Almond Health Benefits: ಪ್ರತಿನಿತ್ಯ ಬಾದಾಮಿ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನೆಗಳಿವೆ ಗೊತ್ತಾ?, ಇಲ್ಲಿದೆ ವಿವರ
ತಮ್ಮ ಆರೋಗ್ಯವನ್ನು ಉತ್ತಮವಾಗಿರಿಸಲು ಪ್ರತಿನಿತ್ಯ ಮನುಷ್ಯರು ಒಂದಲ್ಲ ಒಂದು ಚಟುವಟಿಕೆಯನ್ನು ಮಾಡುತ್ತಲೇ ಇರುತ್ತಾರೆ. ಬೆಳಗ್ಗೆ ಎದ್ದ ತಕ್ಷಣ ಡ್ರೈಪ್ರೂಟ್ಸ್ ತಿನ್ನುವುದು, ಊಟದ ಬಳಿಕ ಹಣ್ಣುಗಳನ್ನು ಸೇವನೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಹೌದು. ಅದರಲ್ಲೂ ಡ್ರೈಫುಡ್ ಆದ ಬಾದಾವಿಯನ್ನು ಪ್ರತಿದಿನ ಸೇವಿಸುವುದರಿಂದ ಹಲವು ಪ್ರಯೋಜನೆಗಳನ್ನು ಪಡೆಯಬಹುದು.
ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕಾದರೆ ಆರೋಗ್ಯಕರ ಆಹಾರಗಳನ್ನು ಸೇವನೆ ಮಾಡಬೇಕಾಗುತ್ತದೆ. ಜೋತೆಗೆ ಹಣ್ಣು, ಹಂಪಲು ಜೊತೆಗೆ ಡ್ರೈಫುಡ್‌ಗಳನ್ನು ತಿನ್ನುವುದರಿಂದ ದೇಹವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದಾಗಿದೆ. ಅದರಲ್ಲೂ ಮಹಿಳೆಯರು ತಮ್ಮ ಅಗತ್ಯವಾದ ಪೋಷಕಾಂಶಗಳನ್ನು ಪಡೆಯಲು ಕಾಳುಗಳು, ತರಕಾರಿಗಳು, ಹಣ್ಣುಗಳೊಂದಿಗೆ ಡ್ರೈಫ್ರೂಟ್ಸ್ ಕೂಡ ತಿನ್ನಬೇಕಾಗುತ್ತದೆ. ಬಾದಾಮಿ, ಪಿಸ್ತಾ, ಒಣದ್ರಾಕ್ಷಿ, ಖರ್ಜೂರ, ಅಂಜೂರದಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಪೋಷಕಾಂಶಗಳು ಸಾಕಷ್ಟಿವೆ.

ಬಾದಾಮಿ ಸೇವನೆಯಿಂದ ಯಾವೆಲ್ಲ ಲಾಭಗಳಿವೆ?
1. ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಅದರ ಮೇಲಿನ ಸಿಪ್ಪೆ ತೆಗೆದು ನಂತರ ತಿನ್ನುವುದು ಉತ್ತಮವಾಗಿದೆ.
2. 10-15 ಬಾದಾಮಿಯನ್ನು ರಾತ್ರಿ ನೆನೆಸಿಟ್ಟು, ಮರುದಿನ ಬೆಳಗ್ಗೆ ಎದ್ದಾಗ ಉಪಾಹಾರಕ್ಕೆ ಮೊದಲು ತಿನ್ನಬಹುದು. ಇದನ್ನು ಪ್ರತಿದಿನ ಸೇವಿಸಿದರೆ ಪ್ರೋಟೀನ್, ಫೈಬರ್, ಜೀವಸತ್ವಗಳು, ಖನಿಜಗಳು, ಆಂಟಿ ಆಕ್ಸಿಡೆಂಟ್‌ಗಳು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಪಡೆಯಬಹುದು.
3. ಬಾದಾಮಿಯ ನಿಯಮಿತ ಸೇವನೆಯಿಂದ ಉಸಿರಾಟದ ತೊಂದರೆ, ಹೃದ್ರೋಗ, ಮಧುಮೇಹ, ಚರ್ಮದ ಸಮಸ್ಯೆಗಳು, ಕೂದಲು ಉದುರುವಿಕೆ ಮತ್ತು ರಕ್ತಹೀನತೆಯಂತಹ ಕಾಯಿಲೆಗಳನ್ನು ತಡೆಯಬಹುದು.
4. ಪ್ರತಿದಿನ 6-7 ನೆನೆಸಿದ ಬಾದಾಮಿ ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
5. ಪ್ರತಿದಿನ 5 ಬಾದಾಮಿ ತಿಂದರೆ ರಕ್ತದಲ್ಲಿರುವ ಕೆಟ್ಟ ಕೊಬ್ಬು ಕರಗುತ್ತದೆ. ನೆನೆಸಿದ ಬಾದಾಮಿಯಲ್ಲಿರುವ ಪೋಷಕಾಂಶಗಳು ರಕ್ತದಲ್ಲಿ ಆಲ್ಫಾ ಟ್ಯಾಕೋಫೆರಾಲ್ ಅನ್ನು ಹೆಚ್ಚಿಸಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
6. ರಕ್ತದಲ್ಲಿ ಬಿಳಿ ಮತ್ತು ಕೆಂಪು ಕಣಗಳನ್ನು ಹೆಚ್ಚಿಸುವ ಶಕ್ತಿ ಬಾದಾಮಿಗೆ ಇದೆ.
7. ಮೂಳೆಗಳ ಬೆಳವಣಿಗೆಗೆ ಅಗತ್ಯವಾದ ಕ್ಯಾಲ್ಸಿಯಂ ಮತ್ತು ರಂಜಕವನ್ನು ಹೊಂದಿರುತ್ತದೆ.
8. ಇನ್ನು ಬಾದಾಮಿ ಎಣ್ಣೆಯಿಂದ ಚರ್ಮಕ್ಕೆ ಮಸಾಜ್ ಮಾಡಿದರೆ ದೇಹದಲ್ಲಿ ರಕ್ತದ ಹರಿವು ಹೆಚ್ಚುತ್ತದೆ ಮತ್ತು ಚರ್ಮವು ಆರೋಗ್ಯಕರವಾಗಿ ಹೊಳೆಯುತ್ತದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಬಾದಾಮಿ ಎಣ್ಣೆಯನ್ನು ಮುಖಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿದರೆ ಕಾಂತಿ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
9. ಅಲ್ಲದೆ ಋತುಬಂಧಕ್ಕೊಳಗಾದ ಮಹಿಳೆಯರು ಪ್ರತಿನಿತ್ಯ ಬಾದಾಮಿಯನ್ನು ಸೇವಿಸಿದರೆ ಚರ್ಮದ ಸುಕ್ಕುಗಳಿಂದ ಮುಕ್ತಿ ಪಡೆಯಬಹುದಾಗಿದೆ.
ಬಾದಾಮಿ ಸೇವನೆಯಿಂದ ಇಷ್ಟೆಲ್ಲ ಪ್ರಯೋಜನಾಗಳಿವೆ ಅಂದಮೇಲೆ ಮತ್ತೇಕೆ ತಡ ಇಂದಿನಿಂದಲೇ ನೀವು ಕೂಡ ಈ ಕೆಲಸವನ್ನು ಶುರು ಮಾಡಿ ಆರೋಗ್ಯವನ್ನು ಮತ್ತಷ್ಟು ಉತ್ತಮವಾಗಿಟ್ಟುಕೊಳ್ಳಿ.












Click it and Unblock the Notifications