ವಿಶ್ವ ತಾಯಿ ದಿನದ ಸೃಷ್ಟಿ, ಹಿಂದಿನ ಶಕ್ತಿ- ಇದು ಛಲ, ಕಣ್ಣೀರ ಕಥೆ
2022, ಮೇ 8, ನಿನ್ನೆ ನಾವೆಲ್ಲರೂ ವಿಶ್ವ ತಾಯಂದಿರ ದಿನ ಆಚರಿಸಿದ್ದೇವೆ. ದೂರದಲ್ಲೆಲ್ಲೋ ಇರುವ ಅಮ್ಮನನ್ನು ಏಕಾಂಗಿಯಾಗಿ ಬಿಟ್ಟು ನಾವೆಲ್ಲಾ ವಾಟ್ಸಾಪ್ ಸ್ಟೇಟಸ್‌ನಲ್ಲಿ ಅಮ್ಮನ ಫೋಟೋ ಹಾಕಿ 'ಪ್ರೀತಿ' ಹಂಚಿಕೊಂಡಿದ್ದೇವೆ. ಅಮ್ಮ ಅಂದ್ರೆ ನನ್ನಮ್ಮ, ಆಕೆಯಂತೆ ಇನ್ಯಾರಿಲ್ಲಮ್ಮ ಎಂದು ಕವನ ಗೀಚಿದ್ದೇವೆ. ಆದರೆ, ವಾಸ್ತವದಲ್ಲಿ ಅಮ್ಮನಿಗೆ ಎಂಥ ಪ್ರೀತಿ ಕೊಟ್ಟಿದ್ದೇವೆ? ಇನ್ನೊಂದು ವಿಷಯ.
ನಾವು ಆಚರಿಸಿದ್ದು ವಿಶ್ವ ತಾಯಂದಿರ ದಿನ (World Mothers' Day) ವಲ್ಲ, ವಿಶ್ವ ಅಮ್ಮನ ದಿನವಾಗಿತ್ತು (World Mother's Day). ಇದು ವಿಶ್ವ ತಾಯಿ ದಿನದ ಒಟ್ಟಾರೆ ಕಥೆಗೆ ಕನ್ನಡಿ ಹಿಡಿಯುತ್ತದೆ. ಅಂದರೆ, ತಾಯಂದಿರ ದಿನ ಬೇಡ ಅಮ್ಮನ ದಿನ ಆಗಿ ಜನರು ಆಚರಿಸಬೇಕು ಎಂದು ಒಬ್ಬ ಮಹಿಳೆ ಕಂಡಿದ್ದ ಕನಸು ಇಂದು ವಿಪರೀತ ವಾಣಿಜ್ಯಾತ್ಮಕತೆಯಿಂದಾಗಿ ಕಮರಿ ಹೋಗಿದೆ. ವಿಶ್ವ ತಾಯಿ ದಿನದ ಉದ್ದೇಶ ಏನು ಎಂಬುದು ಸುಳಿವೇ ಇಲ್ಲದಂತೆ ಜನರು ಈ ದಿನವನ್ನು ಬಳಕೆ ಮಾಡುತ್ತಿದ್ದಾರೆ. ವಿಶ್ವ ಅಮ್ಮನ ದಿನಕ್ಕಾಗಿ ಹೋರಾಡಿದ್ದ ಆನಾ ಜಾರ್ವಿಸ್ (Anna Jarvis) ಅಂತ್ಯಕಾಲದಲ್ಲಿ ನಿರ್ಗತಿಕಳಾಗಿ ಸಾಯಬೇಕಾದ ಕರುಣಾಜನಕ ಕಥೆ ಇಲ್ಲಿದೆ. ತಪ್ಪದೇ ಓದಿ.

ಅಮ್ಮನ ದಿನ ಸೃಷ್ಟಿಗೆ ಏನು ಕಾರಣ?
ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನದಲ್ಲಿ ಬದುಕಿದ್ದ ಅಮೆರಿಕನ್ ಆಕ್ಟಿವಿಸ್ಟ್ ಇವರು. 1864 ಮೇ 1ರಂದು ಜನಸಿದ ಇವರು ಜೀವಿತಾವಧಿಯಲ್ಲಿ ನಾಗರಿಕ ಯುದ್ಧವನ್ನು ನೋಡಿ ಬೆಳೆದವರು. 1908ರಲ್ಲಿ ಇವರು ಮದರ್ಸ್ ಡೇ ಸೃಷ್ಟಿಸಿದರು.
