ನಟನಿಗೆ ಕನ್ಯತ್ವ ಮಾರಿಕೊಂಡ ಯುವತಿ: ಗಳಿಸಿದ್ದು 1,80,00,00,000 ರೂಪಾಯಿ
'ನನ್ನ ಕನ್ಯತ್ವವನ್ನು ಸಿನಿಮಾ ಸ್ಟಾರ್ ಒಬ್ಬರಿಗೆ 18 ಕೋಟಿ ರೂ.ಗೆ ಮಾರಿದ್ದೇನೆ' ಎಂದು ಯುಕೆಯ 22 ವರ್ಷದ ಯುವತಿಯೊಬ್ಬಳು ಆಘಾತಕಾರಿ ಹೇಳಿಕೆ ನೀಡಿದ್ದಾಳೆ. 22 ವರ್ಷದ ಯುಕೆ ವಿದ್ಯಾರ್ಥಿನಿ ಲಾರಾ ಎಂಬಾಕೆ ಹಾಲಿವುಡ್ ಸ್ಟಾರ್ ಒಬ್ಬರಿಗೆ ತನ್ನ ಕನ್ಯತ್ವವನ್ನು ಮಾರಾಟ ಮಾಡಿಕೊಂಡಿದ್ದಾಳೆ. ಇದು ನಿಜಕ್ಕೂ ಅಚ್ಚರಿಯ ಘಟನೆ.
ವಿಚಿತ್ರ ಅಂದರೆ ಲಾರಾ ಕನ್ಯತ್ವ ಮಾರಲು ನಿರ್ಧರಿಸಿದಾಗ ಖರೀದಿಗಾಗಿ ಹಲವಾರು ಪುರುಷರು ಮುಂದೆ ಬಂದಿದ್ದಾರೆ. ಬಿಡ್ಡಿಂಗ್ ಪ್ರಾರಂಭಿಸಿದಾಗ ಹಾಲಿವುಡ್ ನಟರೊಬ್ಬರು ಅತಿ ಹೆಚ್ಚು ಬಿಡ್ ಮಾಡಿ ಲಾರಾ ಕನ್ಯತ್ವವನ್ನು ಪಡೆದುಕೊಂಡಿದ್ದಾರೆ. ಈ ಘಟನೆ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ.

ಮ್ಯಾಂಚೆಸ್ಟರ್ ನಿವಾಸಿಯಾದ ಲಾರಾ ಡಿಸೆಂಬರ್ 2023ರಲ್ಲಿ ತನ್ನ ಕನ್ಯತ್ವವನ್ನು ಮಾರಾಟ ಮಾಡಲು ನಿರ್ಧರಿಸಿದ್ದರು. ಹೀಗಂದುಕೊಂಡು ಕೆಲವೇ ತಿಂಗಳುಗಳ ನಂತರ ಆಕೆಯ ಕನ್ಯತ್ವವನ್ನು ಹರಾಜಿನಲ್ಲಿ ಇಡಲಾಯಿತು. ಇದರಲ್ಲಿ ಬಹಳ ಪ್ರಸಿದ್ಧ ಹಾಲಿವುಡ್ ನಟ ಅತಿ ಹೆಚ್ಚು ಮೊತ್ತವನ್ನು (1.7 ಮಿಲಿಯನ್ ಪೌಂಡ್‌ಗಳು ಅಂದರೆ ಭಾರತದ ರೂಪಾಯಿಯಲ್ಲಿ 18 ಕೋಟಿ ರೂ.ಗಳಿಗಿಂತ ಹೆಚ್ಚು) ಪಾವತಿಸುವ ಮೂಲಕ ಒಪ್ಪಂದವನ್ನು ಗೆದ್ದಿದ್ದಾರೆ. ಅಲ್ಲದೆ ಲಂಡನ್‌ನ ರಾಜಕಾರಣಿ ಮತ್ತು ದುಬೈ ಉದ್ಯಮಿ ಕೂಡ ಈ ಹರಾಜಿನಲ್ಲಿ ಭಾಗವಹಿಸಿದ್ದರು. ಆದರೆ ಕೊನೆಯಲ್ಲಿ ಹಾಲಿವುಡ್ ನಟ ಅತಿ ಹೆಚ್ಚು ಬಿಡ್ ಮಾಡುವ ಮೂಲಕ ಲಾರಾ ಕನ್ಯತ್ವವನ್ನು ಗೆದ್ದಿದ್ದಾರೆ.
