Video Viral: ಚಲಿಸುತ್ತಿರುವ ರೈಲಿನ ಮೇಲೆ ಮಹಿಳೆಯ ಡಾನ್ಸ್ ಸಾಹಸದ ವಿಡಿಯೋ: ನೆಟ್ಟಿಗರ ಕಾಮೆಂಟ್‌ಗಳೇನು?

ಸಾಮಾಜಿಕ ಜಾಲತಾಣ ಎಷ್ಟು ಪ್ರಭಾವಿ ಎಂದರೆ ಎಲ್ಲಿ ಏನೇ ನಡೆದರೂ ಅದನ್ನು ಜನರು ಬಹುಬೇಗ ವೀಕ್ಷಿಸಲು, ಅದರ ತಿಳಿಯಲು ಈ ವೇದಿಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಇಲ್ಲಿ ಅನೇಕ ಬಗೆಯ ವಿಡಿಯೋ, ಫೋಟೋಗಳು ವೈರಲ್ ಆಗುತ್ತಿವೆ. ಇದೀಗ ರೈಲಿನ ಮೇಲೆ ಮಹಿಳೆಯೊಬ್ಬರು ಸಲೀಸಾಗಿ ಓಡಾಡುವ ಹಾಗೂ ಡಾನ್ಸ್ ಮಾಡುವ ವಿಡಿಯೋವೊಂದು ಸಖರ್ ವೈರಲ್ ಆಗಿದೆ.

ಪ್ರಯಾಣಿಕರ ರಕ್ಷಣೆಗೆ ಆದ್ಯತೆ ನೀಡುವ ಭಾರತೀಯ ರೈಲ್ವೆ ಇಲಾಖೆಯು ಹೀಗೆ ವಿಡಿಯೋ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕಾದ ಅನಿವಾರ್ಯತೆ ಇದೆ. ಈ ಮಹಿಳೆಯು ಚಳಿಸುವ ರೈಲಿನ ಮೇಲೆ ಹತ್ತಿದ್ದು, ಒಂದು ಬೋಗಿಯಿಂದ ಮತ್ತೊಂದು ಬೋಗಿ ಮೇಲೆ ಅಂಜಿಕೆ ಇಲ್ಲದೇ ಓಡಾಡುವ ವಿಡಿಯೋ ಇದಾಗಿದೆ. the.memeparty ಇನ್‌ಸ್ಟಾಗ್ರಾಮ್

A Women Run and Dance on Top of Train Video Goes Viral Netizens Reacts

ನಿಜ ಜೀವನದಲ್ಲೂ ಈ ಆಂಟಿಯು ರೈಲಿನ ಮೇಲೆ ಆಟವಾಡುತ್ತಿದ್ದಾಳೆ ಎಂಬ ಶಿರ್ಷಿಕೆಯಡಿ ಈ ವಿಡಿಯೋ ಪೋಸ್ಟ್ ಆಗಿದೆ. ಪೋಸ್ಟ್ ನಂತರ ಈವರೆಗೆ 20 ಮಿಲಿಯನ್‌ಗಿಂತಲೂ ಅಧಿಕ ವೀಕ್ಷಣೆಗಳನ್ನು, ಲೈಕ್ಸ್‌ಗಳನ್ನು ಪಡೆದುಕೊಂಡಿದೆ. ಸುರಕ್ಷತೆ ಬಗ್ಗೆ ಕಾಮೆಂಟ್‌ಗಳು ಬಂದಿವೆ.

ಅಸಲಿಗೆ ಈ ಘಟನೆ ನಡೆದಿರುವುದು ಬಾಂಗ್ಲಾದೇಶದಲ್ಲಿ ಎನ್ನಲಾಗಿದೆ. ಹೌದು, ಬಾಂಗ್ಲಾದೇಶದ ಮಹಿಳೆಯೊಬ್ಬರು ಸಂಚರಿಸುತ್ತಿರುವ ರೈಲಿನ ಮೇಲೆ ವಿರುದ್ಧ ದಿಕ್ಕಿನಲ್ಲಿ ಓಡುತ್ತಾಳೆ, ಎದುರಾಗುವ ಬೋಗಿಗಳ ಮೇಲೆ ಒಂದರಿಂದ ಮತ್ತೊಂದಕ್ಕೆ ಜಿಗಿಯುತ್ತಾಳೆ. ಅದರ ಮೇಲೆ ನಿಂತುಕೊಂಡು ನೃತ್ಯ ಮಾಡುವ ಈಕೆಗೆ ಭಯವೇ ಆಗಲ್ಲವೇ? ಇದೆಲ್ಲವು ಜೀವಕ್ಕೆ ಕುತ್ತು ತರಬಹುದು ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.

