ಬಿಹಾರ ವಿಧಾನಸಭೆ ಚುನಾವಣೆ: ಎಬಿಪಿ ನ್ಯೂಸ್-ಸಿ ವೋಟರ್ ಅಪ್ಡೇಟ್ಸ್
ಪಾಟ್ನಾ, ನವೆಂಬರ್ 7: ಬಿಹಾರ ವಿಧಾನಸಭೆ ಚುನಾವಣೋತ್ತರ ಸಮೀಕ್ಷೆಯಲ್ಲಿ ಅತಂತ್ರ ವಿಧಾನಸಭೆ ಸೃಷ್ಠಿಯಾಗಲಿದೆ ಎಂದು ಎಬಿಪಿ ನ್ಯೂಸ್-ಸಿ ವೋಟರ್ ಸಮೀಕ್ಷೆ ತಿಳಿಸಿದೆ.
ಬಿಹಾರ ನಿರ್ಗಮನ ಸಮೀಕ್ಷೆ 2020ರ ಚುನಾವಣೋತ್ತರ ಸಮೀಕ್ಷೆ ಪ್ರಕಾರ 243 ಸದಸ್ಯರ ವಿಧಾನಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟವು 104 ರಿಂದ 128 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
ಆರ್‌ಜೆಡಿ ಹಾಗೂ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ 108 ರಿಂದ 131 ಸ್ಥಾನಗಳನ್ನು ಗೆಲ್ಲಲಿದೆ ಎಂದು ಎಬಿಪಿ ನ್ಯೂಸ್-ಸಿ ವೋಟರ್ ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ.

ಆರ್‌ಜೆಡಿ ಪಕ್ಷವು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ನಿರೀಕ್ಷೆಯಿದ್ದು, ಚಿರಾಗ್ ಪಾಸ್ವಾನ್ ನೇತೃತ್ವದ ಎಲ್.ಜೆ.ಪಿ ಮತ್ತು ಇತರ ಪಕ್ಷಗಳು ಫಲಿತಾಂಶದ ಬಗ್ಗೆ ಸಿಂಗಲ್ ಡಿಜಿಟ್ ನಂಬರಿಗೆ ನಿಲ್ಲಲಿದೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ.
ಆರ್‌ಜೆಡಿ ಪಕ್ಷವು 81 ರಿಂದ 89 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷವು 21 ರಿಂದ 29 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಉಳಿದ ಪಕ್ಷಗಳು ಸುಮಾರು 4 ರಿಂದ 13 ಸ್ಥಾನಗಳನ್ನು ಪಡೆಯುತ್ತವೆ.












Click it and Unblock the Notifications