ಕಪ್ಪು ನ್ಯೂಡಲ್ಸ್: ಮಾಡುವ ವಿಧಾನ ಕಂಡು ಹುಬ್ಬೇರಿಸಿದ ನೆಟ್ಟಿಗರು- ವಿಡಿಯೋ

ಕಪ್ಪು ಬಣ್ಣದ ನ್ಯೂಡಲ್ಸ್ ಮಾಡುವ ವಿಧಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈಗಿನ ಆಹಾರ ಪದ್ದತಿ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಈಗೇನಿದ್ರ ಫಾಸ್ಟ್‌ ಫುಡ್‌ನದ್ದೇ ಜಮಾನ. ಯಾವುದು ಬಹುಬೇಗ ತಯಾರಾಗುತ್ತೋ ಅದರ ಅಭಿಮಾನಿಗಳೇ ನಮ್ಮ ಸುತ್ತಲು ಅಧಿಕವಾಗಿಬಿಟ್ಟಿದ್ದಾರೆ. ಇಂಥಹ ಆಹಾರ ಫುಡ್‌ ಸ್ಟ್ರೀಟ್‌ಗಳಲ್ಲಿ ಹೆಚ್ಚಾಗಿ ಸಿಗುತ್ತದೆ. ಅಂದಹಾಗೆ ಫಾಸ್ಟ್ ಫುಡ್ ಎಂದಾಕ್ಷಣ ನಮಗೆ ಥಟಂತ್ ನೆನಪಾಗೋದು ಮ್ಯಾಗಿ. ಈ ಮ್ಯಾಗಿಗೆ ಸಾವಿರಾರು ಜನ ಫ್ಯಾನ್ಸ್‌ ಇದ್ದಾರೆ. ಮ್ಯಾಗಿ ನ್ಯೂಡಲ್ಸ್‌ನಲ್ಲೇ ವಿವಿಧ ಬಗೆಯ ಆಹಾರವನ್ನು ತಯಾರಿಸಲಾಗುತ್ತದೆ. ರುಚಿಗನುಸಾರ ಇದಕ್ಕೆ ಅಭಿಮಾನಿಗಳಿದ್ದಾರೆ. ಹೀಗಾಗಿ ಫುಡ್‌ ಸ್ಟ್ರೀಟ್‌ಗಳಲ್ಲಿ ಹೆಚ್ಚಾಗಿ ವಿಭಿನ್ನವಾದ ನ್ಯೂಡಲ್ಸ್ ಲಭ್ಯವಿದೆ. ಹೀಗಾಗಿ ನ್ಯೂಡಲ್ಸ್‌ನಿಂದ ಅದೆನೇ ಮಾಡಿದರೂ ವಿಡಿಯೋಗಳು ವೈರಲ್ ಆಗುತ್ತವೆ. ಇತ್ತೀಚಿಗಷ್ಟೆ ವೈರಲ್ ಆದ ವಿಡಿಯೋವೊಂದರಲ್ಲಿ ನ್ಯೂಡಲ್ಸ್‌ ಬಣ್ಣ ಕಪ್ಪಗಾಗಿದ್ದು ಹೆಚ್ಚು ವೈರಲ್ ಆಗಿದೆ.

ಇಂಟರ್ನೆಟ್ ನಲ್ಲಿ ಥಾಯ್ಲೆಂಡ್‌ನ ಬೀದಿಗಳಲ್ಲಿ ತಯಾರಾಗುವ ಡಾರ್ಕ್-ಕಲರ್ ನೂಡಲ್ಸ್ ವೈರಲ್ ಆಗಿದೆ. ವೈರಲ್ ವಿಡಿಯೊದಲ್ಲಿ ಮಹಿಳೆಯೊಬ್ಬರು ತರಕಾರಿಗಳು, ಮಸಾಲೆಗಳು ಮತ್ತು ಸೀಗಡಿಗಳೊಂದಿಗೆ ನೀಲಿ ಕಪ್ಪು ಬಣ್ಣದ ನೂಡಲ್ಸ್ ಅನ್ನು ತಯಾರಿಸುತ್ತಾರೆ. ಅವಳು ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಫ್ರೈ ಮಾಡಿ ತನ್ನ ಗ್ರಾಹಕರಿಗೆ ನೀಡುತ್ತಾಳೆ.

