ಏರ್ ಟೆಲ್ ಡಿಜಿಟಲ್ ಟಿವಿಯಲ್ಲಿ ಚಾನೆಲ್ ಆಯ್ಕೆ ವಿಧಾನ ಹೇಗೆ?
ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹೊರ ತಂದಿರುವ ಹೊಸ ಕೇಬಲ್ ನೀತಿ ಫೆಬ್ರವರಿ 1 ರಿಂದ ಜಾರಿಗೆ ಬರಲಿದೆ. ಕೇಬಲ್ ಟಿವಿ ಮತ್ತು ಡಿಟಿಹೆಚ್ ದರದ ಮಾಹಿತಿಗಳನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ಏರ್ ಟೆಲ್ ಡಿಜಿಟಲ್ ಟಿವಿ ತನ್ನ ಗ್ರಾಹಕರಿಗೆ ಚಾನೆಲ್ ಆಯ್ಕೆ ಮಾಡಿಕೊಳ್ಳುವ ವಿಧಾನವನ್ನು ಪ್ರಕಟಿಸಿದೆ.
ದೂರದರ್ಶನದ ಉಚಿತ ಚಾನೆಲ್ ಗಳು ಸೇರಿದಂತೆ 100 ಚಾನೆಲ್ ಗಳ ಪ್ಯಾಕೇಜ್ ಗೆ 184ರು ಎಂದು ಈ ಹಿಂದೆ ನಿಗದಿ ಪಡಿಸಲಾಗಿತ್ತು. ಆದರೆ, ಈಗ ಈ ಮೊತ್ತ 154ರು ಗಳಾಗಲಿವೆ. ಚಂದಾದಾರರಿಕೆ ಮೊತ್ತ 130ರು ಪ್ಲಸ್ ತೆರಿಗೆ ಮೊತ್ತ ಸೇರಲಿದೆ.
100 ರು ಚಾನೆಲ್ ಗಳ ನಂತರ ಬೇಕಾದ ಚಾನೆಲ್ ಪಡೆಯಲು ಪ್ರತಿ 25 ಚಾನೆಲ್ ಗಳಿಗೆ 20 ರು ನಂತೆ ದರ ನಿಗದಿಯಾಗಿದೆ ಈ ರೀತಿ ಆಯ್ಕೆ ವಿಧಾನವನ್ನು a la carte ಎನ್ನಲಾಗುತ್ತದೆ. ಎಚ್ ಡಿ ಚಾನೆಲ್ ಗಳು ಬೇಕಾದರೆ ದರ ಇನ್ನಷ್ಟು ಹೆಚ್ಚಾಗಲಿದೆ. ಕೇಬಲ್ ಟಿವಿ ಆಪರೇಟರ್ಸ್, ಏರ್ ಟೆಲ್ ಸೇರಿದಂತೆ ವಿವಿಧ ಡಿಟಿಎಚ್ ಸೇವಾದರರು ಪ್ರತ್ಯೇಕ ದರ ಪಟ್ಟಿಯನ್ನು ನಿಗದಿ ಪಡಿಸಿವೆ.
