Actress Ananya Panday: 3 ಕೋಟಿ ಕಾರು ಖರೀದಿಸಿದ ನಟಿ-ಚರ್ಚೆಗೆ ಕಾರಣವಾದ ನಂಬರ್ ಪ್ಲೇಟ್.!-ಇದರ ರಹಸ್ಯ, ವಿಶೇಷತೆ ತಿಳಿಯಿರಿ
ಸಿನಿತಾರೆಯರು ಸುದ್ದಿಯಲ್ಲಿರುತ್ತಲೇ ಇರುತ್ತಾರೆ. ಕೆಲವರು ಐಷಾರಾಮಿ ಜೀವನ, ಉನ್ನತ ಮಟ್ಟದ ಸಾಧನೆ ಇನ್ನು ಕೆಲವರು ಸದಾ ವಿವಾದಗಳಿಂದಲೂ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಐಷಾರಾಮಿ ಕಾರು ಪ್ರೇಮಿಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಸಿನಿರಂಗದಲ್ಲಂತೂ ಯಾರಾದರೂ ಅಪರೂಪಕ್ಕೆ ದುಬಾರಿ ಬೆಲೆಯ ಕಾರು ಖರೀದಿಸಿದರೆ ಅದೇ ದೊಡ್ಡ ಸುದ್ದಿಯಾಗಿಬಿಡುತ್ತದೆ. ಅದೇ ರೀತಿ ನಟಿಯೊಬ್ಬರು "ಕೋಟಿ" ಕಾರು ಖರೀದಿಸಿ ಇದೀಗ ಗಮನ ಸೆಳೆದಿದ್ದಾರೆ. ಹಾಗಾದರೆ ಆ ಕಾರಿನ ವಿಶೇಷತೆಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬಾಲಿವುಡ್ ನಟಿ ಅನನ್ಯಾ ಪಾಂಡೆ ಅಂತೂ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಭಾರತದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯರನ್ನು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಿ ಸಖತ್ ಸುದ್ದಿಯಾಗಿದ್ದರು. ಇದೀಗ ದುಬಾರಿ ಬೆಲೆಯ ರೇಂಜ್ ರೋವರ್ ಖರೀದಿ ಮಾಡಿದ್ದು, ಈ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಇನ್ನು ಈ ಕಾರಿ ದರ 3,00,00,000 ಕೋಟಿ ರೂಪಾಯಿಗೂ ಹೆಚ್ಚು ಎನ್ನುವ ಮಾಹಿತಿ ಲಭ್ಯವಾಗಿದೆ. ಅದರಲ್ಲೂ ಈ ಕಾರಿನ ನಂಬರ್ ಪ್ಲೇಟ್ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

"ಸ್ಟುಡೆಂಟ್ ಆಫ್ ದಿ ಇಯರ್ 2" ಚಿತ್ರದ ಮೂಲಕ ಅನನ್ಯಾ ಪಾಂಡೆ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಬಳಿಕ ಅವರು ಕೆಲವು ಸಿನಿಮಾ ಮಾಡಿದರು. ಆದರೆ ಅದ್ಯಾವುದು ಕೈ ಹಿಡಿಯಲಿಲ್ಲ. ಆದರೆ ಇದೀಗ ಅವರು ದುಬಾರಿ ಬೆಲೆಯ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ.
ಈಗಾಗಲೇ ಅನನ್ಯಾ ಪಾಂಡೆ ಬಳಿ ಹಲವು ಕಾರುಗಳಿದ್ದು, ಇವುಗಳ ಜೊತೆಗೆ ಇದೀಗ ಹೊಸ ಕಾರು ಸೇರ್ಪಡೆಯಾಗಿದೆ. ಇವರ ಕಾರಿನ ಸಂಖ್ಯೆ ಕೊನೆಯಾಗುವುದು 3000 ನಂಬರ್‌ನಿಂದ. ಅವರು ಇದನ್ನು ವಿಶೇಷವಾಗಿ ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ. ಅವರ ಜನ್ಮದಿನ ಅಕ್ಟೋಬರ್ 30 ಆಗಿದ್ದು, ಈ ಹಿನ್ನೆಲೆ 3000 ನಂಬರ್ ಅನ್ನು ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಮುಖ್ಯವಾಗಿ ಹಾಲಿವುಡ್ನ ಮಾರ್ವೆಲ್ ಸಿನಿಮಾದಲ್ಲಿ ಬರುವ ಲೈನ್‌ಗೋಸ್ಕರ ಈ ನಂಬರ್ ಪ್ಲೇಟ್ ಅನ್ನು ಖರೀಸಿದ್ದಾರೆ ಎನ್ನುವ ಚರ್ಚೆಯೇ ಆಗುತ್ತಿದೆ.
ಮಾರ್ವೆಲ್ ಸಿನಿಮಾದಲ್ಲಿ "ಐ ಲವ್ ಯೂ 3000" ಅನ್ನುವ ಲೈನ್ ಬರುತ್ತದೆ. ಆದ್ದರಿಂದ ಅನನ್ಯಾ ಮಾರ್ವೆಲ್ ಪ್ರೇಮಿ ಆಗಿರಬಹುದು ಹೇಳಲಾಗುತ್ತಿದೆ. ಇನ್ನು ಇತ್ತೀಚೆಗಷ್ಟೇ ನಡೆದ ಮುಕೇಶ್ ಅಂಬಾನಿ ಮಗ ಅನಂತ್ ಅಂಬಾರಿ ವಿವಾಹ ಕಾರ್ಯಕ್ರಮದಲ್ಲಿ ಅನನ್ಯಾ ಪಾಂಡೆ ಹಾರ್ದಿಕ್ ಪಾಂಡ್ಯ ಜೊತೆ ಕಾಣಿಸಿಕೊಂಡಿದ್ದು, ಬಳಿಕ ಇಬ್ಬರು ಪರಸ್ಪರ ಇನ್ಸ್ಟಾಗ್ರಾಮ್ನಲ್ಲಿ ಇಬ್ಬರೂ ಫಾಲೋ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿತ್ತು.












Click it and Unblock the Notifications