Fact Check: ಲಸಿಕೆ ಸಂಸ್ಥೆಗಳ ಮನವಿ ತಿರಸ್ಕೃತವಾಗಿಲ್ಲ
ನವದೆಹಲಿ, ಡಿಸೆಂಬರ್ 9: ಕೊರೊನಾ ವೈರಸ್ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ಕೋರಿ ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್ ಮತ್ತು ಹೈದರಾಬಾದ್‌ನ ಭಾರತ್ ಬಯೋಟೆಕ್ ಸಂಸ್ಥೆಗಳು ಸಲ್ಲಿಸಿದ್ದ ಮನವಿಗಳನ್ನು ತಿರಸ್ಕರಿಸಿಲ್ಲ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳ ತುರ್ತು ಬಳಕೆಯ ಅನುಮತಿ ಮನವಿಯನ್ನು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಪರಿಣತರ ಸಮಿತಿ (ಸಿಡಿಸಿಎಸ್‌ಒ) ಬುಧವಾರ ತಿರಸ್ಕರಿಸಿದೆ. ಈ ಎರಡೂ ಕಂಪೆನಿಗಳು ತಮ್ಮ ಲಸಿಕೆಗಳ ಸುರಕ್ಷತೆ ಹಾಗೂ ಪರಿಣಾಮದ ಬಗ್ಗೆ ಅಸಮರ್ಪಕ ದತ್ತಾಂಶ ಹೊಂದಿವೆ. ಈ ಎರಡೂ ಕಂಪೆನಿಗಳಿಗೆ ಮತ್ತಷ್ಟು ದತ್ತಾಂಶಗಳನ್ನು ಒದಗಿಸುವಂತೆ ಸೂಚಿಸಲಾಗಿದೆ ಎಂದು ಸಮಿತಿ ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿತ್ತು.
ಆದರೆ ಸೆರಮ್ ಸಂಸ್ಥೆ ಹಾಗೂ ಭಾರತ್ ಬಯೋಟೆಕ್ ಕಂಪೆನಿ ಸಲ್ಲಿಸಿದ್ದ ತುರ್ತು ಬಳಕೆಯ ಮನವಿಯನ್ನು ತಿರಸ್ಕರಿಸಲಾಗಿದೆ ಎಂಬ ವರದಿ ಸತ್ಯಕ್ಕೆ ದೂರವಾಗಿದೆ. ತುರ್ತು ಬಳಕೆಯನ್ನು ಮನವಿಯನ್ನು ಅಂಗೀಕರಿಸಿಲ್ಲ ಎನ್ನುವುದು ಸುಳ್ಳು ಸುದ್ದಿ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟೀಕರಣ ನೀಡಿದೆ.

'ಸೆರಮ್ ಸಂಸ್ಥೆ ಮತ್ತು ಭಾರತ್ ಬಯೋಟೆಕ್ ನೀಡಿದ್ದ ಲಸಿಕೆ ಪ್ರಸ್ತಾವಗಳನ್ನು 'ಸುರಕ್ಷತೆ ಕೊರತೆ' ಮತ್ತು ಅದರ ಪರಿಣಾಮಗಳ ಬಗ್ಗೆ ಅಸಮರ್ಪಕ ದತ್ತಾಂಶದ ಕಾರಣದಿಂದ ಇಂದು ತಿರಸ್ಕರಿಸಲಾಗಿದೆ' ಎಂದು ಎನ್‌ಡಿಟಿವಿಯ ಸುಪರ್ಣಾ ಸಿಂಗ್ ಟ್ವೀಟ್ ಮಾಡಿದ್ದರು.

Fact Check
ಕ್ಲೇಮು
ಲಸಿಕೆಯ ತುರ್ತು ಬಳಕೆಯ ಮನವಿಗಳು ತಿರಸ್ಕೃತಗೊಂಡಿವೆ.
ಪರಿಸಮಾಪ್ತಿ
ಲಸಿಕೆ ತುರ್ತು ಬಳಕೆಯ ಮನವಿಗಳನ್ನು ತಿರಸ್ಕರಿಸಿಲ್ಲ.












Click it and Unblock the Notifications