ಇಂಟರ್ನೆಟ್ ಬಳಕೆಯಲ್ಲಿ ನಗರ ಮೀರಿಸಿದ ಗ್ರಾಮೀಣ ಪ್ರದೇಶ!
ಇಂಟರ್ನೆಟ್ ಈಗ ಉಳ್ಳವರ ಸ್ವತ್ತಾಗಿ ಉಳಿದಿಲ್ಲ. ಎಲ್ಲೆಡೆಯೂ ವ್ಯಾಪಿಸಿದೆ. ಬಡಬಗ್ಗರು, ರೈತರು ಹೀಗೆ ಬಹಳ ಮಂದಿ ಇಂದು ಸ್ಮಾರ್ಟ್‌ಫೋನ್ ಮೂಲಕ ಇಂಟರ್ನೆಟ್ ಬಳಕೆ ಮಾಡುತ್ತಾರೆ. ನೀಲ್ಸನ್ (Nielsen India) ಎಂಬ ಸರ್ವೆ ಸಂಸ್ಥೆಯ ಸಮೀಕ್ಷೆಯಲ್ಲೂ ಇದು ದೃಢಪಟ್ಟಿದೆ. ಈ ಸಮೀಕ್ಷೆ ಪ್ರಕಾರ ನಗರ ಪ್ರದೇಶದವರಿಗಿಂತ ಗ್ರಾಮೀಣ ಭಾಗದ ಜನರೇ ಇಂಟರ್ನೆಟ್ ಬಳಕೆಯಲ್ಲಿ ಮುಂದಿದ್ದಾರೆ, ಶೇ. 20ರಷ್ಟು ಹೆಚ್ಚು ಮಂದಿ ಇಂಟರ್ನೆಟ್ ಬಳಸುತ್ತಿದ್ದಾರೆ.
2019ರ ಬಳಿಕ ಭಾರತದ ಗ್ರಾಮೀಣ ಭಾಗದಲ್ಲಿ ಸಕ್ರಿಯ ಇಂಟರ್ನೆಟ್ ಬಕೆದಾರರ ಸಂಖ್ಯೆಯಲ್ಲಿ ಶೇ. 45ರಷ್ಟು ಹೆಚ್ಚಳವಾಗಿದೆ ಎಂದು ನೀಲ್ಸನ್ ಸಂಸ್ಥೆಯ ಸಮೀಕ್ಷೆ ಹೇಳಿದೆ. ಇದೇ ಅವಧಿಯಲ್ಲಿ ನಗರ ಭಾಗದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಳವಾಗಿದ್ದು ಶೇ. 28 ಮಾತ್ರ ಎನ್ನಲಾಗಿದೆ. ಅಷ್ಟೇ ಅಲ್ಲ, ಗ್ರಾಮೀಣ ಭಾಗದಲ್ಲಿ ಒಟ್ಟು ಇಂಟರ್ನೆಟ್ ಯೂಸರ್ಸ್ ಸಂಖ್ಯೆ 35.2 ಕೋಟಿ ಇದೆ. ಇದು ನಗರ ಭಾಗದವರಿಗಿಂತ ಶೇ. 20 ಹೆಚ್ಚು.

