರ ಸರ್ಕಾರವು ಗರ್ಭಾವಸ್ಥೆಯ ವೈದ್ಯಕೀಯ ಮುಕ್ತಾಯ ಕಾಯಿದೆಯಲ್ಲಿ ಮಾಡಿದ ತಿದ್ದುಪಡಿಯನ್ನು ನ್ಯಾಯಾಲಯವು ಉಲ್ಲೇಖಿಸಿದೆ. ಇದರಲ್ಲಿ ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಆಕ್ಟ್ ಸೆಕ್ಷನ್ 3ರಲ್ಲಿ ಪತಿ ಎಂಬ ಪದದ ಬದಲು ಪಾಲುದಾರ ಎಂಬ ಪದವನ್ನು ಬಳಸಲಾಗಿದೆ. ಈ ತಿದ್ದುಪಡಿಯು "ಅವಿವಾಹಿತ ಮಹಿಳೆಯರನ್ನು" ಒಳಗೊಳ್ಳುವ ಶಾಸಕಾಂಗ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ ಎಂದು ನ್ಯಾಯಾಲಯವು ಗಮನಿಸಿದೆ.

ಮಹಿಳೆ ಅಥವಾ ಯುವತಿಗೆ ಅನಗತ್ಯ ಗರ್ಭಧಾರಣೆ ಹಕ್ಕು
ಭಾರತೀಯ ದಂಡ ಸಂಹಿತೆ, 1860 (IPC) ಅಡಿಯಲ್ಲಿ, ಸ್ವಯಂಪ್ರೇರಿತ ಗರ್ಭಪಾತವು ಕ್ರಿಮಿನಲ್ ಅಪರಾಧದ ವರ್ಗದಲ್ಲಿ ಬರುತ್ತದೆ. ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯ ಕಾಯಿದೆಯ 3(2)(ಎ) ಅಡಿಯಲ್ಲಿ ಮಹಿಳೆಗೆ ಅನಗತ್ಯ ಗರ್ಭಧಾರಣೆಯನ್ನು ಅಂತ್ಯಗೊಳಿಸುವ ಹಕ್ಕನ್ನು ನೀಡಲಾಗಿದೆ. ಇದಕ್ಕೂ ಕೆಲವು ನಿಯಮಗಳಿವೆ. ಗರ್ಭಾವಸ್ಥೆಯು 20 ವಾರಗಳಿಗಿಂತ ಹೆಚ್ಚು ಆದರೆ 24 ವಾರಗಳಿಗಿಂತ ಹೆಚ್ಚಿಲ್ಲದಿದ್ದರೆ ಮಾತ್ರ ಗರ್ಭಪಾತಕ್ಕೆ ಅವಕಾಶವಿದೆ ಎಂಬುದು ನಿಯಮ. ಇದರೊಂದಿಗೆ ಮಹಿಳೆಯ ಜೀವಕ್ಕೆ ಅಪಾಯವಿದ್ದರೆ ಅಥವಾ ಆಕೆಯ ಆರೋಗ್ಯಕ್ಕೆ ಯಾವುದೇ ರೀತಿಯ ಅಪಾಯವಿದ್ದರೆ.

ಗರ್ಭಪಾತಕ್ಕಾಗಿ ದೆಹಲಿ ಹೈಕೋರ್ಟ್‌ನ ಮೊರೆ
25 ವರ್ಷದ ಅವಿವಾಹಿತ ಮಹಿಳೆಯೊಬ್ಬರು ಗರ್ಭಪಾತಕ್ಕಾಗಿ ದೆಹಲಿ ಹೈಕೋರ್ಟ್‌ನ ಮೊರೆ ಹೋಗಿದ್ದರು. ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ವಾಸಿಸುತ್ತಿರುವ ಅವಿವಾಹಿತ ಮಹಿಳೆಗೆ ಗರ್ಭಪಾತ ಮಾಡಲು ದೆಹಲಿ ಹೈಕೋರ್ಟ್ ಅನುಮತಿ ನಿರಾಕರಿಸಿತ್ತು. 20 ವಾರ ಮೀರಿದ ಗರ್ಭಧಾರಣೆಯನ್ನು ಅಂತ್ಯಗೊಳಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಈ ತೀರ್ಪಿನ ವಿರುದ್ಧ ಅವಿವಾಹಿತ ಮಹಿಳೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಲಿವ್-ಇನ್-ರಿಲೇಶನ್‌ಶಿಪ್ ಮತ್ತು ಮದುವೆ
ಹಳೆಯ ಮದುವೆಗಳು, ಮದುವೆಗಳು ಎಂದರೆ ಜವಾಬ್ದಾರಿ, ಆಳವಾದ ಪ್ರೀತಿ ಮತ್ತು ಕುಟುಂಬಗಳ ಒಕ್ಕೂಟ ಎಂದು ಹೇಳಬಹುದು, ಆದರೆ ಹೊಸ ಲಿವ್-ಇನ್ ರಿಲೇಶನ್‌ಶಿಪ್ ನೀವು ಬದ್ಧರಾಗಿಲ್ಲ, ಇಂತಹ ಸಂಬಂಧಗಳನ್ನು ರೂಡಿಸಿಕೊಂಡವರ ರೆಕ್ಕೆಗಳನ್ನು ಕತ್ತರಿಸಲಾಗಿಲ್ಲ ಮತ್ತು ಲಿವ್-ಇನ್-ರಿಲೇಶನ್‌ಶಿಪ್‌ನಲ್ಲಿರುವ ಜೋಡಿಗಳು ಕುಟುಂಬಗಳು ಅಷ್ಟೇನೂ ಭಾಗಿಯಾಗಿಲ್ಲ ಎಂದು ನ್ಯಾಯಾಲಯಗಳಲ್ಲಿ ವಾದಗಳು ನಡೆದಿವೆ.












Click it and Unblock the Notifications