ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಐ ಚಾಲಿತ ಚಾಟ್‍ಬಾಟ್ 'ಉರ್ಜಾ'ಗೆ ಚಾಲನೆ ಕೊಟ್ಟ ಬಿಪಿಸಿಎಲ್‍

|
Google Oneindia Kannada News

ಮುಂಬೈ, ಸೆಪ್ಟೆಂಬರ್ 01, 2021: 'ಮಹಾರತ್ನ' ಮತ್ತು ಫಾರ್ಚೂನ್ ಗ್ಲೋಬಲ್ 500 ಕಂಪನಿಯಾಗಿರುವ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಎಐ/ಎನ್‍ಎಲ್‍ಪಿ (ಸಹಜ ಭಾಷಾ ಸಂಸ್ಕರಣೆ) ಸಾಮರ್ಥ್ಯವನ್ನು ಒಳಗೊಂಡ ಮತ್ತು 600ಕ್ಕೂ ಹೆಚ್ಚು ಬಳಕೆ ಪ್ರಕರಣಗಳಲ್ಲಿ ತರಬೇತಿ ಹೊಂದಿದ ಇಂಟೆಲಿಜೆಂಟ್ ವರ್ಚುವಲ್ ಅಸಿಸ್ಟೆಂಟ್ 'ಉರ್ಜಾ'ಗೆ ಚಾಲನೆ ನೀಡಿದೆ.

ಬಿಪಿಸಿಎಲ್‍ನ ಗ್ರಾಹಕ ಇಂಟರ್‌ಫೇಸ್ ಅನ್ನು ಹೆಚ್ಚು ಸಮಗ್ರ ಮತ್ತು ಡಿಜಿಟಲ್ ಸಮನ್ವಯಗೊಳಿಸುವ ಉದ್ದೇಶದೊಂದಿಗೆ, ಉರ್ಜಾ ಚಾಟ್‍ಬಾಟ್ ಇದೀಗ ಕಂಪನಿಯ ವೆಬ್ಸೈಟ್‍ನಲ್ಲಿ ಬಿ2ಬಿ ಮತ್ತು ಬಿ2ಸಿ ಸೇರಿದಂತೆ ಯಾವುದೇ ಬಗೆಯ ವಿಚಾರಣೆಗಳಿಗೆ ಲಭ್ಯವಿರುತ್ತದೆ. ವರ್ಚುವಲ್ ಅಸಿಸ್ಟೆಂಟ್ ಸೇವೆಯನ್ನು ತಡೆರಹಿತ ಸ್ವಯಂ ಸೇವಾ ಅನುಭವವನ್ನು ನೀಡಲು ಅನುಕೂಲವಾಗುವಂತೆ ಮತ್ತು ಗ್ರಾಹಕರ ಪ್ರಶ್ನೆಗಳು/ ಸಮಸ್ಯೆಗಳಿಗೆ ತ್ವರಿತ ಪರಿಹಾರವನ್ನು ಸಕ್ರಿಯಗೊಳಿಸುವಂತೆ ವಿನ್ಯಾಸಗೊಳಿಸಲಾಗಿದೆ.

BPCL ಮಾರಾಟಕ್ಕೆ ಮುಂದಾದ ಸರ್ಕಾರ, ಮೋದಿ ಅಧಿಕಾರದಲ್ಲಿರುವುದು ದುರಂತBPCL ಮಾರಾಟಕ್ಕೆ ಮುಂದಾದ ಸರ್ಕಾರ, ಮೋದಿ ಅಧಿಕಾರದಲ್ಲಿರುವುದು ದುರಂತ

