ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಹೊಗೆ' ಎಳೆಯೋರಿಗೆ ಖುಷಿ ಸುದ್ದಿಯಾ? ಮಾಲಿನ್ಯ, ಧೂಮಪಾನ, ಹೃದಯಾಘಾತಕ್ಕೆ ಏನಿದೆ ನಂಟು?

|
Google Oneindia Kannada News

ಜರ್ಮನಿಯ ಸಂಶೋಧಕರು ಒಂದು ಕುತೂಹಲಕಾರಿ ಅಂಶವನ್ನು ವ್ಯಕ್ತಪಡಿಸುವ ಅಧ್ಯಯನದ ವರದಿ ಪ್ರಕಟಿಸಿದ್ದಾರೆ. ವಾಯು ಮಾಲಿನ್ಯ ಮತ್ತು ಹೃದಯಾಘಾತಗಳಿಗೆ ಎಂಥ ಸಂಬಂಧ ಇದೆ ಎಂಬುದನ್ನು ತಿಳಿಸುವಂಥ ಅಧ್ಯಯನ ಅದು. ಭಯದಲ್ಲೇ ಹೊಗೆ ಎಳೆಯುವ ಧೂಮಪಾನಿಗಳು ತುಸು ಜಂಭ ಪಡುವಂಥ ಸಮೀಕ್ಷೆ ಅದು.

ವಾಯು ಮಾಲಿನ್ಯದ ಕಾರಣದಿಂದ ಹೃದಯಾಘಾತವಾಗುವ ಜನರ ಪೈಕಿ ಧೂಮಪಾನಿಗಳ ಸಂಖ್ಯೆ ತೀರಾ ಕಡಿಮೆ ಇದೆಯಂತೆ. ಜರ್ಮನಿಯ ಬರ್ಲಿನ್ ಬ್ರ್ಯಾಂಡೆನ್‌ಬರ್ಗ್ ಮಯೋಕಾರ್ಡಿಯಲ್ ಇನ್ಫಾರ್ಕೇಶನ್ ರಿಜಿಸ್ಟ್ರಿ (B2HIR) ಸಂಸ್ಥೆಯ ವಿಜ್ಞಾನಿ ಡಾ. ಇನ್ಸಾ ಡೀ ಬುರ್-ಸ್ಟಾಕ್ ಬರ್ಗರ್ ಎಂಬುವವರ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ ಈ ಕುತೂಹಲಕಾರಿ ಮಾಹಿತಿ ಇದೆ.

ಮಾಲಿನ್ಯದಿಂದ ಮರಣ: ಕಲುಷಿತ ನಗರಗಳ ಪಟ್ಟಿಯಲ್ಲಿ ದೆಹಲಿಗೆ ಅಗ್ರಸ್ಥಾನ!ಮಾಲಿನ್ಯದಿಂದ ಮರಣ: ಕಲುಷಿತ ನಗರಗಳ ಪಟ್ಟಿಯಲ್ಲಿ ದೆಹಲಿಗೆ ಅಗ್ರಸ್ಥಾನ!

"ವಾಯು ಮಾಲಿನ್ಯ ಮತ್ತು ಹೃದಯಾಘಾತಗಳ ನಡುವಿನ ಪರಸ್ಪರ ಸಂಬಂಧವು ನಿಯಮಿತ ಧೂಮಪಾನಿಗಳಲ್ಲಿ ಕಾಣಿಸುವುದಿಲ್ಲ ಎಂಬುದು ನಮ್ಮ ಅಧ್ಯಯನದಿಂದ ತಿಳಿದುಬರುತ್ತದೆ," ಎಂದು ಡಾ. ಇನ್ಸಾ ಹೇಳಿದ್ಧಾರೆ.

ಇದರರ್ಥ, ಧೂಮಪಾನಿಗಳಿಗೆ ಹೃದಯಾಘಾತ ಆಗುವುದಿಲ್ಲ ಎಂದಲ್ಲ. ಧೂಮಪಾನಿಗಳು ಸಿಗರೇಟ್ ಸೇವಿಸುವ ಮೂಲಕ ವಿವಿಧ ರೀತಿಯ ವಾಯು ಮಲಿನಕಾರಿ ಮತ್ತು ವಿಷಕಾರಿ ವಸ್ತುಗಳನ್ನು ದೇಹದೊಳಗೆ ಸೇರಿಸಿಕೊಳ್ಳುತ್ತಿರುತ್ತಾರೆ. ಹೀಗಾಗಿ, ಅವರಿಗೆ ಇನ್ನಷ್ಟು ಮಲಿನತೆಯಿಂದ ಹೆಚ್ಚಿನ ತೊಂದರೆ ಆಗುವುದಿಲ್ಲ.

ಕೊಚ್ಚೆಯಲ್ಲಿ ಮಿಂದೇಳುವ ಹಂದಿಗೆ ಇನ್ನಷ್ಟು ಕೆಸರು ಎರಚಿದರೆ ಏನಾದೀತು? ಏನೂ ಆಗಲ್ಲ. ಧೂಮಪಾನಿಗಳ ವಿಚಾರದಲ್ಲೂ ಅದೇ ಅನ್ವಯ ಆಗುತ್ತದೆ. ಸಿಗರೇಟು ಸೇದಿ ಸೇದಿ ಅವರ ದೇಹ ವಿಷಕಾರಿ ವಸ್ತುಗಳ ಗೂಡಾಗಿಹೋಗಿರುತ್ತದೆ. ಹೀಗಾಗಿ, ವಾಯು ಮಾಲಿನ್ಯದಿಂದ ಅವರಿಗೆ ಹೆಚ್ಚಿನ ಬಾಧೆಯಾಗದು.

ಏಳು ವರ್ಷಗಳ ಅಧ್ಯಯನ

ಏಳು ವರ್ಷಗಳ ಅಧ್ಯಯನ

ಬರ್ಲಿನ್ ನಗರದಲ್ಲಿ 2008ರಿಂದ 2014ರ ಅವಧಿಯಲ್ಲಿ ದಾಖಲಾದ ಮಯೋಕಾರ್ಡಿಯಲ್ ಇನ್ಫಾರ್ಕೇಶನ್ ಅಥವಾ ಹಾರ್ಟ್ ಅಟ್ಯಾಕ್ ಘಟನೆಗಳನ್ನು ದಿನವೂ ಟ್ರ್ಯಾಕ್ ಮಾಡಲಾಗಿತ್ತು. ಇಂಥ ರೋಗಿಗಳ ವಯಸ್ಸು, ಲಿಂಗ, ಧೂಮಪಾನ ಸ್ಥಿತಿ, ಡಯಾಬಿಟಿಸ್ ಸ್ಥಿತಿ ಇತ್ಯಾದಿಯನ್ನು ಗಮನಿಸಲಾಯಿತು. ಒಟ್ಟು 17,873 ರೋಗಿಗಳು ಅಧ್ಯಯನಕ್ಕೆ ಸಿಕ್ಕರು.

ಬರ್ಲಿನ್ ನಗರದಲ್ಲಿ ಪ್ರತೀ ದಿನವೂ ಹಾರ್ಟ್ ಅಟ್ಯಾಕ್ ಪ್ರಕರಣಗಳ ಜೊತೆಗೆ ವಾಯು ಮಾಲಿನ್ಯ ಅಂಶಗಳನ್ನೂ ದಾಖಲಿಸುತ್ತಾ ಬರಲಾಯಿತು. ಬಹಳ ಅಪಾಯಕಾರಿ ವಾಯು ಮಾಲಿನ್ಯ ಎನ್ನಲಾದ ನೈಟ್ರಿಕ್ ಆಕ್ಸೈಡ್ ಮತ್ತು PM10 ಗಾತ್ರಕ್ಕಿಂತ ಕಡಿಮೆ ಇರುವ ಮಲಿನ ವಸ್ತು ವಾತಾವರಣದಲ್ಲಿ ಎಷ್ಟಿದೆ ಎಂದು ಗಮನಿಸಲಾಗುತ್ತಿತ್ತು. ಹಾಗೆಯೇ ಆ ದಿನದ ವಾತಾವರಣವನ್ನೂ ದಾಖಲಿಸಲಾಗುತ್ತಿತ್ತು.

ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ಹಾರ್ಟ್ ಅಟ್ಯಾಕ್ ಪ್ರಕರಣಗಳಿಗೂ ನೈಟ್ರಿಕ್ ಆಕ್ಸೈಡ್‌ಗೂ ಮತ್ತು ಪಿಎಂ10 ವಸ್ತುಗಳಿಗೂ ಎಷ್ಟು ಸಂಬಂಧ ಇದೆ ಎಂಬುದನ್ನು ಅಧ್ಯಯನ ಮಾಡಲಾಗಿದೆ.

ಪ್ರತಿ ಸಿಗರೇಟಿನ ಮೇಲೆ ಲಿಖಿತ ಎಚ್ಚರಿಕೆ ಪರಿಚಯಿಸಿದ ಮೊದಲ ರಾಷ್ಟ್ರಪ್ರತಿ ಸಿಗರೇಟಿನ ಮೇಲೆ ಲಿಖಿತ ಎಚ್ಚರಿಕೆ ಪರಿಚಯಿಸಿದ ಮೊದಲ ರಾಷ್ಟ್ರ

ನೈಟ್ರಿಕ್ ಆಕ್ಸೈಡ್ ಹೆಚ್ಚು ಇದ್ದಾಗ..

ನೈಟ್ರಿಕ್ ಆಕ್ಸೈಡ್ ಹೆಚ್ಚು ಇದ್ದಾಗ..

ತೀವ್ರಮಟ್ಟದ ಮಯೋಕಾರ್ಡಿಯಲ್ ಇನ್ಫಾರ್ಕೇಶನ್ ಪ್ರಕರಣ ಎದುರಾದ ದಿನದಂದು ಹಾಗೂ ಹಿಂದಿನ ಕೆಲ ದಿನಗಳ ಹಿಂದಿನವರೆಗೂ ವಾತಾವರಣದಲ್ಲಿ ಮಾಲಿನ್ಯದ ಮಟ್ಟ ಎಷ್ಟಿತ್ತು ಎಂಬ ಮಾಹಿತಿಯನ್ನು ಪಡೆಯಲಾಯಿತು. ಹಾರ್ಟ್ ಅಟ್ಯಾಕ್ ಆದ ವ್ಯಕ್ತಿಗಳ ವಯಸ್ಸು, ಲಿಂಗ, ಸ್ಮೋಕಿಂಗ್, ಡಯಾಬಿಟಿಸ್ ಇತ್ಯಾದಿಯ ಸ್ಥಿತಿಗತಿಯನ್ನೂ ಸಂಗ್ರಹಿಸಿ ಒಂದಕ್ಕೊಂದು ಎಷ್ಟು ಸಂಬಂಧ ಇದೆ ಎಂದು ಹೋಲಿಕೆ ಮಾಡಲಾಯಿತು.

ವಾಯು ವಾತಾವರಣದಲ್ಲಿ ನೈಟ್ರಿಕ್ ಆಕ್ಸೈಡ್ ದಟ್ಟನೆ ಹೆಚ್ಚಿದ್ದಾಗ ಮಯೋಕಾರ್ಡಿಯನ್ ಇನ್‌ಫಾರ್ಕೇಶನ್ ಸಮಸ್ಯೆ ಹೆಚ್ಚು ಕಾಡಿದ್ದು ಕಂಡುಬಂದಿದೆ. ಕುತೂಹಲವೆಂದರೆ ವಾತಾವರಣದಲ್ಲಿ ನೈಟ್ರಿಕ್ ಆಕ್ಸೈಡ್ ಪ್ರಮಾಣ 10ug/m3ಯಷ್ಟು ಏರಿಕೆಯಾದಷ್ಟೂ ಹಾರ್ಟ್ ಅಟ್ಯಾಕ್ ಸಂಭವನೀಯತೆ ಶೇ. 1ರಷ್ಟು ಹೆಚ್ಚಿರುವುದು ಬೆಳಕಿಗೆ ಬಂದಿದೆ.

ಹಾಗೆಯೇ, ಹಾರ್ಟ್ ಅಟ್ಯಾಕ್ ಆದ ದಿನಕ್ಕೆ ಹಿಂದಿನ ಮೂರು ದಿನದಲ್ಲಿ ಸರಾಸರಿ ಪಿಎಂ10 ಮಾಲಿನ್ಯ ದಟ್ಟನೆ ಹೆಚ್ಚಾಗಿದ್ದುದು ಕಂಡುಬಂದಿದೆ. ಈ ಮಾಲಿನ್ಯದ ತೀವ್ರತೆ 10ಯುಜಿ/ಎಂ3 ಯಷ್ಟು ಏರಿದಂತೆಲ್ಲಾ ಹಾರ್ಟ್ ಅಟ್ಯಾಕ್ ಸಂಭವನೀಯತೆ ಶೇ. 4ರಷ್ಟು ಹೆಚ್ಚಾಗಿತ್ತು.

ಧೂಮಪಾನಿಗಳು ಸೇಫ್?

ಧೂಮಪಾನಿಗಳು ಸೇಫ್?

ಈ ಮೇಲಿನ ಅಧ್ಯಯನದಲ್ಲಿ, ಧೂಮಪಾನಿಗಳಿಗೆ ಹಾರ್ಟ್ ಅಟ್ಯಾಕ್ ಆಗುವುದಕ್ಕೂ ವಾತಾವರಣದಲ್ಲಿ ನೈಟ್ರಿಕ್ ಆಕ್ಸೈಡ್ ಮತ್ತು ಪಿಎಂ10 ದಟ್ಟನೆ ಹೆಚ್ಚಾಗುವುದಕ್ಕೂ ಸಂಬಂಧ ಕಂಡು ಬಂದಿಲ್ಲ. ಅಂದರೆ, ವಾಯು ಮಾಲಿನ್ಯದ ಕಾರಣದಿಂದ ಧೂಮಪಾನಿಗಳಲ್ಲಿ ಮಯೋಕಾರ್ಡಿಯನ್ ಇನ್ಫಾರ್ಕೇಶನ್ ಆಗಿಲ್ಲ ಎಂದು ಜರ್ಮಿನಿಯ ಈ ಅಧ್ಯಯನ ಹೇಳುತ್ತದೆ.

ಹೆಚ್ಚು ಉಷ್ಣಾಂಶ

ಹೆಚ್ಚು ಉಷ್ಣಾಂಶ

ಅಧ್ಯಯನದಲ್ಲಿ ಇನ್ನೂ ಒಂದು ಕುತೂಹಲ ಅಂಶ ಇದೆ. ಪ್ರದೇಶದ ತಾಪಮಾನಕ್ಕೂ ಹಾರ್ಟ್ ಅಟ್ಯಾಕ್‌ಗೂ ಸಂಬಂಧ ಇರುವುದು ಗೊತ್ತಾಗಿದೆ. ವಾತಾವರಣದಲ್ಲಿ 10 ಡಿಗ್ರಿ ಸೆಲ್ಷಿಯಸ್‌ನಷ್ಟು ಉಷ್ಣಾಂಶ ಏರಿಕೆಯಾದಂತೆಲ್ಲಾ ಹಾರ್ಟ್ ಅಟ್ಯಾಕ್ ಸಂಭವನೀಯತೆ ಶೇ. 6ರಷ್ಟು ಕಡಿಮೆ ಆಗಿದೆ. ಆದರೆ, ಸೂರ್ಯನ ಬಿಸಿಲು ಎಷ್ಟು ಕಾಲಾವಧಿಯವರೆಗೆ ಇತ್ತು ಅಥವಾ ಮಳೆ ಎಷ್ಟು ಹೊತ್ತು ಬಿತ್ತು ಎಂಬುದಕ್ಕೂ ಮಯೋಕಾರ್ಡಿಯಲ್ ಇನ್ಫಾರ್ಕೇಶನ್ ಪ್ರಕರಣಕ್ಕೂ ನೇರ ಸಂಬಂಧ ಇರುವುದು ಗೊತ್ತಾಗಿಲ್ಲ.

"ತೀವ್ರಮಟ್ಟದ ಮಯೋಕಾರ್ಡಿಯಲ್ ಇನ್ಫಾರ್ಕೇಶನ್‌ಗೆ ಕೆಟ್ಟ ಗಾಳಿ ಕಾರಣ ಎಂಬುದನ್ನು ಈ ಅಧ್ಯಯನ ಹೇಳುತ್ತದೆ. ವಾಹನ ದಟ್ಟನೆಯಿಂದ ಆಗುವ ಮಾಲಿನ್ಯವನ್ನು ಕಡಿಮೆಗೊಳಿಸಲು ಹೆಚ್ಚು ಕ್ರಮ ಕೈಗೊಳ್ಳಬೇಕು. ಈ ರೀತಿ ಅಧ್ಯಯನದಿಂದ ಹಾರ್ಟ್ ಅಟ್ಯಾಕ್‌ಗೆ ಇದೇ ಕಾರಣ ಎಂದು ನಿರ್ದಿಷ್ಟವಾಗಿ ನಿರೂಪಿಸಲು ಆಗುವುದಿಲ್ಲ. ಆದರೆ, ಮಯೋಕಾರ್ಡಿಯಲ್ ಇನ್ಫಾರ್ಕೇಶನ್‌ಗೆ ವಾಯು ಮಾಲಿನ್ಯ ಕಾರಣ ಎಂಬ ಸಂಗತಿಯನ್ನು ನಿರಾಕರಿಸಲು ಆಗುವುದಿಲ್ಲ," ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಜರ್ಮನ್ ವಿಜ್ಞಾನಿ ಡಾ. ಡಿ ಬುಹ್ರ್ ಸ್ಟಾಕ್‌ಬರ್ಜಗರ್ ಹೇಳುತ್ತಾರೆ.

ಮಾಲಿನ್ಯ ಹೇಗೆ?

ಮಾಲಿನ್ಯ ಹೇಗೆ?

ಅಪಾಯಕಾರಿ ಮಲಿನ ವಸ್ತುಗಳೆಂದರೆ ನೈಟ್ರಿಕ್ ಆಕ್ಸೈಡ್ ಮತ್ತು ಪಿಎ10 ಗಾತ್ರದ ವಸ್ತುಗಳು. ಡೀಸೆಲ್ ಎಂಜಿನ್‌ಗಳ ವಾಹನಗಳಿಂದ ಹೆಚ್ಚಾಗಿ ನೈಟ್ರಕ್ ಆಕ್ಸೈಡ್ ಹೊರಹೊಮ್ಮುತ್ತದೆ. ಟಯರ್, ಬ್ರೇಕ್‌ಗಳ ಉಜ್ಜುವಿಕೆಯಿಂದ ಮತ್ತು ಧೂಳಿನಿಂದ ಪಿಎಂ10 ವಸ್ತುಗಳು ವಾತಾವರಣ ಸೇರುತ್ತವೆ.

ಪಿಎಂ10 ಎಂದರೆ ವ್ಯಾಸದಲ್ಲಿ 10 ಮೈಕ್ರಾನ್‌ಗಿಂತಲೂ ಕಡಿಮೆ ಇರುವ ವಸ್ತು. ಇವು ಶ್ವಾಸಕೋಶ ಸೇರಿಕೊಂಡಾಗ ಬಹಳ ಅಪಾಯಕಾರಿ ಎನಿಸುತ್ತವೆ.

ಇನ್ನು ಮಯೋಕಾರ್ಡಿಯಲ್ ಇನ್ಫಾರ್ಕೇಶನ್ ಎಂದರೆ ಸಾಮಾನ್ಯವಾಗಿ ಹಾರ್ಟ್ ಅಟ್ಯಾಕ್ ಎಂದು ಕರೆಯಬಹುದು. ನಮ್ಮ ಹೃದಯದ ಸ್ನಾಯುವಿನ ಭಾಗಗಳಿಗೆ ಅಗತ್ಯ ಆಮ್ಲಜನಕ ಪೂರೈಕೆ ಆಗದೇ ಹೋದಾಗ ಹಾರ್ಟ್ ಅಟ್ಯಾಕ್ ಸಂಭವಿಸುತ್ತದೆ. ನಮ್ಮ ಹೃದಯಕ್ಕೆ ಆಮ್ಲಜನಕ ಪೂರೈಕೆ ಆಗುವುದು ರಕ್ತದ ಮೂಲಕ. ಹೃದಯದ ಸ್ನಾಯುವಿಗೆ ರಕ್ತದ ಪೂರೈಕೆ ಸ್ಥಗಿತಗೊಂಡಾಗ ಈ ದುರಂತವಾಗುತ್ತದೆ.

(ಒನ್ಇಂಡಿಯಾ ಸುದ್ದಿ)

English summary
A study done in Germany has linked heart attack incidents to the prevailing air pollution on the day of incidence. Regular smokers are found to be less effected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X