ಗೂಗಲ್, ಮೈಕ್ರೊಸಾಫ್ಟ್ ಮುಳುಗಿಸಲು ಮುಂದಾದ ಎಲಾನ್ ಮಸ್ಕ್: ಏನಿದು ಬಿಗ್ ಫ್ಲ್ಯಾನ್?
ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರು ಹೊಸ ಯೋಜನೆಯೊಂದನ್ನು ರೂಪಿಸಲು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ತಂತ್ರಜ್ಞಾನಕ್ಕೆ ಸಂಬಂಧಿಸಿದ ಈ ಯೋಜನೆಯು ಗೂಗಲ್ ಹಾಗೂ ಮೈಕ್ರೊಸಾಪ್ಟ್‌ನಂತಹ ದೈತ್ಯ ಕಂಪನಿಗಳಿಗೆ ಸೆಡ್ಡು ಹೊಡೆಯುವುದು ಪಕ್ಕಾ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ. ಏನಿದು ಬಿಗ್ ಫ್ಲ್ಯಾನ್ ಎಂದು ಕೇಳುತ್ತೀರಾ. ಉತ್ತರ ಇಲ್ಲಿದೆ ಓದಿ.
ಹೌದು, ಎಲಾನ್ ಮಸ್ಕ್ ಅವರದ್ದು ತಂತ್ರಜ್ಞಾನದಲ್ಲಿ ಅತಿ ದೊಡ್ಡ ಹೆಸರು. ಅವರು ಒಡೆತನದ ಟೆಸ್ಲಾ ಕಂಪನಿಯು ಈಗಾಗಲೇ ಜಗತ್ತಿನಾದ್ಯಂತ ಹೆಸರು ಮಾಡಿದೆ. ಸಾಮಾಜಿಕ ಮಾಧ್ಯಮ ಟ್ವಿಟರ್ ಅನ್ನು ಕೊಂಡುಕೊಂಡಿರುವ ಮಸ್ಕ್, ಅದಕ್ಕೆ 'ಎಕ್ಸ್' ಎಂಬ ಹೆಸರಿಟ್ಟಿದ್ದಾರೆ. ಇದರಲ್ಲಿ ಹಲವಾರು ಬದಲಾವಣೆಗಳನ್ನು ತಂದು ಎಕ್ಸ್ ಅನ್ನು ಜನಪ್ರಿಯಗೊಳಿಸಿದ್ದಾರೆ. ಈಗ ಅವರು ತಮ್ಮ ತಂತ್ರಜ್ಞಾನದ ಸಾಮ್ರಾಜ್ಯವನ್ನು ಮತ್ತಷ್ಟು ಬೆಳೆಸಲು ಮುಂದಾಗಿದ್ದಾರೆ.

ಬರಲಿದೆಯಾ Xmail?: ಪ್ರಸ್ತುತ ಜಾಗತಿಕ ಮಾರುಕಟ್ಟೆಯನ್ನು Apple Mail, Gmail ಗಳು ಮುನ್ನಡೆಸುತ್ತಿವೆ. ಕಳೆದ ಸೆಪ್ಟೆಂಬರ್ ಡೇಟಾ ಪ್ರಕಾರ, ಶೇಕಡ 53.67ರಷ್ಟು ಮಾರುಕಟ್ಟೆ ಪಾಲನ್ನು Apple Mail ಹೊಂದಿದೆ. ಶೇಕಡ 30.70ರಷ್ಟು ಪಾಲನ್ನು Gmail ಹೊಂದಿದೆ. Outlook, Yahoo ಸೇರಿದಂತೆ ಹಲವು ಮೇಲ್ ಫ್ಲ್ಯಾಟ್‌ಪಾರ್ಮ್‌ಗಳು ಮಾರುಕಟ್ಟೆಯಲ್ಲಿ ಇದ್ದರೂ, ಅವುಗಳು ಕಡಿಮೆ ಪಾಲನ್ನು ಹೊಂದಿದೆ.
ಈಗ ಎಲಾನ್ ಮಸ್ಕ್ ಅವರು Xmail ಅನ್ನು ಪರಿಚಯಿಸುವ ಚಿಂತನೆ ರೂಪಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಸಾಮಾಜಿಕ ಮಾಧ್ಯಮ X ಅಡಿಯಲ್ಲಿ ಹೊಸ ಇಮೇಲ್ ಸೇವೆಯಾದ 'Xmail' ಅನ್ನು ಪರಿಚಯಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಡಾಡ್ಜ್ ಡಿಸೈನರ್ ಎಂಬ ಎಕ್ಸ್ ಬಳಕೆದಾರರ ಸಲಹೆಗೆ ಎಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದಾರೆ. 'ನಾವು ಮೇಲ್ ಸೇವೆಯನ್ನು ಆರಂಭಿಸಬೇಕಿದೆ. ಮಾಡಬೇಕಿರುವ ಕೆಲಸಗಳ ಪಟ್ಟಿಯಲ್ಲಿ ಇದು ಸಹ ಒಂದು ಎಂದು ಅವರು ತಿಳಿಸಿದ್ದಾರೆ.
ಒಂದು ವೇಳೆ ಎಲಾನ್ ಮಸ್ಕ್ ಅವರು ಮೇಲ್ ಸೇವೆಯನ್ನು ಆರಂಭಿಸಿದರೆ, ಈಗ ಜಾಗತಿಕವಾಗಿ ಬೆಳೆದಿರುವ ಕಂಪನಿಗಳಿಗೆ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಅದರಲ್ಲೂ Apple ಹಾಗೂ ಗೂಗಲ್ ಕಂಪನಿಗಳ ಮೇಲೆ 'ಎಕ್ಸ್ ಮೇಲ್' ಪರಿಣಾಮ ಬೀರುವ ಎಲ್ಲ ಲಕ್ಷಣಗಳು ಇವೆ ಎಂಬ ಮಾತುಗಳು ಕೇಳಿಬಂದಿವೆ.
ಬರಲಿದೆಯಾ xPhone?: ಈಗಾಗಲೇ Apple ಹಾಗೂ Google ಕಂಪನಿಗಳ ಮೊಬೈಲ್ ಪೋನ್‌ಗಳು ಮಾರುಕಟ್ಟೆಗಳಲ್ಲಿ ಜನಪ್ರಿಯವಾಗಿದೆ. ಇದೇ ರೀತಿ ಎಲಾನ್ ಮಸ್ಕ್ ಅವರು xPhone ಹೊರತರುವ ಆಲೋಚನೆಯಲ್ಲಿದ್ದಾರೆ ಎಂದು ವರದಿಗಳಾಗಿವೆ. ಒಂದು ವೇಳೆ, ಎಲಾನ್ ಮಸ್ಕ್ ಅವರು ಫೋನ್ ಹಾಗೂ ಮೇಲ್ ಸೇವಾ ಕ್ಷೇತ್ರಗಳಿಗೆ ಎಂಟ್ರಿ ಕೊಟ್ಟರೆ, ಸಂವಹನ ಕ್ಷೇತ್ರದಲ್ಲಿ ದೊಟ್ಟ ಮಟ್ಟದ ಬದಲಾವಣೆಗಳಾಗುವುದು ಪಕ್ಕಾ ಎಂದು ಹೇಳಲಾಗುತ್ತಿದೆ.












Click it and Unblock the Notifications