ಬೆರಗಾಗಿಸುವ ಬೆಕ್ಕುಗಳ ಬೈಕ್ ರೈಡ್: ವೈರಲ್ ವಿಡಿಯೋ

ಜನರು ತಮ್ಮ ಕುಟುಂಬದ ಸದಸ್ಯರಂತೆ ತಮ್ಮ ಸಾಕುಪ್ರಾಣಿಗಳನ್ನು ಸಾಕುತ್ತಾರೆ. ಪ್ರತಿಯೊಂದು ಸಂತೋಷ ಮತ್ತು ದುಃಖದಲ್ಲೂ ಅವುಗಳು ಮನೆಯ ಸದಸ್ಯರೊಂದಿಗೆ ಒಂದಾಗಿ ಹತ್ತಿರವಾಗುತ್ತವೆ. ಹೀಗಾಗಿ ಸಾಕು ಪ್ರಾಣಿಗಳು ಮಾಲೀಕರನ್ನು ಹೆಚ್ಚಾಗಿ ನಂಬುತ್ತವೆ. ಅವರು ಹೇಳಿದಂತೆ ಚಾಚೂತಪ್ಪದೆ ಪಾಲಿಸುತ್ತವೆ. ಇಂತಹ ಮುದ್ದಾದ ಪ್ರಾಣಿಗಳಲ್ಲಿ ನಾಯಿ ಹಾಗೂ ಬೆಕ್ಕು ಮೊದಲಿನವು.

ಸಾಕುಪ್ರಾಣಿಗಳ ಕೆಲವು ವಿಡಿಯೋಗಳು ಅಂತರ್ಜಾಲದಲ್ಲಿ ಬಹುಬೇಗ ವೈರಲ್ ಆಗುತ್ತವೆ. ಮುದ್ದಾದ ಪ್ರಾಣಿಗಳ ಈ ವಿಡಿಯೋಗಳು ನೋಡುಗರಿಗೆ ಖುಷಿ ನೀಡುತ್ತವೆ. ಕೆಲವು ಸಂದರ್ಭಗಳಲ್ಲಿ ಈ ಪ್ರಾಣಿಗಳು ತಮ್ಮ ನಿಷ್ಠೆಯಿಂದ ಸಾರ್ವಜನಿಕರ ಹೃದಯವನ್ನು ಗೆಲ್ಲುತ್ತವೆ. ಯಾವುದೇ ರಕ್ಷಣೆಯಿಲ್ಲದೆ ಬೆಕ್ಕುಗಳು ಬೈಕ್ನಲ್ಲಿ ಸಂಚರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಬೈಕ್ ಸವಾರನೊಬ್ಬ ತನ್ನ ಎರಡು ಸಾಕು ಬೆಕ್ಕುಗಳನ್ನು ಬೈಕ್ ಮೇಲೆ ಹೊತ್ತುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಈ ಬೆಕ್ಕುಗಳು ಚಲಿಸುವ ಬೈಕ್‌ನಲ್ಲಿ ತುಂಬಾ ಸುಲಭವಾಗಿ ಕುಳಿತುಕೊಂಡಿವೆ. ಒಂದು ಬೆಕ್ಕು ಮನುಷ್ಯನ ಬೆನ್ನಿನ ಮೇಲೆ ಕುಳಿತುಕೊಂಡರೆ, ಇನ್ನೊಂದು ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತಿದೆ. ಇವುಗಳನ್ನು ನೋಡಿದರೆ ಇವು ಎರಡಕ್ಕೂ ಭಯವೇ ಇಲ್ಲ ಅನ್ನಿಸುತ್ತದೆ. ಇವರನ್ನು ನೋಡಿದರೆ ಈ ಬೆಕ್ಕುಗಳಿಗೆ ಬೈಕ್ ಸವಾರಿ ಮಾಡಿ ಅಭ್ಯಸವಿರುವಂತೆ ಕಾಣಿಸುತ್ತದೆ. ಈ ವೈರಲ್ ವಿಡಿಯೋ ಬೆಂಗಳೂರಿನದ್ದು ಎಂದು ಹೇಳಲಾಗುತ್ತಿದೆ.

Amazing Cat Bike Ride: Viral Video

ಈ ವಿಡಿಯೊವನ್ನು ಜನವರಿ 14 ರಂದು 'ಅರುಣ್' (@alwAYzgAMe420) ಹೆಸರಿನ ಬಳಕೆದಾರರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 'ಈ ಹುಡುಗ ಇಂದು ಬೆಂಗಳೂರಿನ ಹೊರ ವರ್ತುಲ ರಸ್ತೆ (ORR) ನಲ್ಲಿ ಕಾಣಿಸಿಕೊಂಡಿದ್ದಾನೆ' ಎಂದು ಬರೆದಿದ್ದಾರೆ. ಈ 15 ಸೆಕೆಂಡುಗಳ ಕ್ಲಿಪ್ ಇದುವರೆಗೆ 1 ಲಕ್ಷ 61 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 5,839 ಲೈಕ್‌ಗಳನ್ನು ಪಡೆದುಕೊಂಡಿದೆ.

Amazing Cat Bike Ride: Viral Video

ಅನೇಕ ಬಳಕೆದಾರರು ಈ ಬಗ್ಗೆ ಕಾಮೆಂಟ್ ಕೂಡ ಮಾಡಿದ್ದಾರೆ. 'ಇದನ್ನು ನಂಬಿಕೆ ಮತ್ತು ಪ್ರೀತಿ' ಎಂದು ಕರೆದಿದ್ದಾರೆ. ಕೆಲವರು 'ಹೆದ್ದಾರಿಯಲ್ಲಿ ಇದು ತುಂಬಾ ಅಪಾಯಕಾರಿ' ಎಂದು ಹೇಳಿದ್ದಾರೆ. ಆದರೆ ಅನೇಕ ಬಳಕೆದಾರರು ಇದನ್ನು ತುಂಬಾ ಮುದ್ದಾಗಿದೆ ಎಂದು ಕರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+