ಕಪ್ಪುಕುಳಿಗೂ ಕೂದಲು, ಬ್ಲ್ಯಾಕ್ ಹೋಲ್‌ನ ಭಯಾನಕ ರಹಸ್ಯ
ಪಕ್ಕದಲ್ಲೇ ಗೊತ್ತಾಗದಂತೆ ಇದ್ದು, ರಾಕ್ಷಸನ ರೀತಿ ಎಲ್ಲವನ್ನೂ ನುಂಗಿ ಹಾಕುವ ಕಪ್ಪು ಕುಳಿ (Black Hole) ಕುರಿತು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಅಂದಹಾಗೆ ಈ ಬ್ರಹ್ಮಾಂಡವೇ ಒಂದು ವಿಸ್ಮಯ, ಬೆದಕಿದಷ್ಟು ಆಶ್ಚರ್ಯಗಳು ಒಂದೊಂದಾಗಿ ಹೊರಗೆ ಬರುತ್ತವೆ. ಈಗ ಇಂತಹದ್ದೇ ವಿಸ್ಮಯಕಾರಿ ವಿಚಾರವನ್ನ ಇಟಲಿಯ ಬಾಹ್ಯಾಕಾಶ ವಿಜ್ಞಾನಿಗಳು ಹೊರಹಾಕಿದ್ದಾರೆ. ಅರೆ ಏನದು ವಿಸ್ಮಯ..? ಅಂತಾ ನೀವೂ ಕುತೂಹಲದಿಂದ ಕೇಳಬಹುದು.
ಅಷ್ಟಕ್ಕೂ ಕಪ್ಪು ಕುಳಿಗಳ ಬಗ್ಗೆ ಇದುವರೆಗೂ ಸಿಗದ ಮಾಹಿತಿ ಸಿಕ್ಕಿಬಿಟ್ಟಿದೆ. ನಮ್ಮಂತೆ ಬ್ಲ್ಯಾಕ್ ಹೋಲ್ ಅಥವಾ ಕಪ್ಪು ಕುಳಿಗೂ ಜಡೆ ಇರುತ್ತದೆ ಎಂಬ ವಿಚಾರವನ್ನ ವಿಜ್ಞಾನಿಗಳು ಬಯಲು ಮಾಡಿದ್ದಾರೆ. ಅಲ್ಬರ್ಟ್ ಐನ್‍ಸ್ಟೈನ್ ಪ್ರತಿಪಾದಿಸಿದ್ದ ಸಿದ್ಧಾಂತದ ಪ್ರಕಾರ, ಕಪ್ಪು ಕುಳಿ (Black Hole) ಅತಿವೇಗವಾಗಿ ಸುತ್ತಿದರೆ ಅವುಗಳ ತಲೆ ಮೇಲೆ ಜಡೆಯಂತಹ ಆಕಾರ ಮೂಡುತ್ತದೆ. ಇದು ಕೂದಲಿನಂತೆ ಆಕಾರವನ್ನು ಹೊಂದಿರುತ್ತದೆ ಎಂದು ಇಟಲಿಯ 'ಇಂಟರ್‌ನ್ಯಾಷನಲ್ ಸ್ಕೂಲ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್' ಸಂಸ್ಥೆಯ ವಿಜ್ಞಾನಿಗಳು ತಿಳಿಸಿದ್ದಾರೆ. ವಿಜ್ಞಾನಿಗಳ ಈ ಸಂಶೋಧನೆಯಿಂದ ಡಾರ್ಕ್ ಮ್ಯಾಟರ್ ಅಧ್ಯಯನ ಇನ್ನಷ್ಟು ಸುಲಭವಾಗಲಿದೆ ಎಂಬ ಅಭಿಪ್ರಾಯಗಳು ಹೊರಬಿದ್ದಿವೆ.

