BSNL: ಇಷ್ಟು ಕಡಿಮೆ ಬೆಲೆಗೆ ಒಂದು ವರ್ಷದ ಭರ್ಜರಿ ರಿಚಾರ್ಜ್ ಪ್ಲಾನ್: ವಿವರ ಹೀಗಿದೆ
ಬೆಂಗಳೂರು, ಫೆಬ್ರವರಿ 24: ಭಾರತೀಯ ಟೆಲಿಕಾಂ ವಲಯದಲ್ಲಿ ಸಂಚಲನ ಮೂಡಿಸುತ್ತಿರುವ, ಹೊಸ ಬಳಕೆದಾರರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿರುವ ಭಾರತ್ ಸಂಚಾರ ನಿಗಮ ಲಿಮಿಟೆಡ್ (BSNL) ಭರ್ಜರಿ ಗುಡ್ ನ್ಯೂಸ್ ನೀಡಿದೆ. ಇತರ ಖಾತೆ ಟೆಲಿಕಾಂ ಕಂಪನಿಗಳು ರಿಚಾರ್ಜ್ ಬೆಲೆ ಹೆಚ್ಚಳ ಮಾಡಿದರೂ ಸಹಿತ ಕೈಗೆಟುಕುವ ಬೆಲೆಗೆ ಹೊಸ ಹೊಸ ರಿಚಾರ್ಜ್ ಪ್ಲಾನ್ ಘೋಷಿಸಿದೆ. ಇಷ್ಟು ಕಡಿಮೆ ಬೆಲೆಗೆ ಒಂದು ವರ್ಷದ ಪ್ಲಾನ್ ನಿಮಗೆ ಯಾವ ಕಂಪನಿಯು ಕೊಡುತ್ತಿಲ್ಲ. ನೀವು ಬಿಎಸ್‌ಎನ್ಎಲ್ ಗ್ರಾಹಕರಾಗಿದ್ದರೆ ಈ ಸುದ್ದಿ ನಿಮಗಾಗಿ.
ದೇಶದಲ್ಲಿ ತಿಂಗಳುಗಳ ಅಂತದಲ್ಲಿ ಟೆಲಿಕಾಂ ಉದ್ಯಮದಲ್ಲಿ BSNL ಭಾರೀ ಸದ್ದು ಮಾಡುತ್ತಿದೆ. ನೋಡು ನೋಡುತ್ತಲೇ ಲಕ್ಷಾಂತರ ಬಳಕೆದಾರರನ್ನು ಹೆಚ್ಚಿಸಿಕೊಂಡಿದೆ. ಅಲ್ಲದೇ, ಅಲ್ಪಾವಧಿ ಮತ್ತು ದೀರ್ಘಾವಧಿ ಮೊಬೈಲ್ ರಿಚಾರ್ಜ್ ಯೋಜನೆ ನೀಡಿ ಗ್ರಾಹಕರಿಗೆ ಹತ್ತಿರವಾಗಿದೆ. ಇದೀಗ ಮತ್ತೊಂದು ಬೆಜೆಟ್ ಸ್ನೇಹಿ ಸುದೀರ್ಘ ಅವಧಿಯ ಯೋಜನೆ ಪರಿಚಯಿಸಿದೆ.

ನೀವು ಬಳಸುವ BSNL ಸಿಮ್ ಸುಮಾರು ಒಂದು ವರ್ಷದವರೆಗೆ ಸಕ್ರಿಯವಾಗಿಡಲು ಇದು ಅತ್ಯುತ್ತಮ ಆಯ್ಕೆ ಆಗಿದೆ. BSNL 797 ರೂಪಾಯಿಗೆ ಪ್ರಿಪೇಯ್ಡ್ ಯೋಜನೆ ಜಾರಿಗೆ ತಂದಿದೆ. ಇದು ಬರೋಬ್ಬರಿ 300 ದಿನಗಳ ಕಾಲ ದೀರ್ಘ ಅವಧಿಗೆ ಪ್ರಯೋಜನೆ ನೀಡಿದೆ. ಹೆಚ್ಚುವರಿ ಹಣಕ್ಕೆ ಮತ್ತಷ್ಟು ದಿನ ಪ್ರಯೋಜನ ಪಡೆಯಲು ಇಲ್ಲಿ ಅವಕಾಶ ಇದೆ ಎಂದು BSNL ಮಾಹಿತಿ ನೀಡಿದೆ.
ಗ್ರಾಹಕರು ಚಿಂತೆ ಬಿಡಿ 300 ದಿನದ ಸೇವೆ ಪಡೆಯಿರಿ!
ಖಾಸಗಿ ಟೆಲಿಕಾಂ ಸಂಸ್ಥೆಗಳ 28 ದಿನ, 54 ಇಲ್ಲವೇ 84 ದಿನಗಳ ರಿಚಾರ್ಜ್ ಮಾಡಿ ಸಾಕಾಗಿದ್ದರೆ ನೀವು ಈ ಕೂಡಲೇ ಬಿಎಸ್‌ಎನ್‌ಎಲ್‌ನ ಈ ಭರ್ಜರಿ ಪ್ಲಾನ್ ಪಡೆಯಬಹುದು. ಪದೇ ಪದೆ ರಿಜಾರ್ಚ್ ಕಿರಿಕಿರಿ ಇಲ್ಲದೇ ಬರೀ 797 ರೂಪಾಯಿ ಕೊಟ್ಟು 300 ದಿನಗಳವರೆಗೆ ರಿಚಾರ್ಜ್ ಪಡೆಯಬಹುದು. ಈ ಯೋಜನೆಯಡಿ ನೀವು ಕನಿಷ್ಠ ವೆಚ್ಚದಲ್ಲಿ ಸುಮಾರು ಒಂದು ವರ್ಷದ ಪ್ಲಾನ್ ಖರೀದಿಸಿದಂತಾಗುತ್ತದೆ.
300 ದಿನ ಏನೆಲ್ಲ ಪ್ರಯೋಜನ
ಈ ಹೊಸ ರಿಚಾರ್ಜ್ ಯೋಜನೆಯಡಿ ನೀವು ಅನಿಯಮಿತ ಉಚಿತ ಕರೆಗಳನ್ನು ಮಾಡಬಹುದು. 4ಜಿ ಡೇಟಾ ಪ್ರಯೋಜನ ಸಿಗುತ್ತದೆ. ನಗಳು: ಮೊದಲ 60 ದಿನ ಯಾವುದೇ ನೆಟ್‌ವರ್ಕ್ ಅಡಿ ಅನಿಯಮಿತ ಉಚಿತ ಕರೆ ಮಾಡಬಹುದು. ಮೊದಲ 60 ದಿನಗಳವರೆಗೆ ದಿನಕ್ಕೆ 2GB ಡೇಟಾ (ಒಟ್ಟು 120GB ಡೇಟಾ) ಪಡೆಯುತ್ತೀರಿ. ಇದೇ ಎರಡು ತಿಂಗಳಲ್ಲಿ ನೀವು ನಿತ್ಯ 100 ಉಚಿತ ಎಸ್‌ಎಂಎಸ್ ಪ್ರಯೋಜನ ಪಡೆಯಬಹುದು.
ಈ ಪ್ಲಾನ್ ಹಾಕಿಸಿದ ಮೊದಲ 60 ದಿನಗಳ ನಂತರ ಉಚಿತ ಕರೆ ಹಾಗೂ ಡೇಟಾ ಪ್ರಯೋಜನ ಅವಧಿ ಮುಗಿಯುತ್ತದೆ. ನಂತರ ನಿಮ್ ಸಿಮ್ ಬರೋಬ್ಬರಿ 300 ದಿನಗಳ ಸಕ್ರಿಯವಾಗಿರುತ್ತದೆ. ಇದರಿಂದ ಇನ್‌ಕಮಿಂಗ್ ಕರೆಗಳು ಯಾವ ಅಡೆತಡೆ ಇಲ್ಲದೇ ಬರುತ್ತವೆ. ಒಟ್ಟಾರೆ ನೀವು 797 ರೂಪಾಯಿ 10 ತಿಂಗಳವರೆಗೆ ಲಾಭ ಪಡೆಯುತ್ತೀರಿ. ಈ ರಿಚಾರ್ಜ್‌ನಲ್ಲಿ ಪಾರದರ್ಶಕತೆ ಇದೆ. ಹೆಚ್ಚುವರಿ ವೆಚ್ಚ ಇರುವುದಿಲ್ಲ. ಹೀಗಾಗಿ ಇದೊಂದು ಪರಿಣಾಮಕಾರಿ ಯೋಜನೆಯಾಗಿದೆ.












Click it and Unblock the Notifications