Get Updates
Get notified of breaking news, exclusive insights, and must-see stories!

ಪರಭಾಷಿಕರು ಕನ್ನಡದಲ್ಲೇ ಆಟೋ ಚಾಲಕರ ಬಳಿ ಚೌಕಾಸಿ ಮಾಡಲು ಹೊಸ ಐಡಿಯಾ, ಏನದು?

ಬೆಂಗಳೂರಿನಲ್ಲಿ ದಿನೇ ದಿನೇ ಕನ್ನಡ ಗೊತ್ತಿಲ್ಲ ಎನ್ನುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹತ್ತಾರು ವರ್ಷಗಳಿಂದ ಇಲ್ಲೇ ನೆಲೆಸಿದ್ದರೂ ಕನ್ನಡ ಕಲಿಯಲು ಮನಸ್ಸೇ ಮಾಡಲ್ಲ ಎನ್ನುವ ದೊಡ್ಡ ಸಮಸ್ಯೆಯೂ ಇದೆ. ಇನ್ನು ಆಟೋ, ಕ್ಯಾಬ್‌ ಚಾಲಕರೊಂದಿಗೆ ಪ್ರಯಾಣಿಸುವಾಗ ಇಂತಹವರಿಗೆ ಭಾಷಾ ಸಮಸ್ಯೆ ಎದುರಾಗುವುದು ಸಾಮಾನ್ಯ. ಆಟೋ ಚಾಲಕರು ಕೂಡ ಕನ್ನಡದ ಸ್ವಾಭಿಮಾನ ಮೆರೆಯುವುದರಿಂದ ಅವರೊಂದಿಗೆ ಪ್ರಯಾಣದ ದರ ಚೌಕಾಸಿ ಮಾಡಲು ಒದ್ದಾಡುತ್ತಾರೆ. ಈಗ ಟೆಕ್‌ ಯುಗದಲ್ಲಿರುವುದರಿಂದ ಕನ್ನಡ ಗೊತ್ತಿಲ್ಲದಿದ್ದರೂ ಆಟೋ ಚಾಲಕರ ಜೊತೆಗೆ ಸುಲಭವಾಗಿ ಹೇಗೆ ಮಾತನಾಡಬಹುದು ಎಂದು ಬೆಂಗಳೂರಿನ ವಿದ್ಯಾರ್ಥಿಯೊಬ್ಬ ಒಳ್ಳೆ ಐಡಿಯಾ ಕೊಟ್ಟಿದ್ದಾನೆ. ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ವೈರಲ್‌ ಆಗಿದೆ.

ಬೆಂಗಳೂರಿನಂತಹ ಜನನಿಬಿಡ ಟೆಕ್‌ ನಗರದಲ್ಲಿ ಹಾಗೂ ನಮ್ಮ ದೈನಂದಿನ ಜೀವನದಲ್ಲಿ ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂದು ವಿದ್ಯಾರ್ಥಿಯೊಬ್ಬ ಉದಾಹರಣೆ ಸಮೇತ ತೋರಿಸಿಕೊಟ್ಟಿದ್ದಾನೆ. ಆಟೋ ದರ ಚೌಕಾಸಿ ಮಾಡುವಾಗ ಅನ್ಯಭಾಷಿಕ ಪ್ರಯಾಣಿಕರಿಗೆ ಭಾಷೆಯ ಸಮಸ್ಯೆ ಎದುರಾಗುತ್ತೆ ಎಂಬುದನ್ನು ಮನಗಂಡ ವಿದ್ಯಾರ್ಥಿಯೊಬ್ಬರ ಇದಕ್ಕೆ ತಂತ್ರಜ್ಞಾನದಿಂದಲೇ ಪರಿಹಾರವೂ ಕಂಡುಕೊಂಡಿದ್ದಾನೆ. ಇದಕ್ಕಾಗಿ ಎಲ್ಲೆಡೆ ಕೆಲಸವನ್ನು ಸರಳಗೊಳಿಸುತ್ತಿರುವ ಕೃತಕ ಬುದ್ಧಿಮತ್ತೆಯ (AI) ಮೊರೆ ಹೋಗಿದ್ದಾನೆ. ಕೊನೆಗೆ ChatGPT ಸಹಾಯದಿಂದ ಆಟೋ ಚಾಲಕನೊಂದಿಗೆ ಕನ್ನಡದಲ್ಲೇ ಚೌಕಾಸಿ ಮಾಡಿ ಆತ ಗೆದ್ದಿದ್ದಾನೆ.