‘ಬ್ಲ್ಯಾಕ್ ಹೋಲ್’ ಬಂದರೆ ಉಡೀಸ್
ಈ ಬ್ರಹ್ಮಾಂಡದಲ್ಲಿ ಮನುಕುಲ ಅತಿಹೆಚ್ಚು ಭಯಪಟ್ಟ ವಿಚಾರವೆಂದರೆ ‘ಕಪ್ಪು ಕುಳಿ'. ‘ಬ್ಲ್ಯಾಕ್ ಹೋಲ್' ಬಗ್ಗೆ ಒಂದು ಕಾಲದಲ್ಲಿ ಇಡೀ ಬಾಹ್ಯಾಕಾಶ ವಿಜ್ಞಾನ ಲೋಕವೇ ತಲೆಕೆಡಿಸಿಕೊಂಡಿತ್ತು. ಮಾನವನ ವಿನಾಶ ಹೀಗೆ ಆಗುತ್ತದೆ ಎಂಬ ಸಿದ್ಧಾಂತಗಳೂ ಮಂಡನೆಯಾಗಿದ್ದವು. ಆದರೆ ನಮ್ಮ ಅದೃಷ್ಟ, ಭೂಮಿಗೆ ಸಮೀಪದಲ್ಲಿ ಅಷ್ಟು ಭಯಾನಕ ‘ಬ್ಲ್ಯಾಕ್ ಹೋಲ್' ಎಲ್ಲೂ ಇಲ್ಲ. ಇದ್ದರೂ ಅದು ತುಂಬಾ ದೂರದಲ್ಲಿ ತನ್ನ ಪಾಡಿಗೆ ತಾನು ಸಿಕ್ಕ ಸಿಕ್ಕ ವಸ್ತುಗಳನ್ನ ನುಂಗಿ ಹಾಕುತ್ತಿದೆ. ಅಕಸ್ಮಾತ್ ರಾಕ್ಷಸ ಗಾತ್ರದ ‘ಬ್ಲ್ಯಾಕ್ ಹೋಲ್' ಭೂಮಿಗೆ ಸಮೀಪವೇ ಬಂದರೆ ಕತೆ ಏನು ಎಂಬ ಪ್ರಶ್ನೆಗಳು ಮೂಡಿದಾಗ, ಅದಕ್ಕಿರುವ ಒಂದೇ ಪದದ ಉತ್ತರ ಸರ್ವನಾಶ..!

‘ಬ್ಲ್ಯಾಕ್ ಹೋಲ್’ ಫೋಟೋ ತೆಗೆದಿದ್ದರು
ಕಳೆದ ವರ್ಷ ವಿಸ್ಮಯವೊಂದು ನಡೆದಿತ್ತು. ಅಂತಾರಾಷ್ಟ್ರೀಯ ಟೆಲಿಸ್ಕೋಪ್ ಮಹತ್ತರದ ಸಾಧನೆ ಮಾಡಿತ್ತು. ಕಪ್ಪು ಕುಳಿ ಫೋಟೋ ಕ್ಲಿಕ್ಕಿಸುವಲ್ಲಿ ಖಗೋಳಶಾಸ್ತ್ರಜ್ಞರು ಯಶಸ್ವಿಯಾಗಿದ್ದರು. ಮೊದಲ ಬಾರಿಗೆ ಕಪ್ಪು ಕುಳಿ ಮತ್ತು ಅದರ ನೆರಳಿನ ಚಿತ್ರ ಸೆರೆಹಿಡಿಯಲಾಗಿತ್ತು. ಇವೆಂಟ್ ಹಾರಿಜಾನ್ ಟೆಲಿಸ್ಕೋಪ್ ಇದನ್ನು ಸಾಧಿಸಿತ್ತು. ಅರೆ ಫೋಟೋ ತೆಗೆಯುವುದರಲ್ಲಿ ಏನಿದೆ ಎಂದು ನೀವು ಪ್ರಶ್ನಿಸಬಹುದು. ಆದರೆ ಕಪ್ಪು ಕುಳಿ ಫೋಟೋ ಕ್ಲಿಕ್ ಮಾಡುವುದು ಸುಲಭವಲ್ಲ. ಕಪ್ಪು ಕುಳಿ ಅತ್ಯಂತ ಸಾಂದ್ರವಾದ ವಸ್ತು. ಎಷ್ಟು ಪ್ರಬಲ ಎಂದರೆ ಬೆಳಕು ಕೂಡ ಎಸ್ಕೇಪ್ ಆಗಲಾರದು. ಅದನ್ನು ಕಪ್ಪು ಕುಳಿಯೇ ನುಂಗಿಬಿಡುತ್ತದೆ ಹಾಗೂ ಪುನಃ ಕಾಣಿಸಿಕೊಳ್ಳುವುದೇ ಇಲ್ಲ. ಏಕೆಂದರೆ ಊಹಿಸಲೂ ಅಸಾಧ್ಯವಾದಷ್ಟು ಪ್ರಬಲ ಗುರುತ್ವ ಶಕ್ತಿಯನ್ನ ಕಪ್ಪು ಕುಳಿ ಹೊಂದಿರುತ್ತದೆ.

