• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿಯನ್ನು ಹಾದು ಹೋಗಲಿದೆ ಪ್ರಕಾಶಮಾನ ಧೂಮಕೇತು: ಯಾವಾಗ, ನೋಡುವುದು ಹೇಗೆ?, ಸಂಪೂರ್ಣ ವಿವರ

|
Google Oneindia Kannada News

ಈ ವರ್ಷದ ಅತೀ ಪ್ರಕಾಶಮಾನವಾದ ಧೂಮಕೇತು ಲಿಯೊನಾರ್ಡ್ ಡಿಸೆಂಬರ್‌ 12 ರಂದು ಭೂಮಿಗೆ ಅತೀ ಸಮೀಪವಾಗಿ ಸಂಚಾರ ಮಾಡಲಿದೆ. ಇತ್ತೀಚೆಗೆ ಜನವರಿ 2021 ರಲ್ಲಿ ಈ ಧೂಮಕೇತು ಪತ್ತೆಯಾಗಿದ್ದು ಇದನ್ನು C/2021 A1 ಎಂದು ಕೂಡಾ ಕರೆಯಲಾಗುತ್ತದೆ.

ಡಿಸೆಂಬರ್‌ನಲ್ಲಿ ಈ ಧೂಮಕೇತು ರಾತ್ರಿ ಹೊತ್ತಲ್ಲಿ ಆಕಾಶದಲ್ಲಿ ಕಾಣಿಸಿಕೊಳ್ಳಲಿದೆ ಹಾಗೂ ತಿಂಗಳು ಕಳೆಯುತ್ತಿದ್ದಂತೆ ಈ ಧೂಮಕೇತು ಹೆಚ್ಚು ಪ್ರಕಾಶಮಾನವಾಗಲಿದೆ. ಈ ಧೂಮಕೇತುವನ್ನು ಈ ವರ್ಷದ ಆರಂಭದಲ್ಲಿ ಖಗೋಳಶಾಸ್ತ್ರಜ್ಞ ಗ್ರೆಗೊರಿ ಜೆ ಲಿಯೊನಾರ್ಡ್ ಕಂಡು ಹಿಡಿದಿದ್ದಾರೆ. ಈ ಧೂಮಕೇತುವು ಸುಮಾರು 35,000 ವರ್ಷಗಳ ನಂತರ ಬಾಹ್ಯಾಕಾಶದಲ್ಲಿ ಭೂಮಿಯ ಸಮೀಪ ಬರುತ್ತಿದೆ. ಇದು ಸುಮಾರು 523 ಶತಕೋಟಿ ಕಿಲೋಮೀಟರ್ ದೂರದಲ್ಲಿ ಇರಲಿದೆ.

ಖಗೋಳಶಾಸ್ತ್ರದ ಅಂದಾಜಿನ ಪ್ರಕಾರ ಈ ಅತೀ ಪ್ರಕಾಶಮಾನವಾದ ಧೂಮಕೇತು ಲಿಯೊನಾರ್ಡ್ ಬರಿಗಣ್ಣಿಗೆ ಗೋಚರಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೂ ಈ ಆಕಾಶದಲ್ಲಿ ನಡೆಯುವ ಈ ಚಮತ್ಕಾರವನ್ನು ನೀವು ವೀಕ್ಷಣೆ ಮಾಡಲು ದೂರದರ್ಶಕ ಅಥವಾ ಬೈನಾಕ್ಯುಲರ್ ಬಳಸುವುದು ಸೂಕ್ತ ಎಂದು ತಜ್ಞರು ಹೇಳು‌ತ್ತಾರೆ.

ಯಾವಾಗ ಈ ಧೂಮಕೇತು ಸ್ಪಷ್ಟವಾಗಿ ಕಾಣಲಿದೆ?

ಯಾವಾಗ ಈ ಧೂಮಕೇತು ಸ್ಪಷ್ಟವಾಗಿ ಕಾಣಲಿದೆ?