Black Noodles: Black Noodles Make Netizens Surprised - Video

ವೈರಲ್ ವೀಡಿಯೊದ ಶೀರ್ಷಿಕೆಯಲ್ಲಿ, "ಥೈಲ್ಯಾಂಡ್‌ನ ವಿಶಿಷ್ಟ ಸ್ಟ್ರೀಟ್ ಫುಡ್" ಎಂದು ಬರೆಯಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವಾರು ಜನ ವಿಭಿನ್ನ ಕಾಮೆಂಟ್ ಮಾಡಿದ್ದಾರೆ. 'ಇದು ನಿಜವಾಗಲೂ ನೂಡಲ್ಸಾ?' ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು' ಇದು ನೂಡಲ್ಸ್‌ ಅಲ್ಲ ಅಂದರೆ ಪ್ಲಾಸ್ಟಿಕ್ ರಬ್ಬರ್' ಎಂದಿದ್ದಾರೆ. ಇನ್ನೂ ಕೆಲವರು ಇದನ್ನು 'ವಿಷ ನೂಡಲ್ಸ್' ಎಂದು ಕರೆಯುತ್ತಾರೆ. ವೈರಲ್ ವೀಡಿಯೊ 95K ಲೈಕ್‌ಗಳು, 1K ಕಾಮೆಂಟ್‌ಗಳು ಮತ್ತು 4.5M ವೀಕ್ಷಣೆಗಳನ್ನು ಹೊಂದಿದೆ.

ಸ್ಕ್ವಿಡ್ ಇಂಕ್ ನೂಡಲ್ಸ್/ಸ್ಪಾಗೆಟ್ಟಿ ಎಂದರೇನು?

TasteAtlas.com ಪ್ರಕಾರ, ಸ್ಪಾಗೆಟ್ಟಿ ಅಲ್ ನೀರೋ ಡಿ ಸೆಪ್ಪಿ ಅನ್ನೋದು ವಿಶಿಷ್ಟವಾದ ಸಿಸಿಲಿಯನ್ ಊಟವಾಗಿದೆ. ಇದು ಅತ್ಯಂತ ಪ್ರಸಿದ್ಧವಾದ ಸ್ಪಾಗೆಟ್ಟಿ ಭಕ್ಷ್ಯಗಳಲ್ಲಿ ಒಂದಾಗಿದೆ. ಇದು ಸ್ಕ್ವಿಡ್ ಅಥವಾ ಇತರ ಸಮುದ್ರಾಹಾರ, ಬೆಳ್ಳುಳ್ಳಿ, ಆಲಿವ್ ಎಣ್ಣೆ, ಬಿಳಿ ವೈನ್ ಮತ್ತು ಸ್ಕ್ವಿಡ್ ಶಾಯಿಯನ್ನು ಒಳಗೊಂಡಿರುತ್ತದೆ. ಈ ಹೊಳಪು, ಮಧ್ಯರಾತ್ರಿ-ಹ್ಯೂಡ್ ಭಕ್ಷ್ಯವನ್ನು ರಚಿಸಲು ನೂಡಲ್ಸ್‌ ಅನ್ನು ಸಾಸ್‌ನಲ್ಲಿ ಹಾಕಲಾಗುತ್ತದೆ. ನೂಡಲ್ಸ್ ಹಿಟ್ಟಿನಲ್ಲಿ ಬಣ್ಣ ಸೇರಿಸಲಾಗುತ್ತದೆ. ಇದು ಒಣಗಿಸಿ ನಂತರ ನ್ಯೂಡಲ್ಸ್‌ನಂತೆ ಬಳಕೆ ಮಾಡಲಾಗುತ್ತದೆ. ಇದು ಕಪ್ಪು ಬಣ್ಣದಾಗಿರುತ್ತದೆ. ಆದರೆ ನಿರೀಕ್ಷಿಸಿದಷ್ಟು ಸುವಾಸನೆಯುಳ್ಳದ್ದಲ್ಲ. ಸ್ಕ್ವಿಡ್ ಶಾಯಿಯನ್ನು ಸಾಮಾನ್ಯವಾಗಿ ಲಘುವಾಗಿ ಬಳಸಲಾಗುತ್ತದೆ. ಇದು ಕಪ್ಪು ಬಣ್ಣಕ್ಕೆ ನ್ಯೂಡಲ್ಸ್ ತರಲು ಸಹಾಐ ಮಾಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+