ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್‌ನಲ್ಲಿ Redmi 13 5G ಗ್ರಾಹಕರ ಫಸ್ಟ್ ಚಾಯ್ಸ್
ಭಾರತದ ಮೊಬೈಲ್ ಮಾರುಕಟ್ಟೆಗೆ ಈಗ ಮತ್ತೊಂದು ಮೊಬೈಲ್ ಗ್ರ್ಯಾಂಡ್ ಎಂಟ್ರಿ ನೀಡಿದೆ. ರೆಡ್‌ಮಿ 13 5ಜಿ ಮೊಬೈಲ್ ಮಂಗಳವಾರ ಲಾಂಚ್ ಆಗಿದೆ. ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್ ನಲ್ಲಿ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ. ಭರ್ಜರಿ ಕ್ಯಾಮೆರಾ ಹಾಗೂ ಭರ್ಜರಿ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ.
Redmi 13 5G ಫೋನ್ ಅನ್ನು ಜುಲೈ 9, 2024 ರಂದು ಬಿಡುಗಡೆ ಮಾಡಲಾಗಿದೆ. Redmi 13 5G ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಆಕರ್ಷಕ ಲುಕ್ ಹೊಂದಿದ್ದು ಗ್ರಾಹಕರ ಚಿತ್ತ ಕದ್ದಿದೆ. ಹಾಗಿದ್ದರೆ ಫೋನ್ ಹೇಗಿದೆ ಇಲ್ಲಿದೆ ಕಂಪೀಟ್ ರಿಪೋರ್ಟ್..

ಡಿಸ್‌ಪ್ಲೇ ಹೇಗಿದೆ?
Redmi 13 5G ಸ್ಮಾರ್ಟ್‌ಫೋನ್‌ನಲ್ಲಿ, ನೀವು 6.6 ಇಂಚಿನ ಪಂಚ್‌ಹೋಲ್ ಕ್ಯಾಮೆರಾ ಇರಲಿದೆ. ಇದು 120Hz ರಿಫ್ರೆಶ್ ರೇಟ್ ಬೆಂಬಲ ಹೊಂದಿದೆ. ಫೋನ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಹೊಂದಿದೆ. ಈ ಮೊಬೈಲ್ ಸುಧಾರಿ Android 14 ನಲ್ಲಿ ಫೋನ್ ಕಾರ್ಯನಿರ್ವಹಿಸುತ್ತದೆ. ಓಕ್ಟಾ ಕೋರ್ ಕ್ವಾಲಕಂ ಸ್ನ್ಯಾಪ್ ಡ್ರ್ಯಾಗನ್ 4 Gen 2 ಪ್ರೊಸೆಸರ್ ಅನ್ನು ಫೋನ್‌ನಲ್ಲಿದೆ.
ಫೋನ್‌ನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಒದಗಿಸಲಾಗಿದೆ. ಇದರ ಪ್ರೈಮರಿ ಕ್ಯಾಮೆರಾ 108MP ಆಗಿದ್ದು, ಸೆಕಂಡ್ರಿ ಕ್ಯಾಮೆರಾ 2MP ಹೊಂದಿದೆ. ಇನ್ನು ಮುಂಭಾಗದಲ್ಲಿ 8MP ಕ್ಯಾಮೆರಾ ನೀಡಲಾಗಿದ್ದು, ಇದರ ಸಹಾಯದಿಂದ ವಿಡಿಯೋ ಕರೆಗಳು, ಸೆಲ್ಫಿ ಫೋಟೊಗಳನ್ನು ತೆಗೆಯಬಹುದು. ಫೋನ್ ಅನ್ನು 33W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5030mAh ಬ್ಯಾಟರಿಯನ್ನು ಒದಗಿಸಬಹುದು.
ಬೆಲೆ ಮತ್ತು ಕೊಡುಗೆಗಳು
Redmi 13 5G ಸ್ಮಾರ್ಟ್‌ಫೋನ್‌ನ 6 GB ರ್ಯಾಮ್ ಮತ್ತು 128 GB ಇಂಟರ್ನಲ್ ಸ್ಟೋರೇಜ್ ಹೊಂದಿದ್ದು, ಇದರ ಬೆಲೆ 13,999 ರೂ. ಆಗಿರಲಿದೆ. ಅದೇ ಫೋನ್‌ನ 8 GB RAM ಮತ್ತು 128 GB ಇಂಟರ್ನಲ್ ಸ್ಟೋರೇಜ್ ರೂಪಾಂತರವು 15,999 ರೂ.ಗೆ ಬರಲಿದೆ. ಫೋನ್ ಖರೀದಿಸಿದ ಗ್ರಾಹಕರಿಗೆ 1000 ರೂಪಾಯಿ ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ. ಈ ರೀತಿಯಾಗಿ, 6 GB RAM ರೂಪಾಂತರದ ಬೆಲೆ 12,999 ರೂಗಳಲ್ಲಿ ಉಳಿಯುತ್ತದೆ, ಆದರೆ 8 GB RAM ರೂಪಾಂತರದ ಬೆಲೆ 15,999 ರೂಗಳಲ್ಲಿ ಉಳಿಯುತ್ತದೆ.

ಬಾಕ್ಸ್‌ನಲ್ಲಿ ಏನಿದೆ?
ಮೊಬೈಲ್
ಡಾಕ್ಯೂಮೆಂಟ್
ಟೈಪ್ ಸಿ ಟು ಟೈಪ್ ಎ ಚಾರ್ಜರ್ ವೈರ್
33 ವ್ಯಾಟ್ ಚಾರ್ಜರ್
ಸಿಮ್ ಇಜೆಕ್ಟ್ ಟೂಲ್
ಮೊಬೈಲ್ ಬ್ಯಾಕ್ ಕೇಸ್
ಕೆಳ ಭಾಗದಲ್ಲಿ ಏನಿದೆ?
ಸ್ಪೀಕರ್ ಗ್ರೀಲ್, ಯುಎಸ್‌ಬಿ ಟೈಪ್ ಸಿ ಚಾರ್ಜರ್, ಮೈಕ್ರೋಫೋನ್
ಬಲ ಭಾಗದಲ್ಲಿ ಏನಿದೆ
ಸಿಮ್ ಕಾರ್ಡ್ ಟ್ರೇ
ಎಡಭಾಗದಲ್ಲಿ ಏನಿದೆ
ವ್ಯಾಲ್ಯೂಮ್ ಕಂಟ್ರೋಲ್
ಪವರ್ ಬಟನ್ ಆಫ್ ಆನ್












Click it and Unblock the Notifications