BSNL: ಇಷ್ಟು ಕಡಿಮೆ ಬೆಲೆಗೆ ಡೈಲಿ 2GB ಡೇಟಾ, ಅನ್‌ಲಿಮಿಟೆಡ್ ಕರೆ ಸೌಲಭ್ಯ: ವ್ಯಾಲಿಡಿಟಿ?

BSNL New Plan: ದೇಶದ ಜನರ ಚಿತ್ತ ತನ್ನತ್ತ ಆಕರ್ಷಿಸುತ್ತಿರುವ ಕೇಂದ್ರ ಸರ್ಕಾರಿ ಅಧೀನದ ಟೆಲಿಕಾಂ ಸಂಸ್ಥೆಯ ಪ್ರಮುಖ ಕಂಪನಿ 'ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL)' ಇದೀಗ ಬಳಕೆದಾರರಿಗೆ ಮತ್ತೊಂದು ಹೊಸ ಪ್ಲಾನ್ ಪರಿಚಯಿಸಿದೆ. ಬೇರೆಲ್ಲೂ ಸಿಗದ ದೈನಂದಿನ ಅಧಿಕ ಇಂಟರ್‌ನೆಟ್ ಪ್ಯಾಕ್, ಜೊತೆಗೆ ಸುದೀರ್ಘ ಅವಧಿಯ ಯೋಜನೆ ಇದಾಗಿದೆ. ಬಜೆಟ್ ಸ್ನೇಹಿ ಪ್ಲಾನ್ ಎಂದು ಕಂಪನಿ ತಿಳಿಸಿದೆ.

ಏರ್‌ಟೆಲ್, ಜಿಯೋ, ವಡಾಫೋನ್‌ಗಳ ದುಬಾರಿ ಬೆಲೆಯ ರಿಚಾರ್ಜ್ ಯೋಜನೆಗಳಿಗೆ ಹೈರಾಣಾಗಿರುವ ಬಳಕೆದಾರರು ಇದೀಗ ನೀವು ಬಿಎಸ್‌ಎನ್‌ಎಲ್‌ನ ಈ ಪ್ಲಾನ್ ಪಡೆದರೆ ಒಂದು ವರ್ಷ ನಿಶ್ಚಿಂತೆಯಿಂದ ಇರಬಹುದು. ಕೈಗೆಟುಕುವ ಬೆಲೆಗೆ ರಿಚಾರ್ಜ್ ಯೋಜನೆ ಮಾತ್ರವಲ್ಲದೇ ಹೊಸ ಹೊಸ IFTV, BiTV ಸೇವೆ, ಮೊದಲಾದವುಗಳನ್ನು ಕಂಪನಿ ಈಗಾಗಲೇ ಪರಿಚಯಿಸಿದೆ.

BSNL Rs 1515 Recharge Plan Unlimited Date One Year Validity Benifits

ಬಳಕೆದಾರರಿಗೆ ಸಹಾಯವಾಗುವಂತ ವಿವಿಧ ಯೋಜನೆಗಳ ಸಾಲಿನಲ್ಲಿ ಇದೀಗ ಕೇವಲ 1515 ರೂಪಾಯಿಗೆ ಒಂದು ವರ್ಷದವರೆಗೆ ಧ್ವನಿಕರೆ ಮಾಡುವ ಸೌಲಭ್ಯ ನೀಡುತ್ತಿದೆ. BSNLನ ಈ ಪ್ಲಾನ್ ಒಂದು ವರ್ಷ ಮಾನ್ಯವಾಗಿರಲಿದೆ. ನಿತ್ಯ 100 ಎಸ್‌ಎಂಎಸ್ ಸೇವೆ ಸಿಗಲಿದೆ. ಇಷ್ಟು ಕಡಿಮೆ ಬೆಲೆಗೆ ಬೇರಾವುದೇ ಖಾಸಗಿ ಟೆಲಿಕಾಂ ಕಂಪನಿಗಳಿಂದ ಸಿಗುವುದು ಡೌಟು. 4ಜಿ ಇಂಟರ್‌ನೆಟ್‌ ಸೇವೆಯನ್ನು ಅಧಿಕೃತವಾಗಿ ಆರಂಭಿಸುವುದರ ಜೊತೆಗೆ ಹೊಸ ಪ್ಲಾನ್‌ಗಳನ್ನು ಒಂದರ ಹಿಂದೊಂದರಂತೆ ಕಂಪನಿ ಘೋಷಿಸುತ್ತಿದೆ.