‘ಬ್ಲ್ಯಾಕ್ ಹೋಲ್’ ಮೂಲವೇ ನಿಗೂಢ
ಕಪ್ಪು ಕುಳಿ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಅದರ ಸುತ್ತ ವೃತ್ತಾಕಾರದ ಹೊರವಲಯ ಬಿಂಬವು ಪ್ರಖರವಾಗಿ ಪ್ರಜ್ವಲಿಸುತ್ತದೆ. ಪ್ರಖರ ಹಿನ್ನೆಲೆಗೆ ವಿರುದ್ಧವಾಗಿ ಬಿಂಬದಂತೆ ಕಪ್ಪು ಕುಳಿ ನೆರಳು ಚೆಲ್ಲುವಂತೆ ಗೋಚರಿಸುತ್ತದೆ. ಸಣ್ಣ ಪ್ರಮಾಣದ ಕಪ್ಪು ರಂಧ್ರಗಳಾದರೆ ಪತನವಾಗುವ ನಕ್ಷತ್ರದಿಂದ ಬರುತ್ತದೆ. ಆದರೆ ದೊಡ್ಡ ಪ್ರಮಾಣದ ಕಪ್ಪು ಕುಳಿಯ ಮೂಲ ನಿಗೂಢವಾಗಿದೆ. ಬೆಳಕು ಹೀರಿಕೊಳ್ಳುವ ಈ ದೈತ್ಯದ ಬಗ್ಗೆ ಶತಮಾನದ ಹಿಂದೆಯೇ ಐನ್‍ಸ್ಟೈನ್ ತಿಳಿಸಿದ್ದರು. ದಶಕಗಳ ಕಾಲ ಇದನ್ನು ಅಧ್ಯಯನ ನಡೆಸಿ ಖಾತರಿ ಪಡಿಸಲಾಗಿದೆ. ಈ ಕಪ್ಪು ಕುಳಿ ನೋಡಲು ಉರಿಯುವ ಕಿತ್ತಳೆ, ಹಳದಿ ಹಾಗೂ ಕಪ್ಪು ಉಂಗುರದಂತೆ ಕಂಡುಬರುತ್ತದೆ.

‘ನಾಸಾ’ ಕೂಡ ಕಷ್ಟಪಟ್ಟಿತ್ತು
ಬೆಳಕಿನ ವಿಭಿನ್ನ ತರಂಗಾಂತರ ಬಳಸಿ ಕಪ್ಪು ರಂಧ್ರವನ್ನು ಅಧ್ಯಯನ ಮಾಡಲು ನಾಸಾದ ಅನೇಕ ಬಾಹ್ಯಾಕಾಶ ನೌಕೆಗಳು ಶ್ರಮವಹಿಸಿವೆ. ಅಲ್ಲದೆ ಶತಮಾನ ಕಂಡ ಮಹಾನ್ ವಿಜ್ಞಾನಿ ಐನ್‍ಸ್ಟೈನ್ ಸಿದ್ಧಾಂತ ಬಳಸಿಕೊಂಡು ಅನೇಕ ಪ್ರಯತ್ನಗಳನ್ನು ನಡೆಸಿದೆ. ಆದರೆ ಇದರಲ್ಲಿ ನಾಸಾ ಯಶಸ್ಸಿಗಿಂತ ಸಾಕಷ್ಟು ಸೋಲುಗಳನ್ನೇ ಕಂಡಿದೆ. ಈಗಾಗಲೇ ಸೌರ ಮಂಡಲದ ಗೆರೆಯನ್ನೂ ದಾಟಿರುವ ನಾಸಾ ನೌಕೆಗಳಿಗೆ ಕಪ್ಪು ಕುಳಿ ಬಗೆಗಿನ ಅಧ್ಯಯನವು ದೊಡ್ಡ ಸವಾಲಾಗಿದೆ. ಇಂತಹ ಹೊತ್ತಲ್ಲೇ ಇಟಲಿ ವಿಜ್ಞಾನಿಗಳು ಮತ್ತೊಂದು ಹಿಂಟ್ ಕೊಟ್ಟಿದ್ದು, ಅಮೆರಿಕದ ನಾಸಾ ಸಂಸ್ಥೆ ಇದರ ಜಾಡು ಹಿಡಿದು ಹೊರಟರೂ ಹೊರಡಬಹುದು.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications