Bull in Bank: ಬ್ಯಾಂಕಿಗೆ ನುಗ್ಗಿ ಯಾರಿಗೆ ಗುದ್ದಲೆಂದು ನೋಡಿದ ಗೂಳಿ- ವಿಡಿಯೋ ವೈರಲ್
ಉನ್ನಾವ್ ಜನವರಿ 11: ನಾವೆಲ್ಲರೂ ಬ್ಯಾಂಕ್‌ಗಳಿಗೆ ಭೇಟಿ ನೀಡುತ್ತೇವೆ. ನಮ್ಮ ಕೆಲಸವನ್ನು ಪೂರೈಸಲು ಸರತಿ ಸಾಲಿನಲ್ಲಿ ನಿಲ್ಲುತ್ತೇವೆ. ಕೆಲವೊಮ್ಮೆ ಬ್ಯಾಂಕ್‌ಗಳಿಗೆ ಭೇಟಿ ನೀಡಿದಾಗ ಜನ ಅಧಿಕವಿದ್ದಲ್ಲಿ ಕೆಲಸ ಮುಗಿಯಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಇದರಿಂದಾಗಿ ನಾವು ಹಲವಾರು ನಿಮಿಷಗಳ ಕಾಲ ಕಾಯಬೇಕಾಗುತ್ತದೆ. ಇಂಥಹ ಸಂದರ್ಭದಲ್ಲಿ ನಿಮ್ಮ ಸಾಲಿನಲ್ಲಿ ಗೂಳಿ ಕಾಣಿಸಿಕೊಂಡರೆ ನಿಮಗೆ ಹೇಗಾಗಬೇಡ.
ಉತ್ತರ ಪ್ರದೇಶದ ಉನ್ನಾವೋದ ಶಹಗಂಜ್ ಪ್ರದೇಶದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯಲ್ಲಿ ಗ್ರಾಹಕರು ತಮ್ಮ ನಂಬರ್‌ಗಾಗಿ ಕಾಯುತ್ತಿದ್ದಾಗ ಅಸಹಜವಾದ ಸಂಗತಿಯೊಂದು ನಡೆದಿದೆ. ಈ ಘಟನೆಯಿಂದಾಗಿ ಸಿಬ್ಬಂದಿ ಸೇರಿದಂತೆ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಬುಧವಾರದಂದು ಗೂಳಿಯೊಂದು ಬ್ಯಾಂಕ್‌ಗೆ ಭರ್ಜರಿಯಾಗಿ ಪ್ರವೇಶ ಮಾಡಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ವೀಡಿಯೊದಲ್ಲಿ ಗೂಳಿಯೊಂದು ಎಸ್‌ಬಿಐ ಬ್ಯಾಂಕ್‌ನಲ್ಲಿ ಮುಕ್ತವಾಗಿ ಓಡಾಡುತ್ತಿರುವುದು ಕಂಡುಬಂದಿದೆ. ಜನರು ಅದರಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ಭಯದಿಂದ ನಿಂತಿರುವುದು ಕಂಡು ಬಂದಿದೆ. 30-ಸೆಕೆಂಡ್‌ಗಳ ಕ್ಲಿಪ್ ಗೂಳಿಯು ಬ್ಯಾಂಕ್‌ಗೆ ಪ್ರವೇಶಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಅದು ಗ್ರಾಹಕರು ಮತ್ತು ಸಿಬ್ಬಂದಿಗಳಲ್ಲಿ ಭಯವನ್ನು ಉಂಟುಮಾಡುತ್ತದೆ. ವೀಡಿಯೊ ಮುಂದುವರೆದಂತೆ ಬ್ಯಾಂಕ್‌ನಲ್ಲಿನ ಭದ್ರತಾ ಸಿಬ್ಬಂದಿ ಕೋಲಿನಿಂದ ಗೂಳಿಯನ್ನು ಓಡಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಸೆಕ್ಯುರಿಟಿ ಗಾರ್ಡ್ ಗೂಳಿಯನ್ನು ಓಡಿಸಿದಾಗ ಅದು ಓಡಿಹೋಗುವುದರೊಂದಿಗೆ ವೀಡಿಯೊ ಕೊನೆಗೊಳ್ಳುತ್ತದೆ.
ವೀಡಿಯೊವನ್ನು ಇಲ್ಲಿ ವೀಕ್ಷಿಸಿ
उन्नाव- उन्नाव में SBI बैंक में घुसा सांड, बैंक में कैस काउंटर पर पहुंचा सांड
— भारत समाचार | Bharat Samachar (@bstvlive) January 10, 2024
➡बैंक में सांड घुसने से बैंक में हड़कंप
➡वीडियो सोशल मीडिया पर वायरल
➡शहर के शाहगंज शाखा का मामला.
#Unnao pic.twitter.com/LOef59r1xd
ಬ್ಯಾಂಕ್ ಅಧಿಕಾರಿಗಳ ಪ್ರಕಾರ, ಶಾಖೆಯ ಹೊರಗೆ ಎರಡು ಗೂಳಿಗಳು ಪರಸ್ಪರ ದಾಳಿ ಮಾಡಿದ ನಂತರ ಗೂಳಿ ಬ್ಯಾಂಕ್‌ಗೆ ನುಗ್ಗಿತು.
"ಎರಡು ಗೂಳಿಗಳು ಆರಂಭದಲ್ಲಿ ಬ್ಯಾಂಕಿನ ಹೊರಗೆ ಪರಸ್ಪರ ದಾಳಿ ಮಾಡಿದ್ದವು. ಆಗ ವ್ಯಕ್ತಿ ಮೇಲೆ ದಾಳಿ ಮಾಡಲು ಬ್ಯಾಂಕಿನೊಳಗೆ ನುಗ್ಗಿದೆ. ತೆರೆದ ಬಾಗಿಲು ಅದರ ಪ್ರವೇಶವನ್ನು ಸುಗಮಗೊಳಿಸಿದೆ. ಇದು ಸ್ವಲ್ಪ ಸಮಯದ ಅಡಚಣೆಯನ್ನು ಉಂಟುಮಾಡಿತು. ಅದೃಷ್ಟವಶಾತ್, ಈ ಘಟನೆಯು ಬ್ಯಾಂಕ್‌ನಲ್ಲಿ ಕಡಿಮೆ ಗ್ರಾಹಕರ ಉಪಸ್ಥಿತಿಯ ಅವಧಿಯಲ್ಲಿ ಸಂಭವಿಸಿದೆ"ಎಂದು ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಗೌರವ್ ಸಿಂಗ್ ಹೇಳಿದ್ದಾರೆ.












Click it and Unblock the Notifications