BSNL: ನಕಲಿ ಟವರ್ ನಿರ್ಮಾಣ ಸಂದೇಶ, ಉದ್ಯೋಗ ನೇಮಕಾತಿ ಹಾವಳಿ ಹೆಚ್ಚಳ: BSNL ಎಚ್ಚರಿಕೆ
ನವದೆಹಲಿ ಜನವರಿ 26: ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡಲು ಸಜ್ಜಾಗಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ' ಭಾರತ್ ಸಂಚಾರ್ ನಿಗಮ್ ಲಿಮಿಟೆಡ್' (BSNL) ನಕಲಿ ಹಾವಳಿದಾರರ ಕಾಟಕ್ಕೆ ಸುಸ್ತಾಗಿದೆ. ನಕಲಿ ಉದ್ಯೋಗ ನೇಮಕಾತಿ, ಟವರ್ ಸ್ಥಾಪನೆ, ಹಣ ಉಳಿತಾಯದ ಹೆಸರಿನಲ್ಲಿ ಜನರನ್ನು ನಕಲಿ ಗುಂಪು BSNL ಹೆಸರಿನಲ್ಲಿ ಸೆಳೆಯುತ್ತಲೇ ಇದೆ. ಈ ಬಗ್ಗೆ BSNL ಜಾಗೃತರಾಗಿರುವಂತೆ ಜನರಿಗೆ ಎಚ್ಚರಿಕೆ ನೀಡಿದೆ.
ಅತ್ಯಧಿಕ ಬೆಲೆಯ ಪ್ರಿಪೇಯ್ಡ್, ಪೋಸ್ಟ್ ಪೇಯ್ಡ್ ರಿಚಾರ್ಜ್ ಯೋಜನೆಗಳು ಮಧ್ಯೆ ಜನರಿಗೆ ಕೈಗೆಟುಕುವ ಬೆಲೆಗೆ ಅಲ್ಪ ಕಾಲದ ಮತ್ತು ದೀರ್ಘಾವಧಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್‌ಗಳು, ಸಿಮ್ ಸಕ್ರಿಯತೆಯ ಪ್ಲಾನ್‌ಗಳನ್ನು 'ಭಾರತ್ ಸಂಚಾರ್ ನಿಗಮ್ ಲಿಮಿಟೆಡ್' (BSNL) ನೀಡುತ್ತಿದೆ. ಉತ್ತಮ ಇಂಟರ್‌ನೆಟ್, ಟೆಲಿಕಾಂ ಸರ್ವೀಸ್‌ಗಾಗಿ ದೇಶವ್ಯಾಪಿ ಟವರ್ ನಿರ್ಮಿಸುತ್ತಿದೆ.

ಈ ಸಂದರ್ಭದ ಲಾಭ ಪಡೆಯಲು ಮುಂದಾದ ವಂಚಕರ ಗುಂಪು ಬಿಎಸ್‌ಎನ್‌ಎಲ್ 5ಜಿ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದು ಜನರಿಗೆ ಹತ್ತಿರವಾಗುತ್ತಿದ್ದಾರೆ. ಬಿಎಸ್‌ಎನ್‌ಎಲ್ ಹೊಸ ಸೇವೆ ನೀಡಲು ಸಿದ್ದವಾಗಿದ್ದು, ಇದಕ್ಕೆ ಉದ್ಯೋಗಿಗಳ ಅಗತ್ಯತೆ ಇದೆ. ಆದ್ದರಿಂದ ಬೃಹತ್ ಉದ್ಯೋಗ ನೇಮಕಾತಿಗೆ ನಡೆಸಲಿದೆ. ಅರ್ಹರಿಂದ ಅರ್ಜಿ ಆಹ್ವಾನಿಸಲಿದೆ ಎಂದು ಫೇಕ್ ವೆಬ್‌ಸೈಟ್‌ನಲ್ಲಿ ನೀಡಿದೆ.
