BSNL: ಕೈಗೆಟುಕುವ ದರಕ್ಕೆ 90 ದಿನದ ರಿಚಾರ್ಜ್ ಪ್ಲಾನ್ ಘೋಷಣೆ, ಪ್ರಯೋಜನಗಳು
ಬೆಂಗಳೂರು, ಫೆಬ್ರವರಿ 27: ಭಾರತ್ ಸಂಚಾರ್ ನಿಗಮ್ ಲಿಮಟೆಡ್ (BSNL) ಬಳಕೆದಾರರಿಗೆ ಕಂಪನಿಯು ನಿತ್ಯ ಒಂದಲ್ಲ ಒಂದು ಖುಷಿ ಸುದ್ದಿ ನೀಡುತ್ತಿದೆ. ಇನ್ಮುಂದೆ ನೀವು ಪ್ರತಿ ದಿನ 5 ರೂಪಾಯಿ ವ್ಯಯಿಸಿದರೆ ಮೂರು ತಿಂಗಳು ಕಾಲ ಅತೀ ಕಡಿಮೆ ಬೆಲೆಗೆ ರಿಚಾರ್ಜ್ ಪ್ರಯೋಜನ ಪಡೆಯಬಹುದು. ಬಳಕೆದಾರರ ಸ್ನೇಹಿ ಹೊಸ ಯೋಜನೆಯನ್ನು ಕಂಪನಿಯು ಪರಿಚಯಿಸಿದೆ. ಖಾಸಗಿ ಟೆಲಿಕಾಂ ಕಂಪನಿಗಳಿಗೆ ಬಿಎಸ್‌ಎನ್‌ಎಲ್ ಟಕ್ಕರ್ ನೀಡುತ್ತಿದೆ.
ಕೇಂದ್ರ ಸರ್ಕಾರಿ ಸ್ವಾಮ್ಯದ ಈ BSNL ಟೆಲಿಕಾಂ ಗ್ರಾಹಕರು ನೀವೇನಾದರೆ ಆಗಿಲ್ಲದರೆ ತಪ್ಪದೇ ಈ ಸುದ್ದಿ ಓಡಿದೆ. ಏಕೆಂದರೆ ಕೈಗೆಟುಕುವ ಬೆಲೆಗೆ ಹೆಚ್ಚು ದಿನ ರಿಚಾರ್ಜ್ ಯೋಜನೆ ನೀಡಿದೆ. ಭಾರತಾದ್ಯಂತ ವಿವಿಧ ಸೇವೆ ನೀಡುತ್ತಿರುವ ಕಂಪನಿಯು ಈಗಾಗಲೇ 65,000ಕ್ಕೂ ಅಧಿಕ ಟವರ್ ಸಹ ನಿರ್ಮಿಸಿದೆ. ಇವೆಲ್ಲವು BSNL 4G ಟವರ್ ಗಳಾಗಿವೆ. ತನ್ನ ಬಳಕೆದಾರರಿಗೆ ಉತ್ತಮ ಬೆಲೆಗೆ ಅತ್ಯಧಿಕ ಸೇವೆ ನೀಡಲು ಕಂಪನಿ ಮುಂದಾಗಿದೆ.

BSNL 90 ದಿನದ ಯೋಜನೆಯ ಪ್ರಯೋಜನ, ವಿವರ
ಇದೀಗ ಬಿಎಸ್‌ಎನ್ ಎಲ್ 90 ದಿನಗಳ ಮತ್ತೊಂದು ಹೊಸ ಯೋಜನೆ ಅನಾವರಣಗೊಳಿಸಿದೆ. ಈ ಯೋಜನೆಗೆ ನೀವು ಕೇವಲ 439 ರೂಪಾಯಿ ನೀಡಿ ಪ್ರಿಪೇಯ್ಡ್ ಮಾಡಿಸಿಕೊಳ್ಳಬೇಕು. ಇಷ್ಟು ಕಡಿಮೆ ಬೆಲೆಗೆ ನಿಮಗೆ ಬೇರಾವ ಖಾಸಗಿ ಕಂಪನಿಗಳು ಮೊಬೈಲ್ ರಿಚಾರ್ಜ್ ಪ್ಲಾನ್ ನೀಡುತ್ತಿಲ್ಲ ಎನ್ನಬಹದು. ಹಾಗಾದರೆ ಬಿಎಸ್‌ಎನ್‌ಎಲ್ 439 ರೂ.ಪ್ಲಾನ್ ಲಾಭ, ಪ್ರಯೋಜನಗಳನ್ನು ತಿಳಿಯಿರಿ.
BSNL ಅಗ್ಗದ ಯೋಜನೆ ಪಡೆದರೆ ನಿಮಗೆ ಅನಿಯಮಿತ ಧ್ವನಿ ಕರೆಗಳು ಮಾಡಬಹುದು. ಉಚಿತ 300 SMS ಈ ಪ್ಯಾಕ್‌ನಲ್ಲಿ ಬರಲಿವೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ಯಾವುದೇ ಇಂಟರ್‌ನೆಟ್ ಡೇಟಾ ಪ್ಯಾಕ್ ಇರುವುದಿಲ್ಲ. ಕೇವಲ ಧ್ವನಿ ಕರೆ ಮತ್ತು ಎಸ್‌ಎಂಎಸ್ ಇರಲಿವೆ. ಯೋಜನೆ ಒಟ್ಟು ಮೂರು ತಿಂಗಳು (90 ದಿನಗಳ) ಮಾನ್ಯದ ಹೊಂದಿರಲಿದೆ. ಬಳಕೆದಾರರು ಅಗತ್ಯತೆ ನೋಡಿಕೊಂಡು ಡೇಟಾ ಪ್ಯಾಕ್ ಟಾಪ್-ಅಪ್ ರಿಚಾರ್ಜ್ ಮಾಡಿಕೊಳ್ಳಲು ಅವಕಾಶ ಇದೆ.

ಬಿಎಸ್‌ಎನ್ಎಲ್‌ನ ಈ ಯೋಜನೆ ಡೇಟಾ ಪ್ಯಾಕ್ ಬೇಡವಾದ ಬಳಕೆದಾರರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಇಂಟರ್‌ನೆಟ್ ಇಲ್ಲದೇ ಕೇವಲ ಧ್ವನಿ ಕರೆ ಪ್ಲಾನ್ ಬಿಡುಗಡೆ ಮಾಡುವಂತೆ TRAI ಸೂಚನೆ ಬೆನ್ನಲ್ಲೆ ವಿವಿಧ ಯೋಜನೆಗಳನ್ನು ಬಿಎಸ್ಎನ್ಎಲ್ ಪರಿಚಯಿಸುತ್ತಿದೆ.












Click it and Unblock the Notifications