Fact check: '2022ರ ಅದ್ಬುತ ದಿನಗಳು, ಇದನ್ನು 5 ಗುಂಪಿಗೆ ಕಳುಹಿಸಿ'- ಈ ಸಂದೇಶ ಅದೆಷ್ಟು ನಿಜ?
2022 ಇನ್ನೇನು ಮುಗಿತಾ ಬಂತು. ಸಾಮಾನ್ಯವಾಗಿ 2022ರಲ್ಲಿ ಯಾವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಮುಖ ದಿನಗಳಿವೆ ಎಂಬ ಪ್ರಶ್ನೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗುತ್ತದೆ. ಇದು ವಿದ್ಯಾರ್ಥಿಗಳ ಗಮನಕ್ಕೆ ತರುವುದು ಬಹುಮುಖ್ಯವಾಗಿದೆ. ಹೀಗಾಗಿ ಹಲವಾರು ಜನ 2022 ರ ಪ್ರಮುಖ ದಿನಗಳು ಮತ್ತು ದಿನಾಂಕಗಳ ಪಟ್ಟಿಯನ್ನು ಮಾಡುತ್ತಾರೆ. ಇದಕ್ಕೆ ಸಮಾಜಿಕ ಜಾಲತಾಣಗಳ ಸಹಾಯವನ್ನು ಪಡೆಯುತ್ತಾರೆ. ಆದರೆ ಕೆಲ ಸಂದೇಶಗಳು ನಿಮಗೆ ತಪ್ಪು ಮಾಹಿತಿಯನ್ನು ನೀಡಬಹುದು. ಇಂತಹ ಸಂದೇಶಗಳನ್ನು ರವಾನಿಸಲು ನಿಮ್ಮನ್ನು ಕೇಳಿಕೊಳ್ಳಲೂಬಹುದು. ಹೀಗಾಗಿ ಇಂತಹ ಸಂದೇಶಗಳಿಂದ ಜಾಗರೂಕರಾಗಿರಿ. ಮತ್ತು ಇಂತಹ ಸಂದೇಶಗಳನ್ನು ಮತ್ತೋರ್ವರಿಗೆ ರವಾನಿಸಲು ಮುಂದಾಗಬೇಡಿ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮಾಹಿತಿಗಳಿಗೆ ಯಾವುದೇ ಅಡೆತಡೆ ಇಲ್ಲ. ಯಾರು ಏನು ಬೇಕಾದರೂ ಸಂದೇಶಗಳನ್ನು ರವಾನೆ ಮಾಡಬಹುದು. ಅದು ನಿಜವೆಂದು ಹೇಳಿಕೊಳ್ಳಲೂಬಹುದು. ಇದರಿಂದ ನಿಮಗೆ ಒಳ್ಳೆದಾಗುತ್ತದೆ ಎನ್ನುವ ಮೂಲಕ ನಿಮ್ಮ ಗಮನವನ್ನು ಸೆಳೆಯುವವರ ಸಂಖ್ಯೆ ಹೆಚ್ಚಾಗಿದೆ.
ಸಾಮಾನ್ಯವಾಗಿ ಟಿವಿ ಮುಂದೆ ಕುಳಿತುಕೊಂಡು ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ನಾವು ನಮ್ಮ ಮೊಬೈಲ್‌ಗಳಲ್ಲಿ ಹರಿದಾಡುವ ಸಂದೇಶಗಳಿಂದಲೇ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತೇವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸಂದೇಶಗಳು ಎಲ್ಲಾ ಸಮಯದಲ್ಲೂ ನಿಜವಾಗಿರುವುದಿಲ್ಲ. ಇಂತಹ ಒಂದು ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸಂದೇಶವನ್ನೊಮ್ಮೆ ಓದಿ.