ಸದ್ಯ ವೈರಲ್ ಆಗಿರುವ ವಿಡಿಯೋ ಸಾಕಷ್ಟು ಸುದ್ದಿಯಲ್ಲಿದೆ. ರೈಲಿನ ಮೇಲೆ ಸದ್ದು ಬರುತ್ತಿದೆ. ನಿಲ್ದಾಣದಲ್ಲಿದ್ದ ಜನರು ರೈಲಿನ ಮೇಲೆ ನೋಡುತ್ತಿದ್ದಾರೆ ಎಂದು ಒಳಗಿದ್ದ ಪ್ರಯಾಣಿಕರು ಕಿಟಕಿ ಮೂಲಕ ಕತ್ತು ಹೊರಹಾಕಿ ನೋಡಿದ್ದಾರೆ. ಕೆಲವು ಬಾಗಿಲು ಬಳಿ ನಿಲ್ಲಲು, ಕಿಟಕಿಯಿಂದ ತಲೆ ಆಚೆ ಹಾಕಲು ಭಯ ಪಡುತ್ತಾರೆ.

ಆದರೆ ಈಕೆ ಮಾತ್ರ ಸಲೀಸಾಗಿ, ಯಾರ ಭಯ ಇಲ್ಲದೇ, ಓಡಾಡಿಕೊಂಡು ನೃತ್ಯ ಮಾಡಿದ್ದಾಳೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈಲ್ವೆ ಸುರಕ್ಷತೆ ಬಗ್ಗೆ ಸಂಶಯ ಉಂಟಾಗುವಂತೆ ಮಾಡಿದೆ. ಆದರೆ ಇನ್ನೂವರೆಗೂ ಈ ಮಹಿಳೆ ವಿರುದ್ಧ ಕ್ರಮ ಕೈಗೊಂಡಿದ್ದರ ಬಗ್ಗೆ ಯಾವ ಮಾಹಿತಿ ಲಭ್ಯವಾಗಿಲ್ಲ.

ವಿಡಿಯೋ ನೋಡಿದ ಬಳಕೆದಾರರು ಹೇಳಿದ್ದೇನು?

ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಸಾಮಾಜಿಕ ಬಳಕೆದಾರರು ಕಾಮೆಂಟ್‌ಗಳನ್ನು ಹಾಕಿದ್ದಾರೆ. ಇಂತಹ ಡಾನ್ಸ್, ಸಾಹದಿಂದ ಮೋಜಿಗಿಂತ ಜೀವಕ್ಕೆ ಅಪಾಯವೇ ಹೆಚ್ಚಿರುತ್ತದೆ. ಈ ಹುಚ್ಚಾಟ ಅನವಶ್ಯಕ ಎಂದು ತಿಳಿಸಿದ್ದಾರೆ.

ಈ ಮಹಿಳೆ ಸಬ್ವೇ ಸರ್ಫರ್ಸ್ ಅನ್ನು ಸ್ವಲ್ಪ ಅಕ್ಷರಶಃ ಬಳಸಿಕೊಂಡಿದ್ದಾರೆ ಎಂದರೆ, ಮತ್ತೊಬ್ಬರು ಇದೊಂದು ಅನಿರೀಕ್ಷಿತ ಘಟನೆಯಂತೆ ಕಾಣುತ್ತದೆ ಎಂದು ಹೇಳಿದ್ದಾರೆ. ಕೆಲವರು ನಗುವ ಎಮೋಜಿ ಹಾಕಿದರೆ, ಇನ್ನೂ ಕೆಲವು ನೆಟ್ಟಿಗರು ರೈಲ್ವೆ ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ ಮಹಿಳೆಯು ರೈಲು ಮೇಲೇರಿರುವುದು ಜನರಿಗೆ ಅಚ್ಚರಿ ಉಂಟು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+