ಈಗ ಹೊಸ ನಿಯಮದ ಪ್ರಕಾರ ಒಂದು ಚಾನೆಲ್ ಅಥವಾ ಚಾನೆಲ್ ಗಳ ಸಮೂಹಗಳಿರುವ ಪ್ಯಾಕೆಜ್ ಹಾಕಿಸಿಕೊಳ್ಳಬಹುದು. ಜೀ, ಸೋನಿ, ಸ್ಟಾರ್, ಕಲರ್ಸ್ ವಾಹಿನಿ ಹೀಗೆ ಪ್ಯಾಕೆಜ್ ಗಳು ಸಿದ್ಧವಾಗಿದ್ದು, ಏರ್ ಟೆಲ್ ವೆಬ್ ಸೈಟ್ ಮೂಲಕದ ಆನ್ ಲೈನ್ ನಲ್ಲಿ ಸುಲಭವಾಗಿ ಚಾನೆಲ್ ಗಳ ಶಾಪಿಂಗ್ ಮಾಡಿ ನಿಮಗೆ ಬೇಕಾದ ಪ್ಯಾಕೇಜ್ ಪಡೆಯಿರಿ

ಮೊದಲ ಹಂತ
* ಏರ್ ಟೆಲ್ ಡಿಜಿಟಲ್ ಟಿವಿ ಅಥವಾ ಏರ್ ಟೆಲ್ ಇಂಟರ್ನೆಟ್ ಟಿವಿ ಗ್ರಾಹಕರು ಏರ್ ಟೆಲ್ ಪೋರ್ಟಲ್ ಗೆ ಭೇಟಿ ನೀಡಿ ಲಾಗ್ ಇನ್ ಆಗಬೇಕು.
* ಲಾಗ್ ಇನ್ ಆದ ಬಳಿಕ ಚಂದಾದಾರಿಕೆ ಸಂಖ್ಯೆ ಹಾಕಿ ನಿಮ್ಮ ಪ್ಯಾಕೇಜ್ ಬದಲಾಯಿಸಲು ಸೂಚಿಸಿ.
* ನಿಮ್ಮ Subscriber Number ಸ್ಥಳದಲ್ಲಿ ಏರ್ ಟೆಲ್ subsriber ID ಹಾಕಿ.

ನಿಮ್ಮ ನೆಚ್ಚಿನ ಯೋಜನೆ ಆಯ್ಕೆ ಮಾಡಿಕೊಳ್ಳಿ
ಏರ್ ಟೆಲ್ ಸದ್ಯಕ್ಕೆ ತನ್ನ ಗ್ರಾಹಕರಿಗೆ ಎರಡು ಯೋಜನೆಗಳನ್ನು ಪ್ರಕಟಿಸುತ್ತಿದೆ. ಉದಾಹರಣೆಗೆ 699 ರುಪಾಯಿ ಯೋಜನೆಯಲ್ಲಿ ಈಗ ನೀವು 306 ರುಪಾಯಿಗಳಷ್ಟು ಉಳಿಸಬಹುದಾಗಿದೆ(A la carte ಮಾದರಿಯಿಂದ ಅಯ್ಕೆ ಮಾಡಿ) : ಒಟ್ಟಾರೆ 160 ಚಾನೆಲ್ ಸಿಗಲಿದೆ. ನಿಮ್ಮ ಚಾನೆಲ್ ಯೋಜನೆ ಬದಲಾಯಿಸಲು ಇಷ್ಟವಿಲ್ಲದಿದ್ದರೆ, ಬ್ರಾಡ್ ಕಾಸ್ಟರ್ ಬೊಕೆ ಅಥವಾ ಅಲಾ ಕಾರ್ಟೆ ಮಾದರಿಯಂತೆ ಚಾನೆಲ್ ಆಯ್ಕೆ ಮಾಡಿಕೊಳ್ಳಬಹುದು

ಬ್ರಾಡ್ ಕಾಸ್ಟರ್ ಬೊಕೆ(ಚಾನೆಲ್ ಗಳ ಗುಚ್ಛ) ಮಾದರಿ
ಇದು ಬ್ರಾಡ್ ಕಾಸ್ಟ್ ಮಾಡುವವರಿಗೆ ಉಪಯುಕ್ತವಾದ ವಿಧಾನ, ವಿವಿಧ ಬ್ರಾಡ್ ಕಾಸ್ಟರ್ ಗಳನ್ನು ಆಯ್ಕೆ ಮಾಡಿಕೊಂಡು ನಿಮ್ಮ ಪ್ಯಾಕೇಜ್ ಪೂರ್ಣಗೊಳಿಸಬಹುದು. ಪ್ರತಿ ಚಾನೆಲ್ ಗಳ ದರಪಟ್ಟಿ ನಿಗದಿಯಾಗಿದ್ದು,ಈಟಿವಿ, ಜೀ, ಸ್ಟಾರ್, ಸನ್, ಡಿಸ್ನಿ ಹೀಗೆ 17 Bouguet(ಚಾನೆಲ್ ಗಳ ಗುಚ್ಛ)ಗಳಿದ್ದು, ಒಂದಕ್ಕಿಂತ ಹೆಚ್ಚು ಚಾನೆಲ್ ಗುಚ್ಛಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಅಲಾ ಕಾರ್ಟೆ(a LA Carte) ಮಾದರಿ
ಈ ಮಾದರಿಯಲ್ಲಿ ಒಂದೊಂದೆ ಚಾನೆಲ್ ಗಳನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ದೂರದರ್ಶನದ 25 ಚಾನೆಲ್ ಗಳು ಏರ್ ಟೆಲ್ ಸೇರಿದಂತೆ ಎಲ್ಲಾ ಸೇವಾದಾರರು ಕಡ್ಡಾಯವಾಗಿ ನೀಡತಕ್ಕದ್ದು. ಉಳಿದಂತೆ ನಿಮ್ಮ ನೆಚ್ಚಿನ ಚಾನೆಲ್ ಗಳನ್ನು ಆಯ್ಕೆ ಮಾಡುತ್ತಿದ್ದಂತೆ ಅವುಗಳ ಮೊತ್ತವು ಸೇರುತ್ತದೆ. ಭಾಷೆಗೆ ತಕ್ಕಂತೆ ಪ್ರತ್ಯೇಕ ಪ್ಯಾಕೇಜ್ ಗಳು ಲಭ್ಯವಿದೆ. ಇದರಲ್ಲಿ ಉಚಿತವಾದ ಚಾನೆಲ್ (FTA) ಹಾಗೂ ಪೇ ಚಾನೆಲ್ ಗಳು ಪ್ರತ್ಯೇಕವಾಗಿರುತ್ತದೆ.

ದೂರುಗಳಿದ್ದರೆ ಟ್ರಾಯ್ ಸಂಪರ್ಕಿಸಿ
ಏರ್ ಟೆಲ್, ಡಿಶ್ ಟಿವಿ, ಹಾಥ್ವೇ, ಸಿಟಿ ಕೇಬಲ್, ಸ್ಥಳೀಯ ಕೇಬಲ್ ಆಪರೇಟರ್ ಗಳು ತಮ್ಮ ದರ ಪಟ್ಟಿಯನ್ನು ಈಗಾಗಲೇ ಚಂದಾದರರಿಗೆ ಪ್ರದರ್ಶಿಸತೊಡಗಿವೆ. ಪ್ರಸಾರಕಾರರು, ಡಿಟಿಎಚ್ ಆಪರೇಟರ್ ಗಳು ಮತ್ತು Multi System Operators(ಎಂಎಸ್ಒ)ಗಳ ಜತೆ ಟ್ರಾಯ್ ಅಧಿಕಾರಿಗಳು ಮಹತ್ವದ ಸಭೆ ನಡೆಸಿದ ಬಳಿಕ ದರಗಳನ್ನು ನಿಗದಿ ಮಾಡಲಾಗಿದೆ. ದರ ಪಟ್ಟಿ ಬಗ್ಗೆ ಯಾವುದಾದರೂ ಡೌಟ್ಗಳಿದ್ದರೆ 011-23237922 (ಎ.ಕೆ. ಭಾರಧ್ವಾಜ್) ಮತ್ತು 011-23220209 (ಅರವಿಂದ್ ಕುಮಾರ್) ಇಲ್ಲವೇ ಇ- ಮೇಲ್ [email protected] ಅಥವಾ [email protected]. ಗೆ ಸಂಪರ್ಕಿಸಬಹುದು
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications