• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇವರೇ ಅಯೋಧ್ಯೆ ವಿವಾದದ ಹಿಂದಿನ ಸೂತ್ರದಾರ!

|

ದೆಹಲಿ, ನವೆಂಬರ್.10: ಅಯೋಧ್ಯೆಯ ರಾಮ ಮಂದಿರ ಹಾಗೂ ಬಾಬ್ರಿ ಮಸೀದಿ ವಿವಾದಕ್ಕೆ ಸುಪ್ರೀಂಕೋರ್ಟ್ ಇತಿಶ್ರೀ ಹಾಡಿದೆ. ದಶಕಗಳ ಹೋರಾಟ, ಗಲಭೆ, ಗೊಂದಲಗಳಿಗೆಲ್ಲ ಮುಕ್ತಿ ಸಿಕ್ಕಿದೆ. ಹಿಂದೂ-ಮುಸ್ಲಿಂ ಭಾಯಿ ಭಾಯಿ ಎನ್ನುವಂತಾ ಐತಿಹಾಸಿಕ ತೀರ್ಪನ್ನು ಸುಪ್ರೀಂಕೋರ್ಟ್ ಹೊರಡಿಸಿದೆ.

ರಾಮ ಮಂದಿರ ಮತ್ತು ಬಾಬ್ರಿ ಮಸೀದಿ ವಿವಾದ ಇಂದು ನಿನ್ನೆಯದಲ್ಲ. ಇದಕ್ಕೆ ದಶಕಗಳ ಇತಿಹಾಸವಿದೆ. ಎರಡು ಕೋಮುಗಳ ನಡುವೆ ನಡೆದ ಜಿದ್ದಾಜಿದ್ದಿನ ಹೋರಾಟದ ಚರಿತ್ರೆಯಿದೆ. ಅಯೋಧ್ಯೆ ಶ್ರೀರಾಮಚಂದ್ರನ ಜನ್ಮಸ್ಥಳ ಎಂಬುದು ಕೋಟಿ ಕೋಟಿ ಜನರ ನಂಬಿಕೆ ಎಂಬುದನ್ನು ಕೋರ್ಟ್ ಹೇಳಿದೆ. ಆದರೆ, ಇದಕ್ಕೂ ಮೊದಲು ಅಯೋಧ್ಯೆ ರಾಮ ಮಂದಿರ ವಿಚಾರ ರಾಜಕಾರಣಿಯೊಬ್ಬರ ರಾಜಕೀಯ ದಾಳವಾಗಿತ್ತು ಎನ್ನಲಾಗಿದೆ. ಎರಡು ಕೋಮುಗಳ ನಡುವೆ ಕಿತ್ತಾಟದ ಹಿಂದೆ ಈ ರಾಜಕೀಯ ವ್ಯಕ್ತಿಯ ತಂತ್ರಗಾರಿಕೆ ಇತ್ತು ಅಂತಾ ವರದಿಯೊಂದು ಹೇಳಿದೆ. ಇದು ರಾಜ್ಯದ ಒಂದು ಮೂಲೆಯಲ್ಲಿದ್ದ ರಾಜಕಾರಣಿಯ ಕಥೆಯಲ್ಲ. ಬದಲಿಗೆ ದೇಶವನ್ನೇ ಆಳಿದ ಮಾಜಿ ಪ್ರಧಾನಮಂತ್ರಿಯ ಕುರಿತ ಒಂದು ವರದಿ.

ಎರಡು ಕೋಮುಗಳ ನಡುವಿನ ಗಲಾಟೆಗೆ ಅಂದು ಉಪ್ಪು-ಖಾರ!

ಎರಡು ಕೋಮುಗಳ ನಡುವಿನ ಗಲಾಟೆಗೆ ಅಂದು ಉಪ್ಪು-ಖಾರ!

