BSNL: ಅತೀ ಕಡಿಮೆ ಬೆಲೆಯ 2 ರೀಚಾರ್ಜ್ ಪ್ಲಾನ್ ಘೋಷಣೆ: 84ದಿನ ವ್ಯಾಲಿಡಿಟಿ, ಡೈಲಿ 3ಜಿಬಿ ಡೇಟಾ ಸೌಲಭ್ಯ
ಬೆಂಗಳೂರು, ಜನವರಿ 12: ಟೆಲಿಕಾಂ ವಲಯದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಅತೀ ಕಡಿಮೆ ಬೆಲೆಗೆ ಆಕರ್ಷಕ ಮೊಬೈಲ್ ರೀಚಾರ್ಜ್ ಪ್ಲಾನ್ ಅನ್ನು ಘೋಷಣೆ ಮಾಡಿದೆ. ಗ್ರಾಹಕರು ಅತ್ಯಧಿಕ ದಿನಗಳ ಕಾಲ ಕಡಿಮೆ ಬೆಲೆಗೆ ಇಂಟರ್‌ನೆಟ್ ಸೇವೆ, ಅನಿಯಮಿತ ಕರೆಗಳು ಹಾಗೂ ಸಂದೇಶಗಳನ್ನು ಈ ಪ್ಲಾನ್ ಒಳಗೊಂಡಿವೆ.
ಬಿಎಸ್‌ಎನ್‌ಎಲ್ ಎರಡು ಹೊಸ ಅಗ್ಗದ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. 215 ರೂಪಾಯಿ ಹಾಗೂ 628 ರೂಪಾಯಿ ರೀಚಾಜ್ ಯೋಜನೆ ಇದಾಗಿದೆ. ಉಚಿತ ಕರೆ ಮತ್ತು ಡೇಟಾದಂತಹ ವೈಶಿಷ್ಟ್ಯಗಳನ್ನು ಬಯಸುವ ಗ್ರಾಹಕರಿಗೆ ಇದೊಂದು ಸಿಹಿ ಸುದ್ದಿಯಾಗಿದೆ. ಈಗಾಗಲೇ ಬಿಎಸ್‌ಎನ್ ಎಲ್ ಘೋಷಿಸಿದ ಯೋಜನೆಗಳ ಸಾಲಿಗೆ ಈ ಎರಡು ಯೋಜನೆಗಳು ಸೇರಿವೆ.

BSNL 628 ರೂ. ರೀಚಾರ್ಜ್ ಯೋಜನೆ
BSNL ನ 628 ರೂ. ಯೋಜನೆಯು ದೀರ್ಘಾವಧಿ ಮಾನ್ಯತೆ ಹೊಂದಿದೆ. ಸಾಕಷ್ಟು ವಿಶೇಷತೆವುಳ್ಳ ಈ ಯೋಜನೆಯು 84 ದಿನಗಳ ವ್ಯಾಲಿಡಿಟಿ ಹೊಂದಿದೆ. ನೀವು ಸುದೀರ್ಘ ಯೋಜನೆಯ ಲಾಭ ಪಡೆಯಬಹುದು. ಈ ಯೋಜನೆಯಡಿ ನೀವು ನಿತ್ಯ 3ಜಿಬಿ ಇಂಟರ್‌ನೆಟ್ ಬಳಕೆ ಮಾಡಲಬಹುದು. ಬಿಎಸ್‌ಎನ್‌ಎಲ್ ಹೈ-ಸ್ಪೀಡ್ ಇಂಟರ್‌ನೆಟ್ ಸೇವೆ ನಡುತ್ತದೆ. ಇದೆಲ್ಲ ಸೇರಿದಂತೆ ಒಟ್ಟು ವ್ಯಾಲಿಡಿಟಿ ವರೆಗೆ 252GB ಡೇಟಾ ಬಳಕೆಗೆ ನಿಮಗೆ ಅವಕಾಶ ಸಿಕ್ಕಂತಾಗುತ್ತದೆ.
ಈ ಪ್ಲಾನ್‌ಗೆ ನಿಮ್ಮದಾದರೆ, ನೀವು ಎಲ್ಲ ನೆಟ್‌ವರ್ಕ್‌ಗಳಲ್ಲಿ ಉಚಿತ ರಾಷ್ಟ್ರೀಯ ರೋಮಿಂಗ್ ಮತ್ತು ಅನಿಯಮಿತ ಉಚಿತ ಕರೆಗಳ ಸೌಲಭ್ಯ ಪಡೆಯುತ್ತೀರಿ. ಅಷ್ಟೇ ಅಲ್ಲದೇ ಹಾರ್ಡಿ ಗೇಮ್ಸ್, ಚಾಲೆಂಜರ್ ಅರೆನಾ ಗೇಮ್ಸ್, ಜಿಂಗ್ ಮ್ಯೂಸಿಕ್, ವಾವ್ ಎಂಟರ್‌ಟೈನ್‌ಮೆಂಟ್,ಗೇಮಿಯಾನ್, ಆಸ್ಟ್ರೋಸೆಲ್, ಲಿಸ್ಟ್ನ್ ಪಾಡ್‌ಕ್ಯಾಸ್ಟ್, ಬಿಎಸ್‌ಎನ್‌ಎಲ್ ಟ್ಯೂನ್ಸ್‌ನಂತಹ ಹಲವು ರೀತಿಯ ಉಚಿತ ಚಂದಾದಾರಿಕೆ ಸೌಲಭ್ಯಗಳು ಸಿಗಲಿವೆ.
BSNL 215 ರೂ.ಯೋಜನೆ ವೈಶಿಷ್ಯಗಳು, ವ್ಯಾಲಿಡಿಟಿ, ಲಾಭ
ಬಿಎಸ್‌ಎನ್‌ಎಲ್‌ನ ಈ ಯೋಜನೆ ಸಹ ನಿಮಗೆ ಕಡಿಮೆ ಬೆಲೆಯಲ್ಲಿ ಉತ್ತಮ ಪ್ರಯೋಜನ ನೀಡಲಿವೆ. 215 ರೂಪಾಯಿ ಯೋಜನೆ ಇದಾಗಿದ್ದು, ಅಲ್ಪಾವಧಿ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಘೋಷಿಸಲಾಗಿದೆ. ಈ ಯೋಜನೆಯು 30 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ.

ಈ ಯೋಜನೆ ನಿಮ್ಮದಾದಲ್ಲಿ ನೀವು ಪ್ರತಿ ನಿತ್ಯ 2GB ಹೈಸ್ಪೀಡ್ ಇಂಟರ್‌ನೆಟ್ ಬಳಕೆ ಮಾಡಬಹುದು. ಈ ಯೋಜನೆಯಡಿ ನಿಮಗೆ ಒಟ್ಟು ಅವಧಿಯವರೆಗೆ 60ಜಿಬಿ ಇಂಟರ್‌ನೆಟ್ ಬಳಕೆಗೆ ಅರ್ಹತೆ ಪಡೆಯುತ್ತೀರಿ. ಇತರ ಯಾವ ಶುಲ್ಕ ಇಲ್ಲದೇ ಇದರಲ್ಲಿಯೇ ನೀವು ಅನ್‌ಲಿಮಿಟೆಡ್ ಕರೆಗಳನ್ನು ಮಾಡಬಹುದು. ನಿತ್ಯ 100 ಉಚಿತ SMS ಸೌಲಭ್ಯ ಸಹ ಈಯೋಜನೆಯಡಿ ಬರುತ್ತದೆ.
BSNL ಹೊಸ ಯೋಜನೆಗಳ ಪ್ರಯೋಜನಗಳು
ಬಳಕೆದಾರರ ಅಗತ್ಯತೆ ಗಮನದಲ್ಲಿಟ್ಟುಕೊಂಡು ಬಿಎಸ್ಎನ್ಎಲ್ ಈ ಯೋಜನೆ ಸಿದ್ಧಪಡಿಸಿದೆ. ಗ್ರಾಹಕರಿಗೆ ದೀರ್ಘಾವಧಿ ಆಯ್ಕೆ, ಅಧಿಕ ಇಂಟರ್‌ನೆಟ್ ಮತ್ತು ಅಲ್ಪಾವಧಿ ಸೇವೆ ಅದು ಕಡಿಮೆ ಬೆಲೆಯಲ್ಲಿ ನೀಡಿದೆ. ಉಚಿತ ಕರೆಗಳು, ಡೇಟಾ ಮಾತ್ರವಲ್ಲದೇ ಉಚಿತ ಚಂದಾದಾರಿಕೆ ಸೌಕರ್ಯದ ಪ್ರಯೋಜನ ಸಿಗುತ್ತವೆ. ಹೀಗಾಗಿ ಇತರ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ಜಿಯೋ, ಏರ್‌ಟೆಲ್, ವಿಐಗಿಂತಲೂ ಬಿಎಸ್‌ಎನ್‌ಎಲ್ ಭಿನ್ನವಾಗಿದೆ. ಹೀಗಾಗಿ ಜನರು ಇದರ ಪ್ರಯೋಜನಗಳಿಗೆ ಆಕರ್ಷಿತರಾಗಿದ್ದಾರೆ.












Click it and Unblock the Notifications