ಆನಾ ಜಾರ್ವಿಸ್ ಅವರಿಗೆ ಅಮ್ಮನ ದಿನ ಸೃಷ್ಟಿಗೆ ಮೂಲ ಪ್ರೇರಣೆ ಅವರ ತಾಯಿಯೇ. ನಾಗರಿಕ ಯುದ್ಧದಲ್ಲಿ ಮಹಿಳಾ ಸಮುದಾಯವನ್ನು ಒಗ್ಗೂಡಿಸಲು ಮತ್ತು ಶಿಶು ಮರಣ ಪ್ರಮಾಣ ನಿಯಂತ್ರಣಕ್ಕಾಗಿ ತಾಯಂದಿರ ಶುಚಿತ್ವಕ್ಕಾಗಿ ಇವರ ತಾಯಿ ಬಹಳ ಶ್ರಮಿಸುತ್ತಿದ್ದರು. "ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಒಬ್ಬ ತಾಯಿಯ ನಿಸ್ಪೃಹ ಸೇವೆಗೆ ಗೌರವಾರ್ಥ ನೀಡಲು ತಾಯಂದಿರ ದಿನವನ್ನು ನಾನು ಒಂದಲ್ಲಾ ಒಂದು ದಿನ ನೋಡುತ್ತೇನೆ" ಎಂದು ಹೇಳುತ್ತಿದ್ದರಂತೆ. 1950ರಲ್ಲಿ ಅವರು ತಮ್ಮ ಆಸೆ ಈಡೇರಿಸದೆಯೇ ಅಸುನೀಗಿದರು. ಆಗ ಅವರಿಗೆ ತಮ್ಮ ತಾಯಿಯ ಆಸೆಯಂತೆ ಅಮ್ಮಂದಿರ ದಿನ ಸ್ಥಾಪಿಸುವ ಕೈಂಕರ್ಯಕ್ಕೆ ಮುಂದಾದರು.

ಅಮ್ಮನ ಪುಣ್ಯತಿಥಿ ಮತ್ತು ರಜಾ ದಿನ:
ತಾಯಿಯ ಆಸೆ ಈಡೇರಿಸುವ ನಿಟ್ಟಿನಲ್ಲಿ ಆನಾ ಜಾರ್ವಿಸ್ ಹೆಜ್ಜೆ ಹಾಕಲು ತಡಮಾಡಲಿಲ್ಲ. ರಾಜಕಾರಣಿಗಳು, ಉದ್ಯಮಿಗಳು, ಧಾರ್ಮಿಕ ಮುಖಂಡರು ಮೊದಲಾದವರನ್ನ ಪತ್ರದ ಮುಖೇನ ಸಂಪರ್ಕಿಸಿ ವಿಶ್ವ ತಾಯಿ ದಿನ ಸ್ಥಾಪನೆಯ ಪ್ರಸ್ತಾವಕ್ಕೆ ಬೆಂಬಲ ನೀಡಬೇಕೆಂದು ಕೋರಿದರು. ಮೇ ತಿಂಗಳ ಎರಡನೇ ಭಾನುವಾರವನ್ನು ಈ ದಿನಕ್ಕಾಗಿ ಆಯ್ದುಕೊಂಡರು. ಅದಕ್ಕೆ ಕಾರಣ ಇದೆ. ಭಾನುವಾರ ರಜೆ ದಿನ ಎಂಬುದು ಒಂದು. ಹಾಗೆಯೇ ಅವರ ತಾಯಿ ಸಾವನ್ನಪ್ಪಿದ ದಿನ ಮೇ 9. ಈ ದಿನಕ್ಕೆ ಸಮೀಪ ಇರುವ ದಿನ ಎಂದರೆ ಎರಡನೇ ವಾರದ ದಿನವಾಗಬೇಕು. ಹೀಗಾಗಿ, ಮೇ ತಿಂಗಳ ಎರಡನೇ ವಾರವನ್ನು ಅವರು ತಾಯಂದಿರ ದಿನವಾಗಿ ಆರಿಸಿಕೊಂಡರು.
