ಮಹಿಳೆಯರಿಗೂ ಉತ್ತಮ ಸ್ಥಾನಮಾನ..! ಅರೆರೆ.. ಇದು ತಾಲಿಬಾನ್ ವ್ಯಾಖ್ಯಾನ..!
ಮೊದಲೆಲ್ಲಾ
ತಾಲಿಬಾನ್ ಎಂದ ಕೂಡಲೆ ಉಗ್ರರು, ರಾಕ್ಷಸರು, ಪಿಶಾಚಿಗಳು, ಪೈಶಾಚಿಕ ಕೃತ್ಯ ಎಸಗುವವರು ಎಂಬ ಭಾವನೆ ಹಾಗೂ ಭೀತಿ ಇತ್ತು. ಆದ್ರೆ ಈಗ ಎಲ್ಲಾ ಬದಲಾಗಿದೆ. ತಾಲಿಬಾನ್ ಕೂಡ ಬದಲಾಗಿರುವಂತೆ ಕಾಣುತ್ತಿದೆ. 2001ರಲ್ಲಿ ತಾನು ಅಧಿಕಾರ ಕಳೆದುಕೊಳ್ಳುವ ಸಂದರ್ಭದಲ್ಲಿದ್ದ ತಾಲಿಬಾನ್‌ಗೂ, ಈಗಿನ ಸ್ಥಿತಿಗೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ. ಇದರ ಮೊದಲ ಭಾಗವಾಗಿ ಮಹಿಳೆಯರಿಗೆ ಉತ್ತಮ ಸ್ಥಾನಮಾನ ಕಲ್ಪಿಸಿ ಕೊಡುವ ಬಗ್ಗೆ ತಾಲಿಬಾನ್ ಚಿಂತನೆ ನಡೆಸಿದೆ. id="toptextpromo"> id='are-slot-1' class='oiad oi-axt oiadv'>ಹೀಗಾಗಿ
ಅಫ್ಘಾನಿಸ್ತಾನದ ಟಿವಿ ತೆರೆ ಮೇಲೆ ಮಹಿಳಾ ಆಂಕರ್ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಮಾತ್ರವಲ್ಲದೆ ತಾಲಿಬಾನ್ ಮುಖಂಡನನ್ನು ಸ್ವತಃ ಲೇಡಿ ಆಂಕರ್ ಇಂಟರ್ವ್ಯೂವ್ ಮಾಡಿದ್ದಾರೆ. ಈ ಮೂಲಕ ತಾಲಿಬಾನ್ ಬಗ್ಗೆ ಆತಂಕದಲ್ಲಿದ್ದ ಅಫ್ಘಾನಿಸ್ತಾನ ಮಹಿಳೆಯರಿಗೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ. ಅಪ್ಘಾನಿಸ್ತಾನ ರಾಜಧಾನಿ ಕಾಬೂಲ್ ತಾಲಿಬಾನ್ ವಶವಾಗುತ್ತಿದ್ದಂತೆ ಮಹಿಳಾ ಸಿಬ್ಬಂದಿ ಟಿವಿ ಪರದೆಯಿಂದ ಹಿಂದೆ ಸರಿದಿದ್ದರು. ಆದ್ರೆ ಇವತ್ತು ದಿಢೀರ್ ಮಹಿಳಾ ಆಂಕರ್‌ಗಳು ಅಫ್ಘಾನ್ ಟಿವಿ ತೆರೆಯಲ್ಲಿ ಪ್ರತ್ಯಕ್ಷರಾಗಿ ಅಚ್ಚರಿ ಮೂಡಿಸಿದ್ದಾರೆ. id='are-slot-2' class='oiad oi-axt oiadv'>
