ತಪ್ಪಾದ ಸಮಯದಲ್ಲಿ ಗ್ರೀನ್ ಟೀ ಕುಡಿಯುತ್ತಿದ್ದೀರಾ? ಇದನ್ನು ನೋಡಿ
ಇತ್ತೀಚೆಗೆ ಹಸಿರು ಚಹಾವು ಅದರ ವಿವಿಧ ಆರೋಗ್ಯ ಪ್ರಯೋಜನಗಳಿಗಾಗಿ ಸಾಕಷ್ಟು ಮನ್ನಣೆಯನ್ನು ಗಳಿಸಿದೆ. ಕೆಫೀನ್ ಮತ್ತು ಸಕ್ಕರೆ ಭರಿತ ಚಹಾ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಇವುಗಳಲ್ಲಿ ಹಸಿರು ಚಹಾ ಅಥವಾ ಗ್ರೀನ್ ಟೀ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ ತೂಕ ಕೂಡ ಕಡಿಮೆ ಮಾಡುತ್ತದೆ. ಆದರೆ ನೀವು ಹಸಿರು ಚಹಾದ ಸಂಪೂರ್ಣ ಪ್ರಯೋಜನಗಳನ್ನು ಪಡೆದುಕೊಳ್ಳಲು ಸರಿಯಾದ ಸಮಯದಲ್ಲಿ ಅದರ ಸೇವನೆ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಕಪ್ ಹಸಿರು ಚಹಾ ಯಾವುದೇ ಪ್ರಯೋಜನೆಯನ್ನು ನೀಡುವುದಿಲ್ಲ.
ಹಣ್ಣುಗಳು ಮತ್ತು ಕಾರ್ಬೋಹೈಡ್ರೇಟ್ ಭರಿತ ಊಟಗಳಂತಹ ಇತರ ಆಹಾರಗಳಂತೆ, ಸರಿಯಾದ ಸಮಯದಲ್ಲಿ ಸೇವಿಸಿದಾಗ ಹಸಿರು ಚಹಾವು ಅದರ ಪ್ರಯೋಜನಗಳನ್ನು ನೀಡುತ್ತದೆ. ತಪ್ಪಾದ ಸಮಯದಲ್ಲಿ ಹಸಿರು ಚಹಾವನ್ನು ಸೇವಿಸುವುದರಿಂದ ಅದರ ಎಲ್ಲಾ ಪ್ರಯೋಜನಗಳು ಪಡೆಯಲು ಸಾಧ್ಯವಾಗುವುದಿಲ್ಲ. ಇದು ನಿಮಗೆ ಆಶ್ಚರ್ಯವೆನಿಸಿದರೂ ನಿಜ. ಆಹಾರತಜ್ಞ ಆಕಾಂಷಾ ಪ್ರಕಾರ, ಸರಿಯಾದ ಸಮಯದಲ್ಲಿ ನಿಮ್ಮ ಆಹಾರದಲ್ಲಿ ಗಿಡಮೂಲಿಕೆಗಳನ್ನು ಹೊಂದಿರುವುದು ಮುಖ್ಯ ಮತ್ತು ದಿನದ ಕೆಲವು ಸಮಯಗಳಲ್ಲಿ ಇದನ್ನು ತ್ಯಜಿಸಬೇಕು.

ಖಾಲಿ ಹೊಟ್ಟೆ ಹಸಿರು ಚಾಹಾ ಸೇವಿಸಲು ಆರೋಗ್ಯಕರವೇ?
ಬೆಳಗ್ಗೆ ಖಾಲಿ ಹೊಟ್ಟೆಗೆ ಹಸಿರು ಚಾಹಾ ಸೇವಿಸಲು ಆರೋಗ್ಯಕರ ಆಯ್ಕೆ ಎಂದು ಭಾವಿಸಿ ಸಾಮಾನ್ಯ ಚಹಾದ ಬದಲಿಗೆ ಹಸಿರು ಚಹಾದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುತ್ತೀರಾ? ಇದು ಸರಿಯಾದ ಮಾರ್ಗವಲ್ಲ. ನೀವು ಖಾಲಿ ಹೊಟ್ಟೆಯಲ್ಲಿ ಹಸಿರು ಚಹಾವನ್ನು ಸೇವಿಸಿದಾಗ, ಅದು ನಿರ್ಜಲೀಕರಣಕ್ಕೆ ಕಾರಣವಾಗಬಹುದು ಮತ್ತು ಗ್ಯಾಸ್ಟ್ರಿಕ್ ಆಮ್ಲದ ಬಿಡುಗಡೆಯನ್ನು ಉತ್ತೇಜಿಸುತ್ತದೆ. ಇದು ಹೊಟ್ಟೆಯ ಅಸಮಾಧಾನ ಅಥವಾ ಹುಣ್ಣುಗಳಿಗೆ ಕಾರಣವಾಗಬಹುದು.

ಹಸಿರು ಚಹಾ ಕುಡಿಯುವ ಪ್ರಕ್ರಿಯೆ
ಊಟದ ನಂತರ ಒಂದು ಕಪ್ ಹಸಿರು ಚಹಾವನ್ನು ಸೇವಿಸುವುದರಿಂದ ತಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ಊಟದ ನಂತರವಷ್ಟೇ ಹಸಿರು ಚಹಾವನ್ನು ಕುಡಿಯುವುದು ಈ ಪ್ರಕ್ರಿಯೆಗೆ ಹಾನಿ ಮಾಡುತ್ತದೆ. ನಿಮ್ಮ ಆಹಾರ ಸೇವನೆಯ ಕೊಂಚ ಸಮಯದ ಬಳಿಕ ಗ್ರೀನ್ ಟೀಯನ್ನು ಸೇವಿಸಬೇಕು. ಇದರಿಂದ ಜೀರ್ಣಕ್ರಿಗೆ ಸಹಕಾರಿಯಾಗಬಹುದು.

ನಿದ್ರೆಗೆ ಅಡ್ಡಿ, ಒತ್ತಡ ಹೆಚ್ಚಳ
ಅನೇಕರು ಲೇಟ್ ನೈಟ್ ಹಸಿರು ಚಹಾವನ್ನು ಕುಡಿಯಲು ಬಯಸುತ್ತಾರೆ. ನೀವು ಇದನ್ನು ಮಾಡಿದರೆ, ಈ ದಿನಚರಿಯು ನಿಮ್ಮ ನಿದ್ರೆಯ ಮಾದರಿಗೆ ಅಡ್ಡಿಪಡಿಸುತ್ತದೆ ಮತ್ತು ಪ್ರತಿಯಾಗಿ ನಿಮ್ಮ ಒತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ನೀವು ತಿಳಿದಿರಬೇಕು. ಹೀಗಾಗಿ ಲೆಟ್ ನೈಟ್ ಚಹಾವನ್ನು ಕುಡಿಯುವುದು ತಪ್ಪಿಸಿ ಶಾಂತಿಯುತ ನಿದ್ರೆಯನ್ನು ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.

ಗ್ರೀನ್ ಟೀ ಎಷ್ಟು ಬಾರಿ ಸೇವಿಸಬಹುದು?
ಡಯೆಟಿಷಿಯನ್ ಆಕಾಂಶಾ ಅವರ ಪ್ರಕಾರ, "ಊಟದ ನಡುವೆ ಯಾವಾಗಲೂ ಗ್ರೀನ್ ಟೀ ಕುಡಿಯುವುದು ಉತ್ತಮ. ಆದರೆ ನಿಮ್ಮ ಊಟಕ್ಕೆ ಕನಿಷ್ಠ ಎರಡು ಗಂಟೆಗಳ ಮೊದಲು ಮತ್ತು ಎರಡು ಗಂಟೆಗಳ ನಂತರ ಅದನ್ನು ಸೇವಿಸಲು ಮರೆಯದಿರಿ."
ಸಲಹೆಗಾರ ಪೌಷ್ಟಿಕತಜ್ಞೆ ರೂಪಾಲಿ ದತ್ತಾ ನಮ್ಮೊಂದಿಗೆ ಹಂಚಿಕೊಂಡ ಮಾಹಿತಿ ಪ್ರಕಾರ, "ದಿನದಲ್ಲಿ ಹಸಿರು ಚಹಾವನ್ನು ಸೇವಿಸಲು ಉತ್ತಮ ಸಮಯ ಬೆಳಿಗ್ಗೆ, ಆದರೆ ನಿಮ್ಮ ಉಪಹಾರದ ನಂತರ ಅಥವಾ ಉಪಹಾರ ತೆಗೆದುಕೊಳ್ಳುವ ಸ್ವಲ್ಪ ಸಮಯಕ್ಕೂ ಮುಂಚೆ ಗ್ರೀನ್ ಟೀ ಸೇವಿಸಬಹುದು. ಇದು ಮಧ್ಯಾಹ್ನದ ಊಟಕ್ಕೂ ಅನ್ವಯವಾಗುತ್ತದೆ. ಹಾಗೆಯೇ, ಸೇವನೆಯನ್ನು ದಿನಕ್ಕೆ 2-3 ಕಪ್ಗಳಿಗೆ ಮಿತಿಗೊಳಿಸಿ" ಎಂದು ಹೇಳಿದ್ದಾರೆ.
-
ಮನೆಯಲ್ಲಿ ಕಸದ ಬುಟ್ಟಿ ಎಲ್ಲಿ ಇಡಬೇಕು? ಈ ವಾಸ್ತು ನಿಯಮಗಳು ತಿಳಿದುಕೊಳ್ಳಿ -
Pomegranate Juice Benefits: 6 ದಿನಗಳಲ್ಲಿ ಕಾಣುವ ಆರೋಗ್ಯ ಬದಲಾವಣೆಗಳು -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಬೇಸಿಗೆಯಲ್ಲಿ ತಣ್ಣೀರಿನ ಸ್ನಾನ ಮಾಡುವ ಮೊದಲು ತಿಳಿದುಕೊಳ್ಳಬೇಕಾದ ವಿಷಯಗಳು -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ











Click it and Unblock the Notifications