ಖಾಸಗಿ ಕಂಪನಿಗಳ ರಿಚಾರ್ಜ್ ಪ್ಲ್ಯಾನ್ ದುಬಾರಿ: BSNLನತ್ತ ಮುಖ ಮಾಡಿರು ಗ್ರಾಹಕ
ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ಪ್ಲ್ಯಾನ್‌ನಲ್ಲಿ ಭಾರೀ ಏರಿಕೆ ಮಾಡಿವೆ. ಜುಲೈ 3ರಿಂದ ಏರ್‌ಟೇಲ್, ಜಿಯೋ ರಿಚಾರ್ಜ್ ಪ್ಲ್ಯಾನ್‌ಗಳು ಏರಿಕೆ ಆದರೆ, ಜುಲೈ 4 ರಂದು ವೋಡಾಫೋನ್-ಐಡಿಯಾ ಫೋನ್‌ಗಳ ಬೆಲೆ ದುಬಾರಿಯಾಗಿವೆ. ಇದರಿಂದ ಕಂಗೆಟ್ಟ ಗ್ರಾಹಕ ಹಳೆಯ ಗಂಡನ ಪಾದವೇ ಗತಿ ಎಂಬಂತೆ ಮತ್ತೆ ಸರ್ಕಾರಿ ಕಂಪನಿಯತ್ತ ಮುಖ ಮಾಡಿದ್ದಾನೆ.
ಬಿಎಸ್‌ಎನ್‌ಎಲ್ ಸಹ ತನ್ನ ಗ್ರಾಹಕರನ್ನು ಖುಷಿ ಪಡಿಸುವ ಉದ್ದೇಶದಿಂದ ಇತ್ತೀಚಿಗೆ ಹಲವು ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ. ಇದರಿಂದ ತಮ್ಮ ಹಳೆಯ ಗ್ರಾಹಕರನ್ನು ಮತ್ತೆ ಸೆಳೆಯುವಲ್ಲಿ ಸರ್ಕಾರಿ ಟೆಲಿಕಾಂ ಕಂಪನಿ ಒಂದು ಮಟ್ಟಿಗೆ ಯಶಸ್ವಿ ಆಗಿದೆ. ಈಗ ಧಮಾಕೆದಾರ್ 84 ದಿನಗಳ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಆದಮೇಲಂತೂ, ಎಲ್ಲರೂ ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಆಗ್ತಾ ಇದ್ದರೆ.

ಬಿಎಸ್‌ಎನ್‌ಎಲ್ ಟ್ರೆಂಡ್
ಖಾಸಗಿ ಟೆಲಿಕಾಂ ಕಂಪನಿಗಳ ರೀಚಾರ್ಜ್ ಯೋಜನೆಗಳು ದುಬಾರಿಯಾದಾಗಿನಿಂದ ಸರ್ಕಾರಿ ಟೆಲಿಕಾಂ ಕಂಪನಿ BSNL ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗುತ್ತಿದೆ. ಸರ್ಕಾರಿ ಕಂಪನಿಯು ಇತ್ತೀಚೆಗೆ ಅನೇಕ ಹೊಸ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ, ಇದು ಬಳಕೆದಾರಿಗೆ ಹತ್ತಿರವಾಗುತ್ತಿದೆ. ಇತ್ತೀಚೆಗೆ, ಕಂಪನಿಯು ಇದೇ ರೀತಿಯ 84 ದಿನಗಳ ರೀಚಾರ್ಜ್ ಯೋಜನೆಯನ್ನು ಪ್ರಾರಂಭಿಸಿದ್ದು, ಇದಕ್ಕಾಗಿ ಜನರು ಖಾಸಗಿ ಟೆಲಿಕಾಂ ಕಂಪನಿಗಳ ಯೋಜನೆಗಳಿಗಿಂತ, ಶೇಕಡಾ 50 ರಷ್ಟು ಕಡಿಮೆ ಖರ್ಚು ಮಾಡಬೇಕಾಗುತ್ತದೆ. ಈ ಯೋಜನೆಯಲ್ಲಿ ಹೆಚ್ಚಿನ ವೇಗದ ಡೇಟಾ ಮತ್ತು ಅನಿಯಮಿತ ಧ್ವನಿ ಕರೆ ಸೇರಿದಂತೆ ಹಲವು ಪ್ರಯೋಜನಗಳನ್ನು ನೀಡಲಾಗುತ್ತಿದೆ.
ಕಡಿಮೆ ಬೆಲೆಗೆ ಆಕರ್ಷಕ ಪ್ಲ್ಯಾನ್
ಖಾಸಗಿ ಕಂಪನಿಯ ರಿಚಾರ್ಜ್ ಪ್ಲ್ಯಾನ್‌ಗಳ ಬೆಲೆ ಹೆಚ್ಚಾಗುತ್ತಿದ್ದಂತೆ ಗ್ರಾಹಕರು ಬಿಎಸ್‌ಎನ್‌ಎಲ್‌ನತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರಿ ಟೆಲಿಕಾಂ ಕಂಪನಿಯ ಈ ರೀಚಾರ್ಜ್ ಯೋಜನೆ STV599 ಹೆಸರಿನಲ್ಲಿ ಬರುತ್ತದೆ. ಈ ವಿಶೇಷ ರಿಚಾರ್ಜ್‌ನಲ್ಲಿ ಬಳಕೆದಾರ, 84 ದಿನಗಳ ವ್ಯಾಲಿಡಿಟಿಯನ್ನು ನೀಡಲಾಗುತ್ತಿದೆ. 599 ರೂಗಳ ಈ ರೀಚಾರ್ಜ್ ಯೋಜನೆ ಪ್ರತಿ ಟೆಲಿಕಾಂ ವಲಯಕ್ಕೆ ಲಭ್ಯವಿದೆ. ದೆಹಲಿ ಮತ್ತು ಮುಂಬೈ ಜನರನ್ನು ಹೊರತುಪಡಿಸಿ ದೇಶಾದ್ಯಂತದ ಪ್ರತಿ ಟೆಲಿಕಾಂ ಬಳಕೆದಾರರು ಇದರ ಪ್ರಯೋಜನವನ್ನು ಪಡೆಯಬಹುದು.
ಈ ಯೋಜನೆಯಲ್ಲಿ 3GB ಡೇಟಾದ ಲಾಭವನ್ನು ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರು 252GB ಡೇಟಾವನ್ನು ಪಡೆಯುತ್ತಾರೆ. ಈ ರಿಚಾರ್ಜ್ ಮಾಡಿಸಿಕೊಂಡಲ್ಲಿ ಬಳಕೆದಾರ ಅನಿಯಮಿತ ಕರೆಗಳನ್ನು ಹಾಗೂ 100 ಉಚಿತ ಎಸ್‌ಎಂಎಸ್‌ಗಳ ಲಾಭವನ್ನು ಪಡೆಯಬಹುದು.

ಘರ್ ವಾಪ್ಸಿ
3GB ದೈನಂದಿನ ಡೇಟಾದೊಂದಿಗೆ Jio ನ ರೀಚಾರ್ಜ್ ಯೋಜನೆಯು ಮೊದಲು 999 ರೂ. ಕಂಪನಿಯು ಈ ಪ್ರಿಪೇಯ್ಡ್ ಯೋಜನೆಯ ಬೆಲೆಯನ್ನು 1,199 ರೂ.ಗೆ ಹೆಚ್ಚಿಸಿದೆ. BSNL ಬಳಕೆದಾರರು ಈ ಎಲ್ಲಾ ಪ್ರಯೋಜನಗಳನ್ನು ಅರ್ಧದಷ್ಟು ಬೆಲೆಗೆ ಪಡೆಯುತ್ತಾರೆ.
BSNL ಚೆನ್ನೈ ಟೆಲಿಕಾಂ ಸರ್ಕಲ್‌ಗಾಗಿ ಈಗಾಗಲೇ 4ಜಿ ಸೇವೆಯನ್ನು ಪ್ರಾರಂಭಿಸಿದೆ. ಇದಕ್ಕಾಗಿ ಕಂಪನಿಯು 10 ಸಾವಿರಕ್ಕೂ ಹೆಚ್ಚು ಹೊಸ 4ಜಿ ಟವರ್‌ಗಳನ್ನು ಅಳವಡಿಸುವ ಕಾರ್ಯವನ್ನು ಪೂರ್ಣಗೊಳಿಸಿದೆ. ಸರ್ಕಾರಿ ಟೆಲಿಕಾಂ ಕಂಪನಿಯು ಈಗ ತನ್ನ ಬಳಕೆದಾರರಿಗೆ 5G ಸಿದ್ಧ ಸಿಮ್ ಕಾರ್ಡ್‌ಗಳನ್ನು ನೀಡುತ್ತಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications