Fact check: ಜಹಾಂಗೀರ್‌ಪುರಿ ಹಿಂಸಾಚಾದಲ್ಲಿ ಪೊಲೀಸರ ಮೇಲೆ ಗುಂಪು ಹಲ್ಲೆ
ಹೊಸದಿಲ್ಲಿ ಎಪ್ರಿಲ್ 18: ಹನುಮ ಜಯಂತಿ ಮೆರವಣಿಗೆ ವೇಳೆ (ಏಪ್ರೀಲ್ 16) ವಾಯುವ್ಯ ದಿಲ್ಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಹಿಂಸಾಚಾರ ನಡೆದಿದೆ. ಪೊಲೀಸರ ಪ್ರಕಾರ, ಎಂಟು ಪೊಲೀಸರು ಮತ್ತು ಸ್ಥಳೀಯರು ಸೇರಿದಂತೆ ಒಂಬತ್ತು ಜನರು ಹಿಂಸಾಚಾರದಲ್ಲಿ ಗಾಯಗೊಂಡಿದ್ದಾರೆ. ಗಲಭೆ ಮತ್ತು ಕೊಲೆಗೆ ಯತ್ನಿಸಿದ ಆರೋಪದ ಮೇಲೆ 14 ಮಂದಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಈಗ ಜಹಾಂಗೀರ್‌ಪುರಿ ಹಿಂಸಾಚಾರದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಚಿತ್ರವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಗುಂಪು ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದೆ ಎಂದು ಹೇಳಲಾಗುತ್ತಿದೆ. ವೈರಲ್ ಆಗಿರುವ ಫೋಟೋದ ಸತ್ಯಾಸತ್ಯತೆ ಏನೆಂದು ತಿಳಿಯೋಣ.
ಶನಿವಾರ ದೆಹಲಿಯಲ್ಲಿ ಹನುಮ ಜಯಂತಿಯ ಮೆರವಣಿಗೆ ವೇಳೆ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಕಲ್ಲು ತೂರಾಟ ನಡೆದ ಘಟನೆ ಸಂಜೆ ಬೆಳಕಿಗೆ ಬಂದಿದೆ. ಎರಡು ಕೋಮುಗಳ ನಡುವೆ ಜಗಳ ನಡೆದು ಹಿಂಸಾಚಾರ ನಡೆದಿದೆ. ಘಟನೆಯ ವೇಳೆ ಆರೋಪಿಗಳಿಂದ 3 ಪಿಸ್ತೂಲ್ ಮತ್ತು 5 ಕತ್ತಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಫೋಟೋವೊಂದು ವೈರಲ್ ಆಗುತ್ತಿದ್ದು, ಪೊಲೀಸ್ ಸಿಬ್ಬಂದಿಯ ಮೇಲೆ ಗುಂಪು ಹಲ್ಲೆ ಮಾಡಿದೆ. ಜೊತೆಗೆ ಇದು ಜಹಾಂಗೀರ್ಪುರಿ ಹಿಂಸಾಚಾರಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ. ವೈರಲ್ ಫೋಟೋದಲ್ಲಿ, ಒಬ್ಬ ಪೋಲೀಸ್ ರಸ್ತೆಯ ಮೇಲೆ ಮಲಗಿರುವುದನ್ನು ಕಾಣಬಹುದು, ಅವರು ಗಾಯಗೊಂಡಿದ್ದಾರೆ ಎನ್ನುವಂತೆ ಕಾಣುತ್ತದೆ. ಒಬ್ಬ ವ್ಯಕ್ತಿ ಕಲ್ಲಿನಿಂದ ಗುರಿಯಿರಿಸಿರುವುದನ್ನು ಕಾಣಬಹುದು.

ಕೆಲ ಜನರು #DelhiRiots ಮತ್ತು #Jahangirpuri ನಂತಹ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಟ್ವಿಟರ್‌ನಲ್ಲಿ ಫೋಟೋವನ್ನು ಹಂಚಿಕೊಳ್ಳಲು ಪ್ರಾರಂಭಿಸಿದ್ದಾರೆ. ಆದರೆ ಈ ಚಿತ್ರದ ನೈಜತೆ ಬೆಳಕಿಗೆ ಬಂದಿದೆ. ವೈರಲ್ ಫೋಟೋದ ಸಂದೇಶ ತಪ್ಪಾಗಿದೆ. ಜಹಾಂಗೀರ್‌ಪುರಿ ಹಿಂಸಾಚಾರಕ್ಕೆ ಸಂಬಂಧಿಸಿದೆ ಎನ್ನಲಾಗುವ ವೈರಲ್ ಫೋಟೋದ ಸಂದೇಶ ಸತ್ಯವಿಲ್ಲ. ಇಂಡಿಯಾ ಟುಡೆ ವರದಿಯ ಪ್ರಕಾರ, ವೈರಲ್ ಆಗುತ್ತಿರುವ ಚಿತ್ರವು ಸುಮಾರು ಮೂರು ವರ್ಷಗಳಷ್ಟು ಹಳೆಯದು. ಇದು ದೆಹಲಿಯಲ್ಲಿ ನಡೆದ ಘಟನೆಯ ಫೋಟೋವಲ್ಲ. ಅಹಮದಾಬಾದ್‌ನಲ್ಲಿ CAA ವಿರೋಧಿ ಪ್ರತಿಭಟನೆಯ ಸಮಯದಲ್ಲಿ ತೆಗೆದ ಫೋಟೋ ಇದಾಗಿದೆ.

ಈ ಚಿತ್ರವನ್ನು ಡಿಸೆಂಬರ್ 20, 2019 ರಂದು IPS ಅಧಿಕಾರಿ ಪಂಕಜ್ ನೈನ್ ಅವರು ಟ್ವೀಟ್ ಮಾಡಿದ್ದಾರೆ. ಅವರ ಹಳೆಯ ಟ್ವೀಟ್ ಇತ್ತೀಚಿನ ಜಹಾಂಗೀರ್‌ಪುರಿ ಹಿಂಸಾಚಾರಕ್ಕೂ ಈ ಫೋಟೋಗೂ ಯಾವುದೇ ಸಂಬಂಧವಿಲ್ಲ ಎಂದು ಸಾಬೀತುಪಡಿಸಿದೆ. ಇದೇ ಚಿತ್ರವನ್ನು ಡಿಸೆಂಬರ್ 20, 2019 ರಂದು ಟೈಮ್ಸ್ ಆಫ್ ಇಂಡಿಯಾದ ವರದಿಯಲ್ಲಿ ಕಾಣಬಹುದು. "ಅಹಮದಾಬಾದ್‌ನ ಶಾ-ಎ-ಆಲಂ ಪ್ರದೇಶದಲ್ಲಿ ಜನರು ಗುರುವಾರ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ" ಎಂದು ಹೇಳಲಾಗಿದೆ. ಅಹಮದಾಬಾದ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ ಎಂದು ವರದಿ ಹೇಳಿದೆ. ಘಟನೆಯಲ್ಲಿ 12 ಪೊಲೀಸರು ಸೇರಿದಂತೆ 30 ಮಂದಿ ಗಾಯಗೊಂಡಿದ್ದಾರೆ. ಹೀಗಿರುವಾಗ ಈ ಚಿತ್ರಕ್ಕೂ ಪ್ರಸ್ತುತ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.

Fact Check
ಕ್ಲೇಮು
ಜಹಾಂಗೀರ್‌ಪುರಿ ಹಿಂಸಾಚಾದಲ್ಲಿ ಪೊಲೀಸರ ಮೇಲೆ ಗುಂಪು ಹಲ್ಲೆ
ಪರಿಸಮಾಪ್ತಿ
ವೈರಲ್ ಫೋಟೋ ಅಹಮದಾಬಾದ್‌ನಲ್ಲಿ CAA ವಿರೋಧಿ ಪ್ರತಿಭಟನೆಯ ಸಮಯದಲ್ಲಿ ತೆಗೆದ ಫೋಟೋವಾಗಿದೆ.












Click it and Unblock the Notifications