ಮಹಿಳೆಯರಿಗೆ ಕಠಿಣ ನಿಯಮ
ಮುಜಾಹಿದ್ದೀನ್‌ಗಳ ಬಳಿಕ ಅಫ್ಘಾನಿಸ್ತಾನದ ಗದ್ದುಗೆ ಏರಿದ್ದ ತಾಲಿಬಾನ್, 1996ರಿಂದ 2001ರವರೆಗೂ ಕಠಿಣ ನಿಯಮಗಳನ್ನ ಹೇರಿತ್ತು. ಅದ್ರಲ್ಲೂ ಮಹಿಳೆಯರ ಮೇಲೆ ತಾಲಿಬಾನ್ ಹೇರಿದ್ದ ನಿಯಮಗಳು ಜಗತ್ತಿನಾದ್ಯಂತ ಭಾರಿ ಟೀಕೆಗೆ ಗುರಿಯಾಗಿತ್ತು. ಮಹಿಳೆಯರು ಒಬ್ಬರೇ ಹೊರಗಡೆ ಬರುವಂತಿಲ್ಲ, ಅಧ್ಯಯನ ಮಾಡುವಂತಿಲ್ಲ, ಕೆಲಸಕ್ಕೆ ಹೋಗುವಂತಿಲ್ಲ ಹೀಗೆ ಹಲವಾರು ಅಸಹನೀಯ ನಿಯಮಗಳನ್ನ ತಾಲಿಬಾನ್ ಹೇರಿತ್ತು. ಆದ್ರೆ ಈಗ ಎಲ್ಲವೂ ಬದಲಾದಂತೆ ಕಾಣುತ್ತಿದ್ದು, ತಾಲಿಬಾನ್ ಆಡಳಿತಗಾರರು ಮೃದು ದೋರಣೆ ತಳೆದಂತೆ ತೋರುತ್ತಿದೆ. ಜನರ ಸ್ವಾತಂತ್ರ್ಯದ ಮೇಲೆ ತಾಲಿಬಾನ್ ಈ ಬಾರಿ ಹೆಚ್ಚು ಕತ್ತರಿ ಹಾಕುವುದು ಅನುಮಾನವಾಗಿದೆ.

ತಾಲಿಬಾನ್ ಈಗ ಸ್ಮಾರ್ಟ್
1996ರ ಸಮಯ ಈಗ ಮುಗಿದಿದೆ, ತಾಲಿಬಾನ್ ಬದಲಾಗಿದೆ. 2021ಕ್ಕೆ ತಕ್ಕಂತೆ ತಾಲಿಬಾನ್ ಕೂಡ ತನ್ನನ್ನು ಬದಲಾಯಿಸಿಕೊಂಡಿದೆ, ಸದಸ್ಯರ ಕೈಯಲ್ಲಿ ಸ್ಮಾರ್ಟ್ ಫೋನ್ ರಾರಾಜಿಸುತ್ತಿವೆ. ಹಾಗೇ ಮತ್ತೊಂದ್ಕಡೆ ಗನ್ ಹಿಡಿದು ರಸ್ತೆಯಲ್ಲಿ ನಿಂತಿರುವ ತಾಲಿಬಾನ್ ಪಡೆ ಜೊತೆಗೆ ಫೋಟೋ ತೆಗೆಯಲು ಜನ ಮುಗಿಬೀಳುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ತಾಲಿಬಾನ್ ಪಡೆಗಳ ಜೊತೆಗಿನ ಫೋಟೋ ರಾರಾಜಿಸುತ್ತಿವೆ. ಕಾಬೂಲ್ ನಗರಕ್ಕೆ ಎಂಟ್ರಿ ಕೊಡುತ್ತಿರುವ ಪ್ರತಿಯೊಂದು ವಾಹನಗಳನ್ನೂ ಗನ್ ಹಿಡಿದು ನಿಂತ ತಾಲಿಬಾನ್ ಸದಸ್ಯರು ಪರಿಶೀಲನೆ ನಡೆಸುತ್ತಿದ್ದಾರೆ.

ಇತಿಹಾಸ ನಿರ್ಮಿಸಿದ್ದ ತಾಲಿಬಾನ್..!