ಈ ಧೂಮಕೇತು ಡಿಸೆಂಬರ್‌ 12 ರಂದು ಭೂಮಿಗೆ ಬಹಳ ಸಮೀಪವಾಗಿ ಹಾದು ಹೋಗಲಿದೆ. ಇದಕ್ಕೂ ಎರಡು ವಾರಗಳ ಮುನ್ನ ಈ ಧೂಮಕೇತು ಸೂರ್ಯನಿಗೆ ಅತೀ ಸಮೀಪವಾಗಿ ಹಾದು ಹೋಗಿತ್ತು. ಧೂಮಕೇತು ಬಗ್ಗೆ ಸ್ಪಷ್ಟವಾಗಿ ಅಂದಾಜು ಮಾಡಲು ಸಾಧ್ಯವಿಲ್ಲ, ಆದರೆ ಈ ಡಿಸೆಂಬರ್‌ನಲ್ಲಿ ಈ ಧೂಮಕೇತು ಅತೀ ಪ್ರಕಾಶಮಾನವಾಗಿ ಹೊಳೆಯಲಿದೆ ಎಂದು ಖಗೋಳಶಾಸ್ತ್ರಜ್ಞರು ಹೇಳು‌ತ್ತಾರೆ.

ಧೂಮಕೇತು ಲಿಯೊನಾರ್ಡ್ ಬಗ್ಗೆ ಅಧಿಕ ಮಾಹಿತಿ

ಧೂಮಕೇತು ಲಿಯೊನಾರ್ಡ್ ಬಗ್ಗೆ ಅಧಿಕ ಮಾಹಿತಿ

ಈ ಧೂಮಕೇತುವನ್ನು ಮೊದಲ ಬಾರಿಗೆ ಖಗೋಳಶಾಸ್ತ್ರಜ್ಞ ಗ್ರೆಗೊರಿ ಜೆ ಲಿಯೊನಾರ್ಡ್ ಈ ವರ್ಷ ಜನರವರಿ ತಿಂಗಳಿನಲ್ಲಿ ಪತ್ತೆ ಹಚ್ಚಿದ್ದಾರೆ. ಮೌಂಟ್ ಲೆಮ್ಮನ್ ವೀಕ್ಷಣಾಲಯದಲ್ಲಿ ಈ ಧೂಮಕೇತುವನ್ನು ವಿಯೊನಾರ್ಡ್ ಅವರು ಪತ್ತೆ ಹಚ್ಚಿದ್ದಾರೆ. ಈ ಹಿರಿಯ ತಜ್ಞರು ಕಣ್ಣಿಗೆ ಕಾಣಿಸದ ನಕ್ಷತ್ರಕ್ಕಿಂತ ಸುಮಾರು 1,60,000 ಪಟ್ಟು ಕಡಿಮೆ ಪ್ರಕಾಶಮಾನವಾದ ಈ ಧೂಮಕೇತುವನ್ನು ಅವರು ಜನವರಿಯಲ್ಲಿ ಪತ್ತೆಹಚ್ಚಿದ್ದಾರೆ. ಈ ಸಂದರ್ಭದಲ್ಲಿ ಗುರು ಗ್ರಹದ ಬಳಿಯಲ್ಲಿ ಇದ್ದ ಈ ಧೂಮಕೇತು ಸೂರ್ಯನಿಂದ ಸುಮಾರು 149.565 ಮಿಲಿಯನ್‌ ಕಿಲೋ ಮೀಟರ್‌ ದೂರದಲ್ಲಿ ಇತ್ತು. space.com, ಪ್ರಕಾರ, ಇದು ಅತಿಯಾಗಿ ಸಂಚಾರ ಮಾಡುತಲೇ ಇದೆ. ಈವರೆಗೆ ಸುಮಾರು 523 ಬಿಲಿಯನ್‌ ಕಿಲೋಮೀಟರ್‌ ಸಂಚಾರ ಮಾಡಿದೆ. ಇದು ಸೂರ್ಯನ ಅತೀ ಸಮೀಪದಲ್ಲಿ ಹಾದು ಹೋಗಿತ್ತು. ಈಗ ಭೂಮಿಯ ಸಮೀಪದಲ್ಲಿ ಹಾದು ಹೋಗಲಿದೆ.

ಈ ತಿಂಗಳಲ್ಲಿ ಧೂಮಕೇತು ಯಾಕೆ ಪ್ರಕಾಶಮಾನವಾಗಲಿದೆ?

ಈ ತಿಂಗಳಲ್ಲಿ ಧೂಮಕೇತು ಯಾಕೆ ಪ್ರಕಾಶಮಾನವಾಗಲಿದೆ?