ಹಾಗೆಯೇ, ಆನಾ ಜಾರ್ವಿಸ್ ತಾಯಿಯ ನೆಚ್ಚಿನ ಹೂ ಬಿಳಿ ಬಣ್ಣದ ಕಾರ್ನೇಶನ್ (White Carnation Flower- Dianthus Caryophyllus) ಅನ್ನೇ ತಾಯಂದಿರ ದಿನಕ್ಕೆ ಲಾಂಛನವಾಗಿ ಆಯ್ದುಕೊಂಡರು.

ಅಮ್ಮನ ದಿನದ ಮೊದಲ ಕಾರ್ಯಕ್ರಮ:
ಆನಾ ಜಾರ್ವಿಸ್ ಪ್ರಯತ್ನಗಳ ಫಲವಾಗಿ ಅಮೆರಿಕದ ಫಿಲಾಡೆಲ್ಫಿಯಾದಲ್ಲಿ ಮತ್ತು ಗ್ರಾಫ್ಟಾನ್‌ನಲ್ಲಿ ತಾಯಿ ದಿನದ ಎರಡು ಕಾರ್ಯಕ್ರಮಗಳ ನಡೆದವು. ಇದು ಜನಪ್ರಿಯವಾಗಿ 1914ರಲ್ಲಿ ಆಲಾಬಾಮ ರಾಜ್ಯದಲ್ಲಿ ಮದರ್ಸ್ ಡೇಗೆ ಅಧಿಕೃತತೆ ಕೊಡುವ ಶಾಸನನ್ನು ಪ್ರಸ್ತಾಪ ಮಾಡಿದರು. ಆಗಿನ ಅಮೆರಿಕ ಅಧ್ಯಕ್ಷ ಡಬ್ಲ್ಯೂ ವಿಲ್ಸನ್ ಸಹಿ ಹಾಕಿದ ಬಳಿಕ ಇದು ಅಧಿಕೃತವಾಗಿ ಚಾಲನೆ ಬಂದಿತು.

ಅಮ್ಮನ ದಿನ ವರ್ಸಸ್ ಅಮ್ಮಂದಿರ ದಿನ:
ಕುತೂಹಲ ಎಂದರೆ ಆನಾ ಜಾರ್ವಿಸ್ ತಾಯಿ ದಿನ ಆರಂಭಿಸುವುದಕ್ಕೆ ಬಹಳ ಹಿಂದೆಯೇ ಜೂಲಿಯಾ ವಾರ್ಡ್ ಹೋವೆ ಎಂಬುವವರು 1873ರ ಜೂನ್‌ನಿಂದಲೆ ತಾಯಂದಿರ ದಿನವನ್ನು ಆರಂಭಿಸಿದ್ದರು. ಜೊತೆಗೆ ಅಮ್ಮನಿಗಾಗಿ ದಿನ ಆಚರಿಸಲು ಇನ್ನೂ ಹಲವರು ಬೇರೆ ಬೇರೆ ದಿನಗಳನ್ನು ಪ್ರಸ್ತಾಪಿಸಿದ್ದುಂಟು.
ಈ ಸಂದರ್ಭದಲ್ಲಿ ಆನಾ ಜಾರ್ವಿಸ್ ತಮ್ಮ ಕನಸಿನ ತಾಯಿ ದಿನ ಹೇಗಿರಬೇಕೆಂದು ಪರಿಕಲ್ಪನೆಯನ್ನ ಬಹಳ ಸ್ಪಷ್ಟಪಡಿಸತೊಡಗಿದರು. ತನ್ನದು ತಾಯಂದಿರ ದಿನ ಅಲ್ಲ, ತಾಯಿ ದಿನ ಎಂದು ಒತ್ತಿಹೇಳಿದರು. "ಸರಿಸಾಟಿ ಇಲ್ಲದ ಅತ್ಯುತ್ತಮ ತಾಯಿ- ನಿಮ್ಮ ತಾಯಿ" ಎಂಬುದು ಮದರ್ಸ್ ಡೇಗೆ ಆನಾರ ಘೋಷಣಾ ವಾಕ್ಯವಾಗಿತ್ತು. ಪ್ರತಿಯೊಬ್ಬ ವ್ಯಕ್ತಿ ಕೂಡ ತಮ್ಮನ್ನು ಸಲಹಿದ ತಾಯಿಯನ್ನು ವೈಯಕ್ತಿಕವಾಗಿ ಈ ದಿನದಂದು ಗೌರವಿಸಬೇಕು ಎಂಬುದು ಆನಾ ಜಾರ್ವಿಸ್ ಅವರ ಉದ್ದೇಶವಾಗಿತ್ತು. ಜುಲಿಯಾ ಹೋವೆ ಅಥವಾ ಆನಾ ತಾಯಿಯವರ ದೃಷ್ಟಿಯ ತಾಯಂದಿರ ದಿನದ ಪರಿಕಲ್ಪನೆ ಬೇರೆ ರೀತಿಯದ್ದಾಗಿತ್ತು.
|
ಆನಾ ಆಶಯಕ್ಕೆ ಧಕ್ಕೆ:
ಆನಾ ಯಾವುದೇ ಆಡಂಬರ ಇಲ್ಲದೆ ಪ್ರತಿಯೊಬ್ಬರೂ ಕೂಡ ತಮ್ಮ ತಾಯಿಗೆ ಪ್ರೀತಿಪೂರ್ವಕವಾಗಿ ಗೌರವ ನೀಡಬೇಕೆಂದು ಬಯಸಿದ್ದರು. ಆದರೆ, ವಾಸ್ತವದಲ್ಲಿ ಅದು ಆಗಿದ್ದೇ ಬೇರೆ. ಇವರ ಅಮ್ಮನ ದಿನ ಜನಪ್ರಿಯವಾದಂತೆಯೇ ಅವರ ಮೂಲ ಪರಿಕಲ್ಪನೆ ನಿರಂತರ ಕವಲುಗಳನ್ನು ಪಡೆಯುತ್ತಾ ಹೋಗಿ ವಿಭಿನ್ನ ಆಯಾಮವನ್ನೇ ಪಡೆಯಿತು. ಜನವರು ಮದರ್ಸ್ ಡೇ ಅನ್ನು ವಾಣಿಜ್ಯಾತ್ಮಕವಾಗಿ ಬಳಕೆ ಮಾಡತೊಡಗಿದರು. ಗ್ರೀಟಿಂಗ್ ಕಾರ್ಡ್ ಉದ್ಯಮ ಮೈಕೊಡವಿ ನಿಂತಿತು. ಕ್ಯಾಂಡಿಯಂಥ ಸಿಹಿತಿಂಡಿಗೆ ಬೇಡಿಕೆ ಬಂದಿತು. ಕಾರ್ನೇಶನ್ ಹೂವು ಬ್ಯುಸಿನೆಸ್ ಆಯಿತು. ಇದೆಲ್ಲವೂ ಆನಾ ಜಾರ್ವಿಸ್‌ಗೆ ಬೇಸರ ತರಿಸಿತು. "ನಿಮಗೋಸ್ಕರ ಅದೆಷ್ಟೋ ತ್ಯಾಗ ಮಾಡಿದ ತಾಯಿಗೆ ನೀವು ಒಂದು ಪ್ರಿಂಟೆಡ್ ಗ್ರೀಟಿಂಗ್ ಕಾರ್ಡ್ ಕೊಟ್ಟು ಕೈತೊಳೆದುಕೊಂಡುಬಿಡುತ್ತೀರಿ. ನಿಮ್ಮ ತಾಯಿಗೆಂದು ಕ್ಯಾಂಡಿ ಬಾಕ್ಸ್ ತೆಗೆದುಕೊಂಡು ಹೋಗಿ ಕೊಡುತ್ತೀರಿ. ಆದರೆ, ಅದರಲ್ಲಿ ತಿಂದು ಖಾಲಿ ಮಾಡುವುದು ನೀವೆಯೇ. ಇದೆಂಥದ್ದು ನಿಮ್ಮ ಭಾವನೆ," ಎಂದು ಆನಾ ಜಾರ್ವಿಸ್ ಮರುಗಿದರು.

