ಲಾಕ್ ಡೌನ್; ಮಕ್ಕಳನ್ನು ನೋಡಿಕೊಳ್ಳಲು ಕೆಲವು ಸಲಹೆಗಳು

ಬೆಂಗಳೂರು, ಏಪ್ರಿಲ್ 15 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. 21 ದಿನಗಳ ಲಾಕ್ ಡೌನ್ ಪೂರ್ಣಗೊಂಡಿದೆ. ಬುಧವಾರದಿಂದ 2ನೇ ಹಂತದ ಲಾಕ್ ಡೌನ್ ಆರಂಭವಾಗಿದ್ದು, ಮೇ 3ರ ತನಕ ಎಲ್ಲರೂ ಮನೆಯಲ್ಲಿಯೇ ಇರಬೇಕಿದೆ.

ಲಾಕ್ ಡೌನ್ ಸಮಯದಲ್ಲಿ ಮಕ್ಕಳನ್ನು ನೋಡಿಕೊಳ್ಳುವುದು ಜವಾಬ್ದಾರಿಯುತವಾದ ಕೆಲಸವಾಗಿದೆ. ಅದರಲ್ಲಿಯೂ ಬೆಂಗಳೂರು ನಗರದಲ್ಲಿ ಹಲವು ಮನೆಗಳಲ್ಲಿ ಅಪ್ಪ, ಅಮ್ಮ ಮತ್ತು ಮಕ್ಕಳು ಮಾತ್ರ ಇದ್ದಾರೆ. ಇಂತಹ ಸಮಯದಲ್ಲಿ ಮಕ್ಕಳ ಬೇಸರವನ್ನು ದೂರಮಾಡಲು ಪೋಷಕರು ಆದ್ಯತೆ ನೀಡಬೇಕು.

ಮನೆಯಲ್ಲಿಯೇ ಇರುವ ಮಕ್ಕಳಿಗೆ ಪೋಷಕರು ಸಮಯವನ್ನು ನೀಡಬೇಕು. ಅವರನ್ನು ಚಟುವಟಿಕೆಯಿಂದ ಇಡಬೇಕು. ಕೇವಲ ಮೊಬೈಲ್, ಟಿವಿ ಎಂದು ಮಕ್ಕಳು ಅವುಗಳಿಗೆ ಮಾತ್ರ ಸೀಮಿತವಾರಬಾರದು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಗೌತಮ್ ಕುಮಾರ್ ಜೈನ್ ಫೇಸ್ ಬುಕ್‌ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಮಕ್ಕಳನ್ನು ಮನೋರಂಜಿಸಲು ಕೆಲವು ಸಲಹೆಗಳನ್ನು ನೀಡಿದ್ದಾರೆ.

ಸಮಯ ಮೀಸಲಿಡಿ

ಸಮಯ ಮೀಸಲಿಡಿ

ಪ್ರತಿ ಮಗು ಪೋಷಕರ ಪ್ರೀತಿಯನ್ನು ಬಯಸುತ್ತದೆ. ನಿಮ್ಮ ಸಂಪೂರ್ಣ ಗಮನ ಮಗುವಿನ ಮೇಲಿರಲಿ. ಲಾಕ್ ಡೌನ್ ಸಮಯದಲ್ಲಿ ಮಗುವಿನೊಂದಿಗೆ ಕಾಲ ಕಳೆಯಲು ಸಮಯವನ್ನು ಮೀಸಲಿಡಿ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಗೌತಮ್ ಕುಮಾರ್ ಜೈನ್ ಸಲಹೆಯನ್ನು ನೀಡಿದ್ದಾರೆ.

ಮಕ್ಕಳಿಗೆ ಕಥೆ ಹೇಳಿ

ಮಕ್ಕಳಿಗೆ ಕಥೆ ಹೇಳಿ

ನಿಮ್ಮ ಮಗುವಿನ ಜೊತೆ ಸೇರಿ ಸೃಜನಾತ್ಮಕ ಯೋಜನೆ ರೂಪಿಸಿ. ಹಾಡುಗಳನ್ನು ಹಾಡಿ, ಕಪ್‌ಗಳನ್ನು ಜೋಡಿಸಿ. ಕಥೆಯನ್ನು ಹೇಳಿ. ಪುಸ್ತಕ ಓದಿ ಅಥವ ಚಿತ್ರಗಳನ್ನು ಹಂಚಿಕೊಳ್ಳಿ.

ಒಟ್ಟಿಗೆ ಸೇರಿ ಅಡುಗೆ ಮಾಡಿ

ಒಟ್ಟಿಗೆ ಸೇರಿ ಅಡುಗೆ ಮಾಡಿ

ಹದಿಹರೆಯದ ಮಕ್ಕಳೊಂದಿಗೆ ನಿಮ್ಮ ಒಡನಾಟ ಹೇಗಿರಬೇಕು ಎಂದು ಮೇಯರ್ ಸಲಹೆ ನೀಡಿದ್ದಾರೆ. ಕ್ರೀಡೆ, ಸಂಗೀತ, ಚಲನಚಿತ್ರ ಮುಂತಾದ ವಿಚಾರಗಳ ಕುರಿತು ಅವರೊಂದಿಗೆ ಮಾತನಾಡಿ. ಮಕ್ಕಳ ಜೊತೆ ಸೇರಿ ಅಡುಗೆ ಮಾಡಿ.

ಫೋನ್, ಟಿವಿ ಪ್ರಪಂಚವಲ್ಲ

ಫೋನ್, ಟಿವಿ ಪ್ರಪಂಚವಲ್ಲ

ಚಿಕ್ಕ ಮಕ್ಕಳ ಮುಂದೆ ಟಿವಿ ನೋಡುವುದು, ಫೋನ್ ಬಳಕೆ ಮಾಡದಿರಿ. ಮಕ್ಕಳ ಜೊತೆ ಪುಸ್ತಕ ಓದಿ ಅಥವ ಚಲನಚಿತ್ರ ನೋಡಿ ಎಂದು ಮೇಯರ್ ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+