ಬಿಜೆಪಿ ಫೈರ್ ಬ್ರಾಂಡ್ ಅನಂತ್‌ಕುಮಾರ್ ಹೆಗಡೆ ಆಸ್ತಿ ಎಷ್ಟು?

ಕಾರವಾರ, ಏಪ್ರಿಲ್ 02: ಕೇಂದ್ರ ಬಿಜೆಪಿ ಸಚಿವ, ಬಿಜೆಪಿಯ ಹಿಂದುತ್ವದ ಫೈರ್ ಬ್ರಾಂಡ್ ಖ್ಯಾತಿಯ ಅನಂತ್‌ಕುಮಾರ್ ಹೆಗ್ಡೆ ಅವರು ಇಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ತಮ್ಮ ಬಿಡು-ಬೀಸು ಹೇಳಿಕೆಗಳಿಂದ ವಿವಾದದ ಕೇಂದ್ರವಾಗಿರುವ, ಹಾಗೂ ತಮ್ಮ ಅಂತಹುವೇ ಹೇಳಿಕೆಗಳಿಂದ ಬಿಜೆಪಿ ಕಾರ್ಯಕರ್ತರ ದೃಷ್ಟಿಯಲ್ಲಿ ಖ್ಯಾತರೂ ಆಗಿರುವ ಅನಂತ್ ಕುಮಾರ್ ಹೆಗಡೆ ಅವರು ಉತ್ತರ ಕನ್ನಡ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆ ಸ್ಪರ್ಧಿಸುತ್ತಿದ್ದಾರೆ. ಇದು ಅವರ ಏಳನೆ ಲೋಕಸಭೆ ಚುನಾವಣೆ.

ಅನಂತ್‌ಕುಮಾರ್ ಹೆಗಡೆ ಅವರು, ನಾಮಪತ್ರ ಜೊತೆಗೆ ಆಸ್ತಿ ವಿವರ ಸೇರಿದಂತೆ ಹಲವು ಮಾಹಿತಿಯನ್ನು ನಿಯಮಾನುಸಾರ ಚುನಾವಣಾ ಆಯೋಗಕ್ಕೆ ನೀಡಿದ್ದಾರೆ.

ಅನಂತ್‌ಕುಮಾರ್ ಅವರು ನೀಡಿರುವ ಮಾಹಿತಿಯನ್ನು ಅವರ ಮೇಲೆ ಮೂರು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಎರಡು ಕೋಮು ಸಂಘರ್ಷ ಉದ್ರೇಕಿಸುವಂತೆ ಮಾತನಾಡಿರುವುದು, ಒಂದು ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದದಿಂದ ನಿಂದಿಸಿದ್ದು.

ಅನಂತ್‌ಕುಮಾರ್ ಹೆಗಡೆ ಅವರು ದ್ವಿತೀಯ ಪಿಯುಸಿ ವರೆಗೆ ಮಾತ್ರ ಓದಿದ್ದಾರೆ. ಅವರಿಗೆ ಮತ್ತು ಅವರ ಪತ್ನಿಗೆ ಕೃಷಿ ಮತ್ತು ಬ್ಯುಸಿನೆಸ್‌ ನಿಂದ ಆದಾಯ ಬರುತ್ತಿದೆ ಎಂದು ಹೇಳಿದ್ದಾರೆ.

ಅನಂತ್‌ಕುಮಾರ್ ಅವರ ಈ ವರ್ಷದ ಆದಾಯ ಕೇವಲ 4.14 ಲಕ್ಷ ರೂಪಾಯಿ. ಅವರ ಪತ್ನಿ ಶ್ರೀರೂಪಾ ಹೆಗಡೆ ಅವರ ವಾರ್ಷಿಕ ಆದಾಯ 28.51 ಲಕ್ಷ. ಹೆಗಡೆ ಅವರ ಬಳಿ 35000 ನಗದು ಇದ್ದರೆ ಪತ್ನಿ ಬಳಿ 55,000 ನಗದು ಹಣವಿದೆ.

ಖಾತೆಗಳಲ್ಲಿ ಇಟ್ಟಿರುವ ಹಣವೆಷ್ಟು?

ಖಾತೆಗಳಲ್ಲಿ ಇಟ್ಟಿರುವ ಹಣವೆಷ್ಟು?

