ಅಜ್ಜ ಹ್ಯಾಪಿ ಮ್ಯಾರೀಡ್ ಲೈಫ್: 12ಅನ್ನು ಮದುವೆಯಾದ 63!

63 ವರ್ಷದ ಧಾರ್ಮಿಕ ಮುಖಂಡರೊಬ್ಬರು 12 ವರ್ಷದ ಬಾಲಕಿಯನ್ನು ಮದುವೆಯಾದ ಘಟನೆ ಆಕ್ರೋಶಕ್ಕೆ ಗುರಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ವೈರಲ್ ಆಗಿದ್ದು ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ಪಶ್ಚಿಮ ಆಫ್ರಿಕಾದ ಘಾನಾದಲ್ಲಿ ಈ ಘಟನೆ ನಡೆದಿದೆ. ಕಾನೂನುಬದ್ಧವಾಗಿ ಹುಡುಗಿಗೆ 18 ವರ್ಷ ವಯಸ್ಸಾಗಿರಬೇಕು. ಆದರೆ ಧರ್ಮದ ಮುಖಂಡರೊಬ್ಬರು ಈ ರೀತಿ ನಿರ್ಧಾರ ತೆಗೆದುಕೊಳ್ಳುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಈಗ ಮೂಡಿದೆ. ಸಾಮಾನ್ಯವಾಗಿ ಧರ್ಮ ಮುಖಂಡರಿಗೆ ಎಲ್ಲರೂ ಗೌರವ ಕೊಡುತ್ತಾರೆ. ತಲೆ ತಗ್ಗಿಸಿ ನಮಸ್ಕರಿಸುತ್ತಾರೆ. ದೇವರ ನಂತರ ಅವರನ್ನೇ ಹೆಚ್ಚು ಪೂಜನೀಯ ಭಾವದಿಂದ ಕಾಣುತ್ತಾರೆ. ಆದರೆ ಈ ನಡೆಗೆ ಬೇಸರ ವ್ಯಕ್ತವಾಗಿದೆ.

A 63-year-old religious leader is married to a 12-year-old girl

ಆದರೆ ಇದು ನಮ್ಮ ಸಂಪ್ರದಾಯ ಎಂದು ಆ ಸಮುದಾಯವರು ಹೇಳಿಕೊಂಡಿದ್ದಾರೆ. ಹುಡುಗಿ ಆರು ವರ್ಷ ಇರುವಾಗಲೇ ಅರ್ಚಕ ಆಕೆಯನ್ನು ನೋಡಿದ್ದರು, ಅಂದಿನಿಂದ ಆಕೆಯನ್ನೆ ಮದುವೆಯಾಗಬಯಸಿದ್ದರು. ಈಗ ಆಕೆಗೆ 12 ವರ್ಷದಲ್ಲಿ ಆಕೆಯನ್ನು ಮದುವೆಯಾಗಿದ್ದಾರೆ.

ಅಷ್ಟಕ್ಕೂ ಬಾಲಕಿಯನ್ನು ಮದುವೆಯಾದ ಅರ್ಚಕನ ಹೆಸರು ನುಮೊ ಬೊರ್ಕೆಟ್ ಲಾವೆಹ್ ತ್ಸುರು. ಇವರು ನುಂಗ್ವಾ ಸಮುದಾಯದ ಧಾರ್ಮಿಕ ಮುಖಂಡರಾಗಿದ್ದು ತಮ್ಮದೇ ಆದ ಸಮುದಾಯದ ಬಾಲಕಿಯನ್ನು ಮದುವೆಯಾಗಿದ್ದಾರೆ. ಈ ಮದುವೆ ಫೋಟೋಗಳು ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟಿ ವಿರೋಧ ವ್ಯಕ್ತವಾಗಿದೆ.

ವಿವಾಹದ ತುಣುಕನ್ನು ಸ್ಥಳೀಯ ಸುದ್ದಿ ವಾಹಿನಿಯೊಂದು ಹಂಚಿಕೊಂಡಿದೆ. ಚಿಕ್ಕ ಹುಡುಗಿ ಸರಳವಾದ ಬಿಳಿ ಉಡುಗೆ ತೊಟ್ಟಿದ್ದಾಳೆ. ಧರ್ಮದ ಮುಖಂಡ ಬಿಳಿ ಖುರ್ತಿ ಹಾಕಿಕೊಂಡಿದ್ದು ತಲೆಯ ಮೇಲೆ ಪೇಟಾವನ್ನು ಹಾಕಿಕೊಂಡಿದ್ದಾರೆ.

ಇದು ಕ್ರೋವರ್‌ನ ನುಂಗುವಾದಲ್ಲಿ ಸಾಂಪ್ರದಾಯಿಕವಾಗಿ ನಡೆಯಿತು. ಟೀಕೆಗಳನ್ನು ಅಜ್ಞಾನ ಎಂದು ತಳ್ಳಿ ಹಾಕಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಹುಡುಗಿಯರು 18 ವರ್ಷ ತಲುಪುವುದರೊಳಗೇ ಮದುವೆಯಾಗುತ್ತಾರೆ ಎನ್ನಲಾಗುತ್ತದೆ. ಹೀಗಾಗಿ ಇಲ್ಲಿ ಕಡಿಮೆ ವಯಸ್ಸಿನಲ್ಲಿ ಮದುವೆಯಾಗುವುದು ಸಾಮಾನ್ಯವಾಗಿದೆ. ಆದರೆ ಇದಕ್ಕೆ ಯಾವುದೇ ಕಡಿವಾಣವಿಲ್ಲದೇ ಇರುವುದು ವಿಪರ್ಯಾಸವಾಗಿದೆ.

ಇತ್ತೀಚಿನ ಅಂಕಿಅಂಶಗಳು ದೇಶವು ಇನ್ನೂ ವಿಶ್ವದಲ್ಲೇ ಅತಿ ಹೆಚ್ಚು ಬಾಲ್ಯವಿವಾಹ ಪ್ರಚಲಿತ ದರವನ್ನು ಹೊಂದಿದೆ ಎಂದು ಸೂಚಿಸುತ್ತವೆ. ನಾಲ್ಕು ಹುಡುಗಿಯರಲ್ಲಿ ಒಬ್ಬರನ್ನು ಬಲವಂತವಾಗಿ ಬಾಲ್ಯ ವಿವಾಹ ಮಾಡಿಸಲಾಗಿದೆ. ಪೊಲೀಸರು ಇದೀಗ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ, ಅನೇಕ ಸ್ಥಳೀಯರು ಅವರ ತ್ವರಿತ ಕ್ರಮವನ್ನು ಶ್ಲಾಘಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+