ಬಿಹಾರ ವಿಧಾನಸಭೆ ಚುನಾವಣೆ: ಇಂಡಿಯಾ ಟುಡೇ EXIT poll ಅಪ್ಡೇಟ್ಸ್
ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಗಿದ್ದು, ನವೆಂಬರ್ 7 ರಂದು ಮೂರನೇ ಹಾಗೂ ಅಂತಿಮ ಹಂತದ ಮತದಾನ ಮುಕ್ತಾಯವಾಗಿದೆ. ಚುನಾವಣಾ ಆಯೋಗದ ನಿಯಮದಂತೆ ಸಂಜೆ 6 ಗಂಟೆ ನಂತರ ಚುನಾವಣೋತ್ತರ ಸಮೀಕ್ಷೆಗಳು ಬರಲಾರಂಭಿಸಿವೆ ಇಂಡಿಯಾ ಟುಡೇ ಹಾಗೂ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ವರದಿ ಇಲ್ಲಿದೆ...
Recommended Video
ಅಕ್ಟೋಬರ್ 28 ರ ಬುಧವಾರ ಸಂಜೆ 6.30 ರಿಂದ ನವೆಂಬರ್ 7ರ ತನಕ ಬಿಹಾರದ ವಿಧಾನಸಭೆ ಚುನಾವಣೆ, ಲೋಕಸಭೆ ಉಪ ಚುನಾವಣೆಗೆ ಸಂಬಂಧಿಸಿದಂತೆ ವೆಬ್ ತಾಣ, ಎಲೆಕ್ಟ್ರಾನಿಕ್ ಮಾಧ್ಯಮಗಳು ಎಕ್ಸಿಟ್ ಪೋಲ್ ಪ್ರಸಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ಇಂಡಿಯಾ ಟುಡೇ ಹಾಗೂ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ವರದಿಯಂತೆ ಮಹಾಘಟಬಂಧನ್ ಸಿಎಂ ಅಭ್ಯರ್ಥಿ ತೇಜಸ್ವಿಯಾದವ್ ಪರ ಜನಾಭಿಪ್ರಾಯ ಸಿಕ್ಕಿದೆ. ಎನ್ಡಿಎ ಅಭ್ಯರ್ಥಿ ಹಾಲಿ ಸಿಎಂ ನಿತೀಶ್ ಕುಮಾರ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಚುನಾವಣೆಯಲ್ಲಿ ಮುಖ್ಯ ವಿಷಯದ ಬಗ್ಗೆ ವರದಿ ಮುಂದಿದೆ..

2015ರಲ್ಲಿ ಬಂದಿದ್ದ ಫಲಿತಾಂಶ
2015ರಲ್ಲಿ ರಾಷ್ಟ್ರೀಯ ಜನತಾ ದಳ 80 ಸ್ಥಾನ, ಜನತಾ ದಳ ಯುನೈಟೆಡ್ 71, ಕಾಂಗ್ರೆಸ್ 27 ಗಳಿಸಿದ್ದವು. ಬಿಜೆಪಿ 53 ಸ್ಥಾನ, ಎಲ್ ಜೆಪಿ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 1, ಇತರೆ 10 ಸ್ಥಾನ ಗಳಿಸಿದ್ದವು. ಬಿಜೆಪಿ ಶೇ 24ರಷ್ಟು ಮತಗಳಿಕೆ, ಅರ್ ಜೆ ಡಿ ಶೇ 18 ಹಾಗೂ ಜೆಡಿಯು ಶೇ 17ರಷ್ಟು, ಕಾಂಗ್ರೆಸ್ ಶೇ 7, ಎಲ್ ಜೆಪಿ ಶೇ 4.8ರಷ್ಟು ಮತ ಗಳಿಸಿದ್ದವು.

ಚುನಾವಣೆ ಸಂದರ್ಭದಲ್ಲಿ ಯಾವ ವಿಷ್ಯ
ಇಂಡಿಯಾ ಟುಡೇ ಹಾಗೂ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ವರದಿ ಪ್ರಕಾರ ಚುನಾವಣೆ ಸಂದರ್ಭದಲ್ಲಿ ಯಾವ ವಿಷ್ಯ ಮುಖ್ಯವಾಗಿತ್ತು ಎಂಬುದರ ಬಗ್ಗೆ ಅಭಿಪ್ರಾಯ ಇಲ್ಲಿದೆ;
ಬಿಹಾರ ಅಭಿವೃದ್ಧಿ: 42%
ನಿರುದ್ಯೋಗ: 30%
ಹಣ ದುಬ್ಬರ: 11%
ಮೋದಿ, ಪಕ್ಷ ಯಾವುದು: 3%
ಲಡಾಕ್ ಸಂಘರ್ಷ, ಜಾತಿ: 1%

ಇಂಡಿಯಾ ಟುಡೇ- ಆಜ್ ತಕ್ ಮತದಾನ ಪೂರ್ವ ಸಮೀಕ್ಷೆ
ಇಂಡಿಯಾ ಟುಡೇ- ಆಜ್ ತಕ್ ಸಂಸ್ಥೆ ಜೊತೆಗೆ ಲೋಕನೀತಿ-ಸಿಎಸ್ ಡಿಎಸ್ ಸಂಸ್ಥೆ ಅಭಿಮತದಂತೆ ಸಮೀಕ್ಷೆಯಲ್ಲಿ ನಿತೀಶ್ ಪರ ಮತ 32% ಹಾಕಿದ್ದಾರೆ. ಆರ್ ಜೆಡಿಯ ತೇಜಸ್ವಿ ಯಾದವ್ ಶೇ 27ರಷ್ಟು ಮತ ಗಳಿಸಿ ಉತ್ತಮ ಸ್ಪರ್ಧೆ ನೀಡಿದ್ದಾರೆ. ಎಲ್ ಜೆಪಿಯ ಚಿರಾಗ್ ಪಾಸ್ವಾನ್ ಅವರು ಕೇವಲ ಶೇ 5 ಮತ ಪಡೆದಿದ್ದರೆ, ಬಿಜೆಪಿ ಮುಖಂಡ ಸುಶೀಲ್ ಮೋದಿ ಶೇ 4ರಷ್ಟು ಮತ ಗಳಿಸಿದ್ದಾರೆ.
ಎನ್ಡಿಎ: 133 ರಿಂದ 143 ಮಹಾಘಟಬಂಧನ್: 88 ರಿಂದ 98 ಎಲ್ ಜೆಪಿ: 2 ರಿಂದ 6 ಇತರೆ: 6 ರಿಂದ 10
ಶೇಕಡಾವಾರು ಫಲಿತಾಂಶ ಎನ್ಡಿಎ: 38% ಮಹಾಘಟಬಂಧನ್: 32% ಜಿಡಿಎಸ್ ಎಫ್: 7% ಎಲ್ ಜೆಪಿ: 6% ಇತರೆ: 17%

ಬಿಹಾರದ ಸಿಎಂ ಯಾರಾಗಬೇಕು?:
ಇಂಡಿಯಾ ಟುಡೇ ಹಾಗೂ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ವರದಿ
ಬಿಹಾರದ ಸಿಎಂ ಯಾರಾಗಬೇಕು?:
ತೇಜಸ್ವಿ ಯಾದವ್: 44%
ನಿತೀಶ್ ಕುಮಾರ್: 35%
ಚಿರಾಗ್ ಪಾಸ್ವಾನ್: 7%
ಉಪೇಂದ್ರ ಕುಶ್ವಾಹ: 4%











Click it and Unblock the Notifications