ಬಿಹಾರ ವಿಧಾನಸಭೆ ಚುನಾವಣೆ EXIT poll: ಇಂಡಿಯಾ ಟಿವಿ ಸಿವೋಟರ್ ಅಪ್ಡೇಟ್ಸ್

ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಗಿದ್ದು, ನವೆಂಬರ್ 7 ರಂದು ಮೂರನೇ ಹಾಗೂ ಅಂತಿಮ ಹಂತದ ಮತದಾನ ಮುಕ್ತಾಯವಾಗಿದೆ. ಚುನಾವಣಾ ಆಯೋಗದ ನಿಯಮದಂತೆ ಸಂಜೆ 6 ಗಂಟೆ ನಂತರ ಚುನಾವಣೋತ್ತರ ಸಮೀಕ್ಷೆಗಳು ಬರಲಾರಂಭಿಸಿವೆ ಇಂಡಿಯಾ ಟಿವಿ- ಸಿ ವೋಟರ್ ವರದಿ ಇಲ್ಲಿದೆ...

ಅಕ್ಟೋಬರ್ 28 ರ ಬುಧವಾರ ಸಂಜೆ 6.30 ರಿಂದ ನವೆಂಬರ್ 7ರ ತನಕ ಬಿಹಾರದ ವಿಧಾನಸಭೆ ಚುನಾವಣೆ, ಲೋಕಸಭೆ ಉಪ ಚುನಾವಣೆಗೆ ಸಂಬಂಧಿಸಿದಂತೆ ವೆಬ್ ತಾಣ, ಎಲೆಕ್ಟ್ರಾನಿಕ್ ಮಾಧ್ಯಮಗಳು ಎಕ್ಸಿಟ್ ಪೋಲ್ ಪ್ರಸಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ಇಂಡಿಯಾ ಟಿವಿ-ಸಿ ವೋಟರ್ ಆರಂಭದ ಎಕ್ಸಿಟ್ ಪೋಲ್ ವರದಿಯಂತೆ
ಜೆಡಿಯು-ಬಿಜೆಪಿ ಮೈತ್ರಿಕೂಟ: 116
ಮಹಾಘಟಬಂಧನ್: 120
ಎಲ್ ಜೆಪಿ:1
ಇತರೆ: 6

Bihar Exit Poll Results 2020: India TV C-voter

243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ. ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಯಿತು. ಅಕ್ಟೋಬರ್ 28ರಂದು 16 ಜಿಲ್ಲೆಗಳ 71 ಕ್ಷೇತ್ರಗಳಿಗೆ 31,000 ಮತಗಟ್ಟೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ, ನವೆಂಬರ್ 03ರಂದು ಎರಡನೆಯ ಹಂತದಲ್ಲಿ 17 ಜಿಲ್ಲೆಗಳಲ್ಲಿ 94 ಕ್ಷೇತ್ರಗಳಿಗೆ 42,000 ಮತಗಟ್ಟೆಗಳಲ್ಲಿ ಚುನಾವಣೆ, ನವೆಂಬರ್ 07ರಂದು ಮೂರನೇ ಹಂತದಲ್ಲಿ 78 ಕ್ಷೇತ್ರಗಳಿಗೆ 1 ಜಿಲ್ಲೆಗಳಲ್ಲಿ ಅಂದಾಜು 33,500 ಮತಗಟ್ಟೆಗಳಲ್ಲಿ ಚುನಾವಣೆ ನಡೆಸಲಾಯಿತು. ಅಂತಿಮವಾಗಿ ನವೆಂಬರ್10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ.

ಬಿಹಾರ ಚುನಾವಣೆ: ಇಂಡಿಯಾ ಟಿವಿ -ಸಿ ವೋಟರ್ EXIT poll ಅಪ್ಡೇಟ್ಸ್
2015ರಲ್ಲಿ ಬಂದಿದ್ದ ಫಲಿತಾಂಶ
2015ರಲ್ಲಿ ರಾಷ್ಟ್ರೀಯ ಜನತಾ ದಳ 80 ಸ್ಥಾನ, ಜನತಾ ದಳ ಯುನೈಟೆಡ್ 71, ಕಾಂಗ್ರೆಸ್ 27 ಗಳಿಸಿದ್ದವು. ಬಿಜೆಪಿ 53 ಸ್ಥಾನ, ಎಲ್ ಜೆಪಿ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 1, ಇತರೆ 10 ಸ್ಥಾನ ಗಳಿಸಿದ್ದವು. ಬಿಜೆಪಿ ಶೇ 24ರಷ್ಟು ಮತಗಳಿಕೆ, ಅರ್ ಜೆ ಡಿ ಶೇ 18 ಹಾಗೂ ಜೆಡಿಯು ಶೇ 17ರಷ್ಟು, ಕಾಂಗ್ರೆಸ್ ಶೇ 7, ಎಲ್ ಜೆಪಿ ಶೇ 4.8ರಷ್ಟು ಮತ ಗಳಿಸಿದ್ದವು.
****
ಬಿಹಾರ ಚುನಾವಣೆ: ಇಂಡಿಯಾ ಟಿವಿ-ಸಿ ವೋಟರ್ EXIT poll ಅಪ್ಡೇಟ್ಸ್
ಇಂಡಿಯಾ ಟುಡೇ- ಆಜ್ ತಕ್ ಮತದಾನ ಪೂರ್ವ ಸಮೀಕ್ಷೆ
ಇಂಡಿಯಾ ಟುಡೇ- ಆಜ್ ತಕ್ ಸಂಸ್ಥೆ ಜೊತೆಗೆ ಲೋಕನೀತಿ-ಸಿಎಸ್ ಡಿಎಸ್ ಸಂಸ್ಥೆ ಅಭಿಮತದಂತೆ ಸಮೀಕ್ಷೆಯಲ್ಲಿ ನಿತೀಶ್ ಪರ ಮತ 32% ಹಾಕಿದ್ದಾರೆ. ಆರ್ ಜೆಡಿಯ ತೇಜಸ್ವಿ ಯಾದವ್ ಶೇ 27ರಷ್ಟು ಮತ ಗಳಿಸಿ ಉತ್ತಮ ಸ್ಪರ್ಧೆ ನೀಡಿದ್ದಾರೆ. ಎಲ್ ಜೆಪಿಯ ಚಿರಾಗ್ ಪಾಸ್ವಾನ್ ಅವರು ಕೇವಲ ಶೇ 5 ಮತ ಪಡೆದಿದ್ದರೆ, ಬಿಜೆಪಿ ಮುಖಂಡ ಸುಶೀಲ್ ಮೋದಿ ಶೇ 4ರಷ್ಟು ಮತ ಗಳಿಸಿದ್ದಾರೆ.

ಎನ್ಡಿಎ: 133 ರಿಂದ 143 ಮಹಾಘಟಬಂಧನ್: 88 ರಿಂದ 98 ಎಲ್ ಜೆಪಿ: 2 ರಿಂದ 6 ಇತರೆ: 6 ರಿಂದ 10
ಶೇಕಡಾವಾರು ಫಲಿತಾಂಶ ಎನ್ಡಿಎ: 38% ಮಹಾಘಟಬಂಧನ್: 32% ಜಿಡಿಎಸ್ ಎಫ್: 7% ಎಲ್ ಜೆಪಿ: 6% ಇತರೆ: 17%

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+