BSNL: ಕೈಗೆಟುವ ದರಕ್ಕೆ 180 ದಿನದ ರಿಚಾರ್ಜ್ ಪ್ಲಾನ್ ಘೋಷಣೆ: ಸುದೀರ್ಘ ಪ್ರಯೋಜನ ಪಡೆಯಿರಿ

ನವದಹೆಲಿ, ಜನವರಿ 21: ಮೊಬೈಲ್ ಬಳಕೆದಾರರಿಗೆ ಕೈಗೆಟುಕುವ ಬೆಲೆಯಲ್ಲಿ ಸೇವೆ ನೀಡುತ್ತಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ 'ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL)' ಇದೀಗ ಅಗ್ಗದ ಬೆಲೆಗೆ ಬಳಕೆದಾರ ಸ್ನೇಹಿ ಮೊಬೈಲ್ ರೀಚಾರ್ಜ್ ಪ್ಲಾನ್ ಘೋಷಿಸಿದೆ. ಒಟ್ಟು 180 ದಿನಗಳ ದಿನ ರಿಚಾರ್ಜ್ ಪ್ಲಾನ್ ಇದಾಗಿದೆ. ಇಷ್ಟು ಕಡಿಮೆ ಬೆಲೆಗೆ ಬೇರಾವ ಖಾಸಗಿ ಟೆಲಿಕಾಂ ಕಂಪನಿಗಳು ಯೋಜನೆ ನೀಡುತ್ತಿಲ್ಲ ಎನ್ನಬಹುದು.

BSNL ತನ್ನ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಅತೀ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಗಳನ್ನು ಒಂದೇ ಮೇಲೊಂದರಂತೆ ಪರಿಚಯ ಮಾಡುತ್ತಿದೆ. ಕೈಗೆಟುಕುವ ಬೆಲೆಗೆ ಉತ್ತಮ ರೀಚಾರ್ಜ್ ಯೋಜನೆಗಳನ್ನು ಆರಂಭಿಸಿರುವ BSNL, ಇದೀಗ ಆರು ತಿಂಗಳ ರೀಚಾರ್ಜ್ ಪ್ಲಾನ್ ಅನ್ನು ಘೋಷಿಸಿದೆ. ಬಳಕೆದಾರರಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗುವಂತೆ ಮಾಡಿದೆ. ಹೀಗಾಗಿ ಇತರ ಟೆಲಿಕಾಂ ಕಂಪನಿಗಳಿಗಿಂತಲೂ BSNL ಭಿನ್ನವಾಗಿದೆ.

BSNL Launches 180 Days Recharge Plans for Only Rs 897 Check Validity and Benefits

ಬಿಎಸ್ಎನ್ಎಲ್ 180 ದಿನಗಳ ಯೋಜನೆಯನ್ನು ಕೇವಲ 897 ರೂಪಾಯಿಗೆ ಒದಗಿಸುತ್ತಿದೆ. ಅಂದರೆ ಪ್ರತಿ ತಿಂಗಳು ನೀವು ಕೇವಲ 150 ರೂಪಾಯಿಯಂತೆ ಒಟ್ಟು ಹಣ ಪಾವತಿಸಬೇಕಾಗುತ್ತದೆ. ಇದರಿಂದ ಆರು ತಿಂಗಳ ವರೆಗೆ ಬಳಕೆದಾರರಿಗೆ ಇಂಟರ್‌ನೆಟ್ ಸೇವೆ, ಅನಿಯಮಿತ ಕರೆ ಸೇರಿ ಕೆಲವು ಪ್ರಯೋಜನಗಳು ದೊರೆಯುತ್ತವೆ.

BSNL 180 ದಿನ ರಿಚಾರ್ಜ್ ಪ್ಲಾನ್ ಪ್ರಯೋಜನಗಳು

BSNLನ ಈ ರಿಚಾರ್ಜ್ ಯೋಜನೆ ಬಜೆಟ್ ಸ್ನೇಹಿ ಪ್ಲಾನ್ ಎಂದರೆ ತಪ್ಪಾಗಲಾರದು. ಏಕೆಂದರೆ ಬೇರೆ ಯಾವ ಟೆಲಿಕಾಂ ಕಂಪನಿಗಳು ಕೇವಲ ರೂ. 897ಗೆ ಆರು ತಿಂಗಳ ರಿಚಾರ್ಜ್ ಪ್ಲಾನ್ ನೀಡುತ್ತಿಲ್ಲ. ತಿಂಗಳಿಗೆ ನೀವು ಉಚಿತ ರಾಷ್ಟ್ರೀಯ ರೋಮಿಂಗ್ ಸೇವೆ ಹಾಗೂ ಅನಿಯಮಿತ ಕರೆ ಮಾಡುವ ಪ್ರಯೋಜನ ಈ ಸೇವೆಯಲ್ಲಿ ಲಭ್ಯವಿದೆ.

