BSNL ಗ್ರಾಹಕರ ಸಂಖ್ಯೆಯಲ್ಲಿ ಏರಿಕೆ: 160 ದಿನ, 320GB ಹೈ ಸ್ಪೀಡ್, ಬೆಲೆ ಜಸ್ಟ್ ....
ಸರ್ಕಾರಿ ಸೌಮ್ಯದ ಬಿಎಸ್‌ಎನ್‌ಎಲ್ ಕಂಪನಿ ಈಗ ಮತ್ತೆ ಚಿಗುರೊಡೆಯಲು ಸಿದ್ಧತೆ ನಡೆಸಿದೆ. ಖಾಸಗಿ ಟೆಲಿಕಾಂ ಕಂಪನಿಗಳ ರಿಚಾರ್ಜ್ ಬೆಲೆಗಳು ಗಗನಕ್ಕೆ ಏರಿದ್ದನ್ನೇ ಲಾಭವನ್ನಾಗಿಸಿಕೊಳ್ಳಲು ಬಿಎಸ್‌ಎನ್‌ಎಲ್ ಪ್ಲ್ಯಾನ್ ಮಾಡಿಕೊಂಡಿದೆ. ಕಳೆದ ಒಂದು ತಿಂಗಳಿನಲ್ಲಿ ಬಿಎಸ್‌ಎನ್‌ಎಲ್ ಬಳಕೆದಾರರ ಸಂಖ್ಯೆ ಕ್ರಮೇಣ ಏರಿಕೆ ಆಗುತ್ತಿದೆ. ಅದರಂತೆ ಬಿಎಸ್‌ಎನ್‌ಎಲ್ ಭಿನ್ನ ರಿಚಾರ್ಜ್ ಪ್ಲ್ಯಾನ್‌ಗಳನ್ನು ಸಹ ಲಾಂಚ್ ಮಾಡಿದೆ.
ಬಳಕೆದಾರರ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು ಬಿಎಸ್‌ಎನ್‌ಎಲ್ ಹಲವು ರಿಚಾರ್ಜ್ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ. ಈ ಪ್ಲ್ಯಾನ್‌ಗಳು ಈಗ ಸಖತ್ ವೈರಲ್ ಆಗುತ್ತಿವೆ. ಖಾಸಗಿ ಕಂಪನಿಯ ರಿಚಾರ್ಜ್ ಪ್ಲ್ಯಾನ್‌ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಬಿಎಸ್‌ಎನ್‌ಎಲ್ ಭರ್ಜರಿ ಆಫರ್‌ಗಳನ್ನು ನೀಡುತ್ತಿದೆ. ಈ ಮೂಲಕ ಒಂದೇ ತಿಂಗಳಿನಲ್ಲಿ ಬಿಎಸ್‌ಎನ್‌ಎಲ್ ಬಳಕೆದಾರರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ.

ಪ್ಲ್ಯಾನ್ ಹೇಗಿವೆ?
ಬಳಕೆದಾರರ ಜೇಬಿಗೆ ಭಾರವಾಗದಂತಹ ಪ್ಲ್ಯಾನ್‌ಗಳನ್ನು ಬಿಎಸ್ಎನ್‌ಎಲ್ ಬಿಡುಗಡೆ ಮಾಡಿದೆ. ಈ ಪ್ಲ್ಯಾನ್‌ಗಳು ಬಳಕೆದಾರರ ಅಗತ್ಯತೆಗೆ ಅನುಗುಣವಾಗಿವೆ. ಬಿಎಸ್‌ಎನ್‌ಎಲ್ ಈಗ ಭರ್ಜರಿ ಕೊಡುಗೆಗಳನ್ನು ನೀಡುತ್ತಲೆ ಇದೆ. ಇದರಲ್ಲಿ ಹೆಚ್ಚಿನ ದಿನದ ವ್ಯಾಲಿಡಿಟಿಯಿಂದ ಹಿಡಿದು, ಕಡಿಮೆ ವ್ಯಾಲಿಡಿಟಿಯ ಪ್ಲ್ಯಾನ್‌ಗಳು ಸಹ ಸೇರಿವೆ. ಈಗ ಬಿಎಸ್‌ಎನ್‌ಎಲ್ ಭರ್ಜರಿ ಡೇಟಾ ಪ್ಲ್ಯಾನ್ ರಿಲೀಸ್ ಮಾಡಿದ್ದು, ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡ್ತಾ ಇದೆ.
160 ದಿನಗಳ ವ್ಯಾಲಿಡಿಟಿ
ಕೋಟಿಗಟ್ಟಲೆ ಬಳಕೆದಾರರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು, BSNL ರಿಚಾರ್ಜ್ ಪ್ಲ್ಯಾನ್‌ನಲ್ಲಿ ಮಾರ್ಪಾಡು ಮಾಡಿದೆ. ಈಗ 997 ರೂಗಳ ರಿಚಾರ್ಜ್ ರಿಲೀಸ್ ಮಾಡಿದೆ. ಈ ರಿಚಾರ್ಜ್ ಮಾಡಿಸಿಕೊಂಡಲ್ಲಿ 160 ದಿನಗಳ ವ್ಯಾಲಿಡಿಟಿ ಲಭ್ಯ. ಅಲ್ಲದೆ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆ ಮಾಡುವ ಅವಕಾಶವನ್ನು ಕಂಪನಿ ನೀಡಲಿದೆ.
ಭರ್ಜರಿ ಡೇಟಾ
ಈ ರೀಚಾರ್ಜ್ ಯೋಜನೆಯ ಡೇಟಾ ಜಿಯೋ ಮತ್ತು ಏರ್‌ಟೆಲ್‌ಗಿಂತ ಸಾಕಷ್ಟು ಕಡಿಮೆ ಬೆಲೆಯದ್ದಾಗಿದೆ. ಇದರಲ್ಲಿ ಗ್ರಾಹಕರು ಒಟ್ಟು 320GB ಹೈ ಸ್ಪೀಡ್ ಇಂಟರ್ನೆಟ್ ಡೇಟಾ ಲಾಭವನ್ನು ಪಡೆಯಬಹುದು. ನೀವು ಪ್ರತಿದಿನ 2GB ಡೇಟಾವನ್ನು ಬಳಸಬಹುದು. ಇದರಲ್ಲಿ ಕಂಪನಿಯು ಗ್ರಾಹಕರಿಗೆ ಪ್ರತಿದಿನ 100 ಉಚಿತ SMS ಅನ್ನು ಸಹ ನೀಡುತ್ತದೆ.

BSNL ಗ್ರಾಹಕರಿಗೆ ಹಲವು ವಿಶೇಷ ಪ್ರಯೋಜನಗಳು
BSNL ತನ್ನ ರೀಚಾರ್ಜ್ ಯೋಜನೆಗಳೊಂದಿಗೆ ಜಿಯೋ ಮತ್ತು ಏರ್‌ಟೆಲ್‌ಗೆ ಭಾರೀ ಪೈಪೋಟಿ ನೀಡುತ್ತಿದೆ. ನಿಯಮಿತ ಪ್ರಯೋಜನಗಳ ಜೊತೆಗೆ, ಕಂಪನಿಯು ಗ್ರಾಹಕರಿಗೆ ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡುತ್ತಿದೆ. ನೀವು BSNL ನ ಈ ಯೋಜನೆಯನ್ನು ಖರೀದಿಸಿದರೆ, Hardy Games, Challenger Arena Games, Gameon & Astrotell, Gameium, Zing Music, WOW Entertainment, BSNL Tunes, Lystn Podocast ಸೌಲಭ್ಯವನ್ನು ಪಡೆಯಬಹುದು.











Click it and Unblock the Notifications