ಇಂಡಿಯಾ ಟುಡೇ ಮತಗಳಿಕೆ: ತೇಜಸ್ವಿ ಬಣ 44%, ನಿತೀಶ್ ಬಣ 39%

ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಗಿದ್ದು, ನವೆಂಬರ್10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ. ಚುನಾವಣೋತ್ತರ ಸಮೀಕ್ಷೆಗಳು ಬರಲಾರಂಭಿಸಿವೆ ಇಂಡಿಯಾ ಟುಡೇ ಹಾಗೂ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ವರದಿ ಇಲ್ಲಿದೆ...

Recommended Video

      Bihar Election 2020 : ಚುನಾವಣೋತ್ತರ ಸಮೀಕ್ಷೆ ಏನು ಹೇಳುತ್ತಿದೆ | Oneindia kannada

      ಇಂಡಿಯಾ ಟುಡೇ ಹಾಗೂ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ ಯುವ ಜನತೆ ಮಹಾಘಟಬಂಧನ್(ಎಂಜಿಬಿ) ಸಿಎಂ ಅಭ್ಯರ್ಥಿ ಪರ ಮತ ಹಾಕಿದ್ದರೆ, ಹಿರಿಯನಾಗರಿಕರು ಹಾಲಿ ಸಿಎಂ ಎನ್ಡಿಎ ಅಭ್ಯರ್ಥಿ ನಿತೀಶ್ ಕುಮಾರ್ ಪರ ನಿಂತಿದ್ದಾರೆ. ಹೀಗಾಗಿ ಹೆಚ್ಚು ಯುವ ಮತದಾರರನ್ನು ಹೊಂದಿರುವ ಬಿಹಾರದಲ್ಲಿ ಮಹಾಘಟಬಂಧನ್ ಶೇಕಡಾವಾರು ಮತ ಗಳಿಕೆಯಲ್ಲಿ ಎನ್ಡಿಎ ಹಿಂದಿಕ್ಕಿದೆ.

      ಸಮೀಕ್ಷೆಯಲ್ಲಿ ಮಹಾಘಟಬಂಧನ್ ಸಿಎಂ ಅಭ್ಯರ್ಥಿ ತೇಜಸ್ವಿಯಾದವ್ ಪರ ಜನಾಭಿಪ್ರಾಯ ಸಿಕ್ಕಿದೆ. ಎನ್ಡಿಎ ಅಭ್ಯರ್ಥಿ ಹಾಲಿ ಸಿಎಂ ನಿತೀಶ್ ಕುಮಾರ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

      ಸ್ಥಾನ 234: ಮ್ಯಾಜಿಕ್ ನಂಬರ್ : 122

      ಸ್ಥಾನ 234: ಮ್ಯಾಜಿಕ್ ನಂಬರ್ : 122

      ಸೀಟು ಗಳಿಕೆ
      ಮಹಾಘಟಬಂಧನ್: 139 ರಿಂದ 161,
      ಎನ್ಡಿಎ: 69 ರಿಂದ 61, 39%
      ಎಲ್ ಜೆಪಿ: 3 ರಿಂದ 5, 7%
      ಜಿಡಿಎಸ್ ಎಫ್: 3 ರಿಂದ 5, 4%
      ಇತರೆ: 6%

      ಶೇಕಡಾವಾರು ಮತಗಳಿಕೆ

      ಶೇಕಡಾವಾರು ಮತಗಳಿಕೆ

      ಮಹಾಘಟಬಂಧನ್: 44%
      ಎನ್ಡಿಎ: 39%
      ಎಲ್ ಜೆಪಿ: 7%
      ಜಿಡಿಎಸ್ ಎಫ್: 4%
      ಇತರೆ: 6%

      +++
      ಪುರುಷ ಹಾಗೂ ಮಹಿಳಾ ಮತದಾರರು
      ಮಹಾಘಟಬಂಧನ್: 44% ಹಾಗೂ 43%
      ಎನ್ಡಿಎ: 37% ಹಾಗೂ 42%
      ಎಲ್ ಜೆಪಿ: 7% ಹಾಗೂ 7%
      ಜಿಡಿಎಸ್ ಎಫ್: 5% ಹಾಗೂ 3%
      ಇತರೆ: 7% ಹಾಗೂ 5%

      ಸೀಟು ಗಳಿಕೆಯಲ್ಲಿ ವ್ಯತ್ಯಾಸ

      ಸೀಟು ಗಳಿಕೆಯಲ್ಲಿ ವ್ಯತ್ಯಾಸ

      ತೇಜಸ್ವಿ ಯಾದವ್ ಅವರ ಮಹಾಘಟಬಂಧನ್ 2015ಕ್ಕೆ ಹೋಲಿಸಿದರೆ ಹೆಚ್ಚುವರಿಯಾಗಿ 40 ಸ್ಥಾನಗಳನ್ನು ಅಧಿಕವಾಗಿ ಗಳಿಸಿದೆ. ಇದೇ ವೇಳೆ ಎನ್ಡಿಎ ಸುಮಾರು 45 ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ. ಸಮೀಕ್ಷೆಗಳ ಸಮೀಕ್ಷೆಯಲ್ಲೂ ಕಾಂಗ್ರೆಸ್- ಆರ್ ಜೆಡಿ 133, ಬಿಜೆಪಿ-ಜೆಡಿಯು 100, ಇತರೆ 11 ಸ್ಥಾನ ಗಳಿಸಲಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

      2015ರಲ್ಲಿ ಬಂದಿದ್ದ ಫಲಿತಾಂಶ

      2015ರಲ್ಲಿ ಬಂದಿದ್ದ ಫಲಿತಾಂಶ

      2015ರಲ್ಲಿ ರಾಷ್ಟ್ರೀಯ ಜನತಾ ದಳ 80 ಸ್ಥಾನ, ಜನತಾ ದಳ ಯುನೈಟೆಡ್ 71, ಕಾಂಗ್ರೆಸ್ 27 ಗಳಿಸಿದ್ದವು. ಬಿಜೆಪಿ 53 ಸ್ಥಾನ, ಎಲ್ ಜೆಪಿ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 1, ಇತರೆ 10 ಸ್ಥಾನ ಗಳಿಸಿದ್ದವು. ಬಿಜೆಪಿ ಶೇ 24ರಷ್ಟು ಮತಗಳಿಕೆ, ಅರ್ ಜೆ ಡಿ ಶೇ 18 ಹಾಗೂ ಜೆಡಿಯು ಶೇ 17ರಷ್ಟು, ಕಾಂಗ್ರೆಸ್ ಶೇ 7, ಎಲ್ ಜೆಪಿ ಶೇ 4.8ರಷ್ಟು ಮತ ಗಳಿಸಿದ್ದವು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+