Get Updates
Get notified of breaking news, exclusive insights, and must-see stories!

Apple iPhone 16 launch: ಭಾರತಕ್ಕೆ ಯಾವಾಗ ಬರುತ್ತೆ, ಏನಿದರ ವಿಶೇಷತೆ ಗೊತ್ತಾ?

'It's Glowtime': ಮೊಬೈಲ್ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿ ಮಾಡಿರುವ ಆ್ಯಪಲ್‌ ಇಂದು ಹೊಸ ಮೈಲಿಗಲ್ಲು ಸೃಷ್ಟಿ ಮಾಡಲು ಮುಂದಾಗಿದೆ. ಐಪೋನ್ ಪ್ರಿಯರು ಬಹು ನಿರೀಕ್ಷಿತ ಪೋನ್‌ಗಳಲ್ಲಿ ಒಂದಾಗಿರುವ ಐಪೋನ್‌ 16 ಬಿಡುಗಡೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಕ್ಯಾಲಿಫೋರ್ನಿಯಾದ ಆ್ಯಪಲ್‌ನ ಕೇಂದ್ರ ಕಚೇರಿ ಕ್ಯುಪರ್ಟಿನೋ ಪಾರ್ಕ್‌ ಎಂಬಲ್ಲಿ ಐಪೋನ್‌ 16 ಬಿಡುಗಡೆಯಾಗಲಿದೆ.

ಇದರೊಂದಿಗೆ Apple iPhone 16 ಹೊಸ ಮಾದರಿ, ಹೊಸ Apple Watch ಹಾಗೂ AirPods ಗಳನ್ನು ಸಹ ಆ್ಯಪಲ್ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಇದು ಡಿಜಿಟಲ್‌ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ ಎಂದೇ ಅಂದಾಜಿಸಲಾಗಿದೆ. ಈಗಾಗಲೇ ಆ್ಯಪಲ್ 15 ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಭಾರತ ಸೇರಿದಂತೆ ವಿಶ್ವದಾದ್ಯಂತ ಈ ಪೋನ್‌ಗಳು ಮನ್ನಣೆ ಗಳಿಸಿವೆ.

Apple iPhone 16 launch When will it come to India what s special

'It's Glowtime' ಎನ್ನುವ ಘೋಷಾವಾಕ್ಯದೊಂದಿಗೆ ಐಪೋನ್‌ನ ಬಿಡುಗಡೆಗೆ ಸಿದ್ಧತೆ ನಡೆದಿದೆ. ಜಗತ್ತಿನಲ್ಲಿ ಭಾರೀ ಸದ್ದು ಮಾಡುತ್ತಿರುವ ಎಐ ಮಾದರಿಯನ್ನು ಸಹ ಇದರಲ್ಲಿ ಅಳವಡಿಸಿಕೊಳ್ಳಲಾಗಿದೆ ಎನ್ನಲಾಗಿದೆ. ಸೆಪ್ಟೆಂಬರ್‌ 9ರಂದು ಅಂದರೆ, ಇಂದು ಐಪೋನ್‌ 16 ಬಿಡುಗಡೆಯಾಗುವುದರೊಂದಿಗೆ ಐಪೋನ್‌ ವಾಚ್‌ನ 10 ಮಾಡಲ್‌ ಸಹ ಬಿಡುಗಡೆ ಆಗಲಿದೆ. iOS 18, watchOS 11 ಗಳ ಬಿಡುಗಡೆಯ ವಿಷಯಗಳು ಸಹ ಇಂದಿನ ಕಾರ್ಯಕ್ರಮದಲ್ಲಿ ಅನಾವರಣವಾಗುವ ಸಾಧ್ಯತೆ ಇದೆ. ಐಪೋನ್‌ ಬಿಡುಗಡೆಯ ಕಾರ್ಯಕ್ರಮ ಲೈವ್‌ ಸ್ಟ್ರೀಮ್‌ ಆಗಲಿದ್ದು, ಭಾರತದ ಕಾಲಮಾನ ಹಾಗೂ ಭಾರತದಲ್ಲಿ ಐಪೋನ್‌ 16ರ ಬೆಲೆ ಸೇರಿದಂತೆ ಐಪೋನ್‌ 16ರ ವಿಶೇತೆಗಳು ಈ ರೀತಿ ಇವೆ.

