Health Tips: ಯಾವ ಮಾಂಸ ತಿನ್ನಬೇಕು? ಸಸ್ಯಾಹಾರಿ ಡಾಕ್ಟರ್ ಕೊಟ್ಟ ಸಲಹೆ ವೈರಲ್

'ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ' ಇದು ಬಹಳ ಹಳೆಯ ನಾಣ್ಣುಡಿ. ಉತ್ತಮ ಆಹಾರವೇ ಆರೋಗ್ಯದ ಗುಟ್ಟು ಎನ್ನುವುದನ್ನು ನಮ್ಮ ಪೂರ್ವಿಕರು ಚನ್ನಾಗಿ ಅರಿತಿದ್ದರು. ಅದಕ್ಕೆ ಮಳೆಗಾಲ, ಚಳಿಗಾಲ, ಬೇಸಿಗೆಕಾಲಕ್ಕೆ ತಕ್ಕಂತೆ ವಿವಿಧ ಕಾಳು, ಸೊಪ್ಪು, ತರಕಾರಿ, ಮೀನು, ಏಡಿ, ಕೋಳಿ, ಮಾಂಸವನ್ನು ಸೇವಿಸುತ್ತಿದ್ದರು. ಉತ್ತಮ ಆಹಾರ ಸೇವನೆ ಮಾಡಿದರೆ ಹಲವು ರೋಗಗಳನ್ನು ದೂರ ಇಡಬಹುದು ಎನ್ನುವುದನ್ನು ಡಾಕ್ಟರ್ ಕೂಡ ಒಪ್ಪುತ್ತಾರೆ.

ಇನ್ನು ಸಸ್ಯಾಹಾರ ಒಳ್ಳೆಯದಾ, ಮಾಂಸಾಹಾರ ಒಳ್ಳೆಯದಾ ಎನ್ನುವ ಚರ್ಚೆ ಮೊದಲಿನಿಂದಲೂ ಇದೆ. ಸಸ್ಯಾಹಾರ, ಮಾಂಸಾಹಾರ ಎರಡೂ ಕೂಡ ಒಳ್ಳೆಯದೇ, ಆದರೆ ಯಾವುದನ್ನು ಯಾವ ಪ್ರಮಾಣದಲ್ಲಿ ತಿನ್ನಬೇಕು ಎನ್ನುವ ಸ್ಪಷ್ಟನೆ ಇರಬೇಕು ಅಷ್ಟೆ. ಇಲ್ಲೊಬ್ಬರು ಡಾಕ್ಟರ್ ತಾನು ಸಸ್ಯಾಹಾರಿ ಆಗಿದ್ದರು, ಮಾಂಸ, ಮೊಟ್ಟೆ ಸೇವನೆಯ ಮಹತ್ವವನ್ನು ತಿಳಿಸಿದ್ದು, ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

A Vegetarian Doctors suggest how to eat meat and Egg

ಡಾಕ್ಟರ್ ಹೇಳಿದ್ದೇನು?

ತಮ್ಮ ಬಳಿ ಬಂದ ರೋಗಿಯೊಬ್ಬರಿಗೆ ಸಲಹೆ ಕೊಡುವ ಸಂದರ್ಭದಲ್ಲಿ ವೈದ್ಯರು ಈ ಸಲಹೆ ಕೊಟ್ಟಿದ್ದಾರೆ. ನಾನ್ ವೆಜ್ ಒಳ್ಳೆಯದು ಅನಾದಿ ಕಾಲದಿಂದ ತಿಂದುಕೊಂಡು ಬಂದಿದ್ದಾರೆ, ಇವಾಗ ತಿಂದರೆ ಏನಾಗುತ್ತೆ? ಸಮಸ್ಯೆ ಏನು ಅಂದ್ರೆ ಹೇಗೆ ಬೇಯಿಸುತ್ತಾರೆ ಎನ್ನುವುದು ಬಹಳ ಮುಖ್ಯ, ಸೌತ್ ಕೊರಿಯಾ, ವಿಯೆಟ್ನಾಂ, ಥೈಲ್ಯಾಂಡ್‌ ಇವರೆಲ್ಲಾ ದಿನಾ ಮಾಂಸ ತಿಂತಾರೆ, ಅದೆಂಗೆ ಅವರಿಗೆ ಮಾತ್ರ ಹೃದಯಾಘಾತ ಆಗೋದೆ ಇಲ್ಲ. ನಾವು ಬೆಣ್ಣೆ, ತುಪ್ಪ, ಎಣ್ಣೆಲಿ ಕರೆದೆ, ಫ್ರೈ ಮಾಡಿದೆ ಮೂರು ಸಲ ತಿಂದೆ, ಜಾಸ್ತಿ ತಿಂದೆ ಎಂದರೆ ಸಮಸ್ಯೆ ಆಗುತ್ತೆ. ಎಷ್ಟು ಬೇಕೋ ಅಷ್ಟು ಬೇಯಿಸಿ ತಿಂದ್ರೆ ಬಹಳ ಒಳ್ಳೆಯದು ಎಂದು ಹೇಳಿದ್ದಾರೆ.

ಮನೆಯಲ್ಲೇ ಮಾಂಸದ ಅಡುಗೆ ಮಾಡಿ ತಿನ್ನಬೇಕು. ಅದರಲ್ಲೂ ಬಿಳಿ ಮಾಂಸ ಮತ್ತು ಕೆಂಪು ಮಾಂಸ ಎನ್ನುವುದು ಇರುತ್ತದೆ. ಕೆಂಪು ಮಾಂಸ (ಮೇಕೆ, ದನ, ಕುರಿ ಮಾಂಸ) ದಲ್ಲಿ ಕೊಬ್ಬಿನ ಅಂಶ ಇರುತ್ತದೆ ಅದು ಅಷ್ಟು ಆರೋಗ್ಯಕರ ಅಲ್ಲ, ಅದನ್ನು ತಿನ್ನಬಹುದು ಆದರೆ ಹೆಚ್ಚಿಗೆ ತಿನ್ನಬಾರದು. ಬಿಳಿ ಮಾಂಸ ಎಂದರೆ ಚಿಕನ್, ಸಮುದ್ರದ ಮೀನಿನಲ್ಲಿ ಕೊಬ್ಬಿನ ಅಂಶ ಕಡಿಮೆ ಇರುತ್ತದೆ. ಅದರಲ್ಲೂ ಸಮುದ್ರದ ಮೀನುಗಳನ್ನು ಹೆಚ್ಚು ತಿನ್ನಬೇಕು ಅದರಲ್ಲಿ ಒಳ್ಳೆಯ ಕೊಬ್ಬಿನಂಶ, ಪ್ರೊಟಿನ್ ಇರುತ್ತದೆ ಎಂದು ಹೇಳಿದ್ದಾರೆ.

ಮೊಟ್ಟೆಯನ್ನು ಕೂಡ ತಿನ್ನಬೇಕು, ಮೊಟ್ಟೆಯ ಹಳದಿ ಭಾಗವನ್ನು ಕೂಡ ತಿನ್ನಬೇಕು. ಹಳದಿ ಭಾಗ ಕೂಡ ಒಳ್ಳೆಯದು. ಅದರಲ್ಲಿ ಒಳ್ಳೆಯ ಕೊಬ್ಬು ಇರುತ್ತದೆ. ನಾನು ವೆಜಿಟೇರಿಯನ್ ಆದರೂ ಎಲ್ಲಾ ಹೇಳುತ್ತೇನೆ, ತಿನ್ನುವವರು ತಿನ್ನಬಹುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+