ಖಗೋಳಶಾಸ್ತ್ರಜ್ಞರ ಪ್ರಕಾರ ಈ ಧೂಮಕೇತುವು ಈ ತಿಂಗಳಿನಲ್ಲಿ ಪ್ರಕಾಶಮಾನವಾಗಲೂ ಕಕ್ಷೆಯೇ ಕಾರಣವಾಗಿದೆ. ಔರ್ತ್ ಕ್ಲೌಡ್‌ನಿಂದ ನೇರವಾಗಿ ಹೊರ ಬಂದ ಈ ಧೂಮಕೇತು ಹೊಸತಲ್ಲ ಎಂದು ಕೂಡಾ ಖಗೋಳಶಾಸ್ತ್ರಜ್ಞರು ಹೇಳುವುದುಂಟು. ಇದು ಬಹಳಷ್ಟು ವರ್ಷಗಳಿಂದ ಸಂಚಾರ ಮಾಡುತ್ತಲಿದೆ. ಸುಮಾರು 70,000 ವರ್ಷಕ್ಕಿಂತ ಮುಂಚೆಯೇ ಇದು ಸೂರ್ಯನ ಸಮೀಪಕ್ಕೆ ಕನಿಷ್ಠ ಒಂದು ಬಾರಿಯಾದರೂ ಸಂಚಾರ ಮಾಡಿದೆ. ಈ ಧೂಮಕೇತು ಸೌರ ಕಿರಣಗಳಿಂದ ಬಹಳ ಸಮಯದಿಂದ ದೂರವಿರುವುದರಿಂದ ಅದು ಘನೀಕೃತ ಕಾರ್ಬನ್ ಡೈಆಕ್ಸೈಡ್, ಸಾರಜನಕ ಮತ್ತು ಕಾರ್ಬನ್ ಮಾನಾಕ್ಸೈಡ್ ಅನ್ನು ಹೊಂದಿರಬಹುದು, ಇದು ಆವಿಯಾಗಿ ಹೆಚ್ಚಿನ ಹೊಳಪನ್ನು ನೀಡಬಹುದು ಎಂದು ಖಗೋಳಶಾಸ್ತ್ರಜ್ಞರ ಅಂದಾಜಿಸಿದ್ದಾರೆ. ಆದರೆ ಸೂರ್ಯನ ಹತ್ತಿರ ಬರುತ್ತಿದ್ದಂತೆ ಅದರ ಹೊಳಪು ಕಡಿಮೆಯಾಗತೊಡಗುತ್ತದೆ.

ಹಾಗಾದರೆ ನಾವು ಈ ಧೂಮಕೇತುವನ್ನು ನೋಡುವುದು ಎಲ್ಲಿ?

ಹಾಗಾದರೆ ನಾವು ಈ ಧೂಮಕೇತುವನ್ನು ನೋಡುವುದು ಎಲ್ಲಿ?

ಈ ಧೂಮಕೇತು ಸೂರ್ಯೋದಯಕ್ಕೆ ಒಂದೆರಡು ಗಂಟೆಗಳ ಮೊದಲು ಗೋಚರಿಸುತ್ತದೆ. ಪೂರ್ವ-ಈಶಾನ್ಯ ಆಕಾಶದಲ್ಲಿ ಕೋಮಾ ಬೆರೆನಿಸಸ್, ಬೂಟೆಸ್ ಮತ್ತು ಸರ್ಪೆನ್ಸ್ ಕ್ಯಾಪುಟ್ ನಕ್ಷತ್ರಪುಂಜಗಳ ಕೆಳಗೆ ಈ ಧೂಮಕೇತು ಕಾಣಿಸಿಕೊಳ್ಳಲಿದೆ. ಈ ಧೂಮಕೇತುವನ್ನು ಚಿಕ್ಕ ದೂರದರ್ಶಕ ಅಥವಾ ಒಂದು ಜೋಡಿ ಬೈನಾಕ್ಯುಲರ್‌ಗಳನ್ನು ಬಳಸಿ ಗುರುತಿಸುವುದು ಸುಲಭವಾಗಲಿದೆ.

English summary
Brightest comet of 2021 to pass Earth on December 12: Check visibility, timing, how to watch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X