1995ರ ಸೆಪ್ಟೆಂಬರ್‌ನಲ್ಲಿ ಹೆರಾತ್ ಹಾಗೂ ನಂತರ 1996 ರ ಸೆಪ್ಟೆಂಬರ್‌ನಲ್ಲಿ ಕಾಬೂಲ್ ಮೇಲೆ ತಾಲಿಬಾನ್ ಪಡೆಗಳು ನಿಯಂತ್ರಣ ಸಾಧಿಸಿದವು. ಈ ಹೊತ್ತಿಗೆ ಅಫ್ಘಾನಿಸ್ತಾನದಲ್ಲಿ 17 ನೇ ಯುದ್ಧ ಆರಂಭವಾಗಿತ್ತು. ಅಲ್ಲಿನ ಜನರು ಬೇಸತ್ತು ಹೋಗಿದ್ದರು. ಹತ್ತಾರು ಲಕ್ಷ ಜನ ನಿರಾಶ್ರಿತ ಶಿಬಿರ ಸೇರಿದ್ದರು. ಮುಂದೆ ಇದೇ ಅನಿವಾರ್ಯ ಪರಿಸ್ಥಿತಿ ತಾಲಿಬಾನ್ ಆಡಳಿತವನ್ನ ಒಪ್ಪಿಕೊಳ್ಳಲು ಕಾರಣವಾಯಿತು. 1994ರಿಂದ 1996ರವರೆಗೆ ತಾಲಿಬಾನ್ ಉಗ್ರಗಾಮಿ ಸಂಘಟನೆ ಪಟ್ಟ ಕಟ್ಟಿಕೊಂಡಿತ್ತು. ಆದರೆ 1996ರಲ್ಲಿ ಅಧಿಕೃತವಾಗಿ ಅಫ್ಘಾನಿಸ್ತಾನದ ನೆಲದಲ್ಲಿ ತನ್ನ ಸರ್ಕಾರ ರಚಿಸಿ, 2001ರವರೆಗೂ ಆಡಳಿತ ನಡೆಸಿತು. 2000 ರ ಅಂತ್ಯದ ವೇಳೆಗೆ, ತಾಲಿಬಾನ್ ಶೇ. 95ರಷ್ಟು ಭಾಗ ನಿಯಂತ್ರಿಸುತ್ತಿತ್ತು. ಅಂದರೆ ಕೇವಲ 4 ವರ್ಷದಲ್ಲಿ ಇಡೀ ಅಫ್ಘಾನ್ ತಾಲಿಬಾನ್ ವಶವಾಗಿ ಹೋಗಿತ್ತು.
Recommended Video

ತಾಲಿಬಾನ್ ಸಿದ್ಧಾಂತ ಏನು..?
ಅಫ್ಘಾನಿಸ್ತಾನದಲ್ಲಿ ಇಸ್ಲಾಂ ಧರ್ಮೀಯರು ಬಹುಸಂಖ್ಯಾತರು. ಹೀಗಾಗಿ ಅಫ್ಘಾನ್‌ನಲ್ಲಿ ಷರಿಯಾ ಕಾನೂನು ಜಾರಿಗೆ ತರಬೇಕೆಂಬ ಉದ್ದೇಶ ತಾಲಿಬಾನ್ ಸಂಘಟನೆಯದ್ದು. 1996ರಲ್ಲಿ ತಾಲಿಬಾನ್ ಮೊದಲ ಬಾರಿಗೆ ಅಧಿಕಾರ ಹಿಡಿದಾಗ ಅಫ್ಘಾನ್‌ನಲ್ಲಿ ಷರಿಯಾ ಕಾನೂನು ಜಾರಿಗೆ ತಂದಿತ್ತು. ಷರಿಯಾ ಕಾನೂನು ಮಹಿಳೆಯರ ಮೇಲೆ ಸಾಕಷ್ಟು ನಿರ್ಬಂಧ ಹೇರಿತ್ತು. ಮಹಿಳೆಯರು ಕೆಲಸ ಮಾಡುವುದು, ಅಧ್ಯಯನ ಮಾಡುವುದಾಗಲಿ ಅಥವಾ ಒಬ್ಬರೇ ಮನೆಯಿಂದ ಹೊರ ಬರುವುದನ್ನು ಷರಿಯಾ ಕಾನೂನು ನಿರ್ಬಂಧಿಸಿತ್ತು. ಇಷ್ಟೇ ಅಲ್ಲದೆ ತಪ್ಪು ಮಾಡಿದವರಿಗೆ ಮರಣದಂಡನೆ ಮತ್ತು ಚಾಟಿ ಏಟಿನಂತಹ ಕಠಿಣ ಶಿಕ್ಷೆಗಳು ಮಾಮೂಲಿಯಾಗಿದ್ದವು. ಈ ಎಲ್ಲಾ ಕಾರಣಕ್ಕೆ ತಾಲಿಬಾನ್ ಆಡಳಿತಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿರಲಿಲ್ಲ. ಪಾಕಿಸ್ತಾನ, ಚೀನಾ ಸೇರಿದಂತೆ ಕೆಲವೇ ಕೆಲವು ದೇಶಗಳು ಮಾತ್ರ ತಾಲಿಬಾನ್ ಆಡಳಿತ ಒಪ್ಪಿಕೊಂಡಿದ್ದವು.












Click it and Unblock the Notifications