1515 ರೂ. ಯೋಜನೆ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ ಎಲ್ಲ ಬಗೆಯ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ವಿಶಾಲ ದೃಷ್ಟಿಯಿಂದ ಈ 1515 ರೂ. ಯೋಜನೆ ಸೇವೆ ನೀಡುತ್ತಿದೆ. ಕಡಿಮೆ ಬೆಲೆಗೆ ಸುದೀರ್ಘ ಅವಧಿಯ ರಿಚಾರ್ಜ್ ಪ್ಲಾನ್ ಇದಾಗಿದೆ. ಬೆಂಗಳೂರು, ದೆಹಲಿ, ಮುಂಬೈನಂತಹ ಮಹಾನಗರಗಳಲ್ಲೂ ಈ ಯೋಜನೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

BSNL Rs 1515 Recharge Plan Unlimited Date One Year Validity Benifits

ನಿತ್ಯ ಎರಡು ಜಿಬಿ, ಅನಿಯಮಿತ ಕರೆ ಮಾಡಬಹುದು. 365 ದಿನ ಡೇಟಾ ಬಳಕೆ ಮಾಡಿದ ಬಳಿಕ 40 ಕೆಬಿಪಿಎಸ್ ಸ್ಪೀಡ್ ವೇಗ ಸಿಗಲಿದೆ. ಒಟ್ಟಾರೆ ಯೋಜನೆಯಿಂದ ನಿಮಗೆ 730 ಜಿಬಿ 4g ಇಂಟರ್‌ನೆಟ್ ಸೌಲಭ್ಯ ಸಿಗುತ್ತದೆ. ಇದು ಗ್ರಾಹಕರಿಗೆ ಹೆಚ್ಚು ಇಷ್ಟವಾಗುತ್ತಿದೆ.

ನಿತ್ಯ ನೀವು ಹೆಚ್ಚು ಡೇಟ್ ಬಳಕೆ ಮಾಡುವವರಾಗಿದ್ದರೆ, ನಿಮಗೆ ಈ ಪ್ಲಾನ್ ಹೇಳಿ ಮಾಡಿಸಿದಂತಿದೆ. ಬಳಕೆದಾರರಿಗೆ ಸೇವೆಯನ್ನು ಖಚಿತಪಡಿಸುತ್ತಿದೆ. ಲೈವ್ ಚಾನಲ್, ಒಟಿಟಿ ವೀಕ್ಷಿಸಬಹುದು. ಡೇಟಾ ಖಾಲಿ ಚಿಂತೆಯೇ ಬೇಡ ಎಂದು ಬಿಎಸ್‌ಎನ್‌ಎಲ್ ತಿಳಿಸಿದೆ.

BSNL ಹೊಸ ರೀಚಾರ್ಜ್ ಯೋಜನೆ ಹೈಲೈಟ್ಸ್

* 1515 ರೂಪಾಯಿಯ ಯೋಜನೆ

* ಒಂದು ವರ್ಷ (365 ದಿನ) ವ್ಯಾಲಿಡಿಟಿ

* ನಿತ್ಯ 2ಜಿಬಿ ಡೇಟಾ ಸೌಲಭ್ಯ

* ಅನಿಮಿತ ಕರೆ ಸೌಲಭ್ಯ

* ಯೋಜನೆಯಡಿ 730 ಜಿಬಿ ಡೇಟಾ ಲಭ್ಯ

* ದೈನಂದಿನ ಪ್ಯಾಕ್ ಬಳಿಕ ಅನ್‌ಲಿಮಿಟೆಡ್ 40kbps ಲಭ್ಯ

* ನಿತ್ಯ 100 ಎಸ್‌ಎಂಎಸ್ ಸೇವೆ

* ಎಸ್‌ಟಿಡಿ, ಲೋಕಲ್ ಕರೆಗಳು, (ಯಾವುದೇ ನೆಟ್‌ವರ್ಕ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+