Viral: ಬೆಂಗಳೂರು ತೊರೆಯಲು 101 ಕಾರಣಗಳಲ್ಲಿ ಇದು ಒಂದು: ನಾರ್ಥಿ ಯುವತಿ ಫೋಟೋ
ಬೆಂಗಳೂರು, ಡಿಸೆಂಬರ್ 18: ಬೆಂಗಳೂರಿನಲ್ಲಿ ನೆಲೆಗೊಂಡಿರುವ ಉತ್ತರ ಭಾರತೀಯರು ಇತ್ತೀಚೆಗೆ ಒಂದಲ್ಲ ಒಂದು ವಿಷಯಕ್ಕೆ ನಗರ ತೊರೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಈ ಭಾರಿ ಯುವತಿಯೊಬ್ಬರು ಬೆಂಗಳೂರು ತೊರೆಯುವ ಬಗ್ಗೆ ಮಾತನಾಡಿದ್ದಾರೆ. ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿದ್ದ ಯುವತಿಗೆ ಪರಿಪೂರ್ಣ ಆಹಾರ ಬಾರದೇ ಅರ್ಧಂಬರ್ಧ ಆಹಾರ ಡೆಲಿವರಿ ಆಗಿದೆ. ಇದು ಸಹ ಬೆಂಗಳೂರು ತೊರೆಯಲು ಕಾರಣ ಎಂದು ಆ ಯುವತಿ ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರ ಹಾಕಿದ್ದಾರೆ.
ಬಟ್ಟೆ, ಮೊಬೈಲ್, ಎಲೆಕ್ಟ್ರಾನಿಕ್ ಸೇರಿದಂತೆ ದೈನಂದಿನ ಎಲ್ಲ ಬಗೆಯ ವಸ್ತುಗಳನ್ನು ಆನ್‌ಲೈನ್ ಮೂಲಕ ಖರೀದಿಸಬಹುದಾಗಿದೆ. ಊಟ ತಿಂಡಿ, ತರಕಾರಿ, ಮೆಡಿಷಿನ್ ಮುಂತಾದವುಗಳನ್ನು ಆನ್‌ಲೈನ್‌ನಲ್ಲಿ ತರಿಸಿಕೊಳ್ಳಬಹುದು. ತಿಂಡಿ ವಿಚಾರಕ್ಕೆ ಬಹುವುದಾದರೆ ಪಾನಿಪೂರಿ, ಗೋಬಿಯಂತಹ ತಿನಿಸುಗಳು ಯಾರಿಗೆತಾನೆ ಇಷ್ಟವಿರುವಿದಿಲ್ಲ. ಅದನ್ನು ಸಹ ನೀವು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ಮನೆಗೆ ತರಿಸಿಕೊಂಡು ತಿನ್ನಬಹುದಾಗಿದೆ.

ಇದೇ ರೀತಿ ಬೆಂಗಳೂರಿನಲ್ಲಿರುವ ಉತ್ತರ ಭಾರತದ ಯುವತಿ ಆನ್‌ಲೈನ್ ನಲ್ಲಿ ದಹಿಪುರಿಯನ್ನು ಆರ್ಡರ್ ಮಾಡಿದ್ದರು. ಆದರೆ ಅವರಿಗೆ ದಹಿಪುರಿ ಬದಲು ಪೂರಿ ಮತ್ತು ಒಂದು ಬೌಲ್ ಮೊಸರು ಮಾತ್ರವೇ ಪಾರ್ಸೆಲ್ ನಲ್ಲಿ ಬಂದಿದೆ. ಡೆಲಿವರಿ ಪ್ಯಾಕ್ ಓಪನ್ ಮಾಡಿ ನೋಡಿ ಶಾಕ್ ಆದ ಯುವತಿ ಬೇಸರ ವ್ಯಕ್ತಪಡಿಸಿದ್ದಾಳೆ. ಇದರ ಫೋಟೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಕಾರಣದಿಂದ ಅಸಮಾಧಾನಗೊಂಡ ಯುವತಿ, ಬೆಂಗಳೂರು ತೊರೆಯಲು 101 ಕಾರಣಗಳಲ್ಲಿ ಇದು ಒಂದು ಎಂದು ಅವರು ಹೇಳಿಕೊಂಡಿದ್ದಾರೆ. ಪೂರಿ ಈ ಫೋಟೋ ನಾಲ್ಕು ಲಕ್ಷಕ್ಕೂ ಅಧಿಕ ವಿವ್ಸ್ ಪಡೆದುಕೊಂಡಿದೆ. ನಾನೋಬ್ಬಳು ಭಾರತೀಯಳಾಗಿದ್ದು, ಈ ಘಟನೆ ನನಗೆ ಅತೀವ ಬೇಸರ ತರಿಸಿದೆ ಎಂದಿದ್ದಾಳೆ.
ಯುವತಿ ಆಶಿಕಾ ಅವರು ತಮ್ಮ ಎಕ್ಸ್ ಖಾತೆ @snorlaxNotFound ಯಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. ಈ ಯುವತಿ ದಹಿಪುರಿ ಆರ್ಡರ್ ಮಾಡಿದ್ದರು. ಆದರೆ ತಿನ್ನಲು ಆಗದೇ, ಹಣ ಕಳೆದುಕೊಂಡಿದ್ದಾಳೆ. ಈ ಕುರಿತು ಫೋಟೋ ಹಂಚಿಕೊಳ್ಳುವ ಮೂಲಕ ಆಹಾರ ಡೆಲಿವರಿ ವೇಳೆ ಇತ್ತೀಚೆಗೆ ಆಗುತ್ತಿರುವ ಲೋಪದೋಷಗಳ ಮೇಲೆ ಬೆಳಕು ಚೆಲ್ಲಿದ್ದಾಳೆ.
ಈ ಘಟನೆ ಡಿಸೆಂಬರ್ 16ರಂದು ನಡೆದಿದೆ ಎನ್ನಲಾಗಿದೆ. ನೆಟ್ಟಿಗರು ಸಾಕಷ್ಟು ಕಾಮೆಂಟ್ ಮಾಡುವ ಮೂಲಕ ಅಚ್ಚರಿ ವ್ಯಕ್ತಪಡಿಸಿವೆ. ನೆಟ್ಟಿಗರೊಬ್ಬರು ಇದು ಹೃದಯವಿದ್ರಾವಕ ಘಟನೆ ಎಂದು ಮರುಗಿದ್ದಾರೆ. ಕೆವಲರು ಫುಡ್ ಡೆಲಿವರಿ ವೇಳೆ ಆಗುತ್ತಿರುವ ಅಚ್ಚರಿ ಘಟನೆಗಳನ್ನು ಸ್ಮರಿಸಿದ್ದಾರೆ.
ಇತ್ತೀಚೆಗೆ ಉತ್ತರ ಭಾರತೀಯ ಯುವತಿಯೊಬ್ಬರು ಬೆಂಗಳೂರು ಕುರಿತು ನೆಗಟಿವ್ ರೀತಿಯಲ್ಲಿ ಮಾತನಾಡಿದ್ದರು. ಆದರೆ ಈ ಮಹಿಳೆ ನಗರದಲ್ಲಿ ತನಗಾದ ಬೇಸರ ಸಂಗತಿ ಹಂಚಿಕೊಂಡು, ಬೆಂಗಳೂರು ತೊರೆಯುವ ಕುರಿತು ಮಾನತಾಡಿದ್ದಾರೆ.












Click it and Unblock the Notifications