Privacy Cab: ಬೆಂಗಳೂರಲ್ಲಿ ಪ್ರೇಮಿಗಳಿಗಾಗಿ ಪ್ರೈವೆಸಿ ಕ್ಯಾಬ್‌ ಸೇವೆ, OYO ಆನ್‌ ವೀಲ್ಸ್‌ ಎಂದ ನೆಟ್ಟಿಗರು

ಬೆಂಗಳೂರು ಸಿಲಿಕಾನ್‌ ಸಿಟಿ ಮಾತ್ರವಲ್ಲ, ಪ್ರೇಮಿಗಳ ಸ್ವರ್ಗವೂ ಆಗಿದೆ. ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಕೆಲವರು ಸಾರ್ವಜನಿಕ ಸ್ಥಳಗಳಲ್ಲೇ ಮಿತಿ ಮೀರಿ ವರ್ತಿಸುವ ಘಟನೆಗಳೇನೂ ಇತ್ತೀಚೆಗೆ ಕಡಿಮೆ ಇಲ್ಲ. ಇನ್ನು ಕ್ಯಾಬ್‌ ಹತ್ತಿ ಮನೆಗೆ ಹೋಗುವ ಬದಲು ಅಲ್ಲಿಯೂ ರೊಮ್ಯಾನ್ಸ್‌ ಶುರು ಮಾಡಿ, ಇತರರಿಗೆ ಕಸಿವಿಸಿ ಉಂಟು ಮಾಡುವವರೂ ಇದ್ದಾರೆ. ಇತ್ತೀಚೆಗೆ ಕ್ಯಾಬ್‌ ಡ್ರೈವರ್‌ವೊಬ್ಬರು ನೋ ರೊಮ್ಯಾನ್ಸ್‌ ಪ್ಲೀಸ್‌ ಎನ್ನುವ ಬೋರ್ಡ್‌ ಹಾಕಿ ಗಮನ ಸೆಳೆದಿದ್ದರು. ಆದರೆ ಪ್ರೇಮಿಗಳಿಗೆಂದೇ ಪ್ರೈವೆಸಿ ಕೊಡುವ ವಿಶೇಷ ಕ್ಯಾಬ್‌ ಸೇವೆಯೊಂದು ಬೆಂಗಳೂರಿಗೆ ಕಾಲಿಟ್ಟಿರುವ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ಸೌಂಡ್‌ ಮಾಡ್ತಿದೆ.

ಹೌದು ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನ ಬಳಕೆದಾರರೊಬ್ಬರು "ಸ್ಮೂಚ್ ಕ್ಯಾಬ್ಸ್" ಈಗ ಕರ್ನಾಟಕದ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಪೋಸ್ಟ್ ಮಾಡಲಾಗಿದೆ. ನಾವು ಸ್ಮೂಚ್ ಕ್ಯಾಬ್ ಅನ್ನು ಗುರುತಿಸಿದ್ದೇವೆ. ಒಳಗೆ ಏನಾಯಿತು ಎಂದು ನನಗೆ ಹೇಳಲಾಗುವುದಿಲ್ಲ, ಆದರೆ ಗೌಪ್ಯತೆಗೆ ನಾನು 10ಕ್ಕೆ 10ರಷ್ಟು ರೇಟಿಂಗ್‌ ನೀಡುತ್ತೇನೆ ಎಂದು ಪೋಸ್ಟ್‌ ಮಾಡಿದ್ದರು.

April Fools Day Prank Fake Privacy Smooch Cab Service Launched In Bengaluru

ಈ ಪೋಸ್ಟ್‌ ವೈರಲ್‌ ಆಗಿ ಎಷ್ಟೋ ಮಂದಿ ಈ ಕ್ಯಾಬ್‌ ಸೇವೆ ನಮಗ್ಯಾರಿಗೂ ಕಾಣಿಸಲೇ ಇಲ್ವಲ್ಲಾ? ಎಂದು ತಲೆಕೆಡಿಸಿಕೊಂಡಿದ್ದಾರೆ. ಅಲ್ಲದೆ ಈ ಕಾರಲ್ಲಿ ಒಂದು ಟ್ರಿಪ್‌ ಹೋಗೋಣ ಎಂದು ಹುಡುಕಾಡಿದ್ದಾರೆ. ಓಲಾ, ಉಬರ್, ರಾಪಿಡೊ ಅಥವಾ ಯಾವುದೇ ಇತರ ಕ್ಯಾಬ್ ಸರ್ವೀಸ್‌ನಂತೆಯೇ ಇದು ಕೂಡ ಪ್ರೇಮಿಗಳಿಗಾಗಿಯೇ ಇರುವ ಕ್ಯಾಬ್‌ ಸೇವೆ ಎಂದು ಜನ ನಂಬಿದ್ದರು.

ಬೆಂಗಳೂರಿನ ಸ್ಟಾರ್ಟ್ಅಪ್ ಸ್ಮೂಚ್ ಕ್ಯಾಬ್ಸ್ ಪ್ರಾರಂಭಿಸಿದೆ. ಈ ಸೇವೆ ವಿಶೇಷವಾಗಿ "ಖಾಸಗಿ ಸಮಯ" ಕಳೆಯುವ ದಂಪತಿಗಳಿಗೆ ಅನುಕೂಲ. ಹಾಗಾಗಿ ನಗರಕ್ಕೆ ಉತ್ತಮ ರಸ್ತೆಗಳು ಬೇಕು ಎಂದು ಬೇಡಿಕೆ ಕೂಡ ಇಟ್ಟಿದ್ದರು. ಆದರೆ, ದುರದೃಷ್ಟವಶಾತ್ ಇದೊಂದು ಪ್ರ್ಯಾಂಕ್‌ ಎಂದು ಆ ನಂತರ ಬೆಳಕಿಗೆ ಬಂದಿದೆ. ಕೇವಲ ತಮಾಷೆಗಾಗಿ ಮಾಡಿರುವ ಇದು ಸಾಮಾಜಿಕ ಮಾಧ್ಯಮದಲ್ಲಿ ಅನೇಕರನ್ನು ದಾರಿ ತಪ್ಪಿಸಿದೆ.

April Fools Day Prank Fake Privacy Smooch Cab Service Launched In Bengaluru

ಆದರೆ ಅಸಲಿ ವಿಚಾರವೆಂದರೆ, ಸ್ಮೂಚ್ ಕ್ಯಾಬ್ ಹಿಂದಿನ ಮೀಮ್ ಆಧಾರಿತ ಡೇಟಿಂಗ್ ಅಪ್ಲಿಕೇಶನ್ ಸ್ಕ್ಮೂಜ್ ಈ ವಿಚಾರವನ್ನು ತಳ್ಳಿ ಹಾಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿ, "ಈಗಲೇ ಬುಕ್ ಮಾಡಿ, ಏಪ್ರಿಲ್ 1ರವರೆಗೆ ಮಾತ್ರ ಈ ಸೇವೆ ಮಾನ್ಯವಾಗಿರುತ್ತದೆ' ಎಂದು ಸ್ಕ್ಮೂಜ್ ಸ್ಪಷ್ಟಪಡಿಸಿದ್ದು. ಇದು ಏಪ್ರಿಲ್‌ ಫೂಲ್‌ ಮಾಡಿರುವ ತಮಾಷೆಯ ಭಾಗ ಎಂದು ಹೇಳಿದೆ. ಇದರಿಂದ ಪ್ರೇಮಿಗಳಿಗೆ ಫುಲ್‌ ನಿರಾಸೆಯಾಗಿದೆ.

ಜನರನ್ನು ಮೂರ್ಖರನ್ನಾಗಿ ಮಾಡಲು ಈ ಟ್ರಿಕ್‌ ಬಳಸಲಾಗಿದ್ದು, ಹಲವರು ಈ ಪೋಸ್ಟ್‌ನಿಂದ ಫೂಲ್‌ ಆಗಿದ್ದಾರೆ. ಕೊನೆಗೆ ಇಂತಹ ಸೇವೆ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಲ್ವಾ? ಎಂದು ಕನಸು ಕೂಡ ಕಂಡಿದ್ದಾರೆ. ಬೆಂಗಳೂರಿಗೆ ನಿಜವಾಗಿಯೂ ಇಂತಹ ಕ್ಯಾಬ್‌ ಸೇವೆ ಸದ್ಯಕ್ಕೆ ಬಂದಿಲ್ಲ ಎಂಬುದು ಸ್ಪಷ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+