ಈಗ ಅಯೋಧ್ಯೆಯಲ್ಲಿನ ಚಿತ್ರಣ ಬದಲಾಗಿದೆ. ಸುಪ್ರೀಂಕೋರ್ಟ್ ತೀರ್ಪಿನಿಂದ ಭಾರತದ ಹಿಂದೂ-ಮುಸ್ಲಿಂರ ನಡುವೆ ಶಾಂತಿ-ಸೌಹಾರ್ದತೆ ಹಾಗೂ ಭಾವೈಕ್ಯತೆಯ ಭಾವ ಮೂಡಿದೆ. ಭಾರತೀಯರೆಲ್ಲ ಒಂದೇ ಎಂದ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರಿ ಹೇಳಲಾಗಿದೆ. ಆದರೆ, ದಶಕಗಳ ಹಿಂದೆ ಎರಡು ಕೋಮುಗಳ ನಡುವೆ ಇದೇ ವಿಚಾರಕ್ಕೆ ಗಲಾಟೆ ಆಗಿತ್ತು. ಇದಕ್ಕೆಲ್ಲ ಅಂದು ಮಾಜಿ ಪ್ರಧಾನಿಗಳು ತೆಗೆದುಕೊಂಡ ಒಂದೇ ಒಂದು ನಿರ್ಧಾರವೇ ಕಾರಣವಾಗಿತ್ತು.

ಸುಪ್ರೀಂ ತೀರ್ಪು: ಅಯೋಧ್ಯಾ ಭೂ ವ್ಯಾಜ್ಯ ಅಂತ್ಯ, ಮಂದಿರ-ಮಸೀದಿಗೆ ಹಂಚಿಕೆ

ಅನುಕಂಪದ ಅಲೆಯಲ್ಲಿ ಕಾಂಗ್ರೆಸ್ ನಾಯಕನಿಗೆ ಸಿಕ್ಕಿತ್ತು ಬಹುಮತ!

ಅನುಕಂಪದ ಅಲೆಯಲ್ಲಿ ಕಾಂಗ್ರೆಸ್ ನಾಯಕನಿಗೆ ಸಿಕ್ಕಿತ್ತು ಬಹುಮತ!

1984ರಲ್ಲಿ ಇಂದಿರಾ ಗಾಂಧಿ ಹತ್ಯೆಯಾಯಿತು. ಅದಾಗಿ ಕೆಲ ವಾರಗಳಲ್ಲೇ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಪ್ರಚಂಡ ಬಹುಮತ ಸಿಕ್ಕಿತು. ಯುಪಿಎ ಮೈತ್ರಿಕೂಟ 414 ಸ್ಥಾನಗಳಲ್ಲಿ ಗೆಲುವು ದಾಖಲಿಸಿತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುತ್ರ ರಾಜೀವ್ ಗಾಂಧಿ, ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಇದೇ ಅವಧಿಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು ಅದೊಂದು ವಿಚ್ಛೇದನ ಪ್ರಕರಣ.

ರಾಜೀವ್ ಗಾಂಧಿ ವಿರುದ್ಧ ಕೆರಳಿದ ಮುಸ್ಲಿಮರು!

ರಾಜೀವ್ ಗಾಂಧಿ ವಿರುದ್ಧ ಕೆರಳಿದ ಮುಸ್ಲಿಮರು!

1984 ರಿಂದ 1989 ಅವಧಿಯಲ್ಲಿ ರಾಜೀವ್ ಗಾಂಧಿ ಪ್ರಧಾನಮಂತ್ರಿಯಾಗಿ ಆಡಳಿತ ನಡೆಸಿದರು. ಈ ಅವಧಿಯಲ್ಲಿ ಅಂದರೆ 1985ರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದೇ ಮಧ್ಯಪ್ರದೇಶ ಮೂಲದ ಮಹಿಳೆ ಶಹಾ ಬಾನು ವಿಚ್ಛೇದನ ಪ್ರಕರಣ. ಪತಿಯಿಂದ ವಿಚ್ಛೇದನ ಪಡೆದ ಶಹಾ ಬಾನುಗೆ ಜೀವನಾಂಶ ನೀಡುವಂತೆ ಸ್ಥಳೀಯ ಹಾಗೂ ಹೈಕೋರ್ಟ್ ತೀರ್ಪು ನೀಡುತ್ತದೆ. ಈ ಆದೇಶವನ್ನು ಪ್ರಶ್ನಿಸಿದ ಪತಿ ಮೊಹಮ್ಮದ್ ಅಹ್ಮದ್ ಖಾನ್, ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತಾರೆ.

ಮುಸ್ಲಿಂ ಕಾನೂನಿನ ಪ್ರಕಾರ 3 ತಿಂಗಳಷ್ಟೇ ಜೀವನಾಂಶ ನೀಡಬೇಕು:

ತಾವೊಬ್ಬ ಮುಸ್ಲಿಂ ಆಗಿರುವುದರಿಂದ ತಮಗೆ ಮುಸ್ಲಿಂ ಕಾನೂನು ಅನ್ವಯವಾಗುತ್ತದೆ. ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಇದ್ದತ್ ಅವಧಿ, ಅಂದರೆ ವಿಚ್ಛೇದನ ನೀಡಿ ಮೂರು ತಿಂಗಳವರೆಗೂ ಅಷ್ಟೇ ಪತ್ನಿಗೆ ಜೀವನಾಂಶ ನೀಡಬೇಕು. ಮದುವೆ ಸಂದರ್ಭದಲ್ಲಿ ನೀಡಿದ ಮೆಹರ್ ಎಂದು ಕರೆಯುವ ವರದಕ್ಷಿಣೆಯನ್ನು ವಾಪಸ್ ನೀಡಿದ್ದಾಗಿದೆ. ಇನ್ನು, ಪತ್ನಿಯನ್ನು ಸಲುಹುವ ಜವಾಬ್ದಾರಿ ತಮ್ಮ ಮೇಲಿಲ್ಲ ಎಂದು ಮೊಹಮ್ಮದ್ ಅಹ್ಮದ್ ಖಾನ್ ವಾದಿಸಿದ್ದನು. ಆದರೆ, ಎರಡು ಕಡೆ ವಾದವನ್ನು ಆಲಿಸಿದ ಸುಪ್ರೀಂಕೋರ್ಟ್ ಕೂಡಾ ಶಹಾ ಬಾನು ಮರು ಮದುವೆ ಆಗುವವರೆಗೂ ಜೀವನಾಂಶ ನೀಡುವಂತೆ ಆದೇಶ ಹೊರಡಿಸುತ್ತದೆ.

ಅಯೋಧ್ಯಾ ಪ್ರಕರಣ Timeline : 1528 ರಿಂದ 2019ರ ತನಕ ಕಾಲಾನುಕ್ರಮದಲ್ಲಿ

ಹೋರಾಟಕ್ಕೆ ಮಣಿದು ಕಾನೂನನ್ನೇ ಬದಲಿಸಿದ ರಾಜೀವ್ ಗಾಂಧಿ

ಹೋರಾಟಕ್ಕೆ ಮಣಿದು ಕಾನೂನನ್ನೇ ಬದಲಿಸಿದ ರಾಜೀವ್ ಗಾಂಧಿ

1985ರಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ವಿರೋಧಿಸಿ ದೇಶಾದ್ಯಂತ ಮುಸ್ಲಿಂ ಸಮುದಾಯಗಳು, ಮೌಲ್ವಿಗಳು ಪ್ರತಿಭಟನೆಗೆ ಇಳಿದರು. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಮುಸ್ಲಿಂರ ಹೋರಾಟಕ್ಕೆ ಮಣಿದ ರಾಜೀವ್ ಗಾಂಧಿ, ಸುಪ್ರೀಂಕೋರ್ಟ್ ಆದೇಶವನ್ನೇ ತಿರುವು-ಮುರುವು ಮಾಡುವಂತಾ ಕಾಯ್ದೆಯೊಂದನ್ನು ಜಾರಿಗೊಳಿಸಿದರು. 1986ರಲ್ಲಿ ಮುಸ್ಲಿಂ ಮಹಿಳೆಯರ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಇದರ ಪ್ರಕಾರ ತಲಾಖ್ ನೀಡಿದ ಪತಿ, ತನ್ನ ಪತ್ನಿಗೆ ಮೂರು ತಿಂಗಳ ಅವಧಿವರೆಗೂ ಜೀವನಾಂಶವನ್ನು ನೀಡಬೇಕು. ನಂತರದಲ್ಲಿ ಆಕೆಯನ್ನು ಅವರ ಮನೆಯವರೇ ನೋಡಿಕೊಳ್ಳಬೇಕು ಎಂಬ ಅಂಶ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ಮುಸ್ಲಿಮರ ಪಕ್ಷಪಾತಿ ಹಣೆಪಟ್ಟಿ ಕಳಚಲು ನಡೆದಿತ್ತಾ ಕುತಂತ್ರ?