ಬಿಪಿಸಿಎಲ್ ತನ್ನ ವ್ಯಾಪಕ ಚಿಲ್ಲರೆ ವ್ಯಾಪಾರ (ಬಿ2ಸಿ) ಮತ್ತು ವಾಣಿಜ್ಯ (ಬಿ2ಬಿ) ಗ್ರಾಹಕರ ನೆಲೆಯನ್ನು ತಲುಪುವ ಸಲುವಾಗಿ ಅನೇಕ ಟಚ್ ಪಾಯಿಂಟ್‍ಗಳಲ್ಲಿ ಸ್ಥಿರವಾದ ಉನ್ನತ ಮತ್ತು ಏಕೀಕೃತ ಅನುಭವವನ್ನು ತಲುಪಿಸುವ ಉದ್ದೇಶದಿಂದ "ಪ್ರಾಜೆಕ್ಟ್ ಅನುಭವ" ಎಂಬ ವಿಶಿಷ್ಟ ಉಪಕ್ರಮಕ್ಕೆ ಚಾಲನೆ ನೀಡಿತ್ತು. ಯೋಜನೆಯ ಅನುಭವದ ಅಡಿಯಲ್ಲಿ, ಊರ್ಜಾ ಒಂದು ಸಮಗ್ರ ಸಂವಹನ ವೇದಿಕೆಯನ್ನು ಪ್ರತಿನಿಧಿಸುತ್ತದೆ, ಅದು ಎಲ್ಲ ಬಿಪಿಸಿಎಲ್ ಸಂವಹನವನ್ನು ಯಾವುದೇ ಚಾನಲ್‍ಗೆ ಸಂಪರ್ಕಿಸುತ್ತದೆ, ಎಲ್ಲ ಗ್ರಾಹಕರ ಟಚ್ ಪಾಯಿಂಟ್‍ಗಳನ್ನು ಏಕೈಕ ಮತ್ತು ಕ್ರೋಢೀಕೃತ ಧ್ವನಿಯಿಂದ ಒಂದುಗೂಡಿಸುತ್ತದೆ.

ವಾಟ್ಸಪ್‍ನಲ್ಲಿ ಎಲ್‍ಪಿಜಿ ಬುಕ್ಕಿಂಗ್ ಪ್ರಯೋಗ

ವಾಟ್ಸಪ್‍ನಲ್ಲಿ ಎಲ್‍ಪಿಜಿ ಬುಕ್ಕಿಂಗ್ ಪ್ರಯೋಗ

ಆರು ತಿಂಗಳ ಕಾಲ ವಾಟ್ಸಪ್‍ನಲ್ಲಿ ಎಲ್‍ಪಿಜಿ ಬುಕ್ಕಿಂಗ್ ಮಾಡಲು ಅನುವು ಮಾಡಿಕೊಟ್ಟ ಯಶಸ್ವಿ ಪ್ರಯೋಗದ ಬಳಿಕ, ಊರ್ಜಾ ಇಂದು 13 13 ಭಾಷೆಗಳಲ್ಲಿ ಮಾತನಾಡಬಲ್ಲದು (ಇಂಗ್ಲಿಷ್, ಹಿಂದಿ, ತಮಿಳು, ಕನ್ನಡ, ಮಲಯಾಳಂ, ತೆಲುಗು, ಮರಾಠಿ, ಗುಜರಾತಿ, ಒರಿಯಾ, ಬಂಗಾಳಿ, ಪಂಜಾಬಿ, ಉರ್ದು ಮತ್ತು ಅಸ್ಸಾಮಿ). ಊರ್ಜಾದೊಂದಿಗೆ 45% ಕ್ಕಿಂತ ಹೆಚ್ಚು ಸಂಭಾಷಣೆಗಳು ಆಂಗ್ಲ ಭಾಷೆ ಹೊರತಾದ ಇತರ ಭಾಷೆಗಳಲ್ಲಿವೆ, ಇದು ಬಿಪಿಸಿಎಲ್‍ನ ಎಲ್ಲಾ ರೀತಿಯ ಗ್ರಾಹಕರ ಸೇರ್ಪಡೆಯನ್ನು ಖಾತರಿಪಡಿಸುತ್ತದೆ.

