Post Viral: ಇದು ಕರ್ನಾಟಕವಾ ಇಲ್ಲ ಪಾಕಿಸ್ತಾನ, ಸ್ವಿಗ್ಗಿ ಡೆಲಿವರಿ ಬಾಯ್ ಬಗ್ಗೆ ಮಹಿಳೆ ಪೋಸ್ಟ್ ವೈರಲ್
ಬೆಂಗಳೂರು, ಸೆಪ್ಟಂಬರ್ 15: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಆರ್ಡರ್ ಬಳಿಕ ಆಹಾರ ಸರಬರಾಜು ಮಾಡುವ, ಸ್ವಿಗ್ಗಿ, ಝೋಮ್ಯಾಟೋ ಕಂಪನಿಗಳು ಆಹಾರ ಸರಿ ಇಲ್ಲ. ಡೆಲಿವರಿ ವಿಳಂಬ ಇತ್ಯಾದಿ ಕಾರಣಗಳಿಗೆ ಸುದ್ದಿಯಾಗುವುದು ಸಾಮಾನ್ಯ. ಆದರೆ ಈ ಬಾಗಿ ಸ್ವಿಗ್ಗಿ ಕಂಪನಿಯು ಕನ್ನಡ ಭಾಷೆ ವಿಚಾರವಾಗಿ ಸುದ್ದಿಯಾಗಿದೆ. ಈ ಬಗ್ಗೆ ಬೆಂಗಳೂರಿನ ಮಹಿಳಾ ಗ್ರಾಹಕಿ ಮಾಡಿದ ಪೋಸ್ಟ್ ವೈರಲ್ ಆಗುತ್ತಿದೆ.
ಸ್ವಿಗ್ಗಿ ಫುಡ್ ಡೆಲಿವರಿ ಕಂಪನಿಯ ಡೆಲಿವರಿಗೆ ಕನ್ನಡ ಜೊತೆಗೆ ಇಂಗ್ಲಿಷ್ ಎರಡು ಭಾಷೆಯು ಅರ್ಥವಾಗಿಲ್ಲ. ಕೇವಲ ಹಿಂದಿ ಭಾಷೆ ಅರ್ಥವಾಗುತ್ತದೆ. ಈ ಕುರಿತು ಮಹಿಳೆ ಅಸಮಾಧಾನದಿಂದ ಸ್ವಿಗ್ಗಿಗೆ ಕರೆ ಮಾಡಿದ್ದಾರೆ. ಘಟನೆಯನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅರ್ಥವಾಗದ ಹಿನ್ನೆಲೆಯಲ್ಲಿ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿಗೆ ಕರೆ ಮಾಡಿದ ಬೆಂಗಳೂರಿನ ಮಹಿಳೆಯ ಎಕ್ಸ್ ಪೋಸ್ಟ್ ವೈರಲ್ ಆಗಿದೆ.

ಬೆಂಗಳೂರು ಕರ್ನಾಟಕದಲ್ಲಿದ್ಯಾ, ಪಾಕಿಸ್ತಾನದಲ್ಲಿದ್ಯಾ?
ಸೋಷಿಯಲ್ ಮೀಡಿಯಾದಲ್ಲಿ ಅವರು, ಹಿಂದಿ ಮಾತನಾಡಿದ್ದಕ್ಕೆ ಬೆಂಗಳೂರು ಕರ್ನಾಟಕದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿದೆ ಎಂದು ಪ್ರಶ್ನೆ ಮಾಡಿದ್ದಾರೆ. ನಿಮ್ಮ ಡೆಲಿವರಿ ಬಾಯ್ ಸ್ಥಳೀ ಭಾಷೆ ಕನ್ನಡ ಮಾತನಾಡುತ್ತಿಲ್ಲ. ಅಥವಾ ಅವರಿಗೆ ಕನ್ನಡವೇ ಬರಲ್ಲವೇ, ಗೊತ್ತಿದ್ದು ಮಾತನಾಡುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದು ವೈರಲ್ ಆಗಿದ್ದು, ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಮುಖ್ಯವಾಗಿ ಕರ್ನಾಟಕದಲ್ಲಿ ಅದರಲ್ಲಿ ಉದ್ಯೋಗ ವಲಯದಲ್ಲಿ ಭಾಷೆಯ ದ್ವಂದ್ವ ಹೊಸದೇನಲ್ಲ. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಸರ್ಕಾರವು ಖಾಸಗಿ ವಲಯದಲ್ಲಿ ಗ್ರೂಪ್ ಸಿ ಮತ್ತು ಡಿ ನೌಕರಿಗಳಲ್ಲಿ ಶೇಕಡಾ 100 ರಷ್ಟು ಮೀಸಲಾತಿ ಯೋಜಿಸಿತ್ತು. ಆದರೆ ಒತ್ತಡದಿಂದಾಗಿ ಈ ಮೀಸಲಾತಿ ಜಾರಿಯಾಗಿಲ್ಲ.