ಮುಸ್ಲಿಮರ ಪಕ್ಷಪಾತಿ ಹಣೆಪಟ್ಟಿ ಕಳಚಲು ನಡೆದಿತ್ತಾ ಕುತಂತ್ರ?

ಮುಸ್ಲಿಂ ಮಹಿಳೆಯರ ರಕ್ಷಣಾ ಕಾಯ್ದೆ ಜಾರಿಯಾಗುತ್ತಿದ್ದಂತೆ ರಾಜೀವ್ ಗಾಂಧಿ ವಿರುದ್ಧ ಮತ್ತೊಂದು ರೀತಿ ಹೋರಾಟಗಳು ಶುರುವಾದವು. ರಾಜೀವ್ ಗಾಂಧಿ ಮುಸ್ಲಿಮರ ಪಕ್ಷಪಾತಿ ಎಂಬ ಆರೋಪಗಳು ಮೇಲಿಂದ ಮೇಲೆ ಕೇಳಿ ಬಂದವು. ಈ ದೂಷಣೆಯಿಂದ ಪಾರಾಗಲು ಬಳಸಿಕೊಂಡ ಅಸ್ತ್ರವೇ ಅಯೋಧ್ಯೆಯ ರಾಮಮಂದಿರ ವಿವಾದ.

ಇದರ ಹಿಂದಿತ್ತಾ ರಾಜೀವ್ ಗಾಂಧಿ ಮಾಸ್ಟರ್ ಪ್ಲ್ಯಾನ್?

ಇದರ ಹಿಂದಿತ್ತಾ ರಾಜೀವ್ ಗಾಂಧಿ ಮಾಸ್ಟರ್ ಪ್ಲ್ಯಾನ್?

ಅಸಲಿಗೆ 1949ರಲ್ಲೇ ಅಯೋಧ್ಯೆಯಲ್ಲಿರುವ ಬಾಬ್ರಿ ಮಸೀದಿಯ ಸ್ಥಳವೇ ಶ್ರೀರಾಮದ ಜನ್ಮಸ್ಥಳ ಎಂದು ಹಿಂದೂಗಳು ನಂಬಿದ್ದರು. ಅದಕ್ಕೆ ಸಾಕ್ಷಿ ಎಂಬಂತೆ ಕೆಲವು ವಿಗ್ರಹಗಳು ಅಯೋಧ್ಯೆಯಲ್ಲಿ ಪತ್ತೆಯಾಗಿದ್ದವು ಎನ್ನಲಾಗಿತ್ತು. ಅಂದು ವಿವಾದಕ್ಕೆ ಎಡೆ ಮಾಡಿಕೊಡಬಾರದು ಎಂಬ ಕಾರಣಕ್ಕೆ 1949ರಲ್ಲಿ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರೂ, ವಿವಾದಿತ ಮಸೀದಿಗೆ ಬಾಗಿಲು ಮುಚ್ಚಿಸಿದ್ದರು. ಆದರೆ, 1986ರಲ್ಲಿ ಮುಸ್ಲಿಮರ ಪಕ್ಷಪಾತಿ ಎಂಬ ಆರೋಪದಿಂದ ತಪ್ಪಿಸಿಕೊಳ್ಳಲು ರಾಜೀವ್ ಗಾಂಧಿ ಮತ್ತೆ ರಾಮ ಮಂದಿರ ವಿಚಾರವನ್ನು ಅಸ್ತ್ರವಾಗಿ ಬಳಸಿಕೊಂಡರು.