ಐಪೋನ್‌ 16 ಮಾಡಲ್‌ಗಳು ಇಂದು ಬಿಡುಗಡೆ

ಆ್ಯಪಲ್ ಐಪೋನ್‌ 16ರ ಇಂದು ಬಿಡುಗಡೆಯಲಾಗಲಿದ್ದು. ಲೈವ್‌ ಸ್ಟ್ರೀಮ್‌ (ನೇರ ಪ್ರಸಾರ) ಇರಲಿದೆ. ಹೀಗಾಗಿ, ಈ ಪೋನ್‌ ಬಿಡುಗಡೆಯಾಗುವ ಕಾರ್ಯಕ್ರಮವನ್ನು ನೀವು ಸಹ ಕುಳಿತಲ್ಲೇ ನೋಡಬಹುದು. ಇನ್ನು ಭಾರತೀಯ ಕಾಲಮಾನ ಸೆಪ್ಟೆಂಬರ್‌ 9ರ ರಾತ್ರಿ 10.30ಕ್ಕೆ ( 10:30 PM IST (Indian Standard Time). ಬಿಡುಗಡೆ ಆಗಲಿದೆ. ಅಲ್ಲದೇ ಈ ಕಾರ್ಯಕ್ರವನ್ನು ವಿವಿಧ ವೇದಿಕೆಗಳಲ್ಲಿ ಏಕಕಾಲಕ್ಕೆ ಆ್ಯಪಲ್‌ ಬಿಡುಗಡೆ ಮಾಡುತ್ತಿದೆ. ಆ್ಯಪಲ್‌ನ ಅಧಿಕೃತ ವೆಬ್‌ಸೈಟ್‌, ಯುಟ್ಯೂಬ್‌ ಚಾನೆಲ್‌ ಹಾಗೂ ಆ್ಯಪಲ್ ಟಿವಿ ಆಯಪ್‌ನಲ್ಲಿಯೂ ಸಹ ಈ ಕಾರ್ಯಕ್ರಮವನ್ನು ನೀವು ವೀಕ್ಷಿಸಬಹುದಾಗಿದೆ. ಇನ್ನು ಇದೇ ಕಾರ್ಯಕ್ರಮದಲ್ಲಿ ಆ್ಯಪಲ್ ವಾಚ್‌ 10 ಹಾಗೂ ಆ್ಯಪಲ್ ಅಲ್ಟ್ರಾ ವಾಚ್‌ ಸಹ ಬಿಡುಗಡೆ ಆಗಲಿವೆ. ಇನ್ನು ಕೈಗೆಟುಕುವ ಬೆಲೆಯಲ್ಲಿ ಐಪೋನ್‌ ವಾಚ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆಯಾದರೂ, ಅದರ ಬಗ್ಗೆ ಅಧಿಕೃತ ಪ್ರಕಟಣೆ ಇನ್ನೂ ಬಂದಿಲ್ಲ.

Apple iPhone 16 launch When will it come to India what s special

ಯಾವ ಮಾದರಿಯ ಐಪೋನ್‌ 16 ಬಿಡುಗಡೆ

iPhone 16ನಲ್ಲೇ ಹಲವು ಮಾದರಿಯ ಪೋನ್‌ಗಳಿವೆ. ಇವುಗಳಲ್ಲಿ iPhone 16, iPhone 16 Plus, iPhone 16 Pro ಹಾಗೂ iPhone 16 Pro Max ಮಾದರಿಯ ಪೋನ್‌ಗಳು ಮಾರುಕಟ್ಟೆಗೆ ಬರಲಿವೆ. ಇದರೊಂದಿಗೆ ಈಗಾಗಲೇ ಬಿಡುಗಡೆ ಮಾಡಲಾಗಿರುವ ಐಫೋನ್ 15 ಪ್ರೊ ಮಾದರಿಯ ಪರಿಷ್ಕೃತ (ಸುಧಾರಿತ) ಮಾಡೆಲ್‌ ಸಹ ಬಿಡುಗಡೆಯಾಗಲಿದೆ. iPhone 16 ಮಾದರಿಯಲ್ಲಿ ಬಿಡುಗಡೆಯಾಗುತ್ತಿರುವ ಪೋನ್‌ಗಳಲ್ಲಿ ಒಂದಕ್ಕಿಂತ ಒಂದು ಪೋನ್‌ಗಳು ಭಿನ್ನವಾಗಿವೆ. ಅಲ್ಲೇ ಎಲ್ಲಾ ಮಾದರಿಯ ಪೋನ್‌ಗಳಲ್ಲೂ

iOS 18 ಇರಲಿದೆ. ಅಂದರೆ, Android ಸಾಧನಗಳಿಗೆ ಅನುಗುಣವಾಗಿ ಇರುತ್ತದೆ. ಚಿತ್ರ ಅಥವಾ ವೀಡಿಯೊ ಫೈಲ್‌ಗಳನ್ನು ಕಳುಹಿಸಲು ಮತ್ತು ಸ್ವೀಕರಿಸುವ ವಿಷಯದಲ್ಲಿ ಆಪರೇಟಿಂಗ್ ಸಿಸ್ಟಮ್‌ಗಳ ನಡುವೆ ಹೊಂದಾಣಿಕೆ ಇರುವುದು ಸೇರಿದಂತೆ ಹಲವು ಅಂಶಗಳನ್ನು ಇದು ಒಳಗೊಂಡಿರುತ್ತದೆ. ನವೀಕೃತ ಐರ್‌ಪೋಡ್‌ಗಳ ಬಿಡುಗಡೆಯಾಗುವ ಸಾಧ್ಯತೆಯೂ ಇದೆ.

ಭಾರತಕ್ಕೆ ಯಾವಾಗ ಬರಲಿದೆ ಐಪೋನ್‌ 16 ?

ಆ್ಯಪಲ್ ಐಪೋನ್‌ಗೆ ಭಾರತ ಬಹುದೊಡ್ಡ ಮಾರುಕಟ್ಟೆಯಾಗಿದೆ. ಆ್ಯಪಲ್ ಐಪೋನ್‌ 16ರ ಬಿಡುಗಡೆ ಇಂದು ನಡೆಯಲಿದೆ. ಅನಾವರಣ ಆದ ಕೂಡಲೇ ಪ್ರೀ ಬುಕ್ಕಿಂಗ್‌ (ಮಾರುಕಟ್ಟೆ ಪೂರ್ವ ಬುಕ್ಕಿಂಗ್‌) ಪ್ರಕ್ರಿಯೆಗಳು ಪ್ರಾರಂಭವಾಗಲಿದೆ. ಇನ್ನು ಇದರ ಬೆಲೆ ಉಳಿದ ಐಪೋನ್‌ಗಳಿಂತ ಸ್ವಲ್ಪ ಹೆಚ್ಚಾಗಿಯೇ ಇರಲಿದೆ. ಅಲ್ಲದೇ ಐಪೋನ್‌ 16 ಮೂಲ ಮಾದರಿ ಬೆಲೆಯ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದ್ದು, ಪ್ರೋ ಐಪೋನ್‌ಗಳ ಬೆಲೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ.