ನನಗೆ ಯಾವುದೇ ವಿಷಾದವಿಲ್ಲ- ಲಾರಾ
ಬಿಡ್ ಮಾಡಿದ ನಂತರ ಬೆಂಗಾವಲು ತಂಡದೊಂದಿಗೆ ದಿನಾಂಕವನ್ನು ನಿಗದಿಪಡಿಸಲಾಯಿತು. ಆ ದಿನ 22 ವರ್ಷದ ಹುಡುಗಿ ಲಂಡನ್‌ನ ಪಂಚತಾರಾ ಹೋಟೆಲ್‌ಗೆ ನಟನನ್ನು ಭೇಟಿಯಾಗಲು ಹೋದಳು. 'ಈ ನಿರ್ಧಾರದ ಬಗ್ಗೆ ತನಗೆ ಯಾವುದೇ ಹಿಂಜರಿಕೆ ಅಥವಾ ಆತಂಕ ಇರಲಿಲ್ಲ. ಬದಲಾಗಿ ತಾನು ತುಂಬಾ ಉತ್ಸುಕಳಾಗಿದ್ದೆ' ಎಂದು ಲಾರಾ ಹೇಳುತ್ತಾರೆ. ಒಂದು ವರ್ಷದ ನಂತರವೂ ಅವಳು ತನ್ನ ನಿರ್ಧಾರದಿಂದ ಸಂಪೂರ್ಣವಾಗಿ ತೃಪ್ತಳಾಗಿದ್ದಾಳೆ ಮತ್ತು ಯಾವುದೇ ವಿಷಾದವನ್ನು ಅನುಭವಿಸದೇ ಇರುವುದು ನಿಜಕ್ಕೂ ಅಚ್ಚರಿ ತಮದಿದೆ. ಇಲ್ಲಿ ಮತ್ತೊಂದು ಗಮನಿಸಬೇಕಾದ ವಿಷಯ ಅಂದರೆ ಲಾರಾಳ ಈ ನಿರ್ಧಾರದ ಬಗ್ಗೆ ಆಕೆಯ ಪೋಷಕರು ಒಪ್ಪಿಕೊಂಡಿದ್ದಾರಂತೆ.
ಲಾರಾ ಕುಟುಂಬಸ್ಥರು ಹೇಳಿದ್ದೇನು?
ಅಷ್ಟೇ ಅಲ್ಲ ಲಾರಾ ತನ್ನ ನಿರ್ಧಾರ ಬುದ್ಧಿವಂತಿಕೆ ಎಂದು ಕರೆದುಕೊಂಡಿದ್ದಾಳೆ. ತಾನು ಯಾರೊಂದಿಗಾದರೂ ಮದುವೆ ಮಾಡಿಕೊಂಡಿದ್ದರೆ ಅಥವಾ ಸಂಬಂಧ ಬೆಳೆಸಿಕೊಂಡಿದ್ದರೆ ಈ ಹಾಲಿವುಡ್ ನಟ ತನ್ನನ್ನು ಪಡೆಯುತ್ತಿರಲಿಲ್ಲ. ಇಷ್ಟು ಹಣವನ್ನು ಏಕಾಏಕಿ ಗಳಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಈ ರೀತಿಯ ತನ್ನ ನಿರ್ಧಾರವನ್ನು ಲಾರಾ ಬುದ್ಧಿವಂತಿಕೆಯ ನಿರ್ಧಾರ ಎಂದು ಕರೆದಿದ್ದಾರೆ. ಆ ನಿರ್ಧಾರ ಸರಿಯಾಗಿದೆ ಎಂದು ಲಾರಾ ಸಾರಿ ಸಾರಿ ಹೇಳಿದ್ದಾರೆ.
ಆರಂಭದಲ್ಲಿ ಆಕೆಯ ಹೆತ್ತವರು ಈ ನಿರ್ಧಾರದಿಂದ ಆಘಾತಕ್ಕೊಳಗಾದರು. ಆದರೆ ನಂತರ ಅವರು ಸಹ ಒಪ್ಪಿಕೊಂಡರು. ಲಾರಾ ಸ್ವತಂತ್ರಳು ಮತ್ತು ಆಕೆ ಯಾರೊಂದಿಗೆ ಸಂಬಂಧ ಹೊಂದಬೇಕೆಂದು ಯಾರೂ ನಿರ್ಧರಿಸಲು ಆಗುವುದಿಲ್ಲ ಎಂದು ಪೋಷಕರು ಹೇಳಿದ್ದರಂತೆ. ಲಾರಾ ಕಾನೂನುಬದ್ಧವಾಗಿ ವಯಸ್ಕರು ಮತ್ತು ಆಕೆಯ ಈ ನಿರ್ಧಾರವನ್ನು ಪೂರ್ಣ ತಿಳುವಳಿಕೆಯೊಂದಿಗೆ ತೆಗೆದುಕೊಂಡಿದ್ದಾಳೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಹಣದಿಂದಾಗಿ ಲಾರಾ ಇಡೀ ಜೀವನ ಬದಲು
ಈ ಒಪ್ಪಂದಕ್ಕೆ ಪ್ರತಿಯಾಗಿ ಲಾರಾ ಪಡೆದ 1.6 ಮಿಲಿಯನ್ ಪೌಂಡ್‌ಗಳು (ಸುಮಾರು 18 ಕೋಟಿ ರೂ.) ಅವರ ಇಡೀ ಜೀವನವನ್ನೇ ಬದಲಾಯಿಸಿದೆ. ಈ ಹಣದಿಂದ ಅವರು ಹಲವಾರು ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದ್ದಾರೆ. ಅವುಗಳನ್ನು ಬಾಡಿಗೆಗೆ ನೀಡಿದ್ದಾರೆ. ಇದಲ್ಲದೆ ಅವರು ದುಬಾರಿ ಬಟ್ಟೆಗಳನ್ನು ಖರೀದಿಸಿದ್ದಾರೆ ಮತ್ತು ಅನೇಕ ಸ್ಥಳಗಳಿಗೆ ಪ್ರಯಾಣ ಕೂಡ ಮಾಡಿದ್ದಾರೆ. ಈಗ ಆಕೆ 'ಶುಗರ್ ಬೇಬಿ' ಆಗಿ ಕೆಲಸ ಮಾಡಲು ಬಯಸಿದ್ದು, ಇದರಿಂದ ಅವಳು ಪ್ರತಿ ತಿಂಗಳು ಸುಮಾರು 30,000 ಪೌಂಡ್‌ಗಳು ಗಳಿಸಲು ಯೋಜಿಸುತ್ತಿದ್ದಾಳೆ.
ಈ ಕೆಲಸ ಮಾಡುವವರಿಗೆ ಎಚ್ಚರಿಸಿದ ಲಾರಾ
ಕನ್ಯತ್ವ ಎಂದರೆ ಒಬ್ಬ ವ್ಯಕ್ತಿಯು ಯಾವತ್ತೂ ಸಂಭೋಗದಲ್ಲಿ ತೊಡಗಿಲ್ಲದಿರುವ ಸ್ಥಿತಿ. ಅಂದ ಹಾಗೆ ಲಾರಾ ಈ ಹಿಂದೆ NBA ಆಟಗಾರರು, ಪ್ರೀಮಿಯರ್ ಲೀಗ್ ಫುಟ್ಬಾಲ್ ಆಟಗಾರರು ಮತ್ತು ರಾಜಕಾರಣಿಗಳೊಂದಿಗೆ ಡೇಟಿಂಗ್ ಮಾಡಿರುವುದಾಗಿ ಹೇಳಿಕೊಂಡಿದ್ದಾಳೆ. ಆಕೆಗೆ ಈ ವೃತ್ತಿ ಇಷ್ಟವಾಗಿದೆಯಂತೆ. ಏಕೆಂದರೆ ಲಾರಾಳಿಗೆ ಈ ಕೆಲಸದಿಂದ ಹೊಸ ಜನರನ್ನು ಭೇಟಿಯಾಗುವುದು ಮತ್ತು ಅವರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇದು ತನಗೆ ಖುಷಿ ನೀಡುತ್ತದೆ ಎಂದು ಲಾರಾ ಹೇಳಿಕೊಂಡಿದ್ದಾಳೆ.
ಆದರೆ ಈ ಮಾರ್ಗವನ್ನು ಅನುಸರಿಸಲು ಬಯಸುವವರು ಜಾಗರೂಕರಾಗಿರಬೇಕು ಎಂದು ಲಾರಾ ಎಚ್ಚರಿಸಿದ್ದಾರೆ. ಇದರಲ್ಲಿ ಹಲವು ಅಪಾಯಗಳಿವೆ. ಆದ್ದರಿಂದ ಇದಕ್ಕಾಗಿ ಯಾವುದೇ ಏಜೆನ್ಸಿಯನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು ಮತ್ತು ಯಾವುದೇ ಅಪರಿಚಿತ ವ್ಯಕ್ತಿಯೊಂದಿಗೆ ಇಂತಹ ನಿರ್ಧಾರವನ್ನು ನೀವೇ ತೆಗೆದುಕೊಳ್ಳಬಾರದು ಎಂದು ಲಾರಾ ಹೇಳಿದ್ದಾರೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications