ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯದ ಅಮಲಿನಲ್ಲಿ ವಿಮಾನ ಹಾರಾಟ; ಸಿಕ್ಕಿಬಿದ್ದ 60 ಪೈಲಟ್‌ಗಳು

|
Google Oneindia Kannada News

ವಿಮಾನಗಳನ್ನು ಹಾರಿಸುವ ವಿಮಾನಯಾನ ಭಾರತೀಯ ಪೈಲಟ್‌ಗಳು ನಿರಂತರವಾಗಿ ಡ್ರಗ್ಸ್‌ಗೆ ಬಲಿಯಾಗುತ್ತಿದ್ದಾರೆ ಹಾಗೂ ಮದ್ಯ ಕುಡಿದು ವಿಮಾನಗಳನ್ನು ಹಾರಿಸುತ್ತಿದ್ದಾರೆ. ಇದು ನಿಜ ಏಕೆಂದರೆ, ಲೋಕಸಭೆಯಲ್ಲಿ ಈ ಮಾಹಿತಿ ನೀಡಿರವ ಸ್ವತಃ ವಿಮಾನಯಾನದ ಸಚಿರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ, ಕಳೆದ 6 ತಿಂಗಳಲ್ಲಿ 68 ವಿಮಾನಯಾನ ಸಂಸ್ಥೆಗಳ ಸಿಬ್ಬಂದಿ ಟೇಕ್-ಆಫ್ ಆಗುವ ಮುನ್ನ ಉಸಿರಾಟದ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ.

ಹೌದು ತಮ್ಮ ಸಚಿವರವೇ ಹೇಳಿಕೊಂಡಂತೆ ಬ್ರೀತ್ ಅನಾಲೈಸರ್ ಆಲ್ಕೋಹಾಲ್ ಪರೀಕ್ಷೆಯಲ್ಲಿ ಭಾರತದ ವಿವಿಧ ವಿಮಾನಯಾನ ಸಂಸ್ಥೆಗಳ 14 ಪೈಲಟ್‌ಗಳು ಮತ್ತು 54 ಸಿಬ್ಬಂದಿ ವಿಫಲರಾಗಿದ್ದಾರೆ. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರೇ ಭಾರತೀಯ ಏರ್‌ಲೈನ್ಸ್‌ನ ಪೈಲಟ್‌ಗಳ ಬಗ್ಗೆ ದೊಡ್ಡ ಗಂಭೀರ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

 ರಷ್ಯಾದ ವಿಮಾನ ಹೊಡೆದುರುಳಿಸಿ ಪೈಲಟ್‌ ಅನ್ನು ವಶಕ್ಕೆ ಪಡೆದ ಉಕ್ರೇನ್‌ ರಷ್ಯಾದ ವಿಮಾನ ಹೊಡೆದುರುಳಿಸಿ ಪೈಲಟ್‌ ಅನ್ನು ವಶಕ್ಕೆ ಪಡೆದ ಉಕ್ರೇನ್‌

ಗುರುವಾರ ಸಂಸತ್ತಿಗೆ ಮಾಹಿತಿ ನೀಡಿದ ಅವರು, ಕಳೆದ 6 ತಿಂಗಳಲ್ಲಿ 68 ಏರ್‌ಲೈನ್ಸ್ ಸಿಬ್ಬಂದಿ ಉಸಿರಾಟದ ಪರೀಕ್ಷೆಯಲ್ಲಿ (Breath Analyzer Test) ವಿಫಲರಾಗಿದ್ದಾರೆ. ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಲ್ಲಿ ಹತ್ತಕ್ಕೂ ಹೆಚ್ಚು ಪೈಲಟ್‌ಗಳೂ ಸೇರಿದ್ದಾರೆ. ಜನವರಿ 2022ರಿಂದ ಜೂನ್ 2022ರವರೆಗೆ, 14 ಪೈಲಟ್‌ಗಳು ಮತ್ತು 54 ಸಿಬ್ಬಂದಿ ಆಲ್ಕೋಹಾಲ್ ಉಸಿರಾಟಕ್ಕೆ ಧನಾತ್ಮಕ ಪರೀಕ್ಷೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

 ಕುಡಿದ ಮತ್ತಿನಲ್ಲಿ ಸಿಕ್ಕಿಬೀಳುವ ಪೈಲಟ್‌ಗಳು

ಕುಡಿದ ಮತ್ತಿನಲ್ಲಿ ಸಿಕ್ಕಿಬೀಳುವ ಪೈಲಟ್‌ಗಳು

ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜ್ಯೋತಿರಾದಿತ್ಯ ಸಿಂಧಿಯಾ, ಕಳೆದ ಎರಡೂವರೆ ವರ್ಷಗಳಲ್ಲಿ 60 ಪೈಲಟ್‌ಗಳು ಮತ್ತು 150ರ ಕ್ಯಾಬಿನ್ ಸಿಬ್ಬಂದಿ ಬ್ರೀತ್ ಅನಲೈಸರ್ ಪರೀಕ್ಷೆಯಲ್ಲಿ ವಿಫಲರಾದರು. ಮಾಧ್ಯಮ ವರದಿಗಳ ಪ್ರಕಾರ, 2016ರ ಆರಂಭದಲ್ಲಿ, ಜನವರಿ 1 ಮತ್ತು ಅಕ್ಟೋಬರ್ 31ರ ನಡುವೆ, 113 ಕ್ಯಾಬಿನ್ ಸಿಬ್ಬಂದಿ ಮತ್ತು 38 ಪೈಲಟ್‌ಗಳು ಆಲ್ಕೋಹಾಲ್ ಉಸಿರಾಟದ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ಕಂಡುಬಂದಿದೆ ಎಂದು ಸಂಸತ್ತಿಗೆ ತಿಳಿಸಲಾಯಿತು. 2015ರಲ್ಲಿ 40 ಪೈಲಟ್‌ಗಳು ಬ್ರೀತ್ ಅನಲೈಸರ್ ಪರೀಕ್ಷೆಯಲ್ಲಿ ವಿಫಲರಾಗಿದ್ದರು. ಇದಲ್ಲದೇ 2014ರಲ್ಲಿ ಈ ಸಂಖ್ಯೆ 20ರ ಆಸುಪಾಸಿನಲ್ಲಿತ್ತು.

 ಪ್ರತಿದಿನವೂ ವಿಮಾನದಲ್ಲಿ ಆಲ್ಕೋಹಾಲ್ ಪರೀಕ್ಷೆ

ಪ್ರತಿದಿನವೂ ವಿಮಾನದಲ್ಲಿ ಆಲ್ಕೋಹಾಲ್ ಪರೀಕ್ಷೆ

ಡಿಜಿಸಿಎ ನಿಯಮಗಳ ಪ್ರಕಾರ, ಆಲ್ಕೋಹಾಲ್ ಸೇವನೆ ಮತ್ತು ವಿಮಾನದ ಹೊರಡುವ ಸಮಯದ ನಡುವೆ ಕನಿಷ್ಠ 12ಗಂಟೆಗಳ ಪೈಲಟ್‌ಗಳು ಯಾವುದೇ ರೀತಿಯ ಮಧ್ಯಪಾನ ಮಾಡಿರಬಾರದು. ಡಿಜಿಸಿಎ ಮಾನದಂಡಗಳ ಪ್ರಕಾರ, ಕಾಕ್‌ಪಿಟ್ ಮತ್ತು ಕ್ಯಾಬಿನ್ ಸಿಬ್ಬಂದಿಯ 50%ರಷ್ಟು ಸದಸ್ಯರು ಪ್ರತಿದಿನವೂ ಪೂರ್ವ ವಿಮಾನದ ಆಲ್ಕೋಹಾಲ್ ಪರೀಕ್ಷೆಹಯನ್ನು ಮಾಡಲಾಗುತ್ತದೆ. ಮೊದಲ ಬಾರಿಗೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರನ್ನು ಮೂರು ತಿಂಗಳವರೆಗೆ ಅಮಾನತುಗೊಳಿಸಲಾಗುತ್ತದೆ. ಮತ್ತೊಂದೆಡೆ, ಎರಡನೇ ಬಾರಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರನ್ನು ಮೂರು ವರ್ಷಗಳವರೆಗೆ ಅಮಾನತುಗೊಳಿಸಲಾಗಿದೆ. ಇದಲ್ಲದೆ, ಯಾರಾದರೂ ಮೂರನೇ ಬಾರಿಗೆ ಈ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ ಅವರ ಪರವಾನಗಿಯನ್ನು ರದ್ದುಗೊಳಿಸುವ ಅವಕಾಶವಿದೆ.

 ಅನಾಲೈಸರ್ ಆಲ್ಕೋಹಾಲ್ ಪರೀಕ್ಷೆಯಲ್ಲಿ ಪಾಸಿಟಿವ್

ಅನಾಲೈಸರ್ ಆಲ್ಕೋಹಾಲ್ ಪರೀಕ್ಷೆಯಲ್ಲಿ ಪಾಸಿಟಿವ್

ಬ್ರೀತ್ ಅನಾಲೈಸರ್ ಆಲ್ಕೋಹಾಲ್ ಪರೀಕ್ಷೆಯಲ್ಲಿ ಭಾರತದ ವಿವಿಧ ವಿಮಾನಯಾನ ಸಂಸ್ಥೆಗಳ 14 ಪೈಲಟ್‌ಗಳು ಮತ್ತು 54 ಸಿಬ್ಬಂದಿ ವಿಫಲರಾಗಿದ್ದಾರೆ ಎಂದು ಅವರು ಹೇಳಿದರು. ಪೈಲಟ್ ಮತ್ತು ಸಿಬ್ಬಂದಿ ಮಾದಕ ವ್ಯಸನದ ಈ ಅಂಕಿ ಅಂಶವು ಈ ವರ್ಷದ ಮೊದಲ ಆರು ತಿಂಗಳಿಗೆ ಮಾತ್ರ. ಈ ಪೈಕಿ, ಎರಡನೇ ಬಾರಿಗೆ ಮದ್ಯದ ಅಮಲಿನಲ್ಲಿ ಸಿಕ್ಕಿಬಿದ್ದಿದ್ದಕ್ಕಾಗಿ ಡಿಜಿಸಿಎ ಇಬ್ಬರು ಪೈಲಟ್‌ಗಳು ಮತ್ತು ಇಬ್ಬರು ಕ್ಯಾಬಿನ್ ಸಿಬ್ಬಂದಿಯನ್ನು ಮೂರು ವರ್ಷಗಳ ಕಾಲ ಅಮಾನತುಗೊಳಿಸಿದೆ. ಮತ್ತೊಂದೆಡೆ, ಪರೀಕ್ಷೆಯಲ್ಲಿ ದೇಹದಲ್ಲಿ ಹೆಚ್ಚು ಆಲ್ಕೋಹಾಲ್ ಇರುವುದು ಪತ್ತೆಯಾದ ಪೈಲಟ್. ಅವರನ್ನು ಮೂರು ತಿಂಗಳ ಕಾಲ ಅಮಾನತುಗೊಳಿಸಲಾಗಿತ್ತು. ಇದು ಅವರ ಮೊದಲ ಅಪರಾಧವಾಗಿರುವುದರಿಂದ ಅವರ ಶಿಕ್ಷೆಯಲ್ಲಿ ಈ ರಿಯಾಯಿತಿ ನೀಡಲಾಗಿದೆ.

 ದೆಹಲಿ ವಿಮಾನ ನಿಲ್ದಾಣದಲ್ಲಿ 57 ಪ್ರಕರಣಗಳು ಪತ್ತೆ

ದೆಹಲಿ ವಿಮಾನ ನಿಲ್ದಾಣದಲ್ಲಿ 57 ಪ್ರಕರಣಗಳು ಪತ್ತೆ

ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಕರ್ತವ್ಯದ ಸಾಲಿನಲ್ಲಿ ವಿಮಾನಯಾನ ​​​​ಸಿಬ್ಬಂದಿ ಮತ್ತು ಗ್ರೌಂಡ್ ಸಿಬ್ಬಂದಿಗಳ ಮಾದಕತೆಯ ಘಟನೆಗಳು ಹೆಚ್ಚಾಗುತ್ತಿವೆ. 2015 ಮತ್ತು 2018ರ ನಡುವಿನ ಅವಧಿಯಲ್ಲಿ 171 ಪೈಲಟ್‌ಗಳು ತಮ್ಮ ವಿಮಾನಗಳ ನಿಗದಿತ ಟೇಕ್-ಆಫ್‌ಗೆ ಮೊದಲು ಭಾರತ ಮತ್ತು ವಿದೇಶಗಳಲ್ಲಿನ ವಿಮಾನ ನಿಲ್ದಾಣಗಳಲ್ಲಿ ಕುಡಿದು ಸಿಕ್ಕಿಬಿದ್ದಿದ್ದಾರೆ. ದೆಹಲಿ ವಿಮಾನ ನಿಲ್ದಾಣವೊಂದರಲ್ಲಿಯೇ 57 ಪ್ರಕರಣಗಳು ಪತ್ತೆಯಾಗಿವೆ. ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿ ಮಾತ್ರ ಪ್ರತಿನಿತ್ಯ ಕುಡಿಯುವುದಿಲ್ಲ. ಈ ವರ್ಷದ ಆರಂಭದಲ್ಲಿ, ಜನವರಿಯಿಂದ ಫೆಬ್ರವರಿವರೆಗೆ, 12 ಗ್ರೌಂಡ್ ಸಿಬ್ಬಂದಿ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗ ಸಿಕ್ಕಿಬಿದ್ದರು. ಇವರಲ್ಲಿ ವಿಮಾನ ಚಾಲಕರು, ಅಗ್ನಿಶಾಮಕ ಸಿಬ್ಬಂದಿ ಮತ್ತು ವಿಮಾನ ನಿರ್ವಹಣಾ ಸಿಬ್ಬಂದಿ ಸೇರಿದ್ದಾರೆ.

Recommended Video

ಕರಾವಳಿಕಿಚ್ಚು:ಫಾಸಿಲ್ ಏನ್ ಮಾಡಿದ್ದ?ಕೊಲೆಯಾಗಿದ್ದು ಯಾಕೆ? | OneIndia Kannada

English summary
Total of 60 pilots and 150 cabin crew members tested positive following the breath analyzer (BA) test in the last two and a half years. A total of 210 pilots and crew members have been suspended
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X