ಅಗ್ಗದ ಸ್ಮಾರ್ಟ್‌ಫೋನ್ ಎಫೆಕ್ಟ್:
ಭಾರತದಲ್ಲಿ 2019ರಿಂದೀಚೆ ಇಂಟರ್ನೆಟ್ ಬಳಕೆ ಹೆಚ್ಚು ವ್ಯಾಪಿಸಲು ಬೇರೆ ಬೇರೆ ಕಾರಣಗಳಿವೆ. ಅದರಲ್ಲಿ ಪ್ರಮುಖವಾದದು ಎಂದರೆ ಕಡಿಮೆ ಬೆಲೆಗೆ ಬಿಡುಗಡೆಯಾದ ಸ್ಮಾರ್ಟ್‌ಫೋನ್‌ಗಳು ಹಾಗು ಅಗ್ಗದ ದರದಲ್ಲಿ ಸಿಕ್ಕ ಮೊಬೈಲ್ ಡಾಟಾ. ಜೊತೆಗೆ, ಕೇಂದ್ರ ಸರಕಾರ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಬಲಪಡಿಸಲು ಕೈಗೊಂಡ ಕ್ರಮಗಳೂ ಇಂಟರ್ನೆಟ್ ವ್ಯಾಪ್ತಿ ಹೆಚ್ಚಾಗಲು ಕಾರಣ ಎಂದು ನೀಲ್ಸನ್ ಇಂಡಿಯಾ ಸಂಸ್ಥೆಯ ಎಂಡಿ ಡಾಲಿ ಝಾ ಹೇಳುತ್ತಾರೆ.
ಗ್ರಾಮಗಳು ಹಾಗೂ ಸಣ್ಣ ಪಟ್ಟಣಗಳಲ್ಲಿ ಇಷ್ಟು ವೇಗವಾಗಿ ಇಂಟರ್ನೆಟ್ ಬೆಳೆಯಲು ಮತ್ತೊಂದು ಪ್ರಮುಖ ಕಾರಣ ಮಹಿಳಾ ಗುಂಪು. ಮಹಿಳೆಯರು ಬಹಳ ಬೇಗ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ಧಾರೆ. ಮೊಬೈಲ್ ಬಳಕೆಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಇದು ಇಂಟರ್ನೆಟ್ ವ್ಯಾಪ್ತಿ ಹೆಚ್ಚಲು ಸಹಕಾರಿ ಅಗಿರುವುದನ್ನು ನೀಲ್ಸನ್ ಸಮೀಕ್ಷೆ ಸೂಚಿಸುತ್ತಿದೆ. ಆದರೂ ಇಂಟರ್ನೆಟ್ ಬಳಸುವವರಲ್ಲಿ ಪುರುಷರು ಶೇ. 60, ಮಹಿಳೆಯರು ಶೇ. 40 ಎನ್ನಲಾಗಿದೆ.

ದೇಶದಲ್ಲಿ ಎಷ್ಟಿದ್ದಾರೆ ಇಂಟರ್ನೆಟ್ ಯೂಸರ್ಸ್?:
ಈ ಸಮೀಕ್ಷೆಯಲ್ಲಿ ಕೆಲ ಅಚ್ಚರಿ ಅಂಶಗಳಿವೆ. 2021, ಡಿಸೆಂಬರ್‌ವರೆಗಿನ ಅಂಶಗಳ ಪ್ರಕಾರ ದೇಶಾದ್ಯಂತ ಇಂಟರ್ನೆಟ್ ಬಳಕೆದಾರರ ಸಂಖ್ಯೆ 64.6 ಕೋಟಿ ಇದೆ. 12 ವರ್ಷಕ್ಕಿಂತ ಹೆಚ್ಚು ವಯೋಮಾನದ ಸಕ್ರಿಯ ಇಂಟರ್ನೆಟ್ ಬಳಕೆದಾರರು 59.2 ಕೋಟಿ ಇದ್ದಾರೆ. 2019ರಲ್ಲಿ ಇದ್ದದ್ದಕ್ಕಿಂತ ಶೇ. 37 ರಷ್ಟು ಹೆಚ್ಚು ಮಂದಿ 2019ರಲ್ಲಿ ಇದ್ದಾರೆ ಎಂಬುದನ್ನ ಸಮೀಕ್ಷೆ ಹೇಳುತ್ತದೆ.

