BSNL ಹೊಸ IFTV ಸೇವೆ ಮತ್ತೆರಡು ರಾಜ್ಯಗಳಿಗೆ ವಿಸ್ತರಣೆ: 500 ಲೈವ್ ಚಾನಲ್ ಉಚಿತ ವೀಕ್ಷಣೆ

ನವದೆಹಲಿ, ಜನವರಿ 23: ಭಾರತದಲ್ಲಿ ಖಾಸಗಿ ಟೆಲಿಕಾಂ ದುಬಾರಿ ಪ್ಲಾನ್‌ಗಳ ಹಾವಳಿಯಿಂದ ಬೇಸತ್ತ ಜನರಿಗೆ ಅತೀ ಕಡಿಮೆ ದರಲ್ಲಿ ರೀಚಾರ್ಜ್ ಪ್ಲಾನ್ ಜಾರಿಗೊಳಿಸಿದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಹೊಸ IFTV ಸೇವೆಯನ್ನು ವಿಸ್ತರಣೆ ಮಾಡಿದೆ. ಕೆಲವು ರಾಜ್ಯಗಳಲ್ಲಿ ಮಾತ್ರ ಇದ್ದ ಈ ಇಂಟರ್‌ನೆಟ್‌ ಫೈಬರ್ ಟಿವಿಯನ್ನು (IFTV) ಮತ್ತೆ ಎರಡು ರಾಜ್ಯಗಳಿಗೆ ವಿಸ್ತರಣೆ ಮಾಡಿದೆ. ಇದರ ಚೆಂದಾದಾರಿಕೆಯಿಂದ ಗ್ರಾಹಕರು ನೂರಾರು ಟಿವಿ ಚಾನಲ್‌ಗಳನ್ನು ಉಚಿತವಾಗಿಯೇ ನೋಡಬಹುದು. ಇನ್ನೂ ಕೆಲವು ಸೌಲಭ್ಯಗಳ ಇದರಲ್ಲಿವೆ.

ದೇಶದ ಒಂದೆರಡು ರಾಜ್ಯಗಳಿಗೆ ಸಿಮೀತವಾಗಿದ್ದ ಐಎಫ್‌ಟಿವಿ ಸೇವೆಯನ್ನು BSNL ಹೊಸದಾಗಿ ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೂ ವಿಸ್ತರಣೆ ಮಾಡಿದೆ. ಈ ಮೂಲಕ ಟೆಲಿವಿಷನ್ ಕ್ಷೇತ್ರದಲ್ಲೂ ಬಿಎಸ್‌ಎನ್‌ಎಲ್ ಕಮಾಲ್ ಮಾಡಲು ಮುಂದಾಗಿದೆ.

BSNL has Expanded IFTV Services to UP and Rajasthan States See IFTV Benifits

ಭಾರತದ ವಿಶ್ವಾಸಾರ್ಹ ಟೆಲಿಕಾಂ ಸಂಸ್ಥೆ ಎಂಬ ಸಾಲಿಗೆ BSNL ಸೇರಿದೆ. ಗುರುವಾರ ಪೂರ್ವ ಉತ್ತರ ಪ್ರದೇಶದಲ್ಲಿ IFTV ಸೇವೆ ವಿಸ್ತರಣೆ ಮಾಡಿದೆ. ಇದರಿಂದ ಲಕ್ಷಾಂತರ ಭಾರತೀರು ಮನರಂಜನೆ ಪಡೆಯುತ್ತಿದ್ದಾರೆ. ಇಲ್ಲಿನ FTTH ಬಳಕೆದಾರರಿಗೆ ಬಿಎಸ್‌ಎನ್‌ಎಲ್ ಪ್ರೀಮಿಯಂ ಚಾನೆಲ್‌ಗಳು ಸೇರಿದಂತೆ 500ಕ್ಕೂ ಅಧಿಕ ಲೈವ್‌ ಟಿವಿ ಚಾನೆಲ್‌ಗಳನ್ನು ಉಚಿತವಾಗಿ ಒದಗಿಸಲಿದೆ.