'2022ರ ಅತ್ಯುತ್ತಮ ಮಾಹಿತಿ
01-01-2022 ಶುಕ್ರವಾರ
02-02-2022 ಶುಕ್ರವಾರ
03-03-2022 ಶುಕ್ರವಾರ
04-04-2022 ಶುಕ್ರವಾರ
05-05-2022 ಶುಕ್ರವಾರ
06-06-2022 ಶುಕ್ರವಾರ
07-07-2022 ಶುಕ್ರವಾರ
08-08-2022 ಶುಕ್ರವಾರ
09-09-2022 ಶುಕ್ರವಾರ
10-10-2022 ಶುಕ್ರವಾರ
11-11-2022 ಶುಕ್ರವಾರ
12-12-2022 ಶುಕ್ರವಾರ
ಈ ವರ್ಷ ಕೆಳಗೆ ಸೂಚಿಸಲಾದ ಅದ್ಬುತ 823 ವರ್ಷಗಳಿಗೊಮ್ಮೆ ಮಾತ್ರ ಸಂಭವಿಸುತ್ತದೆ.
4 ಭಾನುವಾರ
4 ಸೋಮವಾರ
4 ಮಂಗಳವಾರ
4 ಬುಧವಾರ
4 ಗುರುವಾರ
4 ಶುಕ್ರವಾರ
4 ಶನಿವಾರ
ಆದ್ದರಿಂದ ಕನಿಷ್ಠ 5 ಜನರಿಗೆ ಅಥವಾ 5 ಗುಂಪುಗಳಿಗೆ ಇದನ್ನು ಕಳುಹಿಸಿ, ಮತ್ತು 4 ದಿನಗಳಲ್ಲಿ ಪವಾಡ ಸಂಭವಿಸುತ್ತದೆ. ಇದನ್ನು ಓದಿದ 11 ನಿಮಿಷಗಳಲ್ಲಿ ಕಳುಹಿಸಿ'

ಈ ಸಂದೇಶದಲ್ಲಿ ಯಾವುದೇ ಸತ್ಯವಿಲ್ಲ. 2022ರಲ್ಲಿ ಮೇಲೆ ಸೂಚಿಸಿದಂತೆ ಯಾವುದೇ ದಿನಾಂಕಗಳು ಮತ್ತು ದಿನಗಳು ಬಂದಿಲ್ಲ. ಮೇಲೆ ತಿಳಿಸಿದಂತೆ 01-01-2022 ಶುಕ್ರವಾರ ಅಂದರೆ 2022ರಲ್ಲಿ ಜನವರಿ ತಿಂಗಳಲ್ಲಿ ಶುಕ್ರವಾರ 1ನೇ ತಾರೀಖು ಇಲ್ಲ. ಬದಲಿಗೆ ಶನಿವಾರದಂದು 1ನೇ ತಾರೀಖು ಇರುವುದನ್ನು ನೋಡಬಹುದು. ಹಾಗೆನೇ 02-02-2022 ಶುಕ್ರವಾರವಲ್ಲ ಬದಲಿಗೆ ಗುರುವಾರವಾಗಿದೆ. ಹಾಗೆನೇ ಕಳೆದ ವರ್ಷ 4ನೇ ತಾರೀಖು ಭಾನುವಾರವಾಗಲಿ, 4 ಸೋಮವಾರ, 4 ಮಂಗಳವಾರ, 4 ಬುಧವಾರ, 4 ಗುರುವಾರ
4 ಶುಕ್ರವಾರ ಅಥವಾ 4ನೇ ತಾರೀಖು ಶನಿವಾರವಾಗಲಿ ಇಲ್ಲ. ಇದೂ ಕೂಡ ತಪ್ಪಾದ ಮಾಹಿತಿಯಾಗಿದೆ. ಇವು ಜನರನ್ನು ದಾರಿಗೆ ತಪ್ಪಿಸುವಂತ ಸಂದೇಶಗಳಾಗಿದ್ದು ಜಾಗರೂಕರಾಗಿರಿ.

Fact Check
ಕ್ಲೇಮು
'2022ರ ಅದ್ಬುತ ದಿನಗಳು, ಈ ಸಂದೇಶ 5 ಗುಂಪಿಗೆ ಕಳುಹಿಸಿ' ಎಂದ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಪರಿಸಮಾಪ್ತಿ
'2022ರ ಅದ್ಬುತ ದಿನಗಳು, ಈ ಸಂದೇಶ 5 ಗುಂಪಿಗೆ ಕಳುಹಿಸಿ' ಇದೊಂದು ತಪ್ಪು ಸಂದೇಶವಾಗಿದೆ.












Click it and Unblock the Notifications