ಅಯೋಧ್ಯೆ ಕೇಸ್ ನಂತರ ಮತ್ತೊಂದು ಮಹಾ ತೀರ್ಪಿಗೆ ಸಜ್ಜಾಗಲಿದೆ ಲಕ್ನೋ

ರಾಮಭಕ್ತರೆಲ್ಲ ಇಟ್ಟಿಗೆ ತನ್ನಿ ಎಂದು ಕರೆ ಕೊಟ್ಟ ಎಲ್.ಕೆ.ಅಡ್ವಾಣಿ

ರಾಮಭಕ್ತರೆಲ್ಲ ಇಟ್ಟಿಗೆ ತನ್ನಿ ಎಂದು ಕರೆ ಕೊಟ್ಟ ಎಲ್.ಕೆ.ಅಡ್ವಾಣಿ

ಅಯೋಧ್ಯೆಯಲ್ಲಿನ ವಿವಾದಿತ ಪ್ರದೇಶವೇ ಶ್ರೀರಾಮನ ಜನ್ಮಸ್ಥಳ ಎಂದು ಹಿಂದೂಗಳು ಬಲವಾಗಿ ನಂಬಿದ್ದರು. ಇದೇ ವೇಳೆ ಹಿಂದೂ ಸಂಘಟನೆಗಳು ಹಾಗೂ ವಿಶ್ವ ಹಿಂದೂ ಪರಿಷತ್, ರಾಮ ಮಂದಿರ ನಿರ್ಮಾಣಕ್ಕಾಗಿ ಹಿಂದೂಗಳು ಒಂದಾಗುವಂತೆ ಕರೆ ಕೊಟ್ಟಿತು. ರಥಯಾತ್ರೆ ಹೊರಡಿಸಿದ ಬಿಜೆಪಿ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ, ರಾಮ ಮಂದಿರ ನಿರ್ಮಾಣಕ್ಕಾಗಿ ಇಟ್ಟಿಗೆಗಳನ್ನು ತೆಗೆದುಕೊಂಡು ಬನ್ನಿ ಎಂದು ದೇಶದ ಹಿಂದೂಗಳಿಗೆ ಕರೆ ನೀಡಿದರು. ಇದರ ಮಧ್ಯೆ ದೂರದರ್ಶನ ವಾಹಿನಿಯಲ್ಲಿ ಪ್ರತಿ ಭಾನುವಾರ ಪ್ರಸಾರವಾಗುತ್ತಿದ್ದ ರಾಮಾಯಣ ಧಾರಾವಾಹಿ ಹಿಂದೂಗಳ ಮನಸ್ಸಿನಲ್ಲಿ ರಾಮಭಕ್ತಿಯನ್ನು ಹೆಚ್ಚಿಸಿತು. ರಾಮ ಜನ್ಮಭೂಮಿಯಲ್ಲಿ ದೇವಾಲಯ ನಿರ್ಮಿಸಲೇಬೇಕು ಎಂಬ ಹಠ ಹಿಂದೂಗಳಲ್ಲಿ ಬೇರೂರಿತ್ತು.

ಅಯೋಧ್ಯಾ ತೀರ್ಪು: ಗಮನಿಸಬೇಕಾದ ಕುತೂಹಲಕಾರಿ 10 ಸಂಗತಿಗಳು

ಶ್ರೀಲಂಕಾದ ಎಲ್ ಟಿಟಿಇ ಉಗ್ರರಿಂದ ರಾಜೀವ್ ಗಾಂಧಿ ಹತ್ಯೆ

ಶ್ರೀಲಂಕಾದ ಎಲ್ ಟಿಟಿಇ ಉಗ್ರರಿಂದ ರಾಜೀವ್ ಗಾಂಧಿ ಹತ್ಯೆ

ಅಯೋಧ್ಯೆ ಅಸ್ತ್ರವನ್ನು ಬಳಸಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅದರಲ್ಲಿ ಯಶಸ್ವಿಯಾದರು. 1991ರ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಇನ್ನೇನು ಗದ್ದುಗೆ ಹಿಡಿಯುತ್ತೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ತಮಿಳುನಾಡಿನ ಪೆರಂಬೂರ್ ನಲ್ಲಿ 1991ರ ಮೇ 21ರಂದು ಪ್ರಚಾರಕ್ಕೆ ತೆರಳಿದ್ದ ವೇಳೆ ರಾಜೀವ್ ಗಾಂಧಿ, ಎಲ್ ಟಿಟಿಇ ಉಗ್ರರ ಆತ್ಮಾಹುತಿ ದಾಳಿಗೆ ಬಲಿಯಾದರು. ಶ್ರೀಲಂಕಾದ ಉಗ್ರ ಸಂಘಟನೆ ಎಲ್ ಟಿಟಿಇ ದಾಳಿಯ ಹೊಣೆ ಹೊತ್ತುಕೊಂಡಿತು.

ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿಯ ಶಪಥ

ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿಯ ಶಪಥ

1985ರ ಲೋಕಸಭಾ ಚುನಾವಣೆಯಲ್ಲಿ ಕೇವಲ ಎರಡೇ ಎರಡು ಸ್ಥಾನಗಳನ್ನು ಗೆದ್ದಿದ್ದ ಭಾರತೀಯ ಜನತಾ ಪಕ್ಷ, ಅಯೋಧ್ಯೆಯ ರಾಮ ಮಂದಿರ ವಿಚಾರವನ್ನೇ ಅಸ್ತ್ರವಾಗಿ ಬಳಸಿಕೊಂಡಿತು. ಅದರ ಪರಿಣಾಮದಿಂದ 1991ರಲ್ಲಿ ಬಿಜೆಪಿ 120 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತು. ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲೂ ಕೂಡಾ ಬಿಜೆಪಿಗೆ ರಾಮ ಮಂದಿರ ನಿರ್ಮಾಣ ವಿಚಾರವೇ ಮೂಲಮಂತ್ರವಾಗಿತ್ತು. ಅದರ ಪ್ರಭಾವದಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ, ಉತ್ತರ ಪ್ರದೇಶದಲ್ಲೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.

2024ರಲ್ಲಿ ಮಂದಿರ ನಿರ್ಮಾಣ ಪೂರ್ಣ, ರಾಮ ದರ್ಶನ ಪ್ರಾಪ್ತಿ

ಭಾರತಾಂಬೆ ಮಕ್ಕಳು ಶಾಂತಿ-ಸೌಹಾರ್ದತೆಯ ಸಂಕೇತ

ಭಾರತಾಂಬೆ ಮಕ್ಕಳು ಶಾಂತಿ-ಸೌಹಾರ್ದತೆಯ ಸಂಕೇತ

ಒಟ್ಟಾರೆಯಾಗಿ ತಮಗೆ ಅಂಟಿದ್ದ ಹಣೆಪಟ್ಟಿ ಕಳಚಿಕೊಳ್ಳಲು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಆರಂಭಿಸಿದ ರಾಮ ಮಂದಿರ ನಿರ್ಮಾಣ ವಿಚಾರಕ್ಕೆ ಈಗ ಮುಕ್ತಿ ಸಿಕ್ಕಿದೆ. ಒಂದು ಕಾಲದಲ್ಲಿ ಗದ್ದಲ, ಗಲಾಟೆ, ಘರ್ಷಣೆಗೆ ಕಾರಣವಾಗಿದ್ದ ವಿಷಯದಲ್ಲಿ ಇಂದು ಭಾರತ ಮತ್ತು ಭಾರತೀಯರೆಲ್ಲ ಒಂದಾಗಿದ್ದಾರೆ. ಸುಪ್ರೀಂಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿಗೆ ಸರ್ವಾನುಮತಗಳ ಒಪ್ಪಿಗೆ ನೀಡಿದದ್ದಾರೆ. ಆ ಮೂಲಕ ಭಾರತೀಯರು ಶಾಂತಿಪ್ರಿಯರು ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರಿ ಹೇಳಿದ್ದಾರೆ.

English summary
Ayodhya is Tool For Political Game. This Man Open The Ram Mandir Issue In 1986.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X