8.5 ಕೋಟಿಗಳಷ್ಟು ದೇಶೀಯ ಎಲ್‍ಪಿಜಿ ಗ್ರಾಹಕರು

8.5 ಕೋಟಿಗಳಷ್ಟು ದೇಶೀಯ ಎಲ್‍ಪಿಜಿ ಗ್ರಾಹಕರು

ಬಿಪಿಸಿಎಲ್ ದೇಶಾದ್ಯಂತ 8.5 ಕೋಟಿಗಳಷ್ಟು ದೇಶೀಯ ಎಲ್‍ಪಿಜಿ ಗ್ರಾಹಕರನ್ನು ಹೊಂದಿದೆ ಮತ್ತು 6000 ಕ್ಕೂ ಹೆಚ್ಚು ವಿತರಕರು ಸೇವೆ ಸಲ್ಲಿಸುತ್ತಿದ್ದಾರೆ. ದೇಶದಾದ್ಯಂತ 19000 ಕ್ಕೂ ಹೆಚ್ಚು ಪೆಟ್ರೋಲ್ ಪಂಪ್‍ಗಳು ಹರಡಿದ್ದು, ಬಿಪಿಸಿಎಲ್ ಇಂದು ಅಂದಾಜು ದೇಶದ ಇಂಧನ ಅಗತ್ಯತೆಯ ಶೇಕಡ 30ರಷ್ಟು ಪ್ರಮಾಣವನ್ನು ಪೂರೈಸುವ ಮೂಲಕ ದೇಶಕ್ಕೆ ಸೇವೆ ಸಲ್ಲಿಸುತ್ತದೆ. ಇದರ ಜೊತೆಯಲ್ಲಿ, ಬಿಪಿಸಿಎಲ್ 12 ಲಕ್ಷಕ್ಕೂ ಅಧಿಕ ಬಿ2ಬಿ ಗ್ರಾಹಕರಿಗೆ ತಮ್ಮ ಇಂಧನ, ಲೂಬ್ರಿಕಂಟ್‍ಗಳು ಮತ್ತು ಕೈಗಾರಿಕೆಗಳಾದ್ಯಂತ ಗ್ಯಾಸ್ ಅವಶ್ಯಕತೆಗಳನ್ನು ಪೂರೈಸುತ್ತಾ ಬಂದಿದೆ. ಊರ್ಜಾ ತನ್ನ ಕೃತಕ ಬುದ್ಧಿಮತ್ತೆಯೊಂದಿಗೆ ಗ್ರಾಹಕರ ಪ್ರಶ್ನೆಗಳು ಮತ್ತು ಅವಶ್ಯಕತೆಗಳಿಗೆ ಉತ್ತರಿಸುವಲ್ಲಿ ಮತ್ತು ಪರಿಹಾರಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಭಾರತ್ ಪೆಟ್ರೋಲಿಯಂ ಖಾಸಗೀಕರಣಕ್ಕೆ ಮುಂದಾದ ಸರ್ಕಾರ, ಖರೀದಿಗೆ ಕಾದಿದೆ ರಿಲಯನ್ಸ್ಭಾರತ್ ಪೆಟ್ರೋಲಿಯಂ ಖಾಸಗೀಕರಣಕ್ಕೆ ಮುಂದಾದ ಸರ್ಕಾರ, ಖರೀದಿಗೆ ಕಾದಿದೆ ರಿಲಯನ್ಸ್