ಪುದುಚೇರಿಯಲ್ಲಿ ಪೈಲಟ್ ಉಡಾವಣೆಯ ಯಶಸ್ಸಿನ ನಂತರ ಪೂರ್ವ ಉತ್ತರ ಪ್ರದೇಶದಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ. ಸೆಟ್‌ಆಫ್ ಬಾಕ್ಸ್ ಇಲ್ಲದೆ ನಿತ್ಯ ನಿಮಗೆ ಗುಣಮಟ್ಟದಲ್ಲಿ ಮನರಂಜನೆ ನೀಡಲಿದೆ. ಗ್ರಾಹಕರಿಗೆ ಯಾವುದೇ ವೆಚ್ಚವಿಲ್ಲದೇ, ಬಳಕೆದಾರರಿಗೆ ಡಿಜಿಟಲ್ ವಿಷಯವನ್ನು ಸುಲಭ ಪ್ರವೇಶಿಸುವಂತೆ ಮಾಡುತ್ತದೆ.

IFTV ಆಯ್ಕೆಯಿಂದ ಸಿಗುವ ಪ್ರಯೋಜನಗಳು

ನೀವು ಈ ಐಎಫ್‌ಟಿವಿ ಚಂದಾದಾರರು ಆದರೆ, ಅನಿಯಮಿತ ಮನರಂಜನೆ ನಿಮ್ಮದಾಗುತ್ತದೆ. ಲೈವ್ ಟಿವಿಯನ್ನು ಹೊರತುಪಡಿಸಿ, ಬಹು ಭಾಷೆಗಳಲ್ಲಿ ಚಲನಚಿತ್ರಗಳು, ವೆಬ್ ಸರಣಿಗಳು ಇನ್ನಿತರ ಸಿನಿಮಾ, ಸಾಕ್ಷ್ಯ ಚಿತ್ರಗಳನ್ನು ಉಚಿತವಾಗಿ ನೋಡಬಹುದು.

BSNL has Expanded IFTV Services to UP and Rajasthan States See IFTV Benifits

ಮೊಬೈಲ್ BSNL ನ ಸುರಕ್ಷಿತ ಮೊಬೈಲ್ ಇಂಟ್ರಾನೆಟ್‌ನಿಂದ, ಪಾಲುದಾರಿಕಗೆ ಇಂಟ್ರಾನೆಟ್‌ನಿಂದ ಗುಣಮಟ್ಟದ ವಿಡಿಯೋ, ತಡೆರಹಿತಿ ಸ್ಟ್ರಿಮೀಂಗ್ ಮಾಡಲು ಅವಕಾಶ ಇದೆ. ಸದ್ಯ ಪೂರ್ವ ಉತ್ತರ ಪ್ರದೇಶದಲ್ಲಿ ಜಾರಿಯಾದ IFTV ಸೇವೆ ಮುಂದಿನ ಫೆಬ್ರವರಿಯಲ್ಲಿ ಮಹಾರಾಷ್ಟ್ರ, ಬಿಹಾರ ಮತ್ತು ಜಾರ್ಖಂಡ್‌ಗಳಲ್ಲಿ ಜಾರಿಗೊಳಿಸಲಾಗುವುದು. ದೇಶಾದ್ಯಂತ ವಿಸ್ತರಣೆಗೆ ಬಿಎಸ್‌ಎನ್‌ಎಲ್ ಪ್ಲಾನ್ ಮಾಡಿಕೊಂಡಿದೆ.

IFTV ಸಂಪರ್ಕ ಪಡೆದ ಭಾರತೀಯ ಗ್ರಾಹಕನಿಗೆ ವಿಶ್ವ ದರ್ಜೆಯ ಮನರಂಜನೆ ದೊರೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರೆ. ಯಾರೊಬ್ಬರು ಕೂಡ ಈ ಉಚಿತ ಮನರಂಜನೆ ಪಡೆಯಬಹುದು. ಹೊಸ ತಂತ್ರಜ್ಞಾನದೊಂದಿಗೆ ಉತ್ತನ್ನ ರೂಪದಲ್ಲಿ ಜನರಿಗೆ ಉಚಿತ ನೂರಾರು ಲೈವ್ ಟಿವಿ, ಮನರಂಜನೆ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ.

OTTplay ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳಲಾಗುತ್ತದೆ. BSNL ಡಿಜಿಟಲ್ ವಿಸ್ತರಣೆಗೆ ಒತ್ತು ನೀಡುತ್ತಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಂವಹನ, ಸಮರ್ಪಕ್ ಇಂಟರ್‌ನೆಟ್ ಮನರಂಜನೆ ಸಂಪರ್ಕ ಸಾಧಿಸುವ ಗುರಿ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+