ತಾಜಾ ತಾಜಾ ಇಲಿ ಮಾಂಸಕ್ಕೆ ಬಲು ಬೇಡಿಕೆ, ಕೇಜಿಗೆ ಜಸ್ಟ್ ಟೂ ಹಂಡ್ರೆಡ್

ಈಗಷ್ಟೇ ಹಿಡಿದ ತಾಜಾ ತಾಜಾ ಇಲಿಗಳು ಮಾರಾಟಕ್ಕಿವೆ. ನಿಮ್ಮ ರಜಾ ದಿನಕ್ಕೆ ನಾಲಗೆಯಲ್ಲಿ ನೀರೂರಿಸುವ ನಾನಾ ಬಗೆಯ ಅಡುಗೆ ಮಾಡಲು..ಕೊಳ್ಳಿ..ಬನ್ನಿ...ಬನ್ನಿ..- ಹೀಗೆ ಕರೆಯುತ್ತಿಲ್ಲ ಅನ್ನುವುದು ಬಿಟ್ಟರೆ ಆ ಮಾರ್ಕೆಟ್ ನಲ್ಲಿ ಇಲಿಗಳಿಗೆ ಬಲು ಡಿಮ್ಯಾಂಡ್. ಸ್ಥಳೀಯವಾಗಿ ಸಿಗುವ ಇಲಿಗಳಿಗೆ ಈಶಾನ್ಯ ಭಾರತದಲ್ಲಿ ಬಹಳ ಬೇಡಿಕೆ ಇದೆ.

ಬೇಯಿಸಿದ, ಮೇಲಿನ ಚರ್ಮ ತೆಗೆದು ಮತ್ತು ನಂತರ ಅದನ್ನು ಮಸಾಲೆಭರಿತ ವಸ್ತುಗಳ ಜತೆಗೆ ಸೇರಿಸಿ ಅಡುಗೆ ಮಾಡಿದ ಇಲಿಗಳೆಂದರೆ ಜನರು ಲೊಟ್ಟೆ ಹೊಡೆದು ತಿನ್ನುತ್ತಾರೆ. ಚಿಕನ್ ಮತ್ತು ಹಂದಿ ಮಾಂಸಕ್ಕಿಂತ ಇಲಿಗೇ ಬೇಡಿಕೆ. ಅಸ್ಸಾಂನ ಕುಮರಿಕಟ ಹಳ್ಳಿಯ ಮಾರ್ಕೆಟ್ ನಲ್ಲಿ ಒಂದು ಸುತ್ತು ಹಾಕಿಬಂದರೆ ಅನುಭವಕ್ಕೆ ಬರುತ್ತದೆ ಇಲಿ ಮಾಂಸದ ಬೇಡಿಕೆ.

ಭೂತಾನ್ ಜತೆಗೆ ಗಡಿ ಹಂಚಿಕೊಳ್ಳುವ ಭೂ ಪ್ರದೇಶದಲ್ಲಿ ಇರುವ ಜಮೀನುಗಳಲ್ಲಿ ರೈತರೇ ಈ ಇಲಿಗಳ ಬೇಟೆಯಾಡುತ್ತಾರೆ. ಅದು ಹೇಗೆ ಗೊತ್ತಾ? ಜಮೀನಿನಲ್ಲಿ ಬೆಳೆದ ಬೆಳೆಗೆ ಯಾವುದೇ ಹಾನಿ ಆಗದಂತೆ ಇಲಿ ಬೇಟೆಯಾಡುತ್ತಾರೆ. ನೂರಾರು ಸಂಖ್ಯೆಯಲ್ಲಿರುವ, ಆಗ ತಾನೆ ಹಿಡಿದ ಇಲಿಗಳು ಹಾಗೂ ಮೇಲಿನ ಚರ್ಮ ಸುಲಿದ ಇಲಿಗಳನ್ನು ಮಳಿಗೆಯವರು ಖರೀದಿ ಮಾಡುತ್ತಾರೆ. ಅಷ್ಟೇ ಅಲ್ಲ, ಹುರಿದ-ಕರಿದ, ತಿನ್ನಲು ಸಿದ್ಧವಾದ ಇಲಿ ಮಾಂಸ ಕೂಡ ಖರೀದಿಗೆ ಲಭ್ಯ ಇರುತ್ತವೆ.

Rat

ಅಸ್ಸಾಂನ ಚಹಾ ತೋಟಗಳಲ್ಲಿ ಕೆಲಸ ಮಾಡುವ ಇಲ್ಲಿನ ಬಡ 'ಆದಿವಾಸಿ' ಬುಡಕಟ್ಟು ಜನಾಂಗದವರ ಪಾಲಿಗೆ ಈ ಇಲಿಗಳೇ ಆದಾಯದ ಮೂಲ. ಚಳಿಗಾಲದಲ್ಲಿ ಚಹಾ ತೋಟದ ಕೆಲಸಗಳು ನಿಂತು, ಭತ್ತದ ಗದ್ದೆಗಳಿಗೆ ತೆರಳುತ್ತಾರೆ. ಅಲ್ಲಿ ಇಲಿಗಳನ್ನು ಹಿಡಿದು, ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

ಒಂದು ಕಿಲೋಗ್ರಾಮ್ ಇಲಿ ಮಾಂಸಕ್ಕೆ ಇನ್ನೂರು ರುಪಾಯಿ ಬೆಲೆ. ಕೋಳಿ-ಹಂದಿ ಮಾಂಸಕ್ಕೂ ಇದೇ ಬೆಲೆ ಇದೆ. ಜತೆಗೆ ಈಚಿನ ವರ್ಷಗಳಲ್ಲಿ ಕೃಷಿಕರಿಗೆ ಇಲಿ ಕಾಟ ಹೆಚ್ಚಾಗಿದೆ. ರಾತ್ರಿ ವೇಳೆಯಲ್ಲಿ ಭತ್ತದ ಗದ್ದೆಗಳಲ್ಲಿ ನಾಟಿ ನಡೆಯುವಾಗ ಇಲಿ ಬೇಟೆ ಆಡುತ್ತಾರೆ. ಇಲಿ ಬೇಟೆ ಏನೂ ಸಲೀಸಲ್ಲ. ಏಕೆಂದರೆ ಇಲಿ ಬೇಟೆ ಆಡುವ ಇತರ ಪ್ರಾಣಿಗಳಿಗೂ ಮುಂಚೆ ಇವರು ಅವುಗಳನ್ನು ಹಿಡಿಯಬೇಕು.

ಕೆಲವು ಇಲಿಗಳು ಒಂದು ಕೇಜಿಗೂ ಹೆಚ್ಚಿರುತ್ತವೆ. ಒಂದು ರಾತ್ರಿಯಲ್ಲಿ ಹತ್ತರಿಂದ ಇಪ್ಪತ್ತು ಕೇಜಿಯಷ್ಟು ಇಲಿ ಮಾಂಸ ದೊರೆಯುತ್ತದೆ ಎಂಬ ಮಾಹಿತಿ ನೀಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+