ನೆಟ್ಟಿಗರ ಪ್ರತಿಕ್ರಿಯೆ ಏನು?
ಮಹಿಳಾ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ರಾಜ್ಯದಲ್ಲಿನ ಪದೇ ಪದೆ ಉಂಟಾಗುತ್ತಿರುವ ಭಾಷಾ ಕಡೆಗಣೆಯಿಂದಾಗಿ ಸೂರತ್, ಲಕ್ನೋ ಮತ್ತು ಇಂದೋರ್‌ನಿಂದ 53 ಕಂಪನಿಗಳ ಸ್ಥಳಾಂತರಿಸುವ ಬಗ್ಗೆ ಯೋಜಿಸಲಾಗಿದೆ ಎಂದು ವರದಿಗಳನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.
ಅದರಲ್ಲಿ 14 ಬಹುರಾಷ್ಟ್ರೀಯ ಕಂಪನಿಗಳಾಗಿವೆ. ಸ್ಥಳೀಯ ಭಾಷೆ ಕಡೆಗಣೆನಯು ನಿರಂತರವಾಗಿ ಬೆಂಗಳೂರಿನ ಸಂಸ್ಕೃತಿ ಮತ್ತು ಜಾಗತಿಕ ಅಸ್ತಿತ್ವದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತಿದೆ. ಹೀಗೆ ಮುಂದುವರಿದರೆ ಕನ್ನಡಿಗರ ಗತಿ ಏನು? ಅಂತಲೂ ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ನಾವು ಡೆಲಿವರಿ ಪಡೆದ ಬಳಿಕ ಅವರಿಗೆ ಧನ್ಯವಾದಗಳು ತಿಳಿಸುತ್ತೇನೆ. ಆದರೆ ಈ ರೀತಿ ಚಾಟ್ ಮಾಡುವುದು, ಅವರೊಂದಿಗೆ ಹೆಚ್ಚು ಮಾತನಾಡುವುದನ್ನು ನಾನು ಮಾಡಿಲ್ಲ ಎಂದು ನೆಟ್ಟಿಗರೊಬ್ಬರು ತಿಳಿಸಿದ್ದಾರೆ.
Bengaluru is in Karnataka or Pakistan @Swiggy ?
— Rekha 🌸 (@detached_98) September 12, 2024
Your delivery guy is neither speaking nor understanding #kannada ,not even #English. Do you expect us to learn his state language #Hindi in our land?
Stop imposing things on us and make sure your delivery persons know #Kannada. pic.twitter.com/smzQ6Mp7SV
ನೀವು ಕನ್ನಡದ ವಿಚಾರ ಮಾತನಾಡುತ್ತಿರುವುದು ಒಳ್ಳೆಯದು. ಈ ಬಗ್ಗೆ ಸಾಕಷ್ಟು ಜನರಿಂದ ನೀವು ಬೆಂಬಲ ಕೇಳಬಹುದು. ಆದರೆ ದ್ವೇಷದ ರೀತಿಯಲ್ಲಿ ಮಾತನಾಡುವುದರಿಂದ ನಿಮ್ಮ ಸಹಾಯಕ್ಕೆ ಯಾರು ಬರುವುದಿಲ್ಲ ಎಂದು ಮತ್ತೊಂದು ತಿಳಿ ಹೇಳಿದ್ದಾರೆ.
ಮಹಿಳೆ ಪೋಸ್ಟ್‌ನಲ್ಲಿ ಆರ್ಡರ್ ನಂಬರ್, ಸ್ವಿಗ್ಗಿ ಕಂಪನಿಗೆ ಸಂಪರ್ಕಿಸಿದ್ದರ ಖಚಿತತೆಗಾಗಿ ಮೊಬೈಲ್ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಈ ನೆಲದ ಭಾಷೆ ಹಿಂದಿ ಅಲ್ಲ, ಅದರ ಹೇರಿಕೆಯನ್ನು ಸಹಿಸುವುದಿಲ್ಲ ಎಂದು ಆ ಮಹಿಳೆ ಆಕ್ರೋಶ ಹೊರ ಹಾಕಿದ್ದಾರೆ.












Click it and Unblock the Notifications