ಅನಂತ್‌ಕುಮಾರ್ ಅವರು ವಿವಿಧ ಬ್ಯಾಂಕ್ ಖಾತೆಗಳಲ್ಲಿ ಇಟ್ಟಿರುವ ಹಣ 1,81,142 ರೂಪಾಯಿ ಮಾತ್ರ. ಅವರು ಬಿಡಿಎಗೆ 12.85 ಲಕ್ಷ ಮುಂಗಡವನ್ನು ನೀಡಿದ್ದಾರೆ. ಒಟ್ಟು 14.66 ಲಕ್ಷ. ಪತ್ನಿ ಅವರ ಬ್ಯಾಂಕ್ ಖಾತೆಗಳಲ್ಲಿ 4.70 ಲಕ್ಷ ಹಣ ಇದೆ. ಅನಂತ್‌ಕುಮಾರ್ ಅವರು 5.90 ಲಕ್ಷ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. ಪತ್ನಿ ಅವರು 3.3 ಕೋಟಿ ಮೌಲ್ಯದ ಷೇರು ಹೊಂದಿದ್ದಾರೆ.

ಪತ್ನಿ ಬಳಿಯೇ ಸಾಲ ಪಡೆದಿರುವ ಅನಂತ್‌ಕುಮಾರ್‌

ಪತ್ನಿ ಬಳಿಯೇ ಸಾಲ ಪಡೆದಿರುವ ಅನಂತ್‌ಕುಮಾರ್‌

ಅನಂತ್‌ಕುಮಾರ್ ಹೆಗಡೆ ಅವರ ಹೆಸರಿನಲ್ಲಿ 1.75 ಲಕ್ಷ ಮೌಲ್ಯದ ವಿಮೆ ಇದೆ, ಪತ್ನಿ ಅವರ ಹೆಸರಿನಲ್ಲಿ 2.46 ಲಕ್ಷದ ವಿಮೆ ಇದೆ. ಮಕ್ಕಳಿಬ್ಬರ ಹೆಸರಿನಲ್ಲಿ 1.15 ಲಕ್ಷದ ವಿಮೆ ಇದೆ. ಅನಂತ್‌ಕುಮಾರ್ ಹೆಗಡೆ ಅವರು ಯಾವುದೇ ಕೈಸಾಲ ನೀಡಿಲ್ಲ, ಬದಲಾಗಿ ತಮ್ಮ ಹೆಂಡತಿಯಿಂದಲೇ 16.70 ಲಕ್ಷ ಸಾಲ ಪಡೆದಿದ್ದಾರೆ. ಜೊತೆಗೆ ಪತ್ನಿ ಶ್ರೀರೂಪಾ ಅವರು ಕದಂಬ ಚಾರಿಟೇಬಲ್ ಫೌಂಡೇಶನ್‌ಗೆ 28 ಲಕ್ಷ ನೀಡಿದ್ದಾರೆ.

ಅನಂತ್‌ಕುಮಾರ್ ಬಳಿ ಇರುವ ಕಾರೆಷ್ಟು?

ಅನಂತ್‌ಕುಮಾರ್ ಬಳಿ ಇರುವ ಕಾರೆಷ್ಟು?

ಅನಂತ್‌ಕುಮಾರ್ ಹೆಗಡೆ ಅವರ ಬಳಿ 9.61 ಲಕ್ಷ ಮೌಲ್ಯದ ಕಾರೊಂದಿದೆ, ಪತ್ನಿ ಹೆಸರಲ್ಲಿ 5.50 ಲಕ್ಷ ಮೌಲ್ಯದ ಒಂದು ಕಾರಿದೆ. ಅನಂತ್‌ಕುಮಾರ್ ಬಳಿ 1.50 ಲಕ್ಷ ಮೌಲ್ಯದ ಚಿನ್ನಾಭರಣ ಇದೆ, ಪತ್ನಿ ಬಳಿ 8.50 ಲಕ್ಷ ಮೌಲ್ಯದ ಚಿನ್ನಾಭರಣ ಇದೆ. ಪೀಠೋಪಕರಣ ಇತರೆ ವಸ್ತುಗಳ ಮೇಲೆ ಅನಂತ್‌ಕುಮಾರ್ 1.50 ಲಕ್ಷ ಖರ್ಚು ಮಾಡಿದ್ದಾರೆ, ಪತ್ನಿ ಶ್ರೀರೂಪಾ 75,000 ಖರ್ಚು ಮಾಡಿದ್ದಾರೆ.