ನಿರ್ದೇಶಕರಾದ ಅರುಣ್ ಕುಮಾರ್ ಸಿಂಗ್

ನಿರ್ದೇಶಕರಾದ ಅರುಣ್ ಕುಮಾರ್ ಸಿಂಗ್

ಬಿಪಿಸಿಎಲ್‍ನ ಪ್ರಮುಖವಾದ ಮೌಲ್ಯಗಳು ಗ್ರಾಹಕ ಕೇಂದ್ರಿತವಾಗಿದ್ದು, ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡ ಮೌಲ್ಯಗಳಾಗಿವೆ. ಈ ವಿಶಿಷ್ಟ ಉಪಕ್ರಮದ ಕುರಿತು ವಿವರ ನೀಡಿದ ಬಿಪಿಸಿಎಲ್ ಮಾರಾಟ ವಿಭಾಗದ ನಿರ್ದೇಶಕರಾದ ಅರುಣ್ ಕುಮಾರ್ ಸಿಂಗ್, "ಬಿಪಿಸಿಎಲ್‍ನಲ್ಲಿ ನಾವು ಯಾವಾಗಲೂ ನಮ್ಮ ಗ್ರಾಹಕರ ಕಲ್ಯಾಣಕ್ಕಾಗಿ ಮತ್ತು ರಾಷ್ಟ್ರದ ಬೆಳವಣಿಗೆಗೆ ವಿಶಿಷ್ಟವಾಗಿ ಮತ್ತು ಪರಿಣಾಮಕಾರಿಯಾಗಿ ಶ್ರಮಿಸುತ್ತೇವೆ. ನಮ್ಮ 'ಉರ್ಜಾ' ಚಾಟ್‍ಬಾಟ್‍ನ ಮೂಲಕ ನಾವು ನಮ್ಮ ಗ್ರಾಹಕರಿಗೆ ಸಂಪೂರ್ಣ ಹೊಸ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ ಮತ್ತು ಪ್ರಮುಖ ಸೇವೆಗಳನ್ನು ಪಡೆಯಲು ಮತ್ತು ಪ್ರಶ್ನೆಗಳಿಗೆ ನೈಜ ಸಮಯದಲ್ಲಿ ಪರಿಹಾರವನ್ನು ಒದಗಿಸಲು ಎಐ ಆಧಾರಿತ ವರ್ಚುವಲ್ ಅಸಿಸ್ಟೆಂಟ್ ಅನ್ನು ಸೃಷ್ಟಿಸಿದ್ದೇವೆ" ಎಂದು ಬಣ್ಣಿಸಿದ್ದಾರೆ.

ಎಲ್‍ಪಿಜಿ ಸೇವೆಗಳು- ವರ್ಚುವಲ್ ಅಸಿಸ್ಟೆಂಟ್

ಎಲ್‍ಪಿಜಿ ಸೇವೆಗಳು- ವರ್ಚುವಲ್ ಅಸಿಸ್ಟೆಂಟ್

ವರ್ಚುವಲ್ ಅಸಿಸ್ಟೆಂಟ್ ಮೂಲಕ ನೀಡಲಾಗುವ ಸೇವೆಗಳ ವಿವರ ಹೀಗಿವೆ:
• ಎಲ್‍ಪಿಜಿ ಸೇವೆಗಳು:
◦ ಎಲ್‍ಪಿಜಿ ಸಿಲಿಂಡರ್‌ಗಳ ಬುಕಿಂಗ್
◦ ಎಲ್‍ಪಿಜಿ ಸಿಲಿಂಡರ್‌ಗಳ ಬೆಲೆ ಮತ್ತು ಎಲ್‍ಪಿಜಿ ಸಿಲಿಂಡರ್‍ಗಳ ಪಾವತಿಯನ್ನು ತಿಳಿದುಕೊಳ್ಳುವುದು.
◦ ಬುಕ್ ಮಾಡಿದ ಎಲ್‍ಪಿಜಿ ಸಿಲಿಂಡರ್ ವಿತರಣಾ ಸ್ಥಿತಿಗತಿ ಮತ್ತು ಮರುಪೂರಣ ಇತಿಹಾಸ.
◦ ಎಲ್‍ಪಿಜಿ ವಿತರಕರನ್ನು ಬದಲಾಯಿಸುವುದು
◦ ಮೊಬೈಲ್ ಸಂಖ್ಯೆಯನ್ನು ಅಪ್‍ಡೇಟ್ ಮಾಡುವುದು.
◦ ಮೆಕ್ಯಾನಿಕ್ ಸೇವೆಗಳಂತಹ ಭಾರತ್ ಗ್ಯಾಸ್ ವಿತರಕರಿಂದ ಸೇವೆಗಳಿಗೆ ವಿನಂತಿಸಿಕೊಳ್ಳುವುದು.
◦ ಡಬಲ್ ಬಾಟಲ್ ಸಂಪರ್ಕವನ್ನು ವಿನಂತಿಸುವುದು (ಸಿಂಗಲ್ ಬಾಟಲ್ ಸಂಪರ್ಕ ಗ್ರಾಹಕರಿಗೆ)
◦ ತುರ್ತು ಮತ್ತು ದೂರುಗಳು/ಪ್ರತಿಕ್ರಿಯೆಗಳು

ವರ್ಚುವಲ್ ಅಸಿಸ್ಟೆಂಟ್ ಮೂಲಕ ಇಂಧನ ಸೇವೆಗಳು

ವರ್ಚುವಲ್ ಅಸಿಸ್ಟೆಂಟ್ ಮೂಲಕ ಇಂಧನ ಸೇವೆಗಳು

• ಇಂಧನ ಸೇವೆಗಳು
◦ ಹತ್ತಿರದ ಇಂಧನ ಕೇಂದ್ರ / ಪಂಪ್ ಪತ್ತೆ ಮಾಡುವುದು ಮತ್ತು ಪಂಪ್‍ಗೆ ದಾರಿ ನಿರ್ದೇಶಿಸುವುದು.
◦ ಪೆಟ್ರೋಲ್ / ಡೀಸೆಲ್ ಬೆಲೆ ಪಡೆಯುವುದು
◦ ಯುಫಿಲ್ ವೋಚರ್‌ಗಳ ವಿವರಗಳನ್ನು ಪಡೆಯುವುದು.
◦ ಸ್ಮಾರ್ಟ್ ಡ್ರೈವ್ & ಸ್ಮಾರ್ಟ್ ಫ್ಲೀಟ್ ಲಾಯಲ್ಟಿ ಪ್ರೋಗ್ರಾಂ, ಫ್ಯೂಯೆಲ್ ಕಾರ್ಟ್ ಡೋರ್ ಡೆಲಿವತಿ ಇತ್ಯಾದಿ ಸೇರಿದಂತೆ ಬಿಪಿಸಿಎಲ್‍ನ ಕೊಡುಗೆಗಳ ಬಗ್ಗೆ ತಿಳಿಯುವುದು.
◦ ಬಿಪಿಸಿಎಲ್‍ಗಳ ಫ್ಲೂಯೆಲ್ ಕಾರ್ಟ್ ಕಾರ್ಯಕ್ರಮದ ಮೂಲಕ ಇಂಧನವನ್ನು ಮನೆ ಬಾಗಿಲಿಗೆ ವಿತರಿಸುವಂತೆ ವಿನಂತಿಸಿಕೊಳ್ಳುವುದು.
• ಕೈಗಾರಿಕಾ ಇಂಧನಗಳು, ದ್ರಾವಕಗಳು, ಮ್ಯಾಕ್ ಲೂಬ್ರಿಕಂಟ್‍ಗಳು ಸೇರಿದಂತೆ ಬಿಪಿಸಿಎಲ್‍ನ ಉತ್ಪನ್ನಗಳ ಬಗ್ಗೆ ತಿಳಿದುಕೊಳ್ಳುವುದು.
• ಗ್ರಾಹಕರು ಈಗ ಬಿಪಿಸಿಎಲ್‍ನ ಉತ್ಪನ್ನಗಳಲ್ಲಿ ಆಸಕ್ತಿಯನ್ನು ತೋರಿಸಬಹುದು ಮತ್ತು ಬಿಪಿಸಿಎಲ್‍ನ ಕ್ಷೇತ್ರ ತಂಡಗಳು ಅಂತಹ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ.
• ವಿವಿಧ ಸೇವೆಗಳ ಬಗ್ಗೆ ಗ್ರಾಹಕರಿಂದ ಪ್ರತಿಕ್ರಿಯೆ ಪಡೆಯುವುದು.
• ಬಿಪಿಸಿಎಲ್‍ನ ಎಲ್ಲ ವ್ಯವಹಾರಗಳು ಮತ್ತು ಸೇವೆಗಳ ಬಗೆಗಿನ ಎಫ್‍ಎಕ್ಯೂಗಳು.
ನೀವು ಆಕೆಯೊಂದಿಗೆ ವಾಟ್ಸಪ್‍ನಲ್ಲಿ ಅಥವಾ ನಮ್ಮ ವೆಬ್‍ಸೈಟ್‍ನಲ್ಲಿ: http://bit.ly/ ಚಾಟ್ ಮಾಡಬಹುದು.

ಖಾಸಗಿ ಸಂಸ್ಥೆಗೆ ಬಿಪಿಸಿಎಲ್ ಮಾರಾಟ?

ಖಾಸಗಿ ಸಂಸ್ಥೆಗೆ ಬಿಪಿಸಿಎಲ್ ಮಾರಾಟ?

ಬಿಪಿಸಿಎಲ್ ರಾಷ್ಟ್ರೀಕೃತಗೊಳಿಸುವ ಕಾಯ್ದೆ 1976 ಹಾಗೂ ತಿದ್ದುಪಡಿ ಕಾಯ್ದೆ 2016ಗೆ ಬೇಕಾದ ಮರು ತಿದ್ದುಪಡಿಯನ್ನು ಮಾಡಲಾಗಿದೆ. ಇದಕ್ಕೆ ಸಂಸತ್ತಿನಲ್ಲಿ ಅನುಮೋದನೆ ಸಿಗಬೇಕಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ನಲ್ಲಿ ಸರ್ಕಾರ ಶೇ.53.3 ಪಾಲು ಹೊಂದಿದೆ. ಈ ಷೇರುಗಳ ಮಾರಾಟದಿಂದ 60-70 ಸಾವಿರ ಕೋಟಿ ರೂಪಾಯಿ ಆದಾಯ ಬರಬಹುದೆಂಬ ನಿರೀಕ್ಷೆ ಹೊಂದಲಾಗಿದೆ. ಬಿಪಿಸಿಎಲ್ ಮಾರುಕಟ್ಟೆ ಮೌಲ್ಯ ಅಕ್ಟೋಬರ್ 04, 2019ಕ್ಕೆ 1.11 ಲಕ್ಷ ಕೋಟಿ ರು ನಷ್ಟಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯನ್ನು ಖಾಸಗಿಯವರಿಗೆ ಮಾರಾಟ ಮಾಡಿದರೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

ಸರ್ಕಾರಿ ಸ್ವಾಮ್ಯದ ಸಂಸ್ಥೆ ಬಿಪಿಸಿಎಲ್‍

ಸರ್ಕಾರಿ ಸ್ವಾಮ್ಯದ ಸಂಸ್ಥೆ ಬಿಪಿಸಿಎಲ್‍

15,078ಪೆಟ್ರೋಲ್ ಪಂಪ್ ಹೊಂದಿರುವ ಬಿಪಿಸಿಎಲ್ ಮುಂಬೈನಲ್ಲಿ ನಾಲ್ಕು ತೈಲ ಘಟಕ, ಕೇರಳದ ಕೊಚ್ಚಿ, ಮಧ್ಯಪ್ರದೇಶದ ಬಿನಾ, ಅಸ್ಸಾಂನ ನುಮಾಲಿಗರ್ ನಲ್ಲಿ ತೈಲ ಘಟಕಗಳನ್ನು ಬಿಪಿಸಿಎಲ್ ಹೊಂದಿದ್ದು, ಒಟ್ಟಾರೆ, 38.3 ಮಿಲಿಯನ್ ಟನ್ ಕಚ್ಚಾತೈಲವನ್ನು ಇಂಧನವಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿವೆ. ಇದರ ಜೊತೆಗೆ 15,078ಪೆಟ್ರೋಲ್ ಪಂಪ್ ಹಾಗೂ 6,004 ಎಲ್ ಪಿಜಿ ವಿತರಣೆಯನ್ನು ಬಿಪಿಸಿಎಲ್ ಹೊಂದಿದೆ. ಭಾರತ 294.4 ಮಿಲಿಯನ್ ಟನ್ ತೈಲ ಸಂಸ್ಕರಣಾ ಸಾಮರ್ಥ್ಯ, 65 554 ಪೆಟ್ರೋಲ್ ಪಂಪ್ ಹಾಗೂ 24 026 ಎಲ್ ಪಿ ಜಿ ವಿತರಣೆಯನ್ನು ಹೊಂದಿದೆ.

English summary
Bharat Petroleum Corporation Limited (BPCL), announces the launch of ‘Urja’, an intelligent virtual assistant with AI/NLP (Natural Language Processing) capabilities and trained on more than 600 use cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X