ಇಂಟರ್ನೆಟ್ ಬಳಸದವರ ಸಂಖ್ಯೆ ಬಹಳ ಇದೆ:
ನಗರ ಭಾಗದಲ್ಲಿ ಇಂಟರ್ನೆಟ್ ವ್ಯಾಪ್ತಿ ಶೇ. 59 ಇದೆ. ಗ್ರಾಮೀಣ ಭಾಗದಲ್ಲಿ ಸುಮಾರು ಶೇ. 40ರಷ್ಟು ಜನರು ಇಂಟರ್ನೆಟ್ ಬಳಸುತ್ತಾರೆ. ಅಂದರೆ ಗ್ರಾಮಗಳಲ್ಲಿ ಇಂಟರ್ನೆಟ್ ಬೆಳೆಯುವ ಅವಕಾಶ ಇನ್ನೂ ಬಹಳ ಇದೆ. ನಗರ ಪ್ರದೇಶದಲ್ಲೂ ಇಂಟರ್ನೆಟ್ ಬಳಸದವರ ಸಂಖ್ಯೆ ಶೇ. 40ರಷ್ಟಿದೆ.

ಶಾಪಿಂಗ್‌ನಲ್ಲಿ ನಗರದವರೇ ಮುಂದು:
ಇಂಟರ್ನೆಟ್ ಬಳಕೆಯಲ್ಲಿ ನಗರದವರಿಗಿಂತ ಗ್ರಾಮೀಣ ಭಾಗದವರೇ ಹೆಚ್ಚು ಇದ್ದಾರೆ ಎಂಬುದು ಹೌದಾದರೂ, ಆನ್‌ಲೈನ್ ಶಾಪಿಂಗ್ ವಿಚಾರಕ್ಕೆ ಬಂದರೆ ನಿರೀಕ್ಷೆಯಂತೆ ನಗರವಾಸಿಗಳೇ ಬಹಳ ಮುಂದಿದ್ದಾರೆ. ಒಟ್ಟು ಇಂಟರ್ನೆಟ್ ಶಾಪಿಂಗ್‌ನಲ್ಲಿ ಶೇ. 47 ಪಾಲು ನಗರ ಪ್ರದೇಶದವರದ್ದಾಗಿದೆ. ಬ್ಯಾಂಕಿಂಗ್ ಸೇವೆ, ಡಿಜಿಟಲ್ ಪಾವತಿಯಲ್ಲೂ ನಗರದವರೇ ಹೆಚ್ಚು. ಅದರಲ್ಲೂ ಸಕ್ರಿಯ ಬಳಕೆದಾರರಲ್ಲಿ 20-39 ವರ್ಷ ವಯೋಮಾನದವರೇ ಹೆಚ್ಚು.
ಇಂಟರ್ನೆಟ್ ಬಳಕೆ ಎಂದರೆ ಹೆಚ್ಚಾಗಿ ಜನರು ನೋಡುವುದು ಸೋಷಿಯಲ್ ಮೀಡಿಯಾ ಮತ್ತು ಚಾಟಿಂಗ್. ಇದರ ಜೊತೆಗೆ ವಿಡಿಯೋ ವೀಕ್ಷಣೆ, ಮ್ಯೂಸಿಕ್ ಆಲಿಸುವುದು ಇವುಗಳನ್ನೂ ಜನರು ಹೆಚ್ಚು ಬಳಸುತ್ತಾರೆ. ನೀಲ್ಸನ್ ಸಮೀಕ್ಷೆಯ ಅಂದಾಜಿನ ಪ್ರಕಾರ ದೇಶದಲ್ಲಿ 44 ಕೋಟಿ ಜನರು ಆನ್‌ಲೈನ್‌ನಲ್ಲಿ ವಿಡಿಯೋಗಳನ್ನ ವೀಕ್ಷಿಸುತ್ತಾರೆ. ಇವರಲ್ಲಿ ಗ್ರಾಮೀಣ ಭಾಗದವರ ಸಂಖ್ಯೆ ಶೇ. 54 ಇದೆ.
(ಒನ್ಇಂಡಿಯಾ ಸುದ್ದಿ)
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications