ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ABP-C Voter Opinion Poll: ಎನ್‌ಡಿಎಗೆ ಮತ್ತೆ ಭರ್ಜರಿ ಗೆಲುವು

|
Google Oneindia Kannada News

ನವದೆಹಲಿ, ಜನವರಿ 18: ಈಶಾನ್ಯ ರಾಜ್ಯಗಳಲ್ಲಿ ಒಂದಾದ ಅಸ್ಸಾಂನಲ್ಲಿ ವಿಧಾನಸಭೆ ಚುನಾವಣೆ ಶೀಘ್ರದಲ್ಲಿಯೇ ನಡೆಯಲಿದೆ. 126 ಸೀಟುಗಳಿರುವ ಇಲ್ಲಿನ ವಿಧಾನಸಭೆಯಲ್ಲಿ ಪ್ರಸ್ತುತ ಸರ್ಬಾನಂದ ಸೋನೊವಾಲ್ ಅವರ ನೇತೃತ್ವ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮೊದಲ ಪ್ರಯೋಗಕ್ಕೆ ಒಳಪಟ್ಟ ಅಸ್ಸಾಂನಲ್ಲಿ ಬಿಜೆಪಿಯನ್ನು ಜನರು ಯಾವ ರೀತಿ ಪರಿಗಣಿಸಿದ್ದಾರೆ ಎನ್ನುವುದಕ್ಕೆ ಈ ಚುನಾವಣೆ ಉತ್ತರ ನೀಡಲಿದೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ 89 ಸೀಟುಗಳಲ್ಲಿ ಸ್ಪರ್ಧಿಸಿತ್ತು. ಅದರಲ್ಲಿ 60 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಸರ್ಕಾರ ರಚಿಸಿತ್ತು. ಸಿಪಿಐ 15 ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ, ಒಬ್ಬರೂ ಗೆಲುವು ಕಂಡಿರಲಿಲ್ಲ. 122 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ಗೆ ಸಿಕ್ಕಿದ್ದು 26 ಸೀಟುಗಳು ಮಾತ್ರ. ಅಸ್ಸಾಂ ಗಣ ಪರಿಷದ್ (ಎಜಿಪಿ) 30 ಸೀಟುಗಳ ಪೈಕಿ 14ರಲ್ಲಿ ಜಯಗಳಿಸಿತ್ತು. ಇನ್ನು ಎಐಯುಡಿಎಫ್ 74 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಇಳಿಸಿ 13ರಲ್ಲಿ ಯಶ ಕಂಡಿತ್ತು. ಬಿಒಪಿಎಫ್ 13 ಕಡೆ ಅಭ್ಯರ್ಥಿಗಳನ್ನು ಇಳಿಸಿದ್ದು, ಅವರಲ್ಲಿ 12 ಮಂದಿ ಗೆದ್ದು ಗಮನ ಸೆಳೆದಿದ್ದರು.

ಅಸ್ಸಾಂ; ಬಿಟಿಸಿ ಚುನಾವಣೆ, ಮೈತ್ರಿಗೆ ಮುಂದಾದ ಬಿಜೆಪಿ!ಅಸ್ಸಾಂ; ಬಿಟಿಸಿ ಚುನಾವಣೆ, ಮೈತ್ರಿಗೆ ಮುಂದಾದ ಬಿಜೆಪಿ!

ಈ ಬಾರಿ ಎಬಿಪಿ ನ್ಯೂಸ್-ಸಿ ವೋಟರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಜನರ ಅಭಿಪ್ರಾಯ ಹೇಗಿದೆ ಎನ್ನುವುದು ಬಹಿರಂಗವಾಗಿದೆ. ಮುಂದೆ ಓದಿ.

ಯಾವ ಪಕ್ಷಕ್ಕೆ ಎಷ್ಟು ಸೀಟು?

ಯಾವ ಪಕ್ಷಕ್ಕೆ ಎಷ್ಟು ಸೀಟು?

ಎನ್‌ಡಿಎ: 73-81

ಯುಪಿಎ: 36-44

ಎಐಡಿಯುಎಫ್: 5-9

ಇತರೆ: 0-4

ಮುಖ್ಯಮಂತ್ರಿ ಆಡಳಿತ ಎಷ್ಟು ತೃಪ್ತಿಕರ

ಮುಖ್ಯಮಂತ್ರಿ ಆಡಳಿತ ಎಷ್ಟು ತೃಪ್ತಿಕರ

ತುಂಬಾ ತೃಪ್ತಿಕರ: 35%

ತೃಪ್ತಿಕರ: 31%

ಅತೃಪ್ತಿಕರ: 22%

ಹೇಳಲು ಅಸಾಧ್ಯ: 12%

ಮೋದಿ ಕಾರ್ಯವೈಖರಿ ಎಷ್ಟು ತೃಪ್ತಿಕರ?

ಮೋದಿ ಕಾರ್ಯವೈಖರಿ ಎಷ್ಟು ತೃಪ್ತಿಕರ?

ತುಂಬಾ ತೃಪ್ತಿಕರ: 33

ತೃಪ್ತಿಕರ: 37%

ಅತೃಪ್ತಿಕರ: 16%

ಹೇಳಲು ಅಸಾಧ್ಯ: 14%

ಕೇಂದ್ರ ಸರ್ಕಾರದ ಆಡಳಿತ ಸಮಾಧಾನಕರವೇ?

ಕೇಂದ್ರ ಸರ್ಕಾರದ ಆಡಳಿತ ಸಮಾಧಾನಕರವೇ?

ತುಂಬಾ ತೃಪ್ತಿಕರ: 25%

ತೃಪ್ತಿಕರ: 43%

ಅತೃಪ್ತಿಕರ: 20%

ಹೇಳಲು ಅಸಾಧ್ಯ: 12%

English summary
Assam Assembly Election 2021: ABP News and C Voter Opinion Poll has predicted BJP lead NDA will regain power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X