ಫೈವ್ ಸ್ಟಾರ್ ರೆಸಾರ್ಟ್ ನಂತಿದ್ದ ಬಲಾಕೋಟ್ ನ ಜೈಶ್ ಕ್ಯಾಂಪ್

Recommended Video

      Surgical Strike 2: ಫೈವ್ ಸ್ಟಾರ್ ರೆಸಾರ್ಟ್ ನಂತಿದ್ದ ಬಲಾಕೋಟ್ ನ ಜೈಶ್ ಕ್ಯಾಂಪ್ | Oneindia Kannada

      ನೂರಾರು ಸಂಖ್ಯೆಯಲ್ಲಿದ್ದ ಫಿದಾಯಿನ್ ಗಳು ಅಥವಾ ಆತ್ಮಹತ್ಯಾ ದಾಳಿಕೋರರು ಮತ್ತು ಅವರಿಗೆ ತರಬೇತಿ ನೀಡುತ್ತಿದ್ದವರನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಬಲಾಕೋಟ್ ಅರಣ್ಯದಲ್ಲಿ ಬೆಟ್ಟದ ಮೇಲಿದ್ದ ಫೈವ್ ಸ್ಟಾರ್ ರೆಸಾರ್ಟ್ ನಂಥ ನೆಲೆಗೆ ಸ್ಥಳಾಂತರಿಸಲಾಗಿತ್ತು.

      ಪುಲ್ವಾಮಾದಲ್ಲಿ ಉಗ್ರಗಾಮಿ ದಾಳಿ ನಡೆದ ನಂತರ ಭಾರತೀಯ ಸೇನೆಯಿಂದ ದಾಳಿ ಆಗಬಹುದು ಎಂಬ ಆತಂಕ ಇದ್ದುದರಿಂದ ಹೀಗೆ ಮಾಡಲಾಗಿತ್ತು. ಮಂಗಳವಾರ ಭಾರತೀಯ ವಾಯು ಸೇನೆ ನಡೆಸಿದ ದಾಳಿಯಲ್ಲಿ ಹತ್ತಿರ ಹತ್ತಿರ ಮುನ್ನೂರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

      ಏಳು ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ನೆಲೆಯು ಪಾಕಿಸ್ತಾನದಲ್ಲಿ ಜೈಶ್-ಇ-ಮೊಹ್ಮದ್ ಪಾಲಿನ ಅತಿ ದೊಡ್ಡ ಕ್ಯಾಂಪ್. ಇಲ್ಲಿ ಇಪ್ಪತ್ತೈದರಿಂದ ಇಪ್ಪತ್ತೇಳು ತರಬೇತುದಾರರನ್ನು ಕೂಡ ಕೊಲ್ಲಲಾಗಿದೆ. ಫೆಬ್ರವರಿ ಹದಿನಾಲ್ಕರಂದು ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಜೈಶ್ ಇ ಮೊಹ್ಮದ್. ಈ ಗುಂಪಿನ ನೇತೃತ್ವ ವಹಿಸಿರುವ ಮಸೂದ್ ಅಜರ್ ನ ಭಾವಮೈದುನ ಕ್ಯಾಂಪ್ ನಿಗಾ ವಹಿಸುತ್ತಿದ್ದ.

      Air Strike

      ಮಂಗಳವಾರ ನಸುಕಿನ 3.30ರ ಹೊತ್ತಿಗೆ ಮಿರಾಜ್ 2000 ಯುದ್ಧ ವಿಮಾನ ದಾಳಿ ನಡೆಸಿದಾಗ ಕ್ಯಾಂಪ್ ನಲ್ಲಿದ್ದ ಎಲ್ಲರೂ ನಿದ್ರೆಯಲ್ಲಿದ್ದರು. ಭಾರತದಿಂದ ಹೆಚ್ಚೆಂದರೆ ಪಾಕ್ ಆಕ್ರಮಿತ ಕಾಶ್ಮೀರದ ಬಳಿಯಷ್ಟೇ ದಾಳಿ ಆಗಬಹುದು ಎಂಬ ಅಂದಾಜಿನಲ್ಲಿ ಪಾಕಿಸ್ತಾನ ಸೇನೆ ಇತ್ತು. ಇಷ್ಟು ಒಳ ಭಾಗಕ್ಕೆ ನುಗ್ಗಿ ಹೊಡೆಯಬಹುದು ಎಂಬ ಸಣ್ಣ ಗುಮಾನಿ ಕೂಡ ಇರಲಿಲ್ಲ ಎಂದು ಸರಕಾರಕ್ಕೆ ಹತ್ತಿರ ಇರುವ ಮೂಲಗಳು ತಿಳಿಸಿವೆ.

      Balakot Jaish camp was like ‘5-star resort’: Report


      ಒಮ್ಮೆಗೆ ಐನೂರರಿಂದ ಏಳು ನೂರು ಮಂದಿ ತಂಗಬಹುದಾದ, ಸ್ವಿಮ್ಮಿಂಗ್ ಪೂಲ್ ಇರುವ, ಅಡುಗೆಯವರು, ಸ್ವಚ್ಛತೆ ಮಾಡುವವರು ಹೀಗೆ ಸಕಲ ಸೌಕರ್ಯ ಇರುವ ಬಲಾಕೋಟ್ ಕ್ಯಾಂಪ್ ಗೆ ಐನೂರರಿಂದ ಏಳುನೂರು ಮಂದಿಯನ್ನು ಸ್ಥಳಾಂತರ ಮಾಡಲಾಗುತ್ತದೆ ಎಂಬ ಗುಪ್ತಚರ ಮಾಹಿತಿ ಭಾರತ ಸರಕಾರಕ್ಕೆ ಸಿಕ್ಕಿತ್ತು.

      Balakot Jaish camp was like ‘5-star resort’: Report

      ಯುದ್ಧ ವಿಮಾನವೂ ಸೇರಿ ಇತರ ವಿಮಾನಗಳನ್ನು ವೆಸ್ಟರ್ನ್ ಮತ್ತು ಸೆಂಟ್ರಲ್ ಕಮ್ಯಾಂಡ್ಸ್ ನಿಂದ ಏಕಕಾಲಕ್ಕೆ ಹೊರಡಿಸಲಾಗಿದೆ. ಎಲ್ಲಿಗೆ ಹೊರಡುತ್ತಿವೆ ಎಂದು ಪಾಕಿಸ್ತಾನದ ಸೇನೆ ಗೊಂದಲಕ್ಕೆ ಈಡಾಗುವಂತೆ ಮಾಡಲಾಗಿದೆ. ಸಣ್ಣ ಸಂಖ್ಯೆಯ ವಿಮಾನಗಳು ಬಲಾಕೋಟ್ ಗೆ ತೆರಳಿ, ಉಗ್ರರ ಮೇಲೆ ಬಾಂಬ್ ಸುರಿದಿವೆ ಎಂದು ಮೂಲಗಳು ಹೇಳಿವೆ. ಇನ್ನೂ ಕೆಲ ಮಾಹಿತಿ ಪ್ರಕಾರ, ದಾಳಿಗೆ ಹೊರಟವರಿಗೆ ಮೊದಲಿಗೆ ತಾವು ಬಲಾಕೋಟ್ ಗೆ ಹೋಗುತ್ತಿರುವುದು ಎಂಬ ಸಂಗತಿಯೇ ಗೊತ್ತಿರಲಿಲ್ಲ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+