Bengaluru Student Uses ChatGPT Voice To Negotiate Auto Fare In Kannada Video Viral

ವಿದ್ಯಾರ್ಥಿಯು ಚಾಟ್‌ಜಿಪಿಟಿಯ ವಾಯ್ಸ್‌ ಫೀಚರ್‌ ಬಳಸಿಕೊಂಡು ಆಟೋ ಚಾಲಕನೊಂದಿಗೆ ಸ್ಥಳೀಯ ಭಾಷೆಯಾದ ಕನ್ನಡದಲ್ಲಿ ಪ್ರಯಾಣ ದರವನ್ನು ಚೌಕಾಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಮೊದಲಿಗೆ ಆಟೋ ಪ್ರಯಾಣ ದರ 200 ರೂಪಾಯಿ ಎಂದು ಚಾಲಕ ಹೇಳಿದ್ದರು. ಬಳಿಕ ವಿದ್ಯಾರ್ಥಿಯು ಚಾಟ್‌ಜಿಪಿಟಿಯ ಸಹಾಯದಿಂದ ಆ ದರವನ್ನು 120 ರೂಪಾಯಿಗೆ ಕಡಿಮೆ ಮಾಡಲು ನಿರ್ಧರಿಸಿದ್ದ. ಇದಕ್ಕಾಗಿ ಎಐ ಬಳಸಿ 120 ರೂಪಾಯಿಗೆ ಚೌಕಾಸಿ ಮಾಡುವಂತೆ ಕೇಳಿದ. ಕೊನೆಗೆ ಎಐ ಕನ್ನಡದಲ್ಲೇ ಚಾಲಕನೊಂದಿಗೆ ಮಾತನಾಡಿದ್ದು, ಇದಕ್ಕೆ ಚಾಲಕ ಒಪ್ಪಿಕೊಂಡಿದ್ದಾನೆ.

Take a Poll

ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಕನ್ನಡದಂತಹ ಪ್ರಾದೇಶಿಕ ಭಾಷೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಮಾತನಾಡಲು ಮಾತ್ರವಲ್ಲದೆ ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳಲು ಕೂಡ ಚಾಟ್‌ಜಿಪಿಟಿ ನೆರವಾಗುತ್ತಿದೆ. ಇದು ಭವಿಷ್ಯದ ಬೆಂಗಳೂರಿಗೆ ಬಹಳ ಮುಖ್ಯ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ತಂತ್ರಜ್ಞಾನದಿಂದಾದರೂ ಕನ್ನಡದಲ್ಲಿ ಸಂಭಾಷಣೆ ಸುಲಭವಾಗುವುದಲ್ಲದೆ, ಭಾಷೆ ವಿಚಾರವಾಗಿ ನಡೆಯುವ ಗಲಾಟೆಗಳಿಗೂ ಬ್ರೇಕ್‌ ಹಾಕಬಹುದು ಎನ್ನಲಾಗಿದೆ. ಬೆಂಗಳೂರಿನಲ್ಲಿ ಸದ್ಯ ಹಲವು ಭಾಷೆಯ ಜನರು ಹೆಚ್ಚಾಗಿದ್ದು, ಸ್ಥಳೀಯರೊಂದಿಗೆ ಬೆರೆಯಲು ಇಂತಹ ತಂತ್ರಜ್ಞಾನಗಳು ನೆರವಾಗುತ್ತವೆ ಎಂದು ಹೇಳಲಾಗುತ್ತಿದೆ.

ಭಾಷೆ ವಿಚಾರವಾಗಿಯೇ ಆಟೋ ಕ್ಯಾಬ್‌ ಚಾಲಕರ ಜೊತೆ ಪರಭಾಷಿಕರು ಕಿರಿಕ್‌ ಮಾಡುವುದು ಹೆಚ್ಚು. ಪ್ರತಿನಿತ್ಯವೂ ಇಂತಹ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ. ವಾಗ್ವಾದಕ್ಕಿಂತ ಕನಿಷ್ಠ ಪಕ್ಷ ಈ ವಿಧಾನದಲ್ಲಾದರೂ ಕನ್ನಡ ಉಳಿಸಬಹುದಲ್ಲಾ? ಎಂದು ಸಲಹೆ ನೀಡಿದ್ದಾರೆ. ಹೇಗಿದ್ರೂ ಕೈಯಲ್ಲಿ ಮೊಬೈಲ್‌ ಇದ್ದೇ ಇರುತ್ತೆ, ಅದನ್ನ ಬಳಸಿಯಾದ್ರೂ ಕನ್ನಡದವರೊಂದಿಗೆ ಮಾತನಾಡಿದರೆ ಅವರಿಗೂ ಯಾವುದೇ ತೊಂದರೆ ಇರೋದಿಲ್ಲ, ಕನ್ನಡ ಗೊತ್ತಿಲ್ಲ ಎಂದು ನೀವೂ ಹೇಳಂಗಿಲ್ಲ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+