ಐಪೋನ್‌ 16ರ ವಿಶೇಷತೆಗಳೇನು (ನಿರೀಕ್ಷಿತ)

ಇನ್ನು ಐಪೋನ್‌ 16 ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಬಣ್ಣ ಹಾಗೂ ಬ್ಯಾಟರಿ, ಡಿಸೈನ್‌ನಿಂದ ಇದು ಗಮನ ಸೆಳೆಯಲಿದೆ. ಮೊಬೈಲ್‌ ಜಗತ್ತಿನಲ್ಲಿ ದೈತ್ಯ ಮಾರುಕಟ್ಟೆಯನ್ನು ಸೃಷ್ಟಿಸಿರುವ ಆ್ಯಪಲ್ ಇದೀಗ ಹೊಸ ಇತಿಹಾಸ ಬರೆಯಲು ಮುಂದಾಗಿದೆ. ನವೀನ ಆ್ಯಪಲ್ ಐಪೋನ್‌ 16ರಲ್ಲಿ ಎಐ ಮಾದರಿಯೂ ಸಹ ಸದ್ದು ಮಾಡುತ್ತಿದೆ. ಉತ್ತಮ ಡಿಸ್ಪಲ್ಲೈ, ಇರಲಿದೆ. ಈ ಹಿಂದಿನ ಮಾದರಿಗಿಂತ ಉದ್ದವಾಗಿರಲಿದೆ. ಅಂದರೆ 6.3 ಇಂಚಿನಿಂದ 6.9 ಇಂಚಿನ ವರೆಗೆ ಇರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

ಇನ್ನು ಪ್ರೊಸೆಸಿಂಗ್‌ ಮಾದರಿಯಲ್ಲಿ A18 Pro chip ಇರಲಿದೆ. ಅಂದರೆ ಪ್ರೋ ಮಾದರಿಯ ಐಪೋನ್‌ 16ನಲ್ಲಿ ಈ ಚಿಪ್‌ ಇರಲಿದ್ದು, ಐಪೋನ್‌ 16 ಮಾದರಿಯಲ್ಲಿ A18 chip ಇರಲಿದೆ ಎಂದು ಹೇಳಲಾಗಿದೆ. ಐಪೋನ್‌ 16 ಹೊಸ ಮತ್ತು ಆಕರ್ಷಕ ಬಣ್ಣಗಳಿಂದ ಕೂಡಿರಲಿದೆ. ಹಸಿರು, ನೀಲಿ, ಪಿಂಕ್‌, (ನೇರಳೆ), ಬಿಳಿ ಹಾಗೂ ಕಪ್ಪು ಮಾದರಿಯಲ್ಲಿ ಇರಲಿವೆ. ಅಲ್ಲದೆ ಚಿನ್ನದ ಲೇಪನದಂತಹ ಬಣ್ಣ ಮತ್ತು ಟೈಟಾನಿಯಂ ಬಣ್ಣದ ಮಾದರಿಯೂ ಬಿಡುಗಡೆ ಆಗುವ ನಿರೀಕ್ಷೆ ಇದೆ.

ಈ ಹೊಸ ಪೋನ್‌ನಲ್ಲಿ ನವೀಕರಿಸಿದ 48MP ಅಲ್ಟ್ರಾ-ವೈಡ್ ಕ್ಯಾಮೆರಾ ಇರಲಿದೆ. ಅಂದರೆ ಐಪೋನ್‌ 15ಕ್ಕಿಂತ ನವೀಕರಿಸಿದ ಮಾದರಿ ಇದಾಗಿರಲಿದೆ. ಈ ಪೋನ್‌ನ ಬ್ಯಾಟರಿ ಸಾಮರ್ಥ್ಯವು 4,676mAh ಇರಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಸಂಗ್ರಹ ಸಾಮರ್ಥ್ಯವು (ಸ್ಟೋರೆಜ್‌) ಐಪೋನ್‌ 15ರ ಮಾದರಿಗಿಂತ ಉತ್ತಮವಾಗಿರಲಿದೆ ಎಂದು ಅಂದಾಜಿಸಲಾಗಿದೆ. ಈ ಎಲ್ಲ ಪ್ರಶ್ನೆಗಳಿಗೂ ಇಂದು ಉತ್ತರ ಸಿಗಲಿದ್ದು, ಇಂದು ಮಾರುಕಟ್ಟೆಗೆ ಐಪೋನ್‌ 16 ಲಗ್ಗೆ ಇರಿಸಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+