ನಕಲಿ ಸಂದೇಶ, ಆಕರ್ಷಣೆ, ಮನವಿ ಬಗ್ಗೆ ಎಚ್ಚರ
ಇನ್ನೂ ಮನೆಯಲ್ಲಿಯೇ ಕುಳಿತುಕೊಂಡು ಹಣ ಗಳಿಸಬಹುದು ಮತ್ತು ಉಳಿಸಬಹುದು. ನಿಮ್ಮ ಹೆಸರಿನ ಆಸ್ತಿಯಲ್ಲಿ ಬಿಎಸ್‌ಎನ್‌ಎಲ್ ಟವರ್ ನಿರ್ಮಿಸಲಿದೆ. ಇದಕ್ಕಾಗಿ ನೀವು ನಿಮ್ಮ ಹೆಸರು, ವಿಳಾಸ ನೀಡಬೇಕು ಎಂದು ನಕಲಿ ಸಂಖ್ಯೆಯಿಂದ ಸಂದೇಶ ಕಲುಹಿಸುತ್ತಿದ್ದಾರೆ. ಅನಗತ್ಯ ಲಿಂಕ್ ಶೇರ್ ಮಾಡಿ ಅರ್ಜಿ ಭರ್ತಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಟವರ್ ನಿರ್ಮಾಣದ ಆಸೆ ತೋರಿಸುವ ವಂಚಕರು
ನಿಮ್ಮ ಮನೆ, ಆಸ್ತಿ, ಖಾಲಿ ಜಾಗ, ವಾಣಿಜ್ಯ ಕಟ್ಟಡಗಳ ಮೇಲೆ ಬಿಎಸ್‌ಎನ್‌ಎಲ್ ಟವರ್ ನಿರ್ಮಿಸುತ್ತೇವೆ. ಇದರಿಂದ ಮಾಸಿಕವಾಗಿ ನೀವು ಕೂತಲ್ಲೇ ಹಣ ಗಳಿಸಬಹುದು. ಅದಕ್ಕಾಗಿ ನೀವು ಮಾಡಬೇಕಾಗಿದ್ದ ಇಷ್ಟೇ ಎಂದೆಲ್ಲ ನಕಲಿ ಸಂದೇಶಗಳು ರವಾನೆ ಆಗುತ್ತಿವೆ. ಇದರಿಂದ ಬಿಎಸ್‌ಎನ್‌ಎಲ್ ಬಳಕೆದಾರರು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು.
BSNL ಹೆಸರಿನಲ್ಲಿ ಸುಳ್ಳು ನೇಮಕಾತಿ ಪ್ರಕಟ
ಬಿಎಸ್‌ಎನ್‌ಎಲ್ ಯಾರಿಗೂ ಹೀಗೆ ಸಂದೇಶ ಕಳುಹಿಸಿ ಆಸೆ, ಆಮೀಷ ಒಡ್ಡುವುದಿಲ್ಲ. ಇಂತಹ ಸಂಗತಿಗಳು ಗೊತ್ತಾದರೆ ಹತ್ತಿರದ ಬಿಎಸ್‌ಎನ್‌ಎಲ್ ಸಿಬ್ಬಂದಿ ಸಂಪರ್ಕಿಸಿ. ಇನ್ನೂ ಬಿಎಸ್‌ಎನ್‌ಎಲ್ ಯಾವ ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ನಕಲಿ ಮಾಹಿತಿ, ಕರೆಗಳು ಸಂದೇಶಗಳಿಂದ ಎಚ್ಚರಿಕೆಯಿಂದ ಇರಲು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSML) ತಿಳಿಸಿದೆ. ಕಾಲ ಕಾಲಕ್ಕೆ ಮಾಹಿತಿ ಬೇಕಿದ್ದಲ್ಲಿ, BSNL ಅಧಿಕೃತ ಜಾಲತಾಣ http://bsnl.co.in ಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.
ಜಿಯೋ, ಏರ್‌ಟೆಲ್, ವಡಾಫೋನ್‌ನಂತರ ಖಾಸಗಿ ಟೆಲಿಕಾಂ ಸಂಸ್ಥೆಗಳ ಮಧ್ಯೆ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಅಚ್ಚುಮಚ್ಚಾಗುತ್ತಿದೆ. ಕಡಿಮೆ ಬೆಲೆ ರಿಚಾರ್ಜ್ ಪ್ಲಾನ್‌ಗಳಿಂದಲೇ ಸದ್ದು ಮಾಡುತ್ತಿದೆ. ಮೊನ್ನೆಯಷ್ಟೇ 65000 ಸ್ಥಳಗಳಲ್ಲಿ 4g ಟವರ್ ನಿರ್ಮಿಸಿ ಸೇವೆ ಆರಂಭಿಸಿದೆ. ಇಂಟರ್‌ನೆಟ್ ಫೈಬರ್ ಟಿವಿ (BSNL IFTV) ಸೇವೆಯನ್ನು ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ ಇನ್ನಿತರ ರಾಜ್ಯಗಳಲ್ಲಿ ಆರಂಭಿಸಿದೆ.












Click it and Unblock the Notifications