ಅನಂತ್‌ಕುಮಾರ್ ಅವರ ಬಳಿ ಜಮೀನೆಷ್ಟಿದೆ?

ಅನಂತ್‌ಕುಮಾರ್ ಅವರ ಬಳಿ ಜಮೀನೆಷ್ಟಿದೆ?

ಅನಂತ್‌ಕುಮಾರ್ ಅವರ ಬಳಿ ಒಂದು ಎಕರೆ 39 ಗುಂಟೆ ಕೃಷಿ ಜಮೀನಿಗೆ ಇದರ ಮಾರುಕಟ್ಟೆ ಮೌಲ್ಯ 3.60 ಲಕ್ಷ. ಪತ್ನಿ ಹೆಸರಲ್ಲಿ 13.29 ಎಕರೆ ಕೃಷಿ ಜಮೀನಿದೆ, ಇದರ ಮಾರುಕಟ್ಟೆ ಮೌಲ್ಯ 75 ಲಕ್ಷ ರೂಪಾಯಿ. 7 ಲಕ್ಷ ಮೌಲ್ಯದ ಕೃಷಿಯೇತರ ಜಮೀನು ಅನಂತ್‌ಕುಮಾರ್ ಅವರ ಬಳಿ ಇದೆ. ಪತ್ನಿ ಹೆಸರಲ್ಲಿ 45 ಲಕ್ಷ ಮೌಲ್ಯದ ಕೃಷಿಯೇತರ ಜಮೀನು ಇದೆ.

ಅನಂತ್‌ಕುಮಾರ್ ಅವರ ನಿವಾಸದ ಮೌಲ್ಯ

ಅನಂತ್‌ಕುಮಾರ್ ಅವರ ನಿವಾಸದ ಮೌಲ್ಯ

ದಂಪತಿಗಳಿಬ್ಬರ ಬಳಿಯೂ ಯಾವುದೇ ವಾಣಿಜ್ಯ ಕಟ್ಟಡಗಳು ಇಲ್ಲ. ಅನಂತ್‌ಕುಮಾರ್ ಅವರ ಹೆಸರಿನಲ್ಲಿ 2.36 ಕೋಟಿ ಮೌಲ್ಯದ ವಸತಿ ಕಟ್ಟಡ ಇದೆ. ಪತ್ನಿ ಅವರ ಬಳಿ 26.50 ಲಕ್ಷ ಮೌಲ್ಯದ ಫಾರ್ಮ್‌ ಹೌಸ್ ಇದೆ. ಅನಂತ್‌ಕುಮಾರ್ ಹೆಗಡೆ ಅವರ ಮೇಲೆ 1.27 ಕೋಟಿ ಸಾಲ ಇದೆ. ಇದರಲ್ಲಿ ಪತ್ನಿಯಿಂದ ಪಡೆದಿರುವ 16.70 ಲಕ್ಷವೂ ಸೇರಿದೆ. ಪತ್ನಿ ಶ್ರೀರೂಪಾ ಅವರಿಗೆ 2.82 ಕೋಟಿ ಸಾಲವಿದೆ.

ಅನಂತ್‌ಕುಮಾರ್ ಅವರ ಒಟ್ಟು ಆಸ್ತಿ

ಅನಂತ್‌ಕುಮಾರ್ ಅವರ ಒಟ್ಟು ಆಸ್ತಿ

ಅನಂತ್‌ಕುಮಾರ್ ಹೆಗಡೆ ಅವರ ಚರಾಸ್ಥಿ 35.36 ಲಕ್ಷ. ಪತ್ನಿ ಶ್ರೀರೂಪಾ ಅವರ ಚರಾಸ್ತಿ ಮೌಲ್ಯ 3.81 ಕೋಟಿ. ಅನಂತ್‌ಕುಮಾರ್ ಹೆಗಡೆ ಅವರ ಸ್ಥಿರಾಸ್ತಿ ಮೌಲ್ಯ 2.47 ಕೋಟಿ, ಪತ್ನಿ ಅವರ ಸ್ಥಿರಾಸ್ತಿ ಮೌಲ್ಯ 1.81 ಕೋಟಿ. ಅನಂತ್‌ಕುಮಾರ್ ಅವರ ಒಟ್ಟು ಆಸ್ತಿ 2.83 ಕೋಟಿ ಇದೆ. ಪತ್ನಿ ಅವರದ್ದು 5.62 ಕೋಟಿ ಆಸ್ತಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+