BSNL Launches 180 Days Recharge Plans for Only Rs 897 Check Validity and Benefits

90 ಜಿಬಿ ಡೇಟಾ ಖಾಲಿಯಾದರೂ ಲಾಭ

ಈ ರಿಚಾರ್ಜ್ ಪ್ಲಾನ್ ಚೆಂದಾದಾರಿಗೆಕ ಪಡೆದರೆ ನೀವು ದೆಹಲಿ ಮತ್ತು ಮುಂಬೈ ಸೇರಿದಂತೆ ದೇಶ ಯಾವ ಮಹಾನಗರ, ಗ್ರಾಮೀಣ ಭಾಗದ ನೆಟ್‌ವರ್ಕ್‌ಗಳ ವ್ಯಾಪ್ತಿಯಲ್ಲೂ ಸಹ ಉಚಿತ ಕರೆ ಮಾಡುವ ಸೌಲಭ್ಯ ಪಡೆಯುತ್ತೀರಿ. ಯೋಜನೆಯ ಪೂರ್ಣ ಅವಧಿಗೆ ನೀವು ಒಟ್ಟು 90 ಜಿಬಿ ಡೇಟಾ ಇಂಟರ್‌ನೆಟ್ ಸೇವೆ ಪಡೆಯುಬಹುದು. ಇದು ದೈನಂದಿನ ಮಿತಿ ಇಲ್ಲದೇ ಬಳಕೆಗೆ ಅವಕಾಶ ಕಲ್ಪಿಸುತ್ತದೆ. ಡೇಟಾ ಖಾಲಿಯಾದರೆ 40 ಕೆಬಿಪಿಎಸ್ ವೇಗದಲ್ಲಿ ಅನಿಯಮಿತ ಇಂಟರ್ನೆಟ್ ಸೇವೆ ಮುಂದುವರಿಯುತ್ತದೆ.

ಯೋಜನೆಯಡಿ ನಿತ್ಯವೂ 100 ಉಚಿತ ಎಸ್ಎಂಎಸ್ ಸಂದೇಶ ಕಳುಹಿಸಲು ಅವಕಾಶ ಇದೆ. ನಿಮ್ಮ ಮೊಬೈಲ್‌ನಲ್ಲಿ ಎರಡನೇ ಸಿಮ್ ಅನ್ನು ಆರು ತಿಂಗಳ ಕಾಲ ಸಕ್ರಿಯವಾಗಿಡಲು ಈ ಯೋಜನೆ ಹೆಚ್ಚು ಸಹಕಾರಿಯಾಗುತ್ತದೆ.

BSNL ಸಿಮ್ ಸಕ್ರಿಯತೆಯ ಮಾಹಿತಿ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ನಿಯಮಗಳ ಪ್ರಕಾರ, ಮೊಬೈಲ್ ಸಂಖ್ಯೆಯ ಮಾನ್ಯತೆ ಮುಗಿದ ಬಳಿಕ ಮೂರು ತಿಂಗಳವರೆಗೆ (90 ದಿನ) ಆ ಸಂಖ್ಯೆಯನ್ನು ಸಕ್ರಿಯವಾಗಿಟ್ಟಿರುತ್ತದೆ. ಆಗ ಇನ್ನೊಬ್ಬರಿಗೆ ಆ ಸಂಖ್ಯೆ ನೀಡಲು ಬರುವುದಿಲ್ಲ. ಆದರೆ BSNL ಈ ರೀಚಾರ್ಜ್ ಪ್ಲಾನ್ ಹಾಕಿಸಿಕೊಂಡಲ್ಲಿ ಗ್ರಾಹಕರಿಗೆ ಒಂದು ವಾರ ಹೆಚ್ಚುವರಿ ಸಕ್ರಿಯತೆಯ ಉಪಯೋಗ ದೊರೆಯಲಿದೆ. 7 ದಿನದ ಬೋನಸ್ ಅವಧಿ ಇದಾಗಿದೆ. ನಂತರ 165 ದಿನಗಳ ಎರಡನೇ ಬೋನಸ್ ಅವಧಿ ನೀಡಲುತ್ತದೆ. ನಂತರ ಕನಿಷ್ಠ 107 ರೂ.ಗಳ ರೀಚಾರ್ಜ್ ಮೂಲಕ ನೀವು ಮತ್ತೆ ಸೇವೆ ಪಡೆಯಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+