ವಾಣಿಜ್ಯೀಕರಣಕ್ಕೆ ಆನಾ ವಿರೋಧ:
ಆನಾ ಜಾರ್ವಿಸ್ ಅವರ ಅಮ್ಮನ ದಿನದ ಮೂಲ ಪರಿಕಲ್ಪನೇ ಸಂಪೂರ್ಣ ಮರೆಯಾಗಿಹೋಗಿತ್ತು. ಅಮ್ಮನ ದಿನವನ್ನು ಪೋಷಕರ ದಿನವಾಗಿ ಆಚರಿಸುವ ಪ್ರಸ್ತಾಪವೊಂದೂ ಬಂದಿತು. ಇದನ್ನು ಆನಾ ಬಲವಾಗಿ ವಿರೋಧಿಸಿದರು. ಅಮ್ಮನ ದಿನದಂದು ಹೂ ಮಾರುತ್ತಿದ್ದ, ಹಣದ ದೇಣಿಗೆ ಪಡೆಯುತ್ತಿದ್ದ, ಸಿಹಿತಿಂಡಿಗಳನ್ನು ಮಾರುತ್ತಿದ್ದವರ ಮೇಲೆ ಆನಾ ಮುತ್ತಿಗೆ ಹಾಕಿದರು. ಕಾರ್ನೇಶನ್ ಪುಷ್ಪೋದ್ಯಮ ತನ್ನ ಲಾಭದಲ್ಲಿ ಒಂದಿಷ್ಟು ಪಾಲನ್ನು ಆನಾಗೆ ಕೊಡಲು ಮುಂದಾದಾಗ ಅದನ್ನು ಆಕೆ ತಿರಸ್ಕರಿಸಿದ್ದುಂಟು.

ಅಮ್ಮನ ದಿನವೇ ಬೇಡ ಎಂದು ಹಠಕ್ಕೆ ಬಿದ್ದ ಆನಾ:
ತಮ್ಮ ಮೂಲ ಪರಿಕಲ್ಪನೆಯ ಅಮ್ಮನ ದಿನ ಇಷ್ಟು ವಿರೂಪ ಪಡೆದುಕೊಂಡಿದ್ದನ್ನು ಜೀರ್ಣಿಸಿಕೊಳ್ಳಲು ಆನಾಗೆ ಆಗಲಿಲ್ಲ. ಅಮ್ಮನ ದಿನವನ್ನೇ ರದ್ದು ಮಾಡಬೇಕೆಂದು ಮನೆ ಮನೆಗಳಿಗೆ ಹೋಗಿ ಸಹಿ ಸಂಗ್ರಹದ ಕೆಲಸ ಮಾಡತೊಡಗಿದರು. ಆದರೆ, ಅದು ಅವರಿಗೆ ಸಾಧ್ಯವಾಗಲಿಲ್ಲ. ಅವರು ಇನ್ನೊಂದು ಹೆಜ್ಜೆ ಇರುವುಷ್ಟರಲ್ಲಿ ಇಹಲೋಕ ಈಕೆಯನ್ನ ಬೀಳ್ಕೊಟ್ಟಿತು. ಅದಾದ ಬಳಿಕ ಅವರ ಕುಟುಂಬಸದಸ್ಯರು ಬಹಳ ವರ್ಷ ಮದರ್ಸ್ ಡೇ ಅನ್ನೇ ಆಚರಿಸಲಿಲ್ಲವಂತೆ.

ಜೇಬಲ್ಲಿ ಹಣ ಇಲ್ಲದೇ ಸತ್ತ ಆನಾ:
ಆನಾ ಜಾರ್ವಿಸ್ ಅನಾರೋಗ್ಯದಿಂದ 1948ರಲ್ಲಿ ಸಾವನ್ನಪ್ಪಿದರು. ಅನಾ ಜಾರ್ವಿಸ್ ಅವರಿಗೆ ಸ್ವಂತ ಮಕ್ಕಳಿರಲಿಲ್ಲ. ಆಗ ಜಾರ್ವಿಸ್ ಅವರ ಬಳಿ ನಯಾ ಪೈಸೆಯೂ (ಸಾಂದರ್ಭಿಕತೆಗೆ ಬಳಸಿದ ಪದ ಇದು) ಇರಲಿಲ್ಲ. ವಿಪರ್ಯಾಸ ಎಂದರೆ ಯಾವ ಉದ್ಯಮಗಳ ವಿರುದ್ಧ ಇವರು ಹೋರಾಡಿದರೋ ಅದೇ ಪುಷ್ಪೋದ್ಯಮ ಹಾಗೂ ಗ್ರೀಟಿಂಗ್ ಕಾರ್ಡ್ ಉದ್ಯಮಗಳು ಈಕೆಯ ಆಸ್ಪತ್ರೆ ಖರ್ಚಿಗೆ ಒಂದಷ್ಟು ಹಣ ಹೊಂದಿಸಿದ್ದವು.
(ಒನ್ಇಂಡಿಯಾ ಸುದ್ದಿ)
-
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ












Click it and Unblock the Notifications